ಅವಧಿಗೂ ಮುನ್ನವೇ ಬಿಡುಗಡೆಯಾದ 2019ರ ಟಿವಿಎಸ್ ಅಪಾಚೆ ಆರ್‌ಟಿಆರ್ 180

ಟಿವಿಎಸ್ ಸಂಸ್ಥೆಯು ತನ್ನ ಜನಪ್ರಿಯ ಬೈಕ್ ಮಾದರಿಯಾದ ಅಪಾಚೆ ಆರ್‌ಟಿಆರ್ 180 ಬೈಕಿನ 2019ರ ಆವೃತ್ತಿಯನ್ನು ಬಿಡುಗಡೆಗಡೆಗೊಳಿಸಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಬಿಎಸ್ ಮತ್ತು ನಾನ್ ಎವಿಬಿಎಸ್ ವರ್ಷನ್ ಅಪಾಚೆ ಆರ್‌ಟಿಆರ್ 180 ಬೈಕ್ ಖರೀದಿ ಮಾಡಬಹುದಾಗಿದೆ.

ಅವಧಿಗೂ ಮುನ್ನವೇ ಬಿಡುಗಡೆಯಾದ 2019ರ ಟಿವಿಎಸ್ ಅಪಾಚೆ ಆರ್‌ಟಿಆರ್ 180

ಈ ಹಿಂದಿನ ಮಾದರಿಯೆಂತೆಯೇ ತಾಂತ್ರಿಕ ಅಂಶಗಳನ್ನು ಹೊಂದಿರುವ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 180 ಬೈಕ್ ಹೊರ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕಿನ ಬೆಲೆಯನ್ನು ಎಬಿಎಸ್ ರಹಿತ ಮಾದರಿಗೆ ರೂ. 84,578ಕ್ಕೆ ಮತ್ತು ಎಬಿಎಸ್ ಪ್ರೇರಿತ ಮಾದರಿಗೆ ರೂ.95,392ಕ್ಕೆ ನಿಗದಿ ಮಾಡಲಾಗಿದೆ.

ಅವಧಿಗೂ ಮುನ್ನವೇ ಬಿಡುಗಡೆಯಾದ 2019ರ ಟಿವಿಎಸ್ ಅಪಾಚೆ ಆರ್‌ಟಿಆರ್ 180

ಟಿವಿಎಸ್ ಪರಿಚಯಿಸಿರುವ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 180 ಬೈಕ್‌ಗಳು ತಾಂತ್ರಿಕವಾಗಿ ಯಾವುದೇ ಬದಲಾವಣೆ ಹೊಂದಿಲ್ಲವಾದರೂ ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ರೇಸಿಂಗ್ ಗ್ರಾಫಿಕ್ಸ್ ಡಿಸೈನ್‌ಗಳು ಬೈಕಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡಿವೆ.

ಅವಧಿಗೂ ಮುನ್ನವೇ ಬಿಡುಗಡೆಯಾದ 2019ರ ಟಿವಿಎಸ್ ಅಪಾಚೆ ಆರ್‌ಟಿಆರ್ 180

ಜೊತೆಗೆ ಹೊಸ ಬೈಕಿನಲ್ಲಿ ಈ ಬಾರಿ ಹೊಸ ಬದಲಾವಣೆಯಾಗಿ ಸುಧಾರಿತ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈಟ್ ಬ್ಲ್ಯಾಕ್ ಲಿಟ್ ಸ್ಪೀಡೋಮೀಟರ್ ಮತ್ತು ಡಯಲ್-ಆರ್ಟ್, ನವೀಕೃತ ಕ್ರ್ಯಾಶ್ ಪ್ರೊಟೆಕ್ಷನ್ ಮತ್ತು ವಿಸ್ತರಿತ ಹ್ಯಾಂಡಲ್‌ಬಾರ್ ಸೌಲಭ್ಯವಿದೆ.

ಅವಧಿಗೂ ಮುನ್ನವೇ ಬಿಡುಗಡೆಯಾದ 2019ರ ಟಿವಿಎಸ್ ಅಪಾಚೆ ಆರ್‌ಟಿಆರ್ 180

ಎಂಜಿನ್ ಸಾಮರ್ಥ್ಯ

ಈ ಮೊದಲಿನಂತೆಯೇ 177.4 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಹೊಸ ಅಪಾಚೆ ಆರ್‌ಟಿಆರ್ 180 ಬೈಕ್‌ಗಳು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 16-ಬಿಎಚ್‌ಪಿ ಮತ್ತು 15.5 ಎನ್ಎಂ ಟಾರ್ಕ್ ಉತ್ಪಾದಿಸಲಿದೆ.

