ನ್ಯೂ ಜನರೇಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ

ಟಿವಿಎಸ್ ತನ್ನ ಬಹುನೀರಿಕ್ಷಿತ ಅಪಾಚೆ ಆರ್‌ಟಿಆರ್ 160 4ವಿ 2018ರ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಬೈಕ್‌ಗಳು ಆರಂಭಿಕವಾಗಿ ರೂ.81,490 ಬೆಲೆ ಪಡೆದುಕೊಂಡಿವೆ.

By Praveen Sannamani

ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಟಿವಿಎಸ್ ತನ್ನ ಬಹುನೀರಿಕ್ಷಿತ ಅಪಾಚೆ ಆರ್‌ಟಿಆರ್ 160 4ವಿ 2018ರ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಹೊಸ ಬೈಕ್‌ಗಳು ಆರಂಭಿಕವಾಗಿ ರೂ.81,490 ಬೆಲೆ ಪಡೆದುಕೊಂಡಿವೆ.

ನ್ಯೂ ಜನರೇಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ

ಸ್ಪೋರ್ಟಿ ಲುಕ್ ಮತ್ತು ಹೊಸ ತಂತ್ರಜ್ಞಾನ ಪ್ರೇರಣೆ ಹಿನ್ನೆಲೆ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಈ ಹಿಂದಿಗಿಂತಲೂ ಹೆಚ್ಚು ಆಕರ್ಷಣೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೂರು ವಿವಿಧ ಮಾದರಿಯಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳನ್ನು ಅಭಿವೃದ್ಧಿ ಮಾಡಲಾಗಿದೆ.

ನ್ಯೂ ಜನರೇಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ

ಹೀಗಾಗಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಕ್ರಾಬ್ ಫ್ರಂಟ್ ಡಿಸ್ಕ್ ಬ್ರೇಕ್, ಕ್ರಾಬ್ ರಿರ್ ಡಿಸ್ಕ್ ಬ್ರೇಕ್ ಮತ್ತು ಫ್ಯೂಲ್ ಇಂಜೆಕ್ಷೆಡ್ ರಿರ್ ಡಿಸ್ಕ್ ಬ್ರೇಕ್ ಮಾದರಿಯಲ್ಲಿ ಲಭ್ಯವಾಗಿದ್ದು, ಕಮ್ಯುಟರ್ ಬೈಕ್ ಸವಾರಿಗೆ ಹೊಸ ಚಾಲನಾ ಅನುಭವ ನೀಡಲಿವೆ.

ನ್ಯೂ ಜನರೇಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ

ಬೈಕ್ ಮಾದರಿಗಳು ಮತ್ತು ಬೆಲೆಗಳು(ಎಕ್ಸ್‌ಶೋರಂ ದೆಹಲಿ)

ಬೈಕ್ ಮಾದರಿಗಳು ಬೆಲೆ
ಕ್ರಾಬ್ ಫ್ರಂಟ್ ಡಿಸ್ಕ್ ಬ್ರೇಕ್ ರೂ. 81.490
ಕ್ರಾಬ್ ರಿರ್ ಡಿಸ್ಕ್ ಬ್ರೇಕ್ ರೂ. 84,490
ಫ್ಯೂಲ್ ಇಂಜೆಕ್ಷೆಡ್ ರಿರ್ ಡಿಸ್ಕ್ ಬ್ರೇಕ್ ರೂ. 89,990

ನ್ಯೂ ಜನರೇಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ

ಎಂಜಿನ್ ವೈಶಿಷ್ಟ್ಯತೆ

ನ್ಯೂ ಜನರೇಷನ್ ವಿನ್ಯಾಸಗಳನ್ನು ಹೊಂದಿರುವ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು 159.7 ಸಿಸಿ ಸಿಂಗಲ್ ಸಿಲಿಂಡರ್ 4 ವಾಲ್ವೆ ಏರ್ ಕೂಲ್ಡ್ ಎಂಜಿನ್‌ ಜೋಡಣೆ ಪಡೆದಿವೆ.

ನ್ಯೂ ಜನರೇಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ

ಈ ಮೂಲಕ ಫ್ಯೂಲ್ ಇಂಜೆಕ್ಷೆಡ್ ಮಾದರಿಯು 16.56 ಬಿಎಚ್‌ಪಿ, 14.8 ಟಾರ್ಕ್ ಉತ್ಪಾದಿಸಿದ್ದಲ್ಲಿ ಕಾರ್ಬೋರೆಟೆಡ್ ಎಂಜಿನ್ ಮಾದರಿಯು 16.28 ಬಿಎಚ್‌ಪಿ, 14.8 ಎನ್ಎಂ ಟಾರ್ಕ್ ಉತ್ಪಾದಿಸಲಿವೆ ಎಂದು ಟಿವಿಎಸ್ ಹೇಳಿಕೊಂಡಿದೆ.

