ಯಮಹಾ ವೈಝಡ್ಎಫ್-ಆರ್15 ವರ್ಷನ್ 3.0 ಬಿಡುಗಡೆಗೆ ದಿನಗಣನೆ

ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊತ್ತು ಬಿಡುಗಡೆಗೊಳ್ಳುತ್ತಿರುವ ಯಮಹಾ ವೈಝಡ್ಎಫ್-ಆರ್15 ವರ್ಷನ್ 3.0 ಬೈಕ್‌ಗಳು ಈಗಾಗಲೇ ಡೀಲರ್ ಯಾರ್ಡ್‌ಗಳಿಗೆ ತಲುಪಿದ್ದು, ಹೊಸ ಬೈಕ್‌ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭಗೊಂಡಿದೆ.

By Praveen

Recommended Video

Ducati 959 Panigale Crashes Into Buffalo - DriveSpark

ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊತ್ತು ಬಿಡುಗಡೆಗೊಳ್ಳುತ್ತಿರುವ ಯಮಹಾ ವೈಝಡ್ಎಫ್-ಆರ್15 ವರ್ಷನ್ 3.0 ಬೈಕ್‌ಗಳು ಈಗಾಗಲೇ ಡೀಲರ್ ಯಾರ್ಡ್‌ಗಳಿಗೆ ತಲುಪಿದ್ದು, ಹೊಸ ಬೈಕ್‌ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭಗೊಂಡಿದೆ.

ಯಮಹಾ ವೈಝಡ್ಎಫ್-ಆರ್15 ವರ್ಷನ್ 3.0 ಬಿಡುಗಡೆಗೆ ದಿನಗಣನೆ

ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡು ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಯಮಹಾ ವೈಝಡ್ಎಫ್ ಆರ್ 15 ವಿ3 ಬೈಕ್‌ಗಳು ಮುಂದಿನ ತಿಂಗಳು ಭಾರತದಲ್ಲೂ ಬಿಡುಗಡೆಯಾಗುತ್ತಿದ್ದು, ಹೊಸ ಬೈಕ್ ಖರೀದಿ ಮಾಡುವ ಗ್ರಾಹಕರಿಂದ ರೂ. 5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಸ್ವಿಕರಿಸಲಾಗುತ್ತಿದೆ.

ಯಮಹಾ ವೈಝಡ್ಎಫ್-ಆರ್15 ವರ್ಷನ್ 3.0 ಬಿಡುಗಡೆಗೆ ದಿನಗಣನೆ

ಇನ್ನು ಬಿಡುಗಡೆ ಮಾಡುತ್ತಿರುವ ಹೊಸ ಬೈಕ್ ಮಾದರಿಯು ವಿದೇಶಿಯಲ್ಲಿ ಮಾರಾಟಗೊಳ್ಳುತ್ತಿರುವ ವೈಝಡ್ಎಫ್ ಆರ್ 15 ವಿ3 ವೈಶಿಷ್ಟ್ಯತೆಗಳನ್ನೇ ಇಂಡಿಯಾ ಆವೃತ್ತಿ ಕೂಡಾ ಪಡೆದುಕೊಂಡಿದ್ದು, ಸೂಪರ್ ಬೈಕ್ ಪ್ರಿಯರಿಗೆ ಹೊಸ ಅನುಭೂತಿ ನೀಡಲಿವೆ.

ಯಮಹಾ ವೈಝಡ್ಎಫ್-ಆರ್15 ವರ್ಷನ್ 3.0 ಬಿಡುಗಡೆಗೆ ದಿನಗಣನೆ

ಹೀಗಾಗಿ ಅಂತರ್‌ರಾಷ್ಟ್ರೀಯ ಮಟ್ಟದ ಗುಣವಿಶೇಷಗಳನ್ನು ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು ಈ ಹಿಂದಿನ ವಿ2 ಮಾದರಿಯಲ್ಲೇ ಮುಂಭಾಗದ ವಿನ್ಯಾಸವನ್ನು ಪಡೆದುಕೊಂಡಿದೆ. ಜೊತೆಗೆ ಎಬಿಎಸ್, ಎಂಆರ್‌ಎಫ್ ಟೈರ್ ಸೇರಿದಂತೆ ಹಲವು ಸುಧಾರಿತ ಸುರಕ್ಷಾ ವಿಧಾನಗಳನ್ನು ಪಡೆದುಕೊಂಡಿದೆ.

ಯಮಹಾ ವೈಝಡ್ಎಫ್-ಆರ್15 ವರ್ಷನ್ 3.0 ಬಿಡುಗಡೆಗೆ ದಿನಗಣನೆ

ಎಂಜಿನ್ ಸಾಮರ್ಥ್ಯ

155ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೊತೆ ಫ್ಯೂಲ್ ಇಂಜೆಕ್ಷನ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು 19.7-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

Trending On DriveSpark Kannada:

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಚ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

ದೇಶಿಯ ಮಾರುಕಟ್ಟೆಗೆ 7 ಆಸನವುಳ್ಳ ಸೊಲಿಯೊ ಪರಿಚಯಿಸುತ್ತಾ ಮಾರುತಿ ಸುಜುಕಿ?

2018ರ ಮಾರುತಿ ಸುಜುಕಿ ಸ್ವಿಫ್ಟ್ ಕುರಿತು ತಿಳಿದುಕೊಳ್ಳಬೇಕಾದ 5 ಪ್ರಮುಖ ವಿಚಾರಗಳಿವು....

ಯಮಹಾ ವೈಝಡ್ಎಫ್-ಆರ್15 ವರ್ಷನ್ 3.0 ಬಿಡುಗಡೆಗೆ ದಿನಗಣನೆ

ಇದಲ್ಲದೇ 6-ಸ್ಪೀಡ್ ಗೇರ್‌ಬಾಕ್ಸ್ ಸೇರಿದಂತೆ ಎಲ್ಇಡಿ ಹೆಡ್‌ಲ್ಯಾಂಪ್, ಸ್ಲಿಪರ್ ಕ್ಲಚ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಬೈಕ್ ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿರುವ ಸುಜುಕಿ ಜಿಕ್ಸರ್ ಎಸ್ಎಫ್, ಹೋಂಡಾ ಹಾರ್ನೆಟ್, ಬಜಾಜ್ ಪಲ್ಸರ್ ಬೈಕ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಯಮಹಾ ವೈಝಡ್ಎಫ್-ಆರ್15 ವರ್ಷನ್ 3.0 ಬಿಡುಗಡೆಗೆ ದಿನಗಣನೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸೂಪರ್ ಬೈಕ್ ವಿಭಾಗದಲ್ಲಿ ತನ್ನದೇ ಛಾಪು ಮೂಡಿಸಿರುವ ಯಮಹಾ ಸಂಸ್ಥೆಯು ಈ ಹಿಂದಿನ ವೈಝಡ್ಎಫ್ ಆರ್ 15 ಆವೃತ್ತಿಯ ವರ್ಷನ್ 3.0 ಮೂಲಕ ಬೈಕ್ ಪ್ರಿಯರಿಗೆ ಹೊಸ ಆಯ್ಕೆಯನ್ನು ನೀಡುತ್ತಿದ್ದು, ಹೊಸ ಬೈಕಿನ ಬಿಡುಗಡೆಯ ದಿನದಂದು ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಮತ್ತಷ್ಟು ಮಾಹಿತಿ ನೀಡಲಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
New Yamaha YZF R15 V3 Bookings Open In India; To Launch Soon.
Story first published: Monday, January 29, 2018, 13:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X