ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ 500 ಪೆಗಾಸಸ್ ಲಿಮಿಟೆಡ್ ಎಡಿಷನ್ ಬೈಕ್ ಮಾರಾಟದಲ್ಲಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿರುವುದು ಬಹುತೇಕ ಆರ್‌ಇ ಪ್ರಿಯರಿಗೆ ಗೊತ್ತಿರುವ ವಿಚಾರ. ಪೆಗಾಸಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಆರ್‌ಇ ಸಂಸ್ಥೆಯು ಮಹತ್ವದ ನಿರ್ಧಾರಕ್ಕೆ ಬಂದಿದೆ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಕಳೆದ ತಿಂಗಳ ಹಿಂದಷ್ಟೇ ಕ್ಲಾಸಿಕ್ 500 ಪೆಗಾಸಸ್ ಲಿಮಿಟೆಡ್ ಬೈಕ್ ಮಾದರಿಗಳು ಮಾರಾಟಕ್ಕಿವೆ ಎಂದಿದ್ದೆ ತಡ, ಮುಗಿಬಿದ್ದು ಹೊಸ ಬೈಕ್ ಖರೀದಿ ಮಾಡಿದ್ದ ಗ್ರಾಹಕರು ಯಾಕಾದ್ರು ಆ ಹೊಸ ಬೈಕ್ ಅನ್ನು ಖರೀದಿ ಮಾಡಿದೆವೋ ಎನ್ನುವಂತಹ ಪರಿಸ್ಥಿತಿಗೆ ಸಿಲುಕಿದ್ದರು. ಇದಕ್ಕೆ ಕಾರಣ, ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವುದು.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ನಡೆ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದ ಕ್ಲಾಸಿಕ್ 500 ಪೆಗಾಸಸ್ ಬೈಕ್ ಮಾಲೀಕರು ಹೊಸ ಬೈಕ್ ಸುರಕ್ಷಾ ಸೌಲಭ್ಯ ವಿಚಾರದಲ್ಲಿ ಮೋಸದ ವ್ಯಾಪಾರ ನಡೆದಿದೆ ಅಂತಾ ಪ್ರತಿಭಟನೆ ನಡೆಸುತ್ತಿದ್ದಾರೆ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ದುಬಾರಿ ಬೆಲೆ ತೆತ್ತು ಹೊಸ ಬೈಕ್ ಖರೀದಿ ಮಾಡಿದ್ರು ಬೈಕಿನಲ್ಲಿರುವ ಸುರಕ್ಷಾ ಸೌಲಭ್ಯಗಳ ವಿಚಾರದಲ್ಲಿ ಆರ್‌ಇ ವರ್ತನೆಯು ಹಲವು ಅನುಮಾನಗಳಿಗೆ ಕಾರಣವಾಗಿದ್ದಲ್ಲದೆ, ಹೊಸ ಬೈಕಿನಲ್ಲಿ ನೀಡಲಾಗುವ ಕೆಲವು ಸುರಕ್ಷಾ ಸೌಲಭ್ಯಗಳನ್ನು ಒದಗಿಸುವಲ್ಲಿ ಅಸಡ್ಡೆ ತೊರಿದೆ ಎನ್ನುವುದು ಗ್ರಾಹಕರ ಅಳಲು.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಇದಕ್ಕೆ ಕಾರಣ, ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಬಿಡುಗಡೆ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕಿನಲ್ಲಿ ಎಬಿಎಸ್ ಸೇರಿದಂತೆ ಕೆಲವು ಹೊಸ ಸೌಲಭ್ಯಗಳನ್ನು ನೀಡಿದ್ದು, ಅದೇ ದುಬಾರಿ ಬೆಲೆಯ ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳಲ್ಲಿ ಈ ಸೌಲಭ್ಯವನ್ನು ನೀಡಿಲ್ಲ ಎನ್ನವುದೇ ಪೆಗಾಸಸ್ ಮಾಲೀಕರ ಆಕ್ರೋಶವನ್ನು ಹೆಚ್ಚಿಸುವಂತೆ ಮಾಡಿದೆ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಇದರಿಂದ ಕೆರಳಿದ ಪೆಗಾಸಸ್ ಬೈಕ್ ಮಾಲೀಕರು ಕ್ಲಾಸಿಕ್ ಸಿಗ್ನಲ್ಸ್ 350 ಬೈಕಿನಲ್ಲಿರುವ ಸೌಲಭ್ಯಗಳು ನಮಗೆ ಯಾಕಿಲ್ಲ ಅಂತಾ ಲಿಖಿತ ದೂರು ನೀಡಿದ್ದು, ಎಬಿಎಸ್ ಸೌಲಭ್ಯವನ್ನು ನೀಡಿ ಇಲ್ಲವಾದ್ರೆ ನಿಮ್ಮ ಹೊಸ ಬೈಕ್ ವಾಪಸ್ ಪಡೆದು ಹಣ ಮರಳಿಸಿ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಇನ್ನು ಕೆಲವು ಬೈಕ್ ಮಾಲೀಕರು ಹೊಸ ಪೆಗಾಸಸ್ ಬೈಕ್‌ಗಳನ್ನು ಕಸದ ರಾಶಿಗೆ ಹಾಕಿ ಪ್ರತಿಭಟಿಸಿದ್ದಲ್ಲದೆ ಕ್ಲಾಸಿಕ್ 350 ಸಿಗ್ನಲ್ಸ್ ಬೈಕಿನಲ್ಲಿ ನೀಡಲಾಗಿರುವ ಸೌಲಭ್ಯವನ್ನು ನಮಗೂ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಆದ್ರೆ ಇದಕ್ಕೆ ಮಣಿಯದ ಆರ್‌ಇ ಸಂಸ್ಥೆಯು ಅಸಮಾಧಾನಗೊಂಡಿರುವ ಗ್ರಾಹಕರನ್ನು ಬಾಯಿಮುಚ್ಚಿಸಲು ಹೊಸ ಪ್ಲ್ಯಾನ್ ಮಾಡುತ್ತಿದೆ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಹೊಸ ಬೈಕ್ ವಾಪಸ್ ಪಡೆಯಲಿದೆ ಆರ್‌ಇ!

ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಂಡ್ ಇಮೇಜ್ ಹಾಳಾಗುತ್ತಿರುವುದನ್ನು ಕಂಡು ಹೊಸ ಐಡಿಯಾ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಅಸಮಾಧಾನ ಹೊಂದಿರುವ ಪೆಗಾಸಸ್ ಮಾಲೀಕರಿಂದ ಹೊಸ ಬೈಕ್‌ಗಳನ್ನು ವಾಪಸ್ ಪಡೆಯಲು ಮುಂದಾಗಿದೆ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಬೈಕ್ ಸ್ಥಿತಿಗತಿ ಅನುಗುಣವಾಗಿ ಹಣ ವಾಪಸ್ ಮಾಡಲಿದ್ದು, ಅದೇ ಬೈಕ್‌ಗಳನ್ನು ತನ್ನ ನೆಚ್ಚಿನ ಗ್ರಾಹಕರಿಗೆ ಮರು ಮಾರಾಟ ನಿರ್ಧರಿಸಿದೆ. ಆದ್ರೆ ಅದು ಯಾವ ರೀತಿಯ ಎಬಿಎಸ್ ಮರುಜೋಡಣೆ ಇಲ್ಲದೆ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಈ ಮೂಲಕ ಬ್ರಾಂಡ್ ಇಮೇಜ್‌ಗೆ ಧಕ್ಕೆ ತರುತ್ತಿರುವ ಗ್ರಾಹಕರ ಬಾಯಿ ಮುಚ್ಚಿಸಲು ಮುಂದಾಗಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪೆಗಾಸಸ್ ಮಾರಾಟ ಮತ್ತೊಮ್ಮೆ ಮೋಸದ ವ್ಯವಹಾರಕ್ಕೆ ಯತ್ನಿಸುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತೆ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಈ ಹಿಂದೆಯೇ ಪೆಗಾಸಸ್ ಬೈಕ್ ಮಾಲೀಕರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಉತ್ಪನ್ನಗಳ ಗುಣಮಟ್ಟ ಆಧಾರದ ಮೇಲೆ ಬೆಲೆ ನಿಗದಿಪಡಿಸಿ ಸೌಲಭ್ಯವನ್ನು ನೀಡಲಾಗಿದ್ದು, ಪೆಗಾಸಸ್ ಬೈಕ್ ಮಾಲೀಕರ ಪ್ರತಿಭಟನೆಯಲ್ಲಿ ಅರ್ಥವೇ ಇಲ್ಲ ಎಂದಿತ್ತು.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಇದೀಗ ಹೊಸ ಪೆಗಾಸಸ್ ಬೈಕ್ ಬಗ್ಗೆ ಪ್ರಶ್ನೆ ಮಾಡುತ್ತಿರುವ ಗ್ರಾಹಕರ ಧ್ವನಿ ಹತ್ತಿಕ್ಕಲು ಮುಂದಾಗಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಅಸಮಾಧಾನಗೊಂಡಿರುವ ಗ್ರಾಹಕರಿಂದ ಪೆಗಾಸಸ್ ಬೈಕ್‌ಗಳನ್ನು ವಾಪಸ್ ಪಡೆದು ಮುಗ್ಧ ಗ್ರಾಹಕರಿಗೆ ಟೋಪಿ ಹಾಕಲು ಸಿದ್ದತೆ ನಡೆಸುತ್ತಿದೆ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಇನ್ನು ರಾಯಲ್ ಎನ್‍‍ಫೀಲ್ಡ್ ಸಂಸ್ಥೆಗಳು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಕೆಲವು ವಿಚಾರಗಳು ರಾಯಲ್ ಎನ್‍‍ಫೀಲ್ಡ್ ಮೋಸದ ವ್ಯಾಪಾರದ ಬಗ್ಗೆ ಈಗಾಗ್ಲೆ ಸಾವಿರಾರು ಗ್ರಾಹಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಪೂರಕವಾದ ಕೆಲವು ಘಟನೆಗಳು ಇಲ್ಲಿವೆ ನೋಡಿ..

