ಆರ್‌ಇ ಕ್ಲಾಸಿಕ್ 350 ಗನ್‌ಮೆಟಲ್ ವರ್ಷನ್‌ನಲ್ಲಿ ಹೊಸದಾಗಿ ಎಬಿಎಸ್ ಅಳವಡಿಕೆ
2019ರ ಎಪ್ರಿಲ್‌ನಿಂದ ದೇಶಾದ್ಯಂತ 150ಸಿಸಿ ಮೇಲ್ಪಟ್ಟ ಪ್ರತಿ ಬೈಕ್ ಮಾದರಿಗಳಲ್ಲೂ ಕಡ್ಡಾಯವಾಗಿ ಎಬಿಎಸ್ ಅಳವಡಿಸುವ ಕುರಿಂತಂತೆ ಕೇಂದ್ರ ಸಾರಿಗೆ ಇಲಾಖೆಯು ಬೈಕ್ ಉತ್ಪಾದನಾ ಸಂಸ್ಥೆಗಳಿಗೆ ನಿರ್ದೆಶನ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಡೆಡ್‌ಲೈನ್‌ಗೂ ಮುನ್ನವೇ ತನ್ನ ಜನಪ್ರಿಯ ಬೈಕ್ ಮಾದರಿಗಳಲ್ಲಿ ಎಬಿಎಸ್ ಪರಿಚಯಿಸುತ್ತಿದೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಈ ಹಿಂದೆ ತನ್ನ ಜನಪ್ರಿಯ ಬೈಕ್ ಮಾದರಿಗಳಾದ ಕ್ಲಾಸಿಕ್, ಬುಲೆಟ್, ಥಂಡರ್‌ಬರ್ಡ್ ಮತ್ತು ಹಿಮಾಲಯನ್ ಬೈಕ್‌ಗಳಲ್ಲಿ ಡಿಸ್ಕ್ ಬ್ರೇಕ್ ಹೊರತುಪಡಿಸಿ ಎಬಿಎಸ್(ಆ್ಯಂಟಿ ಲಾಕ್ ಸಿಸ್ಟಂ) ಸೌಲಭ್ಯವನ್ನು ನೀಡುವಲ್ಲಿ ತೋರಿದ ನಿರ್ಲಕ್ಷ್ಯದಿಂದಾಗಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದ್ರೆ ಕೇಂದ್ರ ಸರ್ಕಾರದ ಖಡಕ್ ಸೂಚನೆ ಮೇರೆಗೆ ಇದೀಗ ಪ್ರತಿ ಬೈಕ್ ಮಾದರಿಯಲ್ಲೂ ಎಬಿಎಸ್ ಅಳವಡಿಕೆ ಮಾಡಿ ಮರುಬಿಡುಗಡೆ ಮಾಡುತ್ತಿದೆ.

ಈ ಹಿಂದೆ ಎಬಿಎಸ್ ಪ್ರೇರಿತ ಕ್ಲಾಸಿಕ್ 350 ಸಿಗ್ನಲ್ಸ್ ಎನ್ನುವ ಹೊಚ್ಚ ಹೊಸ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದೀಗ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕ್ಲಾಸಿಕ್ 350 ಗನ್‌ಮೆಟಲ್ ವರ್ಷನ್‌ನಲ್ಲಿಯೂ ಎಬಿಎಸ್ ಅಳವಡಿಕೆ ಮಾಡಿ ಬಿಡುಗಡೆಗೊಳಿಸಿದೆ.

ಹೀಗಾಗಿ ಎಬಿಎಸ್ ಸೌಲಭ್ಯ ಒದಗಿಸಿರುವುದರಿಂದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಗನ್‌ಮೆಟಲ್ ವರ್ಷನ್ ಬೈಕ್ ಬೆಲೆಯು ಸಹ ಏರಿಕೆಯಾಗಿದ್ದು, ಆನ್‌ರೋಡ್ ಪ್ರಕಾರ, ಹೊಸ ಬೈಕಿನ ಬೆಲೆಯನ್ನು ರೂ.1.80 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಮೂಲಗಳ ಪ್ರಕಾರ, ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬರುವ ದೀಪಾವಳಿ ಹೊತ್ತಿಗೆ ಪ್ರತಿ ಬೈಕ್ ಮಾದರಿಯಲ್ಲೂ ಎಬಿಎಸ್ ಸೌಲಭ್ಯವನ್ನು ಜೋಡಣೆ ಮಾಡಿ ಮಾರಾಟ ಮಾಡುವ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದ್ದು, ಎಬಿಎಸ್ ಹೊರತುಪಡಿಸಿ ಇನ್ಯಾವುದೇ ತಾಂತ್ರಿಕ ಸೌಲಭ್ಯಗಳನ್ನು ಬದಲಿಸಲು ನಿರ್ಧರಿಸಿದೆ.

