ಎಬಿಎಸ್ ಆಧಾರಿತ ಆರ್‍ಇ ಕ್ಲಾಸಿಕ್ 500 ಎಬಿಎಸ್ ಬೈಕಿನ ಬೆಲೆ ಎಷ್ಟು ಗೊತ್ತಾ.?

By Rahul Ts

ಈಗಾಗಲೆ ನಮ್ಮ ಹಿಂದಿನ ಲೇಖನದಲ್ಲಿ ಎಬಿಎಸ್ ಆಧಾರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಮತ್ತು ಕ್ಲಾಸಿಕ್ 500 ಬೈಕ್‍‍ಗಳ ಡೆಲಿವರಿ ಕುರಿತಾಗಿ ಮಾಹಿತಿಯನ್ನು ತಿಳಿಸಿದ್ದೆವು. ಇದೀಗ ಮಾಹಿತಗಳ ಪ್ರಕಾರ ಆರ್‍ಇ ಸಂಸ್ಥೆಯು ತಮ್ಮ ಎಬಿಎಸ್ ಆಧಾರಿತ ಕ್ಲಾಸಿಕ್ 500 ಬೈಕ್ ಅನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.10 ಲಕ್ಷದ ಬೆಲೆಯಲ್ಲಿ ಮಾರಾಟ ಮಾಡಲು ತೀರ್ಮಾನಿಸಿದೆ.

ಎಬಿಎಸ್ ಆಧಾರಿತ ಆರ್‍ಇ ಕ್ಲಾಸಿಕ್ 500 ಎಬಿಎಸ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಎಬಿಎಸ್ ಆಧಾರಿತ ರಾಯಲ್‍ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್‍‍ಗಳು ಸ್ಟ್ಯಾಂಡರ್ಡ್ ಮಾದರಿಗಿಂತ ಸುಮಾರು 20,000 ರಿಂದ 30,000 ಸಾವಿರ ಬೆಲೆಯಲ್ಲಿ ಹೆಚ್ಚಿರಲಿದ್ದು, ಸ್ಟೀಲ್ತ್ ಬ್ಲಾಕ್ ಮತ್ತು ಡೆಸರ್ಟ್ ಸ್ಟೋರ್ಮ್ ಬಣ್ಣಗಳ ಕ್ಲಾಸಿಕ್ 500 ಬೈಕಿನಲ್ಲಿ ಮಾತ್ರ ಎಬಿಎಸ್ ಲಭ್ಯವಿರಲಿದ್ದು, ಬಣ್ಣವನ್ನು ಅವಲಂಬಿಸಿ ಬದಲಾಗಬಹುದು ಬೆಲೆಯು ನಿರ್ಧರಿಸಲಾಗುತ್ತದೆ ಎಂದು ಹೇಳಲಾಗಿದೆ.

ಎಬಿಎಸ್ ಆಧಾರಿತ ಆರ್‍ಇ ಕ್ಲಾಸಿಕ್ 500 ಎಬಿಎಸ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಇದಲ್ಲದೆ ಮಾಹಿತಿಗಳ ಪ್ರಕಾರ ಎಬಿಎಸ್ ಆಧಾರಿತ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 ಬೈಕ್ ದೇಶದಲ್ಲಿನ ಎಲ್ಲಾ ಅಧಿಕೃತ ಡೀಲರ್‍‍ಗಳ ಹತ್ತಿರ ಲಭ್ಯವಿರಲಿದೆ. ಮತ್ತು ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್ ಬಾಷ್‍‍ನಿಂದ ಪಡೆದ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಎಬಿಎಸ್ ಆಧಾರಿತ ಆರ್‍ಇ ಕ್ಲಾಸಿಕ್ 500 ಎಬಿಎಸ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಎಂಜಿನ್ ಸಾಮರ್ಥ್ಯ

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್‍‍ಗಳು 499ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 27.2 ಬಿಹೆಚ್‍‍ಪಿ ಮತ್ತು 41.3 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಎಬಿಎಸ್ ಆಧಾರಿತ ಆರ್‍ಇ ಕ್ಲಾಸಿಕ್ 500 ಎಬಿಎಸ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಈಗಾಗಲೆ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ತಮ್ಮ ಕ್ಲಾಸಿಕ್ 500 ಮತ್ತು ಹಿಮಾಲಯನ್ ಬೈಕ್‍‍ಗಳ ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಆಳವಡಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಇದೀಗ ಎಬಿಎಸ್ ಅನ್ನು ಅಳವಡಿಸಿ ಮತ್ತೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ತೀರ್ಮಾನಿಸಿದೆ.

ಎಬಿಎಸ್ ಆಧಾರಿತ ಆರ್‍ಇ ಕ್ಲಾಸಿಕ್ 500 ಎಬಿಎಸ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಎಬಿಎಸ್ ಆಧಾರಿತ ಆರ್‍ಇ ಕ್ಲಾಸಿಕ್ 500 ಬೈಕ್‍ನ ಮುಂಭಾಗದಲ್ಲಿ 35ಎಮ್ಎಮ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಶಾಕ್ ಅಬ್ಸಾರ್ಬರ್‍‍ಗಳನ್ನು ನೀಡಲಾಗಿದೆ.

ಎಬಿಎಸ್ ಆಧಾರಿತ ಆರ್‍ಇ ಕ್ಲಾಸಿಕ್ 500 ಎಬಿಎಸ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2019 ಏಪ್ರಿಲ್ 1ರಿಂದ 125ಸಿಸಿಕ್ಕಿಂತ ಮೇಲ್ಪಟ್ಟ ಎಲ್ಲಾ ದ್ವಿಚಕ್ರ ವಾಹಗಳಲ್ಲಿ ಕಡ್ಡಾಯವಾಗಿ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಬೇಕೆಂದು ಕೇಂದ್ರ ಸರ್ಕಾರವು ಆದೇಷ ನೀಡಿದೆ. ಈ ನಿಟ್ಟಿನಲ್ಲಿ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಸರ್ಕಾರ ನೀಡಿದ ಡೆಡ್‍‍ಲೈನ್ ಒಳಗೆ ತಮ್ಮ ಬೈಕ್‍‍ಗಳಿಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲು ಮುಂದಾಗಿದೆ.

ಎಬಿಎಸ್ ಆಧಾರಿತ ಆರ್‍ಇ ಕ್ಲಾಸಿಕ್ 500 ಎಬಿಎಸ್ ಬೈಕಿನ ಬೆಲೆ ಎಷ್ಟು ಗೊತ್ತಾ.?

ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಿದ ನಂತರ ಹಿಮಾಲಯನ್ ಮತ್ತು ಕ್ಲಾಸಿಕ್ 500 ಮೋಟರ್‍‍ಸೈಕಲ್ ಸವಾರಿಯು ಸುರಕ್ಷಿತವಾಗಿರಲಿದೆ ಮತ್ತು ಒಟ್ಟಾರೆ ಬ್ರೇಕಿಂಗ್‍‍ನ ಕಾರ್ಯಕ್ಷಮತೆಯು ಉತ್ತಮವಾಗಿರಲಿದೆ.

Most Read Articles

Kannada
Read more on royal enfield
English summary
Royal Enfield Classic 500 ABS Price Revealed.
Story first published: Monday, September 10, 2018, 13:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X