ಹೊಸ ಅಪ್ಡೆಟ್ ಪಡೆದ ರಾಯಲ್ ಎನ್‍ಫೀಲ್ಡ್ 350 ಎಲೆಕ್ಟ್ರಾ ಬೈಕ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ರಾಯಲ್ ಎನ್‍ಫೀಲ್ಡ್ ತಮ್ಮ ಹೊಸ ಹಲವಾರು ಬೈಕ್‍ಗಳಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸುವ ಯೋಜನೆಯಲಿದ್ದು, ಇನ್ನು ಕೆಲವು ಬೈಕ್‍ಗಳಿಗೆ ರಿಯರ್ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸುವ ಯೋಜನೆಯಲಿದ್ದೆ. ಈ ನಿಟ್ಟಿನಲ್ಲಿ ಸಂಸ್ಥೆಯು ತಮ್ಮ 350 ಬುಲೆಟ್ ಇಎಸ್ (ಎಲೆಕ್ಟ್ರಾ) ಬೈಕ್‍ಗಳಿಗೆ ರಿಯರ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದೆ.

ಹೊಸ ಅಪ್ಡೆಟ್ ಪಡೆದ ರಾಯಲ್ ಎನ್‍ಫೀಲ್ಡ್ 350 ಎಲೆಕ್ಟ್ರಾ ಬೈಕ್

ಹೌದು, ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯನ್ನು ಮಾರಾಟದಲ್ಲಿ ಹಿಂದಿಕ್ಕಲು ಜಾವಾ ಸಂಸ್ಥೆಯು ತಮ್ಮ ಎರಡು ಹೊಸ ಬೈಕ್‍ಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತಮ್ಮ ಲೈನ್-ಅಪ್‍ನಲ್ಲಿನ ಎಲ್ಲಾ ಬೈಕ್‍ಗಳನ್ನು ಹೊಸ ಅಪ್ಡೆಟ್‍ಗಳನ್ನು ನೀಡುವ ಕಾರ್ಯದಲ್ಲಿದೆ.

ಹೊಸ ಅಪ್ಡೆಟ್ ಪಡೆದ ರಾಯಲ್ ಎನ್‍ಫೀಲ್ಡ್ 350 ಎಲೆಕ್ಟ್ರಾ ಬೈಕ್

ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಈಗಾಗಲೆ ಬುಲೆಟ್ 350 ಬೈಕ್‍ಗೆ ಸಹ ರಿಯರ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದು, ಬುಲೆಟ್ 350 ಬೈಕಿನ ಸ್ಟ್ಯಾಂಡರ್ಡ್ ಮತ್ತು ಎಲೆಕ್ಟ್ರಾ ಮಾಡಲ್‍ಗಳು ರಿಯರ್ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿದೆ.

ಹೊಸ ಅಪ್ಡೆಟ್ ಪಡೆದ ರಾಯಲ್ ಎನ್‍ಫೀಲ್ಡ್ 350 ಎಲೆಕ್ಟ್ರಾ ಬೈಕ್

ರಿಯರ್ ಡಿಸ್ಕ್ ಬ್ರೇಕ್‍ ಅನ್ನು ಪಡೆದ ಸ್ಟ್ಯಾಂಡರ್ಡ್ ರಾಯಲ್ ಎನ್‍ಫೀಲ್ಡ್ 350 ಬುಲೆಟ್ ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.1.28 ಲಕ್ಷಕ್ಕೆ ಮತ್ತು 350 ಬುಲೆಟ್ ಇಎಸ್ ಬೈಕ್ ರೂ. 1.32 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ.

