ಜಾವಾ vs ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

90ರ ದಶಕದಲ್ಲಿ ಮೋಟಾರ್‌ಸೈಕಲ್ ಪ್ರೇಮಿಗಳ ಹಾಟ್ ಫೆವರಿಟ್ ಆಗಿ ಕಾರಣಾಂತರಗಳಿಂದ ಭಾರತೀಯ ಮಾರುಕಟ್ಟೆ ನಿರ್ಗಮಿಸಿದ್ದ ಜಾವಾ ಸಂಸ್ಥೆಯು ಇದೀಗ ಮಹತ್ವದ ಬದಲಾಣೆಯೊಂದಿಗೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮಧ್ಯಮ ವರ್ಗಗಳಿಂದ ಹಿಡಿದು ಐಷಾರಾಮಿ ಬೈಕ್ ಪ್ರೇಮಿಗಳನ್ನು ತನ್ನತ್ತ ಸೆಳೆಯಬಲ್ಲ ಗುಣ ಹೊಂದಿರುವ ಜಾವಾ ಸದ್ಯ ಭಾರತದಲ್ಲಿ ಮತ್ತೊಮ್ಮೆ ತನ್ನ ಗತವೈಭವವನ್ನು ಮರಕಳಿಸುವ ಸುಳಿವು ನೀಡಿದೆ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಸಂಸ್ಥೆಯು ಯಶಸ್ವಿಯಾಗಿದೆ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಬಿಡುಗಡೆಗೂ ಮುನ್ನವೇ ಬೈಕ್ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಜಾವಾ ಹೊಚ್ಚ ಹೊಸ ಬೈಕ್‌ಗಳು ನೀರಿಕ್ಷೆಗೂ ಮೀರಿ ಮಾರುಕಟ್ಟೆಗೆ ಮರಳಿ ಬಂದಿದ್ದು, ಹಳೆಯ ಜಾವಾ ಮೋಟರ್​‌ಸೈಕಲ್​ನ ಹೊಸ ರೂಪದಂತಿವೆ ಎಂದ್ರೆ ತಪ್ಪಾಗುವುದಿಲ್ಲ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಹೊಸ ಜಾವಾ ಬೈಕ್‌ಗಳು ತೀವ್ರ ಪೈಪೋಟಿ ನೀಡಲು ಸಜ್ಜಾಗಿದ್ದು, ಅದರಲ್ಲೂ ಜಾವಾ ಸಂಸ್ಥೆಯು ಜಾವಾ ಮತ್ತು ಜಾವಾ 42 ಬೈಕ್‌ಗಳು ನೇರವಾಗಿ ಕ್ಲಾಸಿಕ್ 350ಗೆ ಸೆಡ್ಡುಹೊಡೆದಿವೆ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಹಾಗಾದ್ರೆ ಹೊಸ ಜಾವಾ ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳು ಪೈಪೋಟಿ ನೀಡುವ ಯಾವೆಲ್ಲಾ ಗುಣಲಕ್ಷಣಗಳನ್ನು ಹೊಂದಿವೆ ಹಾಗೂ ಜಾವಾ ಹೊರ ತಂದಿರುವ ಹೊಸ ಮಾದರಿಯ ಎಂಜಿನ್ ಪರ್ಫಾಮೆನ್ಸ್ ಹೇಗಿದೆ ಎನ್ನುವುದನ್ನು ನಾವಿಲ್ಲಿ ಚರ್ಚಿಸಿದ್ದೇವೆ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಡಿಸೈನ್ ಮತ್ತು ಸ್ಟೈಲ್