ಹೀಗಾಗಿ ಇಷ್ಟು ದಿನಗಳ ಕಾಲ ಅಗತ್ಯ ಸುರಕ್ಷಾ ಸೌಲಭ್ಯಗಳು ಹೊಂದಿರದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದ ಗ್ರಾಹಕರ ಆಯ್ಕೆಗೆ ಇದು ಪ್ರಯೋಜನಕಾರಿಯಾಗಲಿದ್ದು, ಕೇಂದ್ರ ಸರ್ಕಾರದ ಹೊಸ ಮೋಟಾರ್ ಕಾಯ್ದೆಯಂತೆ ಮತ್ತಷ್ಟು ಹೊಸ ಸೌಲಭ್ಯಗಳನ್ನು ಮುಂಬರುವ ದಿನಗಳಲ್ಲಿ ಪರಿಚಯಿಸಲಿದೆ.

ಸದ್ಯ ಕ್ಲಾಸಿಕ್ 350 ಬೈಕ್‌ಗಳಲ್ಲಿ 280ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಒದಗಿಸಲಾಗುತ್ತಿದ್ದು, ಇದೀಗ ಹೊಸದಾಗಿ 220ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್ ಸೌಲಭ್ಯ ಸಹ ದೊರಲಿದೆ. ಆದ್ರೆ ಈ ಬೈಕಿನಲ್ಲಿ ಇದುವರೆಗೆ ಎಬಿಎಸ್ ಜೋಡಣೆ ಮಾಡದಿರುವುದು ಕೆಲವು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇದರಿಂದ ಬರುವ ದೀಪಾವಳಿ ಹೊತ್ತಿಗೆ ಪ್ರತಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸಹ ಎಬಿಎಸ್‌ನೊಂದಿಗೆ ದೊರೆಯಲಿದ್ದು, ಪೆಗಾಸಸ್ ಬೈಕ್ ಮಾರಾಟದಲ್ಲಿ ಆದ ಗ್ರಾಹಕರ ಅಸಮಾಧಾನದಿಂದ ಎಚ್ಚೆತ್ತುಕೊಂಡಿರುವ ಆರ್‌ಇ ಸಂಸ್ಥೆಯು ಇದೀಗ ಗ್ರಾಹಕರ ಬೇಡಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ.
MOST READ: ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಎಂಜಿನ್ ಸಾಮರ್ಥ್ಯ
ಕ್ಲಾಸಿಕ್ 350 ಬೈಕ್‌ಗಳು 346-ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 19.8-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಪ್ರತಿ ಗಂಟೆಗೆ 95 ರಿಂದ 100 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿವೆ.

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕಳೆದ ತಿಂಗಳು ಹೊಸದಾಗಿ ಬಿಡುಗಡೆ ಮಾಡಲಾಗಿರುವ ಕ್ಲಾಸಿಕ್ 350 ಸಿಗ್ನಲ್ಸ್ ಬೈಕ್ ಮಾದದರಿಯ ಎಬಿಎಸ್‌ನೊಂದಿಗೆ ಮಾರಾಟವಾಗುತ್ತಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.1.62 ಲಕ್ಷ ಬೆಲೆ ಮಾರಾಟವಾಗುತ್ತಿದೆ. ಬೈಕಿನ ಮತ್ತಷ್ಟು ಚಿತ್ರಗಳನ್ನು ನೀವಿಲ್ಲಿ ನೋಡಬಹುದು.
MOST READ: ಕೆಟಿಎಂ 125 ಡ್ಯೂಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ- ಬೆಲೆ ಎಷ್ಟು ಗೊತ್ತಾ?


Click it and Unblock the Notifications