ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಟ್ರಯಂಫ್ ಟೈಗರ್ 800 ಬೈಕ್

Written By: Rahul TS

ಬ್ರಿಟನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟ್ರಯಂಫ್ ತನ್ನ ಹೊಸ ಟೈಗರ್ 800 ಅಡ್ವೆಂಚರ್ ಮೊಟಾರ್‍ ಸೈಕಲ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ದೆಹಲಿ ಎಕ್ಸ್ ಶೋರಂ ಪ್ರಕಾರ ಬೈಕಿನ ಬೆಲೆಯನ್ನು ಆರಂಭಿಕವಾಗಿ ರೂ.11.76 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಟ್ರಯಂಫ್ ಟೈಗರ್ 800 ಬೈಕ್

ಹೊಸ 2018ರ ಟ್ರಯಂಫ್ ಟೈಗರ್ ಬೈಕ್‌‌ಗಳು ಹೊಸ ಅಪ್ಡೇಟ್ ಮತ್ತು ವೈಶಿಷ್ಟ್ಯತೆಗಳನ್ನು ಪಡೆದಿದ್ದು, ಆಫ್‍ರೋಡ್ ಪ್ರಿಯರ ಬೇಡಿಕೆಗೆ ಅನುಗುಣವಾಗಿ ಎಕ್ಸ್ಆರ್‍, ಎಕ್ಸ್‌ಆರ್‌ಎಕ್ಸ್ ಮತ್ತು ಎಕ್ಸ್‌ಸಿಎಕ್ಸ್ ವೇರಿಯಂಟ್‍ಗಳಲ್ಲಿ ಅಭಿವೃದ್ಧಿಗೊಳಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಟ್ರಯಂಫ್ ಟೈಗರ್ 800 ಬೈಕ್

ಹೊಸ ಟ್ರಯಂಫ್ ಟೈಗರ್ 800 ಬೈಕ್‌ಗಳು 800ಸಿಸಿ ಎಂಜಿನ್ ಮೂರು ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನೊಂದಿಗೆ 94-ಬಿಹೆಚ್‍ಪಿ ಮತ್ತು 78.8-ಎನ್ಎಮ್ ಟಾರ್ಕ್‍ ಉತ್ಪಾದಿಸಲಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಟ್ರಯಂಫ್ ಟೈಗರ್ 800 ಬೈಕ್

ಬೈಕ್ ರೈಡಿಂಗ್ ವೇಳೆ ಆಫ್ ರೋಡ್ ಟ್ರಾಕ್ಷನ್‍, ಲೋ ಸ್ಪೀಡ್ ಹ್ಯಾಂಡಲಿಂಗ್ ಮತ್ತು ಆಕ್ಸಿಲರೇಷನ್ ಅನ್ನು ಉತ್ತಮಗೊಳಿಸಲು ಮೊದಲ ಗೇರ್ ಪಡೆಯಲಿದ್ದು, ಎಂಜಿನ್ ಮತ್ತು ಚಾಸಿಸ್ 200ಕ್ಕೂ ಹೆಚ್ಚು ನವೀಕರಣಗಳನ್ನು ಪಡೆದಿರಲಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಟ್ರಯಂಫ್ ಟೈಗರ್ 800 ಬೈಕ್

2018ರ ಟ್ರಯಂಫ್ ಟೈಗರ್ 800 ಹೊಸ ಬೈಕ್‌ಗಳ ಹೆಡ್‍ಲ್ಯಾಂಪ್ ಕ್ಲಸ್ಟರ್‍‍ನೊಂದಿಗೆ ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ವೈಶಿಷ್ಟ್ಯತೆಯನ್ನು ಪಡೆದಿದ್ದು, ಈ ಅಡ್ವೆಂಚರ್ ಮೋಟಾರ್‍ ಸೈಕಲ್ ಪ್ರೀಮಿಯಂ ಬಾಡಿ ವರ್ಕ್, ಹೈ ಕ್ವಾಲಿಟಿ ಬ್ಯಾಡ್ಜ್ ಗಳು, ಗ್ರಾಫಿಕ್ಸ್ ಮತ್ತು ಆಕರ್ಷಕ ಬಣ್ಣಗಳನ್ನು ಪಡೆದಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಟ್ರಯಂಫ್ ಟೈಗರ್ 800 ಬೈಕ್

