TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಬಿಡುಗಡೆಯಾಗಲಿರುವ ಹೊಸ ಸುಜುಕಿ ಜಿಕ್ಸರ್ 300 ಬೈಕ್ ಹೇಗಿದೆ ನೋಡಿ..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಭಾರತದಲ್ಲಿಯೇ ತಯಾರಿಸಲಾದ ಬೈಕ್ ಅನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಈ ನಿಟ್ಟಿನಲ್ಲಿ 250ಸಿಸಿ ರಿಂದ 300ಸಿಸಿ ಸಾಮರ್ಥ್ಯವಿರುವ ಸ್ಪೋರ್ಟ್ಸ್ ಬೈಕ್‍ಗಳನ್ನು ಭಾರತದಲ್ಲಿಯೇ ತಯಾರಿಸಲು ಮುಂದಾಗಿದೆ.
ಹೀಗಾಗಿ ಸುಜುಕಿ ಸಂಸ್ಥೆಯು ಹೊಸ ಜಿಕ್ಸರ್ 300 ಸ್ಪೋರ್ಟ್ಸ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದ್ದು, ಇದೀಗ ಹೊಸ ಬೈಕಿನ ರಹಸ್ಯ ಚಿತ್ರಗಳು ಸೋರಿಕೆಯಾಗಿವೆ. ಸೋರಿಕೆಯಾದ ರಹಸ್ಯ ಚಿತ್ರಗಳು ಈಗಾಗಲೇ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೊಸ ಬೈಕಿನ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಹೊಸ ಜಿಕ್ಸರ್ ಬೈಕ್‍ನಲ್ಲಿ ಬಳಸಲಾಗಿರುವ ಲೋಗೊ ಚೀನಿ ಮಾರುಕಟ್ಟೆಯಲ್ಲಿನ ಸುಜುಕಿ ಸಂಸ್ಥೆಯ ಪಾಲುದಾರ ಹೌಜ್ಯು ಎಂಬ ಕಂಪನಿಯದಾಗಿದ್ದು, ಇದಲ್ಲದೇ ಈ ಸಂಸ್ಥೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಜಿಕ್ಸರ್ 300 ಸ್ಪೋರ್ಟ್ಸ್ ಬೈಕ್‍ಗಳು ಮಾರಾಟವಾಗುವಲ್ಲಿ ಸಹಾಯ ಮಾಡಲಿದೆಯಂತೆ.
ಬೈಕಿನಲ್ಲಿ ಸಸ್ಪೆಸ್ಷೆನ್ ಕಾರ್ಯವನ್ನು ನಿರ್ವಹಿಸಲು ಮುಂಭಾಗದಲ್ಲಿ ಇನ್ವರ್ಟೆಡ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.
ಜಿಕ್ಸರ್ 300 ಬೈಕ್‍ಗಳಲ್ಲಿ ಬಳಸಲಾಗಿರುವ ಎಂಜಿನ್‍ಗಳ ಬಗ್ಗೆ ಮಾಹಿತಿ ತಿಳಿದಿಲ್ಲವಾದರೂ ಮಾಹಿತಿಗಳ ಪ್ರಕಾರ ಸುಜುಕಿ ಜಿಎಸ್ಎಕ್ಸ್ ಬೈಕಿನಲ್ಲಿ ಬಳಸಿದ 250ಸಿಸಿ ಎಂಜಿನ್ ಅನ್ನು ಬಳಸಿಕೊಳ್ಳಲಿದೆ ಎನ್ನಲಾಗಿದೆ.
ಸುಜುಕಿ ಜಿಎಸ್ಎಕ್ಸ್ ಎಸ್ 300 ಬೈಕುಗಳು ಪೂರ್ಣ ಎಲ್ಇಡಿ ಹೆಡ್‍ಲ್ಯಾಂಪ್ ಹಾಗು ಎಲ್‍ಸಿಡಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದ್ದು, ಬೈಕಿನ ಇನ್ನಿತರೆ ವಿನ್ಯಾಸವು ಸುಜುಕಿ ಸಂಸ್ಥೆಯ ನೇಕೆಡ್ ಜಿಎಸ್ಎಕ್ಸ್ ಬೈಕುಗಳನ್ನೇ ಹೋಲಲಿದೆ.
ಸುಜುಕಿ ಸಂಸ್ಥೆಯು ತಮ್ಮ ಜಿಎಸ್ಎಕ್ಸ್ ಎಸ್300 ಬೈಕ್ ಅನ್ನು 2018ರ ಇಐಸಿಎಂಎ ಮೋಟಾರ್ ಸೈಕಲ್ ಶೋನಲ್ಲಿ ಪ್ರದರ್ಶಿಸಗೊಳಿಸಲಿದೆ ಎನ್ನಲಾಗಿದ್ದು, ಭಾರತಕ್ಕೆ ಈಗಾಗಲೇ ಸುಜುಕಿ ಸಂಸ್ಥೆಯು ಹೇಳಿರುವ ಹಾಗೆ ತಾವು 250ಸಿಸಿ ರಿಂದ 300ಸಿಸಿ ಸರಣಿಯ ಬೈಕ್‌ಗಳನ್ನು ಪರಿಚಯಿಸಲಿವೆ ಎಂಬುದರ ಬಗ್ಗೆ ಸುಳಿವು ನೀಡಿದೆ.
ಹೊಸ ಜಿಎಸ್ಎಕ್ಸ್ ಎಸ್ 300 ಬೈಕಿನ ಬೆಲೆಯ ಬಗ್ಗೆ ಮಾಹಿತಿಯು ದೊರೆತಿಲ್ಲವಾದರುೂ ಒಮ್ಮೆ ಈ ಬೈಕ್ ಭಾರತದ ಮಾರುಕಟ್ಟೆಗೆ ಬಂದಲ್ಲಿ ಮಹಿಂದ್ರಾ ಮೊಜೊ 300, ಅಪಾಚೆ 310 ಆರ್ , ಬಿಎಮ್‍ಡಬ್ಲ್ಯು ಜಿ310ಆರ್ ಬೈಕುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.