ಜಾವಾ ಸಂಸ್ಥೆಯು ಗತಕಾಲದ ವೈಭವವನ್ನು ಕಾಪಾಡಲು ತನ್ನ ನೂತನ ಬೈಕುಗಳ ವಿನ್ಯಾಸದಲ್ಲಿ ಸುಧಾರಿತ ಮಾದರಿಯ ಬೈಕಿನ ಸ್ಪೀಡೋ ಮೀಟರ್, ಡ್ಯೂಮ್ ನ ಕ್ಲಾಸಿಕ್ ಲುಕ್ ಅನ್ನು ಹಾಗೇ ಉಳಿಸಿ, ಹೊಸದಾಗಿ ಟೂಲ್ ಬಾಕ್ಸ್ ಅನ್ನು ಸೇರಿಸುವ ಮೂಲಕ ಬೈಕಿನ ಅಂದವನ್ನು ಹೆಚ್ಚುವಂತೆ ಮಾಡಿದೆ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಟಿರ್ ಡ್ರಾಫ್ ವಿನ್ಯಾಸದ ಫ್ಯೂಲ್ ಟ್ಯಾಂಕ್, ಗಮನಸೆಳೆಯುವ ಜಾವಾ ಬ್ಯಾಡ್ಜ್, ಟ್ವಿನ್ ಎಕ್ಸಾಸ್ಟ್ ಪೈಪ್ಸ್, ಸಣ್ಣದಾದ ಟೈಲ್ ಲೈಟ್ಸ್ ನೀಡಲಾಗಿದ್ದು, ಈ ಹಿಂದಿನ ಬೈಕ್‌ಗಳಲ್ಲಿ ಇರುವಂತ ವಿನ್ಯಾಸಗಳನ್ನೇ ಹೊಸತನದೊಂದಿಗೆ ಸಿದ್ದಗೊಳಿಸಲು ಜಾವಾ ಮತ್ತು ಮಹೀಂದ್ರಾ ಹೊಸ ಪ್ರಯೋಗ ಮಾಡಿವೆ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಹಾಗೆಯೇ ರಾಯಲ್ ಎನ್‌ಫೀಲ್ಡ್ ಕೂಡಾ ಕಳೆದ 5 ವರ್ಷಗಳಿಂದ ತನ್ನ ಕ್ಲಾಸಿಕ್ ಬೈಕ್ ಸರಣಿಯಲ್ಲಿ ಭಾರೀ ಬದಲಾವಣೆ ತಂದಿದೆ ಎನ್ನಬಹುದು. ಇದರಲ್ಲಿ ಕ್ಲಾಸಿಕ್ 350 ಬೈಕ್ ಸದ್ಯ ಅತಿಹೆಚ್ಚು ಬೇಡಿಕೆಯೊಂದಿಗೆ ಮಾರಾಟವಾಗುತ್ತಿದ್ದು, ಮಾರ್ಡನ್ ರೆಟ್ರೋ ಲುಕ್ ಸೇರಿದಂತೆ ಹಲವು ಹೊಸತನ ಪಡೆದಿದ್ದು, ಅದಾಗ್ಯೂ ಬೆಲೆಗೆ ತಕ್ಕಂತೆ ಸುಧಾರಿತ ಸೌಲಭ್ಯಗಳು ಇಲ್ಲ ಎನ್ನುವುದು ಬಹುತೇಕ ಆರ್‌ಇ ಪ್ರಿಯರಿಗೆ ಅಸಮಾಧಾನವಿದೆ.

ಡಿಸೈನ್ ರೇಟಿಂಗ್:

ಜಾವಾ ಮೋಟಾರ್ ಸೈಕಲ್: 8/10

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350: 7/10

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27-ಬಿಹೆಚ್‍ಪಿ ಮತ್ತು 28-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಹಾಗೆಯೇ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳು 349ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದೊಂದಿಗೆ 19.8-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಪಡೆದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಜೋಡಣೆಸಲಾಗಿದೆ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಅಂದ್ರೆ, ಜಾವಾ ಬೈಕ್‌ಗಳು ಕ್ಲಾಸಿಕ್ 350ಗಿಂತಲೂ ಕಡಿಮೆ ಎಂಜಿನ್ ಸಾಮರ್ಥ್ಯವನ್ನು ಹೊಂದಿದ್ದರೂ ಸಹ ಎಂಜಿನ್ ಪರ್ಫಾಮೆನ್ಸ್ ವಿಚಾರದಲ್ಲಿ ಜಾವಾ ಬೈಕ್‌ಗಳು ಉತ್ತಮ ಆಯ್ಕೆಯಾಗಿದ್ದು, ಇಂಧನ ದಕ್ಷತೆಯಲ್ಲೂ ಆರ್‌ಇ ಬೈಕ್‌ಗಳಿಂತ ಜಾವಾ ಬೈಕ್ ಹೆಚ್ಚಿನ ಮೈಲೇಜ್ ನೀಡಲಿವೆ.