ಹೀಗಾಗಿ ಹೊಸ ಟೈಗರ್ 800 ಬೈಕ್‌ಗಳು 5 ಇಂಚಿನ ಅಡ್ಜೆಸ್ಟೆಬಲ್ ಟಿಎಫ್‍ಟಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಪೂರ್ಣ ಎಲ್ಇಡಿ ಲೈಟ್, ಹ್ಯಾಂಡಲ್‍ಬಾರ್ ಸ್ವಿಚ್ ಕ್ಯೂಬ್ಸ್ ಮತ್ತು ಜಾಯ್‍ಸ್ಟಿಕ್, ಬ್ಯಾಕ್‍ಲಿಟ್ ಬಟನ್‍ಗಳು, 5 ವೇ ಅಡ್ಜೆಸ್ಟೆಬಲ್ ವಿಂಡ್‍ಸ್ಕ್ರೀನ್, ನವಿಕರಿಸಲಾದ ಕ್ರೂಸ್ ಕಂಟ್ರೋಲ್ ಮತ್ತು ಬ್ರೆಂಬೊ ಫ್ರಾಂಟ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಟ್ರಯಂಫ್ ಟೈಗರ್ 800 ಬೈಕ್

ಟೈಗರ್ ಎಕ್ಸ್ಆರ್‍ಎಕ್ಸ್ ಮಾದರಿಯು 4 ರೈಡಿಂಗ್ ಮೋಡ್ ಮತ್ತು ಎಕ್ಸ್ ಸಿಎಕ್ಸ್ ಮಾದರಿಯು 5 ರೈಡಿಂಗ್ ಮೋಡ್‍ಗಳ ಹೊಂದಿದ್ದು, ಇದರ ಜೊತೆಗೆ ಆಫ್ ರೋಡ್ ಪ್ರೋ ಮೋಡ್ ಅನ್ನು ಕೂಡ ಪಡೆದಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಟ್ರಯಂಫ್ ಟೈಗರ್ 800 ಬೈಕ್

ಇದರ ಜೊತೆಗೆ WP ಅಡ್ಜೆಸ್ಟೆಬಲ್ ಫ್ರಂಟ್ ಮತ್ತು ರೀರ್ ಸಸ್ಪೆಷನ್, ಹೀಟೆಡ್ ಗ್ರಿಪ್ಸ್, ಹ್ಯಾಂಡ್‍ ಗಾರ್ಡ್ಸ್, ಅಡ್ಜೆಸ್ಟೆಬಲ್ ಸೀಟ್ ಮತ್ತು ಹ್ಯಾಂಡಲ್‍ಬಾರ್ಸ್, ಸಂಪ್ ಗಾರ್ಡ್ ಮತ್ತು ಸ್ವಿಚೆಬಲ್ ಎಬಿಎಸ್ ಜೊತೆಗೆ ಟ್ರಾಕ್ಷನ್ ಕಂಟ್ರೋಲ್ ವೈಶಿಷ್ಟ್ಯತೆಗಳೊಂದಿಗೆ ಎಕ್ಸ್ಆರ್ ರೋಜ್ ಬೈಕ್ ಅಲಾಯ್ ಚಕ್ರಗಳು ಮತ್ತು ಎಕ್ಸ್ ಸಿ ಬೈಕ್ ಸ್ಪೋಕ್ ವೀಲ್‍ಗಳನ್ನು ಪಡೆದಿರಲಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ 2018ರ ಟ್ರಯಂಫ್ ಟೈಗರ್ 800 ಬೈಕ್

ಹೊಸದಾಗಿ ಬಿಡಗಡೆಗೊಂಡ 2018ರ ಟ್ರಯಂಫ್ ಟೈಗರ್ 800 ಬೈಕ್ ನವಿಕರಿಸಲಾಗಿರುವ ಎಂಜಿನ್ ಮತ್ತು ವಿನ್ಯಾಸವನ್ನು ಪಡೆದಿದ್ದು, ಟೈಗರ್ 800 ಎಕ್ಸ್ಆರ್ ರೇಂಜ್ ಬೈಕ್ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಫ್ 750 ಜಿಎಸ್, ಡುಕಾಟಿ ಮಲ್ಟಿಸ್ಟ್ರಾಡ್ 950 ಮತ್ತು ಕವಾಸಕಿ ವರ್ಸಿಸ್ 1000 ಬೈಕ್‍ಗಳಿಗೆ ಪೈಪೋಟಿಯನ್ನು ನೀಡಲಿವೆ.

Read more on triumph
English summary
2018 Triumph Tiger 800 Launched In India; Prices Start At Rs 11.76 Lakh.
Story first published: Wednesday, March 21, 2018, 15:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark