ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು

ಜನಪ್ರಿಯ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದುವರೆಗೂ ಹಲವಾರು ಬಗೆಯ ಬೈಕ್ ಆವೃತ್ತಿಗಳನ್ನು ಪರಿಚಯಿಸಿದ್ದು, ಇದೀಗ ವಿನೂತನ ಮಾದರಿಯ ಲಿಮಿಟೆಡ್ ಎಡಿಷನ್ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಅನ್ನು ಬಿಡುಗಡೆ ಮಾಡಿದೆ.

By Praveen Sannamani

ಜನಪ್ರಿಯ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದುವರೆಗೂ ಹಲವಾರು ಬಗೆಯ ಬೈಕ್ ಆವೃತ್ತಿಗಳನ್ನು ಪರಿಚಯಿಸಿದ್ದು, ಇದೀಗ ವಿನೂತನ ಮಾದರಿಯ ಲಿಮಿಟೆಡ್ ಎಡಿಷನ್ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿರುವ ಹಿನ್ನೆಲೆಯಲ್ಲಿ ಆರ್‌ಇ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಕೂಡಾ ಕ್ರ್ಯಾಶ್ ಆಗಿರುವ ಪ್ರಸಂಗ ನಡೆದಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕಳೆದ ಮೇ 31 ರಂದು ಬಿಡುಗಡೆ ಮಾಡಿರುವ ಕ್ಲಾಸಿಕ್ 500 ಪೆಗಾನನ್ ಬೈಕ್‌ಗಳು ಲಿಮಿಟೆಡ್ ಎಡಿಷನ್ ಮಾದರಿಯಾಗಿದ್ದು, ಮಹಾರಾಷ್ಟ್ರ ಆನ್ ರೋಡ್ ಬೆಲೆಗಳ ಪ್ರಕಾರ ಹೊಸ ಬೈಕಿನ ಬೆಲೆಯನ್ನು ರೂ 2.49 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಕ್ಲಾಸಿಕ್ 500 ಪೆಗಾಸಸ್ ಬೈಕ್ ಲಿಮಿಟೆಡ್ ಎಡಿಷನ್ ಹಿನ್ನೆಲೆಯಲ್ಲಿ ಕಡಿಮೆ ಸಂಖ್ಯೆಯ ಬೈಕ್‌ಗಳು ಮಾತ್ರ ಮಾರಾಟಕ್ಕಿದ್ದು, ಇದರಿಂದಾಗಿ ವಿನೂತನ ಬೈಕ್ ಖರೀದಿಗೆ ಸಾವಿರಾರು ಗ್ರಾಹಕರು ಮುಗಿಬಿದ್ದಿದ್ದಾರೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದೇ ಕಾಲಕ್ಕೆ ಬಿಡುಗಡೆ ಮಾಡಿದ್ದು, ಒಟ್ಟು 1 ಸಾವಿರ ಬೈಕ್‍ಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು

ಇದರಲ್ಲಿ ಭಾರತೀಯ ಮಾರುಕಟ್ಟೆಗಾಗಿ 250 ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳನ್ನು ಮಾತ್ರವೇ ಮಾರಾಟಕ್ಕಿದ್ದು, ನಿನ್ನೆಯಷ್ಟೇ ಹೊಸ ಬೈಕ್ ಖರೀದಿಗಾಗಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿತ್ತು.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು

ರಾಯಲ್ ಎನ್‌ಫೀಲ್ಡ್ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಸೈಟ್ ಸಂಪೂರ್ಣ ನಿಷ್ಕೀಯಗೊಂಡಿದ್ದು, ಯಾವೊಬ್ಬ ಗ್ರಾಹಕನಿಗೂ ಕ್ಲಾಸಿಕ್ 500 ಪೆಗಾಸಸ್ ಬೈಕ್ ಬುಕ್ ಮಾಡಲು ಸಾಧ್ಯವೇ ಆಗಲಿಲ್ಲ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು

ಹೀಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕಿದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮುಂದಿನ ವಾರ ಮತ್ತೊಮ್ಮೆ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿದ್ದು, ಕೆಲವು ತಾಂತ್ರಿಕ ಅಂಶಗಳನ್ನು ಬದಲಾಣೆ ಮಾಡುವ ಮೂಲಕ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು

ಭಾರತದಲ್ಲಿ ಕೇವಲ 250 ಬೈಕ್‌ಗಳು ಮಾತ್ರವೇ ಖರೀದಿಗೆ ಲಭ್ಯವಿರುವ ಹಿನ್ನೆಲೆಯಲ್ಲಿ ಖರೀದಿಗೆ ಮುಗಿಬಿದ್ದಿರುವ ಗ್ರಾಹಕರು ಹೊಸ ಬೈಕ್ ಖರೀದಿ ಮಾಡಲು ಹರಸಾಹಸ ಮಾಡುತ್ತಿದ್ದು, ಮುಂದಿನ ವಾರ ಶುರುವಾಗಲಿರುವ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಮತ್ತೆ ಸೈಟ್ ಕ್ರ್ಯಾಶ್ ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು

2ನೇ ಮಹಾಯುದ್ಧದ ಸಂದರ್ಭದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದ್ದ ಬ್ರಿಟಿಷ್ ಪ್ಯಾರಾಟೂರ್ಪ್‌ಗಳಾದ ಫ್ಲೈಯಿಂಗ್ ಫ್ಲಿಯಾ ಪ್ರೇರಣೆಯೊಂದಿಗೆ ಕ್ಲಾಸಿಕ್ 500 ಪೆಗಾಸಸ್ ಆವೃತ್ತಿಯನ್ನು ಹೊರತರಲು ನಿರ್ಧರಿಸಿದ್ದು, ಇದು ಆರ್‌ಇ ಸಂಸ್ಥೆಯ ಮತ್ತೊಂದು ಜನಪ್ರಿಯ ಡಬ್ಲ್ಯುಡಿ 125 ವಿನ್ಯಾಸಗಳನ್ನು ಆಧರಿಸಿ ಹೊಸ ಬೈಕ್ ಅನ್ನು ಅಭಿವೃದ್ಧಿ ಮಾಡಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು

ಹೊಸ ಬೈಕ್ ವಿನ್ಯಾಸಗಳನ್ನು 2 ಸ್ಟೋಕ್ ಡಬ್ಲ್ಯುಡಿ 125 ಬೈಕ್ ಮಾದರಿಯಲ್ಲೇ ಅಭಿವೃದ್ದಿ ಮಾಡಲಾಗಿದ್ದು, ಮಿಲಟರಿ ವರ್ಷನ್ ಮಾದರಿಯಲ್ಲಿ ವಿವಿಧ ನಮೂನೆಯ ಸೌಲಭ್ಯಗಳನ್ನು ಹೊಂದಿರುವುದೇ ಈ ಬೈಕಿನ ಮತ್ತೊಂದು ವಿಶೇಷವಾಗಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು

ಎಂಜಿನ್ ಸಾಮರ್ಥ್ಯ

ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳು 499ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 27.2-ಬಿಎಚ್‌ಪಿ ಮತ್ತು 41.3-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು

ಆದ್ರೆ ಭಾರತದಲ್ಲಿ ಮಾರಾಟವಾಗುವ ಕ್ಲಾಸಿಕ್ 500 ಪೆಗಾಸಸ್ ಆವೃತ್ತಿಗಳು ಕೇವಲ ಬ್ರೌನ್ ಬಣ್ಣಗಳಲ್ಲಿ ಮಾತ್ರ ಲಭ್ಯವಿರಲಿದ್ದು, ಸ್ಪೋಕ್ ವೀಲ್ಹ್, ಡ್ಯುಯಲ್ ಡಿಸ್ಕ್ ಬ್ರೇಕ್ ವ್ಯವಸ್ಥೆಯೊಂದಿಗೆ 194 ಕೆ.ಜಿ ತೂಕವನ್ನು ಹೊಂದಿರಲಿವೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು

ಹ್ಯಾಂಡಲ್ ಬಾರ್, ಹೆಡ್‌ಲೈಟ್, ಎಕ್ಸಾಸ್ಟ್ ಮಫ್ಲರ್, ಲೆದರ್ ಸ್ಟ್ಯಾಪ್, ಕ್ಯಾನವಾಸ್ ಪ್ಯಾನಿಯರ್ಸ್ ಮತ್ತು ಫ್ಯೂಲ್ ಟ್ಯಾಂಕ್ ಮೇಲೆ ಪೆಗಾಸಸ್ ಲೊಗೊ ಬೈಕಿನ ಅಂದವನ್ನು ಹೆಚ್ಚಿಸಲಿದ್ದು, ಆಯಿವ್ ಡ್ರ್ಯಾಬ್ ಗ್ರಿನ್, ಸರ್ವಿಸ್ ಬ್ರೌನ್ ಬಣ್ಣಗಳಲ್ಲಿ ಲಭ್ಯವಿರಲಿವೆ.

Most Read Articles

Kannada
English summary
Royal Enfield Classic 500 Pegasus Online Sale Postponed After Website Crashes.
Story first published: Wednesday, July 11, 2018, 14:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X