ಆರ್‌ಇ ಪ್ರಿಯರಿಗೆ ಸಿಹಿಸುದ್ದಿ- ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350

By Praveen Sannamani

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ ಬೈಕ್ ಸರಣಿಗಳ ಮಾರಾಟ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮಾರಾಟದಲ್ಲಿ ಅತಿ ಬೇಡಿಕೆ ಹೊಂದಿರುವ ಕ್ಲಾಸಿಕ್ 350 ಬೈಕ್ ವಿಭಾಗದಲ್ಲಿ ಇದೀಗ ಹೊಸ ಬೈಕ್ ಆವೃತ್ತಿಯೊಂದನ್ನ ಪರಿಚಯಿಸಿರುವುದು ಹಲವು ವಿಶೇಷಗಳಿಗೆ ಕಾರಣವಾಗಿದೆ.

ಆರ್‌ಇ ಪ್ರಿಯರಿಗೆ ಸಿಹಿಸುದ್ದಿ- ಬಿಡುಗಡೆಯಾಯ್ತು ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಮಾದರಿಯನ್ನು ಪರಚಯಿಸಿದ್ದು, ಹಲವು ವಿಶೇಷತೆಗಳೊಂದಿಗೆ ಕೂಡಿರುವ ಹೊಸ ಬೈಕ್ ಅನ್ನು ಭಾರತೀಯ ಸೇನಾ ಪಡೆಗೆ ಸಮರ್ಪಣೆ ಮಾಡಿರುವ ಆರ್‌ಇ ಸಂಸ್ಥೆಯು ಗ್ರಾಹಕರಿಗೆ ವಿಶೇಷ ಆಯ್ಕೆ ನೀಡುತ್ತಿದೆ. ಸಾಮಾನ್ಯ ಮಾದರಿಯ ಕ್ಲಾಸಿಕ್ 350 ಬೈಕಿಗಿಂತಲೂ ಉತ್ತಮ ಸೌಲಭ್ಯ ಹೊಂದಿರುವ ಹೊಸ ಕ್ಲಾಸಿಕ್ ಸಿಗ್ನಲ್ಸ್ 350 ಬೈಕಿನ ಬೆಲೆಯನ್ನು ಪುಣೆ ಎಕ್ಸ್‌ಶೋರಂ ಪ್ರಕಾರ ರೂ. 1.62 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಆರ್‌ಇ ಪ್ರಿಯರಿಗೆ ಸಿಹಿಸುದ್ದಿ- ಬಿಡುಗಡೆಯಾಯ್ತು ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350

ಬೈಕಿನ ವಿಶೇಷತೆ ಏನು?

ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‌ಗಳಲ್ಲಿ ಹೊಸ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಫ್ಯೂಲ್ ಟ್ಯಾಂಕ್ ಮೇಲೆ ನಮೂದಿಸಲಾಗಿರುವ ಪ್ರೋಡಕ್ಷನ್ ನಂಬರ್‌ಗಳು ಆಕರ್ಷಕವಾಗಿವೆ. ಹಾಗೆಯೇ ಪ್ರಮುಖ ಎರಡು ಬಣ್ಣಗಳ ಜೊತೆ ಬೈಕಿನ ಎಂಜಿನ್ ಮೇಲೆ ಬ್ಲ್ಯಾಕ್ ಥೀಮ್ ನೀಡಿರುವುದು ಸಹ ಬೈಕಿನ ಆಕರ್ಷಣೆಗೆ ಕಾರಣವಾಗಿದೆ.

ಆರ್‌ಇ ಪ್ರಿಯರಿಗೆ ಸಿಹಿಸುದ್ದಿ- ಬಿಡುಗಡೆಯಾಯ್ತು ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350

ಖರೀದಿ ಲಭ್ಯವಿರುವ ಬಣ್ಣಗಳು

ಭಾರತೀಯ ಸೇನಾ ಪಡೆಯ ಪ್ರೇರಣೆ ಹೊಂದಿರುವ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‌ಗಳು ಏರೋ ಬೋರ್ನ್ ಬ್ಲೂ ಮತ್ತು ಸ್ಟ್ರಾಮ್ ರೈಡರ್ ಸ್ಯಾಂಡ್ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಇದರಲ್ಲಿ ಸ್ಟ್ರಾಮ್ ರೈಡರ್ ಸ್ಯಾಂಡ್ ಬೈಕ್‌ಗಳು ಈ ಹಿಂದೆಯೇ ಬಿಡುಗಡೆಯಾಗಿರುವ ಡಸರ್ಟ್ ಸ್ಟ್ರಾಮ್ ಬಣ್ಣಕ್ಕೆ ಹೊಲಿಕೆ ಇದೆ.