ಹೊಸ ಅಪ್ಡೆಟ್ ಪಡೆದ ರಾಯಲ್ ಎನ್‍ಫೀಲ್ಡ್ 350 ಎಲೆಕ್ಟ್ರಾ ಬೈಕ್

ರಿಯರ್ ಡಿಸ್ಕ್ ಬ್ರೇಕ್ ಅನ್ನು ಹೊರತು ಪಡಿಸಿ ರಾಯಲ್ ಎನ್‍ಫೀಲ್ಡ್ ಎಲೆಕ್ಟ್ರಾ 350 ಬೈಕ್‍ನಲ್ಲಿ ಬೇರಾವ ಬದಲಾವಣೆಗಳನ್ನು ಮಾಡಲಿಲ್ಲ, ಆದರೂ 2019ರ ಏಪ್ರಿಲ್ ತಿಂಗಳ ನಂತರ ಕೆಂದ್ರ ಸರ್ಕಾರದ ಅದೇಶದಂತೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲೇ ಬೇಕಾಗಿದೆ.

MOST READ: ಜಾವಾ vs ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಎಂಜಿನ್ ಸಾಮರ್ಥ್ಯ

ರಾಯಲ್ ಎನ್‍ಫೀಲ್ಡ್ 350 ಬುಲೆಟ್ ಬೈಕ್‍ಗಳು 346ಸಿಸಿ ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 19.8 ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಅಪ್ಡೆಟ್ ಪಡೆದ ರಾಯಲ್ ಎನ್‍ಫೀಲ್ಡ್ 350 ಎಲೆಕ್ಟ್ರಾ ಬೈಕ್

ಎರಡೂ ಬೈಕ್‍ಗಳ ಮುಂಭಾಗದಲ್ಲಿ ಟೆಸ್ಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಅನ್ನು ನೀಡಲಾಗಿದೆ. CEAT ನಿಂದ ಪಡೆದ 19 ಮಟ್ಲ್ಟಿ ಸ್ಪೋಕ್ ಅಲಾಯ್ ವ್ಹೀಲ್‍ಗಳ ಜೊತೆಗೆ ಮುಂಭಾಗದಲ್ಲಿ 280ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240ಎಂಎಂನ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಹೊಸ ಅಪ್ಡೆಟ್ ಪಡೆದ ರಾಯಲ್ ಎನ್‍ಫೀಲ್ಡ್ 350 ಎಲೆಕ್ಟ್ರಾ ಬೈಕ್

ಇವುಗಳನ್ನು ಹೊರತು ಪಡಿಸಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಇತ್ತೀಚೆಗಷ್ಟೆ ತಮ್ಮ ಥಂಡರ್‍‍ಬರ್ಡ್ 350ಎಕ್ಸ್ ಮತ್ತು ಥಂಡರ್‍‍ಬರ್ಡ್ 500ಎಕ್ಸ್ ಬೈಕ್‍ಗಳಿಗೆ ಎಬಿಎಸ್ ಅನ್ನು ಅಳವಡಿಸಿ ಮತ್ತೆ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.60 ಲಕ್ಷ ಮತ್ತು ರೂ. 2.10 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ.

MOST READ: ಆರ್‌ಎಕ್ಸ್100 ಬೈಕ್‌ಗಳಿಗೆ ಮರುಜೀವ ನೀಡಲು ಮುಂದಾದ ಯಮಹಾ.!

ಹೊಸ ಅಪ್ಡೆಟ್ ಪಡೆದ ರಾಯಲ್ ಎನ್‍ಫೀಲ್ಡ್ 350 ಎಲೆಕ್ಟ್ರಾ ಬೈಕ್

ಇಷ್ಟೆ ಅಲ್ಲದೇ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತಮ್ಮ ಲೈನ್-ಅಪ್‍ನಲ್ಲಿನ ಅಧಿಕ ಸಾಮರ್ಥ್ಯವಿರುವ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍ಗಳನ್ನು ಸಹ ಬಿಡುಗಡೆಗೊಳಿಸಿದ್ದು, ಇವು ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಪಡೆದುಕೊಂಡಿದೆ.

Source: Subho's Vlogs

Most Read Articles

Kannada
English summary
Royal Enfield 350 Electra With Rear Disc Brake Read In Kannada
Story first published: Tuesday, December 4, 2018, 17:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X