ನ್ಯೂ ಜನರೇಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ

ಇದರೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಹೊಸ ಬೈಕ್‌ಗಳು ಕೇವಲ 4.3 ಸೇಕೆಂಡ್‌ಗಳಲ್ಲಿ 60 ಕಿಮಿ ವೇಗ ಸಾಧಿಸುವ ಸಾಮರ್ಥ್ಯ ಪಡೆದುಕೊಂಡಿದ್ದು, ಗಂಟೆಗೆ 114 ಕಿಮಿ ಟಾಪ್ ಸ್ಪೀಡ್‌ನಲ್ಲಿ ಚಲಿಸುತ್ತವೆ.

ನ್ಯೂ ಜನರೇಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ

ಬೈಕಿನ ಹೊರ ವಿನ್ಯಾಸಗಳು

ಅಪಾಚೆ ಆರ್‌ಟಿಆರ್ 160 4ವಿ ತನ್ನ ಉತ್ನತ ಮಾದರಿಯಾದ ಅಪಾಚೆ ಆರ್‌ಟಿಆರ್ 200 4ವಿ ಬೈಕಿನ ಪ್ರೇರಣೆ ಪಡೆದುಕೊಂಡಿದ್ದು, ರೇಸಿಂಗ್ ಟೆಕ್ನಾಲಜಿ ಅಳವಡಿಕೆಯೊಂದಿಗೆ ಅಕ್ರಮಶೀಲ ಹೊರ ನೋಟವೇ ಈ ಬೈಕಿನ ಗುಣವಿಶೇಷ.

ನ್ಯೂ ಜನರೇಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ

ಜೊತೆಗೆ ಡಬಲ್ ಕ್ರೇಡಲ್ ಸ್ಪ್ಲಿಟ್ ಸಿಂಕ್ರೋ ಸ್ಟಿಫ್ ಫ್ರೇಮ್ ವಿನ್ಯಾಸವನ್ನು ಆಧರಿಸಿದ್ದು, ಅಪಾಚೆ ಆರ್‌ಟಿಆರ್ 200 4ವಿ ಮಾದರಿಯಲ್ಲೇ ಸಂಪೂರ್ಣ ಡಿಜಿಟಲ್ ಸಲಕರಣೆ ಕ್ಲಸ್ಟರ್ ಮತ್ತು ಡಬಲ್ ಬ್ಯಾರೆಲ್ ಎಕ್ಸಾಸ್ಟ್ ಮಫ್ಲರ್ ಪಡೆದಿರುತ್ತವೆ.

ನ್ಯೂ ಜನರೇಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ

ಬ್ರೇಕಿಂಗ್ ಸಿಸ್ಟಂ

ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮುಂಭಾಗದ ಚಕ್ರಗಳಲ್ಲಿ ಟೆಲೆಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದ ಚಕ್ರಗಳಲ್ಲಿ ಮೊನೊ ಸಸ್ಷೆಷನ್ ಹೊಂದಿದ್ದು, 270ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಮತ್ತು 200ಎಂಎಂ ರಿರ್ ಡಿಸ್ಕ್ ಬ್ರೇಕ್‌ ಅಳವಡಿಕೆಯೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ನ್ಯೂ ಜನರೇಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ

ಲಭ್ಯವಿರುವ ಬಣ್ಣಗಳು

ರೆಡ್ ರೇಸಿಂಗ್, ಮೆಟಾಲಿಕ್ ಬ್ಲೂ ಮತ್ತು ನೈಟ್ ಬ್ಲಾಕ್ ಬಣ್ಣಗಳಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ಗಳು ಖರೀದಿಗೆ ಲಭ್ಯವಿವೆ.

ನ್ಯೂ ಜನರೇಷನ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟಿವಿಎಸ್ ಸಂಸ್ಥೆಯು ಈ ಹಿಂದಿನ ಅಪಾಚೆ ಆರ್‌ಟಿಆರ್ 200 4ವಿ ಬೈಕಿನ ಗುಣಗಳನ್ನೇ ಎರವಲು ಪಡೆದುಕೊಂಡು ಆರ್‌ಟಿಆರ್ 160 4ವಿ ಬೈಕ್ ಮಾದರಿಯನ್ನು ಸಿದ್ದಗೊಳಿಸಿದ್ದು, ಅತ್ಯುತ್ತಮ ರೇಸಿಂಗ್ ಫೀಚರ್ಸ್‌ಗಳಿಂದಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಬಜಾಜ್ ಪಲ್ಸರ್ ಎನ್ಎಸ್160, ಹೋಂಡಾ ಸಿಬಿ ಹಾರ್ನೆಟ್ 160ಆರ್ ಮತ್ತು ಯಮಹಾ FZ-S FI V2.0 ಬೈಕ್‌ಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗುವ ನೀರಿಕ್ಷೆಯಿದೆ.

More from DriveSpark

Article Published On: Wednesday, March 14, 2018, 15:43 [IST]
English summary
2018 TVS Apache RTR 160 4V Launched In India.
Read more on apache
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+