ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍ ಬೆಲೆ ಬಹಿರಂಗ

By Praveen Sannamani

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕಳೆದ ವಾರವಷ್ಟೇ ಕ್ಲಾಸಿಕ್ ಸಿಗ್ನಲ್ 350 ಎಬಿಎಸ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಇದೀಗ ತನ್ನ ಅಡ್ವೆಂಚೆರ್ ಮಾದರಿಯಾದ ಹಿಮಾಲಯನ್ ಬೈಕ್‌ಗಳ ಬೆಲೆ ಪಟ್ಟಿ ಬಹಿರಂಗಪಡಿಸಿರುವುದು ಬೈಕ್ ಪ್ರಿಯರ ಆಕರ್ಷಣೆ ಕಾರಣವಾಗಿದೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍ ಬೆಲೆ ಬಹಿರಂಗ

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದೇ ತಿಂಗಳಾಂತ್ಯಕ್ಕೆ ಎಬಿಎಸ್ ಸೌಲಭ್ಯ ಪ್ರೇರಿತ ಹಿಮಾಲಯನ್ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದ್ದು, ಹೊಸ ಬೈಕ್ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ. ಬಾಷ್ ನಿರ್ಮಾಣದ ಎಬಿಎಸ್ ಕಿಟ್ ಹೊಂದಿರುವ ಹೊಸ ಹಿಮಾಲಯನ್ ಬೈಕ್‌ಗಳು ಈ ಹಿಂದಿಗಿಂತಲೂ ಹೆಚ್ಚಿನ ಮಟ್ಟದ ಜನಪ್ರಿಯತೆ ಪಡೆಯುವ ತವಕದಲ್ಲಿವೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍ ಬೆಲೆ ಬಹಿರಂಗ

ಸದ್ಯ ಎಬಿಎಸ್ ಸೌಲಭ್ಯವಿಲ್ಲದ ಸಾಧಾರಣ ಹಿಮಾಲಯನ್ ಬೈಕ್‍‍ಗಳು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ. 1.68 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದು, ಎಬಿಎಸ್ ಪ್ರೇರಿತ ಹಿಮಾಲಯನ್ ಬೈಕ್‌ಗಳು ತುಸು ದುಬಾರಿ ಎನ್ನಿಸಲಿವೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍ ಬೆಲೆ ಬಹಿರಂಗ

ಡ್ರೈವ್‌ಸ್ಪಾರ್ಕ್ ತಂಡಕ್ಕೆ ಸಿಕ್ಕ ಮಾಹಿತಿ ಪ್ರಕಾರ ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕ್ ಬೆಲೆಗಳು ರೂ. 1.80 ಲಕ್ಷ ಹೊಂದಿರಲಿವೆ ಎಂದಿರುವ ರಾಯಲ್ ಎನ್‌ಫೀಲ್ಡ್ ಡೀಲರ್ಸ್‌ಗಳು ಮುಂದಿನ 15 ದಿನಗೊಳಗಾಗಿ ಹೊಸ ಬಿಡುಗಡೆಯಾಗುವುದು ಖಚಿತವೆಂದಿದ್ದಾರೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍ ಬೆಲೆ ಬಹಿರಂಗ

ರಾಯಲ್ ಎನ್‍‍ಫೀಲ್ಡ್ ಅತ್ಯಂತ ಶಕ್ತಿಯುತವಾದ ಹಲವು ಐಕಾನಿಕ್ ಮೋಟಾರ್‍‍‍‍ಸೈಕಲ್‍‍ಗಳನ್ನು ತಯಾರಿಸುತ್ತಿದ್ದರೂ ಎಬಿಎಸ್ ಸೌಲಭ್ಯವನ್ನು ಒದಗಿಸುವಲ್ಲಿ ಹಿಂದೆ ಬಿದ್ದಿತ್ತು. ಆದ್ರೆ ಗ್ರಾಹಕರ ಬೇಡಿಕೆಗೆ ಮಣಿದಿರುವ ಆರ್‌ಇ ಸಂಸ್ಥೆಯು ಮೊದಲ ಬಾರಿಗೆ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‌ಗಳಲ್ಲಿ ಎಬಿಎಸ್ ಒದಗಿಸಿರುವುದು ಗ್ರಾಹಕರ ಆಯ್ಕೆ ಹೆಚ್ಚಿಸಿದೆ.

MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍ ಬೆಲೆ ಬಹಿರಂಗ

ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಳು 411ಸಿಸಿ ಏರ್-ಕೂಲ್ಡ್, ಫ್ಯುಯಲ್ ಎಂಜೆಕ್ಟೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 24.5 ಬಿಹೆಚ್‍‍ಪಿ ಮತ್ತು 32ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಬೈಕ್ ಎಂಜಿನ್ ಅನ್ನು 5-ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍ ಬೆಲೆ ಬಹಿರಂಗ

ಎಬಿಎಸ್ ಪ್ರೇರಿತ ಹಿಮಾಲಯನ್ ಬೈಕ್‍‍ಗಳು ಇತ್ತೀಚೆಗಷ್ಟೆ ಬಿಡುಗಡೆಗೊಂಡ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್‍‍ನಂತೆಯೇ ಎಬಿಎಸ್ ಯೂನಿಟ್ ಅನ್ನು ಪಡೆದುಕೊಳ್ಳಲಿದ್ದು, ಹಲವಾರು ಅಡ್ವೆಂಚರ್ ಬೈಕ್‍‍ಗಳಲ್ಲಿ ಕಂಡಂತೆ ಸ್ವಿಚೆಬಲ್ ಎಬಿಎಸ್ ಫೀಚರ್ಸ್ ಅನ್ನು ಪಡೆದುಕೊಂಡಿರಲಿದೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍ ಬೆಲೆ ಬಹಿರಂಗ

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ನ ಮುಂಭಾಗದಲ್ಲಿ 41ಎಂಎಂ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 200 ಎಂಎಂ ಟ್ರ್ಯಾವೆಲ್ ಮೋನೊಶಾರ್ಕ್ ಸಸ್ಷೆನ್ ಅನ್ನು ಪಡೆದುಕೊಂಡಿದ್ದು, ಅತ್ಯುತ್ತಮ ಗ್ರೌಂಡ್ ಕ್ಲಿಯೆರೆನ್ಸ್ ಮೂಲಕ ಅಡ್ವೆಂಚರ್‌ಗೆ ಉತ್ತಮ ಬೈಕ್ ಮಾದರಿಯಾಗಿದೆ.

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍ ಬೆಲೆ ಬಹಿರಂಗ

ಇನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಹೊಸ ಮೋಟಾರ್ ಕಾಯ್ದೆ ಪ್ರಕಾರ ಹೊಸ ಬೈಕ್ ಖರೀದಿದಾರರು ಕಡ್ಡಾಯವಾಗಿ 5 ವರ್ಷಗಳ ಥರ್ಡ್ ಪಾರ್ಟಿ ವಿಮಾ ಪಾಲಿಸಿ ಹೊಂದಿರಲೇಬೇಕಾದ ನಿಯಮ ಜಾರಿಯಲ್ಲಿದ್ದು, ಇದು ಬೈಕ್ ಬೆಲೆಗಳ ಏರಿಕೆಗೆ ಕಾರಣವಾಗಲಿದೆ.

MOST READ: ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಟಕ್ಕರ್ ನೀಡಲಿರುವ ಕ್ಲೆವೆಲ್ಯಾಂಡ್ ಸೈಕಲ್‌ವೆರ್ಕ್ಸ್ ಬೈಕ್‌ ವಿಶೇಷತೆ ಏನು?

ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍ ಬೆಲೆ ಬಹಿರಂಗ

ಹೀಗಾಗಿ ಹಿಮಾಲಯನ್ ಎಬಿಎಸ್ ಬೈಕ್ ಬೆಲೆಗಳ ಬೆಲೆಗಳು ಆನ್-ರೋಡ್ ಪ್ರಕಾರ ರೂ. 2.32 ಲಕ್ಷಕ್ಕೆ ತುಲುಪುವ ಸಾಧ್ಯತೆಗಳಿದ್ದು, ಮುಂದಿನ 15 ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಬೈಕ್ ಯಾವೆಲ್ಲಾ ಬದಲಾವಣೆಗೆ ಪಡೆದುಕೊಳ್ಳಲಿವೆ ಎನ್ನುವ ಮಾಹಿತಿಯನ್ನು ನಾವು ನೀಡಲಿದ್ದೇವೆ.

Most Read Articles

Kannada
Read more on royal enfield
English summary
Royal Enfield Himalayan ABS Price Revealed.
Story first published: Thursday, September 6, 2018, 20:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X