MOST READ: 5 ಸಾವಿರಕ್ಕೂ ಗತಿ ಇಲ್ಲ ಎಂದಿದ್ದ ಈ ನಟ ಇವತ್ತು 4 ಕೋಟಿ ಮೌಲ್ಯದ ಬೆಂಟ್ಲಿ ಕಾರಿನ ಒಡೆಯ

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಜಾವಾ ಬೈಕ್‌ಗಳು 14-ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯದೊಂದಿಗೆ ಪ್ರತಿ ಲೀಟರ್‌ಗೆ 32 ರಿಂದ 35 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಕ್ಲಾಸಿಕ್ 350 ಬೈಕ್‌ಗಳು 13.5-ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯದೊಂದಿಗೆ 30ರಿಂದ 35 ಕಿ.ಮೀ ಮೈಲೇಜ್ ನೀಡಬಲ್ಲವು.

ಎಂಜಿನ್ ರೇಟಿಂಗ್

ಜಾವಾ ಮೋಟಾರ್ ಸೈಕಲ್: 7/10

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350: 6/10

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಬೈಕ್ ವೈಶಿಷ್ಟ್ಯತೆಗಳು

ಜಾವಾ 42 ಬೈಕ್‍ನಲ್ಲಿ 765ಎಂಎಂ ಎತ್ತರವಾದ ಸೀಟ್ ನೀಡಿರುವ ಕಾರಣ ಮಧ್ಯಮ ಗಾತ್ರದ ರೈಡರ್‍‍ಗಳು ಅರಾಮಾಗಿ ಚಾಲನೆ ಮಾಡಬಹುದಾಗಿದ್ದು, ಜಾವಾ 42 ಬೈಕ್ 170 ಕಿಲೋಗ್ರಾಂನ ತೂಕವನ್ನು ಪಡುದುಕೊಂಡಿದೆ. ಹಾಗೆಯೇ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್‍ಗಳು 192 ಕಿಲೋಗ್ರಾಂ ತೂಕವನ್ನು ಪಡೆದುಕೊಂಡಿದೆ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಜಾವಾ 42 ಬೈಕ್ ಮುಂಭಾಗದಲ್ಲಿ 90/90 ಆರ್18 ಟೈರ್ ಮತ್ತು ಹಿಂಭಾಗದಲ್ಲಿ 120/80 ಆರ್17 ಯೂನಿಟ್ ಟೈರ್‍‍ಗಳನ್ನು ಪಡೆದುಕೊಂಡಿದೆ. ಇನ್ನು ರೈಡರ್‍‍ಗಳ ಸುರಕ್ಷತೆಗಾಗಿ ಈ ಬೈಕಿನ ಮುಂಭಾಗದಲ್ಲಿ 280ಎಂಎಂ ಡಿಸ್ಕ್ ಬ್ರೇಕ್ ಹಾಗು ಹಿಂಭಾಗದಲ್ಲಿ 153ಎಂಎಂ ಡಿಸ್ಕ್ ಬೆಕ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಸಹ ನೀಡಲಾಗಿದೆ.

MOST READ: ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಈ ಮೇಲಿನ ಸೌಲಭ್ಯಗಳೇ ಸದ್ಯ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳಲ್ಲೂ ಇದ್ರೂ ಕೂಡಾ ಗ್ರಾಹಕರ ದೂರುಗಳು ಹೆಚ್ಚಿದ್ದು, ಇಂತಹ ಪರಿಸ್ಥಿತಿಯಲ್ಲಿ ಜಾವಾ ಬೈಕ್‌ಗಳು ಮಾರುಕಟ್ಟೆಗೆ ಬಂದಿರುವ ಆರ್‌ಇ ಗೆ ತಳಮಳ ಶುರುವಾಗಿದೆ ಎನ್ನಬಹುದು.

ಬೈಕ್ ವೈಶಿಷ್ಟ್ಯತೆಯ ರೇಟಿಂಗ್

ಜಾವಾ ಮೋಟಾರ್ ಸೈಕಲ್: 7/10

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350: 6/10

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಬೈಕ್ ಬೆಲೆಗಳು(ಎಕ್ಸ್‌ಶೋರೂಂ ಪ್ರಕಾರ)

ಜಾವ ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ, ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಇನ್ನು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳು ಆರಂಭಿಕವಾಗಿ ರೂ. 1.39 ಲಕ್ಷ ಬೆಲೆ ಹೊಂದಿದ್ದು, ಬಣ್ಣ ಮತ್ತು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೈ ಎಂಡ್ ಮಾದರಿಯು 1.49 ಲಕ್ಷ ಬೆಲೆ ಪಡೆದಿದೆ. ಆದ್ರೆ ಕೆಲವು ಮಾದರಿಗಳಲ್ಲಿ ಎಬಿಎಸ್ ಸೌಲಭ್ಯವಿಲ್ಲ.

