ಖರೀದಿಗೆ ಲಭ್ಯವಾದ ರಾಯಲ್ ಎನ್‌ಫೀಲ್ಡ್ ವಿನೂತನ ಹಿಮಾಲಯನ್ ಸ್ಲಿಟ್ ಬೈಕ್

ಕ್ಲಾಸಿಕ್ ಬೈಕ್‌ಗಳ ನಿರ್ಮಾಣ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ಹಿಮಾಲಯನ್ ಲಿಮಿಟೆಡ್ ಎಡಿಷನ್ ಸ್ಲಿಟ್ ಬೈಕ್‌ ಮಾದರಿಯನ್ನು ಪರಿಚಯಿಸಿದ್ದು, ಇದೀಗ ಹೊಸ ಬೈಕಿನ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದೆ.

By Praveen Sannamani

ಈ ಹಿಂದೆ ಹೊಸ ಬೈಕಿನ ಬೆಲೆಯನ್ನು ಚೆನ್ನೈ ಎಕ್ಸ್‌ಶೋರಂ ಪ್ರಕಾರ ರೂ. 2.12 ಲಕ್ಷಕ್ಕೆ ನಿಗದಿಗೊಳಿಸಿದ್ದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸ್ಲಿಟ್ ಆಪ್ ರೋಡ್ ಮಾದರಿಗಳನ್ನು ನಿಗದಿತ ಅವಧಿಗೆ 500 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಇದೀಗ ರೂ. 1.71 ಲಕ್ಷಕ್ಕೆ ಬೆಲೆ ತಗ್ಗಿಸಿರುವ ಆರ್‌ಇ ಸಂಸ್ಥೆಯು ಹಿಮಾಲಯನ್ ಸ್ಲಿಟ್ ಸಾಮಾನ್ಯ ಬೈಕ್ ಮಾದರಿಗಳನ್ನು ಅಧಿಕೃತ ಮಾರಾಟವನ್ನು ಆರಂಭಿಸಿದೆ.

ಖರೀದಿಗೆ ಲಭ್ಯವಾದ ರಾಯಲ್ ಎನ್‌ಫೀಲ್ಡ್ ವಿನೂತನ ಹಿಮಾಲಯನ್ ಸ್ಲಿಟ್ ಬೈಕ್

ಕಳೆದ ಜನವರಿಯಲ್ಲಿ ಹಿಮಾಲಯನ್ ಸ್ಲಿಟ್ ಆಪ್ ರೋಡ್ ಕಿಟ್ ಸೌಲಭ್ಯ ಹೊಂದಿದ್ದ ಮಾದರಿಯನ್ನು ಬಿಡುಗಡೆ ಮಾಡಿದ್ದ ಆರ್‌ಇ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಡಿಮೆ ಬೆಲೆಯ ಹಿಮಾಲಯನ್ ಸ್ಲಿಟ್ ಆವೃತ್ತಿಯನ್ನು ಪರಿಚಯಿಸಿದೆ.

ಖರೀದಿಗೆ ಲಭ್ಯವಾದ ರಾಯಲ್ ಎನ್‌ಫೀಲ್ಡ್ ವಿನೂತನ ಹಿಮಾಲಯನ್ ಸ್ಲಿಟ್ ಬೈಕ್

ಆಸಕ್ತ ಗ್ರಾಹಕರು ಆಪ್ ರೋಡ್ ಕಿಟ್ ಸೌಲಭ್ಯವುಳ್ಳ ಹಿಮಾಲಯನ್ ಸ್ಲಿಟ್ ಕೂಡಾ ಖರೀದಿಸಬಹುದಾಗಿದ್ದು, ರೂ.1.71 ಲಕ್ಷ ಬೆಲೆಯೊಂದಿಗೆ ಹೆಚ್ಚುವರಿಯಾಗಿ ರೂ. 31,900 ಪಾವತಿ ಆಪ್ ರೋಡ್ ಆಕ್ಸೆಸರಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಖರೀದಿಗೆ ಲಭ್ಯವಾದ ರಾಯಲ್ ಎನ್‌ಫೀಲ್ಡ್ ವಿನೂತನ ಹಿಮಾಲಯನ್ ಸ್ಲಿಟ್ ಬೈಕ್

ಸಾಮಾನ್ಯ ಹಿಮಾಲಯನ್ ಸ್ಲಿಟ್‌ಗಳಿಂತ ಹಿಮಾಲಯನ್ ಸ್ಲಿಟ್ ಆಪ್ ರೋಡ್ ಕಿಟ್ ಬೈಕ್‌ಗಳು ಸಾಕಷ್ಟು ಭಿನ್ನವಾಗಿದ್ದು, ದೂರದ ಪ್ರಯಾಣಗಳಿಗೆ ಅನುಕೂಲವಾಗುವ ಉದ್ದೇಶದಿಂದಲೇ 26 ಲೀಟರ್ ಸಾಮರ್ಥ್ಯದ ಅಲ್ಯುಮಿನಿಯಂ ಪ್ಯಾನಿರ್ಸ್ ಕಿಟ್ ಜೋಡಣೆ ಹೊಂದಿರಲಿದೆ.