ಆರ್‌ಇ ಪ್ರಿಯರಿಗೆ ಸಿಹಿಸುದ್ದಿ- ಬಿಡುಗಡೆಯಾಯ್ತು ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350

ಎಂಜಿನ್ ಸಾಮರ್ಥ್ಯ

346-ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‌ಗಳು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಈ ಹಿಂದಿನ ಮಾದರಿಯೆಂತೆಯೇ 19-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಆರ್‌ಇ ಪ್ರಿಯರಿಗೆ ಸಿಹಿಸುದ್ದಿ- ಬಿಡುಗಡೆಯಾಯ್ತು ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350

ಸುರಕ್ಷಾ ಸೌಲಭ್ಯಗಳು

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದೇ ಮೊದಲ ಬಾರಿಗೆ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‌ಗಳಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಒದಗಿಸಿದ್ದು, ಇಷ್ಟು ದಿನಗಳ ಕಾಲ ಆರ್‌ಇ ಕ್ಲಾಸಿಕ್ ಬೈಕ್‌ಗಳಲ್ಲಿ ಎಬಿಎಸ್ ಸೌಲಭ್ಯವಿಲ್ಲ ಎಂದು ಖರೀದಿಗೆ ಹಿಂದೇಟು ಹಾಕುತ್ತಿದ್ದ ಗ್ರಾಹಕರಿಗೆ ಇದು ಉತ್ತಮ ಆಯ್ಕೆ ಎನ್ನಿಸುತ್ತೆ.

ಆರ್‌ಇ ಪ್ರಿಯರಿಗೆ ಸಿಹಿಸುದ್ದಿ- ಬಿಡುಗಡೆಯಾಯ್ತು ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350

ಬೈಕಿನಲ್ಲಿರುವ ಇತರೆ ಸೌಲಭ್ಯಗಳು

ಹೊಸ ಬೈಕ್‌ಗಳನ್ನು ಅಡ್ವೆಂಚರ್ ರೈಡ್‌ಗಳಿಗಾಗಿಯೇ ವಿಶೇಷವಾಗಿ ಸಿದ್ದಗೊಳಿಸಿರುವ ಆರ್‌ಇ ಸಂಸ್ಥೆಯು ಸಿಂಗಲ್ ಸೀಟ್ ಮಾದರಿಯಲ್ಲಿ ಬಿಡುಗಡೆ ಮಾಡಿದ್ದು, ಹೆೇವಿ ಡ್ಯೂಟಿ ಮಿಲಟಿರಿ ಪ್ಯಾನಿಯರ್ಸ್, ಸ್ಟೀಲ್ ಎಂಜಿನ್ ಗಾರ್ಡ್, ವೀಂಡ್‌ಶಿಲ್ಡ್ ಕಿಟ್, ಅಲ್ಯುಮಿನಿಯಂ ಚಕ್ರಗಳು ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ನೀಡಲಾಗಿದೆ.

ಆರ್‌ಇ ಪ್ರಿಯರಿಗೆ ಸಿಹಿಸುದ್ದಿ- ಬಿಡುಗಡೆಯಾಯ್ತು ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350

ದೇಶಾದ್ಯಂತ ಖರೀದಿಗೆ ಲಭ್ಯ

ಹೊಸದಾಗಿ ಬಿಡುಗಡೆಯಾಗಿರುವ ಆರ್‌ಇ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‌ಗಳು ದೇಶಾದ್ಯಂತ ಖರೀದಿಗೆ ಲಭ್ಯವಿದ್ದು, ಸಾಮಾನ್ಯ ಮಾದರಿಯ ಕ್ಲಾಸಿಕ್ 350 ಬೈಕ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಈ ಹೊಸ ಬೈಕ್ ಆಯ್ಕೆ ಮಾಡುವುದು ಉತ್ತಮ ಎನ್ನಬಹುದು.

ಆರ್‌ಇ ಪ್ರಿಯರಿಗೆ ಸಿಹಿಸುದ್ದಿ- ಬಿಡುಗಡೆಯಾಯ್ತು ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350

ಯಾಕೆಂದ್ರೆ ಸಾಮಾನ್ಯ ಮಾದರಿಯ ಕ್ಲಾಸಿಕ್ 350 ಬೈಕ್‌ಗಳಿಂತಲೂ ಸುರಕ್ಷತೆ ವಿಚಾರದಲ್ಲಿ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‌ಗಳಿಂತೂ ಉತ್ತಮವಾಗಿದ್ದು, ಜೊತೆಗೆ ಬಣ್ಣದ ಆಯ್ಕೆ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಉತ್ತಮ ಬೀಡಿಭಾಗಗಳನ್ನು ಹೊಂದಿದೆ ಎನ್ನಬಹುದು.

ಆರ್‌ಇ ಪ್ರಿಯರಿಗೆ ಸಿಹಿಸುದ್ದಿ- ಬಿಡುಗಡೆಯಾಯ್ತು ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೊದಲ ಬಾರಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಪ್ರೇರಿತ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಹೊರತಂದಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬೈಕ್ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿದ್ದು, ಸುರಕ್ಷೆತೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಆರ್‌ಇ ಸಂಸ್ಥೆಯು ಮುಂಬರುವ ದಿನಗಳಲ್ಲಿ ಪ್ರತಿ ಬೈಕಿನಲ್ಲೂ ಹೊಸ ಸುರಕ್ಷಾ ಸೌಲಭ್ಯಗಳನ್ನು ಪರಿಚಯಿಸುವ ಇರಾದೆಯಲ್ಲಿದೆ.

Most Read Articles

Kannada
English summary
Royal Enfield Classic Signals 350 Launched In India At Rs 1.62 Lakh — Gets ABS And New Colours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X