ನವೆಂಬರ್‍‍ನಲ್ಲಿ ಬಿಡುಗಡೆಯಾಗುತ್ತಿರುವ ಆರ್‍ಇ ಟ್ವಿನ್ ಬೈಕ್‍ಗಳ ವಿಶೇಷತೆ ಏನು

ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತಮ್ಮ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍‍ಗಳನ್ನು ಶೀಘ್ರವೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇದೇ ವರ್ಷದ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಈ ಬೈಕ್‍ಗಳ ಬೆಲೆಯು ಬಹಿರಂಗಗೊಂಡಿದೆ.

ನವೆಂಬರ್‍‍ನಲ್ಲಿ ಬಿಡುಗಡೆಯಾಗುತ್ತಿರುವ ಆರ್‍ಇ ಟ್ವಿನ್ ಬೈಕ್‍ಗಳ ವಿಶೇಷತೆ ಏನು

ಯುಎಸ್ ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ರೂ. 4.21 ಲಕ್ಷ ಮತ್ತು ಕಾಂಟಿನೆಂಟಲ್ ಜಿಟಿ ಬೈಕಿನ ಬೆಲೆಯು 6.36 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಈ ಎರಡೂ ಬೈಕ್‍‍ಗಳು ಸ್ಟ್ಯಾಂಡರ್ಡ್,ಕಸ್ಟಂ ಮತ್ತು ಕ್ರೂಮ್ ಎಂಬ ಮೂರ ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ನವೆಂಬರ್‍‍ನಲ್ಲಿ ಬಿಡುಗಡೆಯಾಗುತ್ತಿರುವ ಆರ್‍ಇ ಟ್ವಿನ್ ಬೈಕ್‍ಗಳ ವಿಶೇಷತೆ ಏನು

ಕಸ್ಟಂ ವೇರಿಯಂಟ್ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ರೂ. 4.36 ಲಕ್ಷ, ಕಸ್ಟಂ ಆರ್‍ಇ ಕಾಂಟಿನೆಂಟಲ್ ಜಿಟಿ 650 ಬೈಕ್ ಬೆಲೆ ರೂ. 4.53ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.

ನವೆಂಬರ್‍‍ನಲ್ಲಿ ಬಿಡುಗಡೆಯಾಗುತ್ತಿರುವ ಆರ್‍ಇ ಟ್ವಿನ್ ಬೈಕ್‍ಗಳ ವಿಶೇಷತೆ ಏನು

ಇನ್ನು ಕ್ರೋಮ್ ವೇರಿಯಂಟ್‍‍ನ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ ಬೈಕ್‍‍ನ ಬೆಲೆಯು ರೂ. 4.72 ಲಕ್ಷ ಮತ್ತು ಕ್ರೋಮ್ ವೇರಿಯಂಟ್‍‍ನ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್‍ನ ಬೆಲೆಯು ರೂ. 4.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ನವೆಂಬರ್‍‍ನಲ್ಲಿ ಬಿಡುಗಡೆಯಾಗುತ್ತಿರುವ ಆರ್‍ಇ ಟ್ವಿನ್ ಬೈಕ್‍ಗಳ ವಿಶೇಷತೆ ಏನು

ಪ್ರಸ್ಥುತ ಯುಎಸ್ ಮಾರುಕಟ್ಟೆಯಲ್ಲಿ ರಾಯಲ್ ಎನ್‍‍ಫೀಲ್ಡ್ 650 ಟ್ವಿನ್ ಬೈಕ್‍‍ಗಳು ಸತತ ಮೂರು ವರ್ಷ ಅಥವಾ ಅನ್‍ಲಿಮಿಟೆಡ್ ಕಿಲೋಮೀಟರ್ ವಾರಂಟಿ ಮತ್ತು ರೋಡ್‍‍ಸೈಡ್ ಅಸ್ಸಿಸ್ಟಂಸ್ ಅನ್ನು ನೀಡಲಾಗುತ್ತಿದೆ.