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಕ್ಲಾಸಿಕ್ ಮೋಟಾರ್ ಸೈಕಲ್ ಪ್ರೇಮಿಗಳ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಲವು ವಿಶೇಷತೆಗಳಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಅಷ್ಟೇ ಪ್ರಮಾಣದ ನ್ಯೂನತೆಗಳನ್ನು ಹೊಂದುವ ಮೂಲಕ ಬೈಕ್ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದ್ರೆ ನಂಬಲೇಬೇಕು.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಹೌದು.. ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಅಂದ್ರೆನೆ ಹಾಗೇ. ಭಾರತೀಯ ಗ್ರಾಹಕರನ್ನು ಎಷ್ಟು ಮೋಡಿ ಮಾಡಿವೆ ಅಂದ್ರೆ ಜೀವನದಲ್ಲಿ ಒಮ್ಮೆಯಾದ್ರೂ ಬುಲೆಟ್ ಬೈಕ್ ಖರೀದಿ ಮಾಡಲೇಬೇಕು ಎಂಬ ಮಹಾದಾಸೆ ಇದ್ದೆ ಇರುತ್ತೆ. ಆದ್ರೆ ರಾಯಲ್ ಎನ್‌ಫೀಲ್ಡ್ ಖರೀದಿಯಿಂದ ಗ್ರಾಹಕರು ಯಾವ ರೀತಿಯ ಕಷ್ಟ ಅನುಭವಿಸುತ್ತಿದ್ದಾರೆ ಎಂಬ ಬಗ್ಗೆ ಒಂದು ಸಣ್ಣ ವರದಿಯನ್ನು ಇಲ್ಲಿ ನೀಡಲಾಗಿದೆ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಇದಕ್ಕೂ ಮುನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ನಿರ್ಮಾಣದ ಬಗ್ಗೆ ನಾವು ಮಾತನಾಡೋಣ. ಯಾಕೇಂದ್ರೆ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿರುವ ರಾಯಲ್ ಎನ್‌ಫೀಲ್ಡ್ ಹಲವು ಹಲವು ತಾಂತ್ರಿಕ ವಿಭಾಗದಲ್ಲೂ ಇಂದಿಗೂ ಫೇವರಿಟ್ ಮಾದರಿ ಕೂಡಾ ಹೌದು.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಉತ್ಕೃಷ್ಟ ಗುಣಮಟ್ಟ

