ರಿಯರ್ ಡಿಸ್ಕ್ ಬ್ರೇಕ್ ಪ್ರೇರಿತ ಕ್ಲಾಸಿಕ್ 350 ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕ್ಲಾಸಿಕ್ 350 ರೆಡ್‌ಡಿಚ್ ರೆಡ್ ಮಾದರಿಗಳಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಒದಗಿಸುತ್ತಿದೆ.

By Praveen Sannamani

ಬೈಕ್‌ಗಳಲ್ಲಿ ನೀಡಲಾಗುವ ಸುರಕ್ಷಾ ಕ್ರಮಗಳ ಕುರಿತು ಗ್ರಾಹಕರು ಹೆಚ್ಚಿನ ಗಮನಹರಿಸುತ್ತಿದ್ದು, ಈ ಹಿನ್ನೆಲೆ ಬೇಡಿಕೆಗೆ ಅನುಗುಣವಾಗಿ ಕ್ಲಾಸಿಕ್ 350 ರೆಡ್‌ಡಿಚ್ ರೆಡ್ ಮಾದರಿಗಳಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಒದಗಿಸುತ್ತಿದೆ.

ರಿಯರ್ ಡಿಸ್ಕ್ ಬ್ರೇಕ್ ಪ್ರೇರಿತ ಕ್ಲಾಸಿಕ್ 350 ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ರಿಯರ್ ಡಿಸ್ಕ್ ಬ್ರೇಕ್ ಪ್ರೇರಿತ ಕ್ಲಾಸಿಕ್ 350 ರೆಡ್‌ಡಿಚ್ ರೆಡ್ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ 1.47 ಲಕ್ಷಕ್ಕೆ ಬೆಲೆ ನಿಗದಿಗೊಳಿಸಲಾಗಿದ್ದು, ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮೊದಲ ಬಾರಿಗೆ 350 ಸಿಸಿ ಎಂಜಿನ್ ಬೈಕ್ ಮಾದರಿಗಳಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯ ಒದಗಿಸಿರುವುದು ಆರ್‌ಇ ಬೈಕ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

ರಿಯರ್ ಡಿಸ್ಕ್ ಬ್ರೇಕ್ ಪ್ರೇರಿತ ಕ್ಲಾಸಿಕ್ 350 ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಸದ್ಯ ರಾಯಲ್ ಎನ್‌ಫೀಲ್ಡ್ 350ಸಿಸಿ ಎಂಜಿನ್ ಪ್ರೇರಿತ ಗನ್ ಮೆಟಲ್ ಆವೃತ್ತಿ ಕ್ಲಾಸಿಕ್ 350 ಬೈಕ್‌ಗಳಲ್ಲಿ ಮಾತ್ರ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಆಫರ್ ಮಾಡುತ್ತಿದ್ದು, ಇದೀಗ ರೆಡ್‌ಡಿಚ್ ರೆಡ್ ಮಾದರಿಗಳಲ್ಲೂ ರಿಯರ್ ಡಿಸ್ಕ್ ಬ್ರೇಕ್ ಮಾದರಿಗಳನ್ನು ಖರೀದಿ ಮಾಡಬಹುದಾಗಿದೆ.

ರಿಯರ್ ಡಿಸ್ಕ್ ಬ್ರೇಕ್ ಪ್ರೇರಿತ ಕ್ಲಾಸಿಕ್ 350 ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಕೇಂದ್ರ ಸರ್ಕಾರದ ಹೊಸ ಆದೇಶದಂತೆ 125 ಸಿಸಿ ಮೇಲ್ಪಟ್ಟ ಎಲ್ಲಾ ಬೈಕ್ ಮಾದರಿಗಳಲ್ಲೂ ಸಿಂಗಲ್ ಚಾನೆಲ್ ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸಿಸ್ಟಂ) ಅಥವಾ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸುವುದು ಕಡ್ಡಾಯವಾಗಿದ್ದರೂ, ರಾಯಲ್ ಎನ್‌ಫೀಲ್ಡ್ ಸಂಸ್ಥೆ ಮಾತ್ರ ತನ್ನ 350ಸಿಸಿ ಮತ್ತು 500ಸಿಸಿ ಬೈಕ್‌ಗಳಲ್ಲಿ ಇದುವರೆಗೂ ಎಬಿಎಸ್ ಸೌಲಭ್ಯವನ್ನು ಆಫರ್ ಮಾಡುತ್ತಿಲ್ಲ.

ರಿಯರ್ ಡಿಸ್ಕ್ ಬ್ರೇಕ್ ಪ್ರೇರಿತ ಕ್ಲಾಸಿಕ್ 350 ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಬದಲಾಗಿ, 350 ಸಿಸಿ ಎಂಜಿನ್ ಪ್ರೇರಿತ ಬೈಕ್ ಮಾದರಿಗಳಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹಾಗೂ 500 ಸಿಸಿ ಬೈಕ್ ಮಾದರಿಗಳಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಒದಗಿಸುವುದಕ್ಕೆ ಮುಂದಾಗಿದೆ. ಹೀಗಾಗಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇತರೆ ಬೈಕ್ ಮಾದರಿಗಳಿಂತ ಕೆಲವು ಸುರಕ್ಷಾ ವಿಚಾರದಲ್ಲಿ ಹಿಂದೆ ಬಿದ್ದಿವೆ ಎನ್ನಬಹುದು.