ಖರೀದಿಗೆ ಲಭ್ಯವಾದ ರಾಯಲ್ ಎನ್‌ಫೀಲ್ಡ್ ವಿನೂತನ ಹಿಮಾಲಯನ್ ಸ್ಲಿಟ್ ಬೈಕ್

ಎಂಜಿನ್ ಸಾಮರ್ಥ್ಯ

ಹಿಮಾಲಯನ್ ಸ್ಲಿಟ್ ಮಾದರಿಯು 411 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 24.5-ಬಿಎಚ್‌ಪಿ ಮತ್ತು 32-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಜೊತೆಗೆ ಗಂಟೆಗೆ 120 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದೆ.

ಖರೀದಿಗೆ ಲಭ್ಯವಾದ ರಾಯಲ್ ಎನ್‌ಫೀಲ್ಡ್ ವಿನೂತನ ಹಿಮಾಲಯನ್ ಸ್ಲಿಟ್ ಬೈಕ್

ಹೀಗಾಗಿ ಹಿಮಾಲಯನ್ ಸ್ಲಿಟ್ ಬೈಕ್‌ಗಳು ಸದ್ಯ ಮಾರುಕಟ್ಟೆಯಲ್ಲಿರುವ ಸಾಮನ್ಯ ಹಿಮಾಲಯನ್ ಸಾಲಿನಲ್ಲಿಯೇ ಬರಲಿದ್ದು, ಸುರಕ್ಷತೆಗಾಗಿ ಮುಂಭಾಗದ ಚಕ್ರದಲ್ಲಿ 300ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದ ಚಕ್ರಗಳಿಗೆ 240ಎಂಎಂ ಡಿಸ್ಕ್ ಬ್ರೇಕ್ ಸೇರಿಸಲಾಗಿದೆ.

ಖರೀದಿಗೆ ಲಭ್ಯವಾದ ರಾಯಲ್ ಎನ್‌ಫೀಲ್ಡ್ ವಿನೂತನ ಹಿಮಾಲಯನ್ ಸ್ಲಿಟ್ ಬೈಕ್

ಇನ್ನು ಆಪ್ ರೋಡಿಂಗ್ ಕೌಶಲ್ಯಕ್ಕಾಗಿ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಒದಗಿಸಲಾಗಿದ್ದು, ಎಕ್ಸ್‌ಟ್ರಿಮ್ ಆಪ್ ರೋಡ್ ಕೌಶಲ್ಯ ಇಷ್ಟಪಡುವ ಗ್ರಾಹಕರು ರೆಗ್ಯುಲರ್ ಮಾದರಿಗಿಂತ ಹೆಚ್ಚುವರಿಯಾಗಿ 31,900 ಪಾವತಿ ಮತ್ತಷ್ಟು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಖರೀದಿಗೆ ಲಭ್ಯವಾದ ರಾಯಲ್ ಎನ್‌ಫೀಲ್ಡ್ ವಿನೂತನ ಹಿಮಾಲಯನ್ ಸ್ಲಿಟ್ ಬೈಕ್

ಒಟ್ಟಿನಲ್ಲಿ ಆರ್‌ಇ ಹಿಮಾಲಯನ್ ಬೈಕ್‌ಗಿಂತ ಹಿಮಾಲಯನ್ ಸ್ಲಿಟ್ ಬೈಕ್‌ಗಳನ್ನು ಹೆಚ್ಚಿನ ಆಕರ್ಷಣೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆಯುವ ಸಾಧ್ಯತೆಗಳಿವೆ. ಆದ್ರೆ ಮುಂಬರುವ ದಿನಗಳಲ್ಲಿ ಬರಲಿರುವ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಹಿಮಾಲಯನ್ ಬೈಕ್‌ಗಳಿಗೆ ತ್ರೀವ ಪ್ರತಿಸ್ಪರ್ಧಿಯಾಗುವ ಸಾಧ್ಯತೆಗಳಿವೆ.

Most Read Articles

Kannada
Read more on royal enfield
English summary
Royal Enfield Himalayan Sleet Now Available At Dealerships; Priced At Rs 1.71 Lakh
Story first published: Saturday, April 21, 2018, 17:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X