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಬೈಕ್ ಮಾದರಿಗಳ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಬದಲಾಗಿ ಇತರೆ ಬೈಕ್ ಮಾದರಿಗಳಿಂತಲೂ ಅತ್ಯುತ್ತಮ ಗುಣಮಟ್ಟದ ಎಂಜಿನ್ ಮತ್ತು ಬೀಡಿಭಾಗಗಳನ್ನು ಒದಗಿಸುತ್ತಿದೆ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಕ್ವಾಲಿಟಿ ರೈಡ್

ಹೆದ್ದಾರಿಗಳಲ್ಲಿ ಬೈಕ್ ಚಾಲನೆಗೆ ಉತ್ತಮ ಬೈಕ್ ಮಾದರಿ ಎನ್ನಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಪ್ರತಿ ಗಂಟೆಗೆ 90 ಕಿಮಿ ಕ್ರಮಿಸಬಲ್ಲ ಅಸಾಧರಣ ಶಕ್ತಿ ಹೊಂದಿದ್ದು, ಎಕ್ಸ್‌ಲೆಂಟ್ ಟಾರ್ಕ್ ಉತ್ಪಾದಿಸಬಲ್ಲದು.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಮರು ಮಾರಾಟಕ್ಕೆ ಉತ್ತಮ

ಇತರೆ ಬೈಕ್ ಮಾದರಿಗಳಿಂತ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ರಿ ಸೇಲ್ ವ್ಯಾಲ್ಯೂ ಹೆಚ್ಚಿದ್ದು, ಖರೀದಿಗೆ ಮೊಸ ಇಲ್ಲ ಎನ್ನಬಹುದು. ಹೀಗಾಗಿ ಬೈಕ್ ಖರೀದಿಸಿದ 2 ವರ್ಷಗಳ ನಂತರವು ಅದರ ಬೆಲೆಯಲ್ಲಿ ಯಾವುದೇ ದೊಡ್ಡ ವ್ಯತ್ಯಾಸ ಕಂಡುಬರುವುದಿಲ್ಲ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ರಾಯಲ್ ಎನ್‌ಫೀಲ್ಡ್ ನ್ಯೂತನೆಗಳು

ಸಾಮಾನ್ಯ ತೊಂದರೆಗಳು

ಹೌದು.. ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳಲ್ಲಿ ಗೇರ್‌ಬಾಕ್ಸ್ ಆಯಿಲ್ ಲಿಕ್, ಎಲೆಕ್ಟ್ರಿಕ್ ವೈರ್‌ಗಳಲ್ಲಿ ತೊಂದರೆಗಳು, ಕನ್‌ಸೊಲ್ ತೊಂದರೆಗಳು ಮತ್ತು ಬ್ರೇಕಿಂಗ್ ವಿಭಾಗದಲ್ಲಿ ಪದೇ ಪದೇ ತೊಂದರೆ ಕಾಣಿಸಿಕೊಳ್ಳುತ್ತವೆ ಎನ್ನುವುದು ಗ್ರಾಹಕರ ದೂರು.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಬೈಕ್ ವೈಬ್ರೆಟ್ ಆಗುತ್ತೆ

ಈ ಮೇಲೆ ಹೇಳಿದಂತೆ ಹೆದ್ದಾರಿಗಳಲ್ಲಿ ಉತ್ತಮ ದೂರ ಕ್ರಮಿಸಬಲ್ಲ ಶಕ್ತಿ ಹೊಂದಿರುವ ರಾಯಲ್ ಎನ್‌ಫೀಲ್ಡ್‌ಗಳಲ್ಲಿ ವೈಬ್ರೆಟ್ ತೊಂದರೆ ಸಾಕಷ್ಟಿದೆ. ಒಂದು ವೇಳೆ ನೀವು ಗಂಟೆಗೆ 60 ಕಿಮಿ ಮೇಲೆ ಬೈಕ್ ಸವಾರಿ ಮಾಡಿದಲ್ಲಿ ಇದು ನಿಮ್ಮ ಅನುಭವಕ್ಕೆ ಬರುವುದು.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಚಾಲನೆ ಸುಲಭವಲ್ಲ

