ಬೆಸ್ ವೆರಿಯೆಂಟ್ ಕ್ಲಾಸಿಕ್ 350 ಬೈಕಿನಲ್ಲಿ ಹೊಸ ಸುರಕ್ಷಾ ಸೌಲಭ್ಯ ಒದಗಿಸಿದ ಆರ್‌ಇ
ಕ್ಲಾಸಿಕ್ ಬೈಕ್ ನಿರ್ಮಾಣ ಸಂಸ್ಥೆ ರಾಯಲ್ ಎನ್‌ಫೀಲ್ಡ್ ತನ್ನ ಬೈಕ್ ಉತ್ಪನ್ನಗಳ ಸುರಕ್ಷಾ ಸೌಲಭ್ಯಗಳಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಇದೀಗ ದೇಶದಲ್ಲಿ ಅತಿ ಮಾರಾಟವಾಗುತ್ತಿರುವ ಕ್ಲಾ,ಸಿಕ್ 350 ಬೆಸ್ ವೆರಿಯೆಂಟ್‌ಗಳಲ್ಲಿ ಹಿಂಬದಿ ಚಕ್ರದ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲು ನಿರ್ಧರಿಸಿದೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ 350 ಬೆಸ್ ವೆರಿಯೆಂಟ್‌ಗಳಲ್ಲಿ ಡಿಸ್ಕ್ ಬ್ರೇಕ್ ಪರಿಚಯಿಸುವ ಮೂಲಕ ಬೈಕಿನ ಬೆಲೆಗಳಲ್ಲೂ ಏರಿಕೆ ಮಾಡಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.1.47 ಲಕ್ಷ ಬೆಲೆ ಹೊಂದಿರಲಿವೆ.

ರಿಯರ್ ಡಿಸ್ಕ್ ಬ್ರೇಕ್ ಹೊರತಾಗಿ ಕ್ಲಾಸಿಕ್ 350 ಬೈಕ್‌ಗಳಲ್ಲಿ ಈ ಹಿಂದಿನಂತೆಯೇ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆ ತರದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಬಿಎಸ್ ಟೆಕ್ನಾಲಜಿ ಪ್ರೇರಿತ ಕ್ಲಾಸಿಕ್ 350 ಸಿಗ್ನಲ್ಸ್ ಎನ್ನುವ ಮತ್ತೊಂದು ಹೊಸ ಬೈಕ್ ಬಿಡುಗಡೆ ಮಾಡಿದೆ.

ಮೂಲಗಳ ಪ್ರಕಾರ, ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮುಂಬರುವ ದೀಪಾವಳಿ ಹೊತ್ತಿಗೆ ಪ್ರತಿ ಬೈಕ್ ಮಾದರಿಯಲ್ಲೂ ಎಬಿಎಸ್ ಸೌಲಭ್ಯವನ್ನು ಜೋಡಣೆ ಮಾಡಿ ಮಾರಾಟ ಮಾಡುವ ಯೋಜನೆಯನ್ನು ರೂಪಿಸಿದೆ ಎನ್ನಲಾಗದೆ.

ಹೀಗಾಗಿ ಇಷ್ಟು ದಿನಗಳ ಕಾಲ ಅಗತ್ಯ ಸುರಕ್ಷಾ ಸೌಲಭ್ಯಗಳು ಹೊಂದಿರದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದ ಗ್ರಾಹಕರ ಆಯ್ಕೆಗೆ ಇದು ಪ್ರಯೋಜನಕಾರಿಯಾಗಲಿದ್ದು, ಕೇಂದ್ರ ಸರ್ಕಾರದ ಹೊಸ ಮೋಟಾರ್ ಕಾಯ್ದೆಯಂತೆ ಮತ್ತಷ್ಟು ಹೊಸ ಸೌಲಭ್ಯಗಳನ್ನು ಮುಂಬರುವ ದಿನಗಳಲ್ಲಿ ಪರಿಚಯಿಸಲಿದೆ.

ಸದ್ಯ ಕ್ಲಾಸಿಕ್ 350 ಬೈಕ್‌ಗಳಲ್ಲಿ 280ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಒದಗಿಸಲಾಗುತ್ತಿದ್ದು, ಇದೀಗ ಹೊಸದಾಗಿ 220ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್ ಸೌಲಭ್ಯ ಸಹ ದೊರಲಿದೆ. ಆದ್ರೆ ಈ ಬೈಕಿನಲ್ಲಿ ಇದುವರೆಗೆ ಎಬಿಎಸ್ ಜೋಡಣೆ ಮಾಡದಿರುವುದು ಕೆಲವು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇದರಿಂದ ಮುಂದಿನ ದೀಪಾವಳಿ ಹೊತ್ತಿಗೆ ಪ್ರತಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸಹ ಎಬಿಎಸ್ ಹೊಂದಿರಲಿದ್ದು, ಪೆಗಾಸಸ್ ಮಾರಾಟದಲ್ಲಿ ಆದ ಗ್ರಾಹಕರ ಅಸಮಾಧಾನದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಆರ್‌ಇ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಎಂಜಿನ್ ಸಾಮರ್ಥ್ಯ
ಕ್ಲಾಸಿಕ್ 350 ಬೈಕ್‌ಗಳು 346-ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 19.8-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಪ್ರತಿ ಗಂಟೆಗೆ 95 ರಿಂದ 100 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿವೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕಳೆದ ತಿಂಗಳು ಹೊಸದಾಗಿ ಬಿಡುಗಡೆ ಮಾಡಲಾಗಿರುವ ಕ್ಲಾಸಿಕ್ 350 ಸಿಗ್ನಲ್ಸ್ ಬೈಕ್ ಮಾದದರಿಯ ಎಬಿಎಸ್‌ನೊಂದಿಗೆ ಮಾರಾಟವಾಗುತ್ತಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.1.62 ಲಕ್ಷ ಬೆಲೆ ಮಾರಾಟವಾಗುತ್ತಿದೆ. ಬೈಕಿನ ಮತ್ತಷ್ಟು ಚಿತ್ರಗಳನ್ನು ನೀವಿಲ್ಲಿ ನೋಡಬಹುದು.


Click it and Unblock the Notifications