ನವೆಂಬರ್‍‍ನಲ್ಲಿ ಬಿಡುಗಡೆಯಾಗುತ್ತಿರುವ ಆರ್‍ಇ ಟ್ವಿನ್ ಬೈಕ್‍ಗಳ ವಿಶೇಷತೆ ಏನು

ಇನ್ನು ಭಾರತಕ್ಕೆ ಬರಲಿರುವ ರಾಯಲ್ ಎನ್‍‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಿಗೆ ಮೂರು ವರ್ಷ ಅಥವಾ 40,000 ಕಿಲೋಮೀಟರ್ ವಾರಂಟಿ ಮತ್ತು ರೋಡ್‍‍ಸೈಡ್ ಅಸ್ಸಿಸ್ಟನ್ಸ್ ಅನ್ನು ನೀಡಲಿರುವ ಸಾಧ್ಯತೆಗಳಿವೆ. ಯುಎಸ್ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬೆಲೆಗಿಂತಾ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುವ ಬೈಕ್‍‍ಗಳ ಬೆಲೆಯು ಕೊಂಚ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ.

ನವೆಂಬರ್‍‍ನಲ್ಲಿ ಬಿಡುಗಡೆಯಾಗುತ್ತಿರುವ ಆರ್‍ಇ ಟ್ವಿನ್ ಬೈಕ್‍ಗಳ ವಿಶೇಷತೆ ಏನು

ಎಂಜಿನ್ ಸಾಮರ್ಥ್ಯ

ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍‍ಗಳು 648ಸಿಸಿ ಆಯಿಲ್ ಕೂಲ್ಡ್, ಪ್ಯಾರಲಲ್-ಟ್ವಿನ್ ಎಂಜಿನ್ ಸಹಾಯದಿಂದ 47ಬಿಹೆಚ್‍‍ಪಿ ಮತ್ತು 52ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ನವೆಂಬರ್‍‍ನಲ್ಲಿ ಬಿಡುಗಡೆಯಾಗುತ್ತಿರುವ ಆರ್‍ಇ ಟ್ವಿನ್ ಬೈಕ್‍ಗಳ ವಿಶೇಷತೆ ಏನು

ರಾಯಲ್ ಎನ್‍‍ಫೀಲ್ಡ್ 650 ಟ್ವಿನ್ ಬೈಕ್‍‍ಗಳ ಮುಂಭಾಗದಲ್ಲಿ ಎಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ಶಾಕ್ ಅಬ್ಸಾರ್ಬರ್‍‍ಗಳನ್ನು ಒದಗಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಈ ಬೈಕ್‍‍ಗಳ ಮುಂಭಾಗದಲ್ಲಿ 320ಎಂಎಂ ಡಿಸ್ಕ್ ಬ್ರೇಕ್ ಹಾಗು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್‍‍ಗಳನ್ನು ನೀಡಲಾಗಿದೆ. ಇಷ್ಟೆ ಅಲ್ಲದೆ ಡ್ಯುಯಲ್ ಚಾನಲ್ ಎಬಿಎಸ್ ಮತ್ತು 18 ಇಂಚಿನ ಅಲ್ಯೂಮಿನಿಯಂ ಸ್ಪೋಕ್ ವೀಲ್‍‍ಗಳನ್ನು ನೀಡಲಾಗುತ್ತಿದೆ.

ನವೆಂಬರ್‍‍ನಲ್ಲಿ ಬಿಡುಗಡೆಯಾಗುತ್ತಿರುವ ಆರ್‍ಇ ಟ್ವಿನ್ ಬೈಕ್‍ಗಳ ವಿಶೇಷತೆ ಏನು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ತಮ್ಮ 650 ಟ್ವಿನ್ ಬೈಕ್‍‍ಗಳ ಬೆಲೆಯನ್ನು ಬಹಿರಂಗಗೊಳಿಸಿದ್ದು, ಮುಂದಿನ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಲಗ್ಗೆಯಿಡಲಿದೆ ಎನ್ನಲಾಗಿದೆ. ಜಾಗತಿಕವಾಗಿ ಮಾರಟವಾಗುತ್ತಿರುವ ಬೆಲೆಗಿಂತಾ ಭಾರತೀಯ ಮಾರುಕಟ್ಟೆಯಲ್ಲಿ ಇನ್ನು ಕೊಂಚ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಸಾಧ್ಯತೆಗಳಿವೆ. ದುಬಾರಿ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಗೆ ಕಾಲಿಡಲಿರುವ ಈ ಬೈಕ್‍‍ಗಳು ಎಷ್ಟರ ಮಟ್ಟಿಗೆ ಯಶಸ್ಸನ್ನು ಕಾಣಲಿದೆ ಎಂದು ಕಾಯ್ದು ನೋಡಬೇಕಿದೆ.

Most Read Articles

Kannada
Read more on royal enfield
English summary
Royal Enfield Interceptor 650 and Continental GT 650 India Launch Details Revealed.
Story first published: Friday, October 19, 2018, 9:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X