ರಾಯಲ್ ಎನ್‌ಫೀಲ್ಡ್ ಇತರೆ ಬೈಕ್‌ಗಿಂತ ಸ್ವಲ್ಪ ಕ್ಲಿಷ್ಟಕರವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಇತರೆ ಬೈಕ್‌ಗಳನ್ನು ಸಲೀಸಾಗಿ ಚಾಲನೆಮಾಡಬಲ್ಲ ಅದೆಷ್ಟೋ ಬೈಕ್ ರೈಡರ್‌ಗಳು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಚಾಲನೆ ಮಾಡಲು ಹಿಂದೇಟು ಹಾಕುತ್ತಾರೆ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಮೈಲೇಜ್

ಇದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಪ್ರತಿ ಲೀಟರ್‌ಗೆ 30 ರಿಂದ 35 ಕಿಮಿ ಮೈಲೇಜ್ ನೀಡುತ್ತವೆ. ಇದು ಲಾಂಗ್ ರೈಡ್ ಪ್ರಿಯರ ಜೇಬಿಗೆ ಭರ್ಜರಿ ಕತ್ತರಿ ಹಾಕುತ್ತದೆ.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಸರ್ವಿಸ್ ವಿಚಾರ

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡುವುದು ಎಷ್ಟು ಸುಲಭವೋ ಅಷ್ಟೇ ಪ್ರಮಾಣದಲ್ಲಿ ಅದರ ಬಿಡಿಭಾಗಗಳ ರೀಪೆರಿ ಪ್ರಕ್ರಿಯೆಯೂ ಕೂಡಾ ಕಠಿಣವಾಗಿದೆ. ಯಾಕೇಂದ್ರೆ ಅಧಿಕೃತ ಸರ್ವಿಸ್ ಸೇಂಟರ್‌ಗಳನ್ನು ಹೊರತುಪಡಿಸಿ ಬೇರೆಯಡೆ ಸರ್ವಿಸ್ ಮಾಡಿದಲ್ಲಿ ಮತ್ತಷ್ಟು ತೊಂದರೆ ತಪ್ಪಿದ್ದಲ್ಲ ಎನ್ನಬಹುದು.

ಆಕ್ರೋಶಗೊಂಡ ಪೆಗಾಸಸ್ ಗ್ರಾಹಕರ ಬಾಯಿ ಮುಚ್ಚಿಸಲು ರಾಯಲ್ ಎನ್‌ಫೀಲ್ಡ್ ಹೊಸ ಪ್ಲ್ಯಾನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಮೇಲೆ ನೀಡಲಾಗಿರುವ ಎಲ್ಲ ಅಭಿಪ್ರಾಯಗಳು ರಾಯಲ್ ಎನ್‌ಫೀಲ್ಡ್ ಗ್ರಾಹಕರ ಸ್ವಂತ ಅನುಭದ ಆಧಾರದ ಮೇಲೆ ನೀಡಲಾಗಿದ್ದು, ನ್ಯೂನತೆಗಳ ಹೊರತಾಗಿಯು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿರುವ ರಾಯಲ್ ಎನ್‌ಫೀಲ್ಡ್ ಜನಪ್ರಿಯತೆಯನ್ನು ಮೆಚ್ಚಲೇಬೇಕು.

ಒಂದು ವೇಳೆ ನೀವು ಕೂಡಾ ರಾಯಲ್ ಎನ್‌ಫೀಲ್ಡ್ ಖರೀದಿ ಯೋಜನೆಯಲ್ಲಿದ್ದರೆ ಬರಲಿರುವ ಜನಪ್ರಿಯ ಅಮೆರಿಕನ್ ಬ್ರಾಂಡ್ ಬೈಕ್‌ವೊಂದು ನಿಮ್ಮನ್ನು ಸೆಳೆಯದೇ ಇರಲಾರದು. ಅದುವೇ ಈ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್.

Most Read Articles

Kannada
Read more on royal enfield
English summary
Royal Enfield Could Buy Back The Classic 500 Pegasus From Unhappy Customers.
Story first published: Wednesday, September 19, 2018, 18:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X