ರಿಯರ್ ಡಿಸ್ಕ್ ಬ್ರೇಕ್ ಪ್ರೇರಿತ ಕ್ಲಾಸಿಕ್ 350 ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಇನ್ನು 2019ರ ಎಪ್ರಿಲ್ ಆರಂಭದಿಂದ 125 ಸಿಸಿ ಮೇಲ್ಪಟ್ಟ ಪ್ರತಿಯೊಂದು ಬೈಕ್ ಮಾದರಿಯು ಸಹ ಎಬಿಎಸ್‌ನೊಂದಿಗೆ ಅಭಿವೃದ್ಧಿ ಮಾಡುವುದು ಕಡ್ಡಾಯವಾಗಿರಲಿದ್ದು, ಈ ಹಿನ್ನೆಲೆಯಲ್ಲಿ ತನ್ನ ಬೈಕ್ ಮಾದರಿಗಳಲ್ಲಿ ಈಗಿನಿಂದಲೇ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಡಿಸ್ಕ್ ಬ್ರೇಕ್ ಮತ್ತು ಎಬಿಎಸ್ ಸೌಲಭ್ಯವನ್ನು ಆಫರ್ ಮಾಡುತ್ತಿದೆ.

ರಿಯರ್ ಡಿಸ್ಕ್ ಬ್ರೇಕ್ ಪ್ರೇರಿತ ಕ್ಲಾಸಿಕ್ 350 ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಜೊತೆಗೆ ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ರಾಯಲ್ ಎನ್‌ಫೀಲ್ಡ್ 350ಸಿಸಿ ಮತ್ತು 500ಸಿಸಿ ಪ್ರೇರಿತ ಪ್ರಮುಖ ಬೈಕ್‌ಗಳಲ್ಲಿ ಎಬಿಎಸ್ ಸೌಲಭ್ಯವನ್ನು ಕಡ್ಡಾಯವಾಗಿ ಅಳವಡಿಕೆ ಮಾಡಲಾಗುತ್ತಿದ್ದು, ಅದೇ ರೀತಿಯಾಗಿ ದೇಶಿಯ ಮಾರುಕಟ್ಟೆಯಲ್ಲಿನ ಆರ್‌ಇ ಬೈಕ್‌ಗಳಲ್ಲೂ ಎಬಿಎಸ್ ಅಳವಡಿಕೆ ಮಾಡಿ ಎನ್ನುವುದು ಗ್ರಾಹಕರ ಬೇಡಿಕೆಯಾಗಿದೆ.

ರಿಯರ್ ಡಿಸ್ಕ್ ಬ್ರೇಕ್ ಪ್ರೇರಿತ ಕ್ಲಾಸಿಕ್ 350 ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಹೀಗಿದ್ದರೂ, ಎಬಿಎಸ್ ಬದಲಾಗಿ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಮಾತ್ರ ನೀಡುತ್ತಿರುವ ಆರ್‌ಇ ಸಂಸ್ಥೆಯು ಎಬಿಎಸ್ ಅಳವಡಿಕೆ ಮಾಡಿದ್ದಲ್ಲಿ ಬೈಕ್ ಬೆಲೆಗಳನ್ನು ಏರಿಕೆ ಮಾಡುವುದರಿಂದ ಬೈಕ್ ಮಾರಾಟಕ್ಕೆ ಹೊಡೆತ ಬೀಳಲಿದೆ ಎಂಬ ಬಗ್ಗೆ ಚರ್ಚೆ ನಡೆಸುತ್ತಿದೆ.

ರಿಯರ್ ಡಿಸ್ಕ್ ಬ್ರೇಕ್ ಪ್ರೇರಿತ ಕ್ಲಾಸಿಕ್ 350 ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಇದರಿಂದ ಮುಂದಿನ ವರ್ಷ ಏಪ್ರಿಲ್ ತನಕ ಎಬಿಎಸ್‌ಗೆ ಬದಲಾಗಿ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಮಾತ್ರ ಒದಗಿಸಲು ಮುಂದಾಗಿದ್ದು, ಆಸಕ್ತ ಗ್ರಾಹಕರಿಗೆ ಮಾತ್ರ ಸಿಂಗಲ್ ಚಾನೆಲ್ ಎಬಿಎಸ್ ಅಳವಡಿಸುವ ಯೋಜನೆ ಕೈಗೊಂಡಿದೆ.

ರಿಯರ್ ಡಿಸ್ಕ್ ಬ್ರೇಕ್ ಪ್ರೇರಿತ ಕ್ಲಾಸಿಕ್ 350 ಪರಿಚಯಿಸಿದ ರಾಯಲ್ ಎನ್‌ಫೀಲ್ಡ್

ಒಟ್ಟಿನಲ್ಲಿ 350 ಸಿಸಿ ಕ್ಲಾಸಿಕ್ ಬೈಕ್‌ಗಳಲ್ಲಿ ಸದ್ಯಕ್ಕೆ ರಿಯರ್(ಹಿಂಭಾಗ) ಚಕ್ರಗಳಲ್ಲಿ ಮಾತ್ರ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಆಫರ್ ಮಾಡಲು ನಿರ್ಧರಿಸಲಾಗಿದ್ದು, ಇದು ಮುಂದಿನ ಏಪ್ರಿಲ್ ನಂತರವಷ್ಟೇ ಪ್ರತಿ ಆರ್‌ಇ ಬೈಕ್‌ಗಳಲ್ಲೂ ಎಬಿಎಸ್ ಸೌಲಭ್ಯ ದೊರೆಯಲಿದೆ.

Most Read Articles

Kannada
Read more on royal enfield
English summary
Royal Enfield Classic 350 Gunmetal Grey: Things To Know About The Highest Selling Bullet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X