ಅವಧಿಗೂ ಮುನ್ನವೇ ಬಿಡುಗಡೆಯಾದ 2019ರ ಟಿವಿಎಸ್ ಅಪಾಚೆ ಆರ್‌ಟಿಆರ್ 180

ಈ ಮೂಲಕ ಪ್ರತಿಗಂಟೆಗೆ 114 ಕಿ.ಮಿ ಟಾಪ್ ಸ್ಪೀಡ್ ಉತ್ಪಾದನಾ ಗುಣ ಹೊಂದಿರುವ ಅಪಾಚೆ ಆರ್‌ಟಿಆರ್ 180 ಬೈಕಿನ ಎರಡು ಬದಿ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಮತ್ತು ಆಯ್ಕೆ ರೂಪದಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಒದಗಿಸಲಾಗಿದೆ.

ಅವಧಿಗೂ ಮುನ್ನವೇ ಬಿಡುಗಡೆಯಾದ 2019ರ ಟಿವಿಎಸ್ ಅಪಾಚೆ ಆರ್‌ಟಿಆರ್ 180

2019ರ ಎಪ್ರಿಲ್ 1ರಿಂದ 150ಸಿಸಿ ಮೇಲ್ಪಟ್ಟ ಬೈಕ್‌ಗಳಲ್ಲಿ ಸಿಂಗಲ್ ಚಾನಲ್ ಎಬಿಎಸ್ ಸೌಲಭ್ಯವು ಕಡ್ಡಾಯವಾಗಿರಲಿದ್ದು, ಈ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಅಪಾಚೆ ಆರ್‌ಟಿಆರ್ 180 ಹೊಸ ವರ್ಷನ್ ಬಿಡುಗಡೆ ಮಾಡಿರುವ ಟಿವಿಎಸ್ ಸಂಸ್ಥೆಯು ಎಪ್ರಿಲ್ 1ರಿಂದ 150ಸಿಸಿ ಮೇಲ್ಪಟ್ಟ ಎಲ್ಲಾ ಬೈಕಿನಲ್ಲೂ ಎಬಿಎಸ್ ಒದಗಿಸಲಿದೆ.

ಅವಧಿಗೂ ಮುನ್ನವೇ ಬಿಡುಗಡೆಯಾದ 2019ರ ಟಿವಿಎಸ್ ಅಪಾಚೆ ಆರ್‌ಟಿಆರ್ 180

ಲಭ್ಯವಿರುವ ಬಣ್ಣಗಳು

ಅಪಾಚೆ ಆರ್‌ಟಿಆರ್ 180 ಬೈಕ್‌ಗಳು 5 ವಿವಿಧ ಬಣ್ಣದ ಆಯ್ಕೆಯನ್ನು ಪಡಿದಿದ್ದು, ಪರ್ಲ್ ವೈಟ್, ಗ್ರಾಸ್ ಬ್ಲ್ಯಾಕ್, ಟಿ ಗ್ರೇ, ಮ್ಯಾಟೆ ಬ್ಲೂ ಮತ್ತು ಮ್ಯಾಟೆ ರೆಡ್ ಬಣ್ಣದ ಆಯ್ಕೆ ಪಡೆದಿವೆ.

MOST READ: ಬೆಂಗಳೂರಿನಲ್ಲಿ 2 ವರ್ಷಗಳ ಕಾಲ ಹೊಸ ವಾಹನಗಳ ನೋಂದಣಿ ನಿಷೇಧಕ್ಕೆ ಸಿದ್ದತೆ?

ಅವಧಿಗೂ ಮುನ್ನವೇ ಬಿಡುಗಡೆಯಾದ 2019ರ ಟಿವಿಎಸ್ ಅಪಾಚೆ ಆರ್‌ಟಿಆರ್ 180

ಒಟ್ಟಿನಲ್ಲಿ ಗ್ರಾಹಕರ ನೀರಿಕ್ಷೆಯಂತೆ ಅಪಾಚೆ ಆರ್‌ಟಿಆರ್ 180 ಬೈಕ್‌ಗಳು ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಸದ್ಯ ಅಪಾಚೆ ಬೈಕ್‌ಗಳ ಮಾರಾಟದಲ್ಲಿ 30 ಲಕ್ಷ ಗುರಿತಲುಪಿರುವ ಟಿವಿಎಸ್ ಸಂಸ್ಥೆಯು ಸದ್ಯ 160 ವರ್ಷನ್‌ ಸಹ ಬಿಡುಗಡೆ ಮಾಡಬಹುದು.

More from DriveSpark

Article Published On: Wednesday, November 21, 2018, 16:46 [IST]
English summary
New 2019 TVS Apache RTR 180 Launched In India; Prices Start At Rs 84,578.
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+