ಬೆಲೆ ರೇಟಿಂಗ್

ಜಾವಾ ಮೋಟಾರ್ ಸೈಕಲ್: 8/10

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350: 7/10

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಲಭ್ಯವಿರುವ ಬಣ್ಣಗಳು

ಜಾವಾ ಬಿಡುಗಡೆಗೊಳಿಸಿದ ಈ ಎರಡು ಬೈಕ್‍ಗಳು ಆಕರ್ಷಕ ಬಣ್ಣದಲ್ಲಿ ಖರೀದಿಗೆ ಲಭ್ಯವಿದ್ದು, ಜಾವಾ ಬೈಕ್‌ಗಳು ಜಾವಾ ಬ್ಲಾಕ್, ಜಾವಾ ಮರೂನ್ ಮತ್ತು ಜಾವಾ ಗ್ರೇ ಎಂಬ ಮೂರು ಆಯ್ಕೆ ಹೊಂದಿದ್ದರೆ ಜಾವಾ 42 ಬೈಕ್ ಹಾಲಿಸ್ ಟೀಲ್, ಗ್ಲಾಕ್ಟಿಕ್ ಗ್ರೀನ್, ಸ್ಟಾರ್‍‍ಲೈಟ್ ಬ್ಲೂ, ಲುಮೊಸ್ ಲೈಮ್, ನೆಬ್ಯುಲಾ ಬ್ಲೂ ಮತ್ತು ಕೊಮೆಟ್ ರೆಡ್ ಎಂಬ ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಸದ್ಯಕ್ಕೆ ಖರೀದಿಗೆ ಲಭ್ಯವಿಲ್ಲ..!

ಹೌದು, ಜಾವಾ ಸಂಸ್ಥೆಯು ಬಿಡುಗಡೆಗೊಳಿಸಿದ ಜಾವಾ ಮತ್ತು ಜಾವಾ 42 ಬೈಕ್‍ಗಳನ್ನು ಖರೀದಿಸಲು ಇಚ್ಛಿಸುವ ಗ್ರಾಹಕರು ಇನ್ನು ಕೆಲದಿನಗಳ ಕಾಲ ಕಾಯಬೇಕಾಗುತ್ತೆ. ಸದ್ಯಕ್ಕೆ ನಿಮ್ಮ ಸಮೀಪದಲ್ಲಿರುವ ಮಹೀಂದ್ರಾ ಡೀಲರ್‍‍ಗಳ ಹತ್ತಿರ ರೂ.5 ಸಾವಿರ ಹಣವನ್ನು ಮುಂಗಡವಾಗಿ ಪಾವತಿಸಿ ಪ್ರೀ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದ್ದು, ಜನವರಿ ಆರಂಭದಿಂದ ಬೈಕ್ ವಿತರಣೆ ಆರಂಭವಾಗಲಿದೆ.

ಜಾವಾ V/s ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350- ಇವುಗಳಲ್ಲಿ ಯಾವುದು ಬೆಸ್ಟ್?

ಒಟ್ಟಿನಲ್ಲಿ ಭಾರತೀಯ ಗ್ರಾಹಕರ ಅಭಿರುಚಿಗಳನ್ನು ಅರಿತು ಜಾವಾ ಬೈಕ್‌ಗಳಲ್ಲಿ ಹೊಸ ಬದಲಾವಣೆ ತಂದಿರುವ ಮಹೀಂದ್ರಾ ಸಂಸ್ಥೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಜಾವಾ ಬೈಕ್‌ಗಳನ್ನು ಹೊರತರುವ ಇರಾದೆಯಲ್ಲಿದ್ದು, ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಏಕಸ್ವಾಮ್ಯ ಹೊಂದಿರುವ ರಾಯಲ್ ಎನ್‌ಫೀಲ್ಡ್‌ಗೆ ಭಾರೀ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Jawa Vs Royal Enfield Classic 350 — What Should You Buy In The Classic 350cc Segment?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X