ನೊಂದ ಆರ್‌ಇ ಪೆಗಾಸಸ್ ಬೈಕ್ ಮಾಲೀಕರಿಗೆ ಸಿಗಲಿದೆ ಹೊಸ ಟ್ವಿನ್ 650 ಬೈಕ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ 500 ಪೆಗಾಸಸ್ ಲಿಮಿಟೆಡ್ ಎಡಿಷನ್ ಬೈಕ್ ಮಾರಾಟದಲ್ಲಿ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿರುವುದು ಬಹುತೇಕ ಆರ್‌ಇ ಪ್ರಿಯರಿಗೆ ಗೊತ್ತಿರುವ ವಿಚಾರ. ಹೀಗಿರುವಾಗ ಪೆಗಾಸಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಆರ್‌ಇ ಸಂಸ್ಥೆಯು ಇದೀಗ ಮಹತ್ವದ ನಿರ್ಧಾರಕ್ಕೆ ಬಂದಿದೆ.

ನೊಂದ ಆರ್‌ಇ ಪೆಗಾಸಸ್ ಬೈಕ್ ಮಾಲೀಕರಿಗೆ ಸಿಗಲಿದೆ ಹೊಸ ಟ್ವಿನ್ 650 ಬೈಕ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ನಡೆ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದ ಕ್ಲಾಸಿಕ್ 500 ಪೆಗಾಸಸ್ ಬೈಕ್ ಮಾಲೀಕರು ಹೊಸ ಬೈಕ್ ಸುರಕ್ಷಾ ಸೌಲಭ್ಯ ವಿಚಾರದಲ್ಲಿ ಮೋಸದ ವ್ಯಾಪಾರ ನಡೆದಿದೆ ಅಂತಾ ಪ್ರತಿಭಟನೆ ನಡೆಸಿದ್ದಲ್ಲದೇ ತಮಗಾದ ಮೋಸವನ್ನು ಸರಿಪಡಿಸುವಂತೆ ಪಟ್ಟುಹಿಡಿದ್ದರು.

ನೊಂದ ಆರ್‌ಇ ಪೆಗಾಸಸ್ ಬೈಕ್ ಮಾಲೀಕರಿಗೆ ಸಿಗಲಿದೆ ಹೊಸ ಟ್ವಿನ್ 650 ಬೈಕ್

ದುಬಾರಿ ಬೆಲೆ ತೆತ್ತು ಹೊಸ ಬೈಕ್ ಖರೀದಿ ಮಾಡಿದ್ರು ಬೈಕಿನಲ್ಲಿರುವ ಸುರಕ್ಷಾ ಸೌಲಭ್ಯಗಳ ವಿಚಾರದಲ್ಲಿ ಆರ್‌ಇ ವರ್ತನೆಯು ಹಲವು ಅನುಮಾನಗಳಿಗೆ ಕಾರಣವಾಗಿದ್ದಲ್ಲದೆ, ಹೊಸ ಬೈಕಿನಲ್ಲಿ ನೀಡಲಾಗುವ ಕೆಲವು ಸುರಕ್ಷಾ ಸೌಲಭ್ಯಗಳನ್ನು ಒದಗಿಸುವಲ್ಲಿ ಅಸಡ್ಡೆ ತೊರಿದೆ ಎನ್ನುವುದು ಗ್ರಾಹಕರು ಅವಲತ್ತುಕೊಂಡಿದ್ದರು.

ನೊಂದ ಆರ್‌ಇ ಪೆಗಾಸಸ್ ಬೈಕ್ ಮಾಲೀಕರಿಗೆ ಸಿಗಲಿದೆ ಹೊಸ ಟ್ವಿನ್ 650 ಬೈಕ್

ಇದಕ್ಕೆ ಕಾರಣ, ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಬಿಡುಗಡೆ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕಿನಲ್ಲಿ ಎಬಿಎಸ್ ಸೇರಿದಂತೆ ಕೆಲವು ಹೊಸ ಸೌಲಭ್ಯಗಳನ್ನು ನೀಡಿದ್ದು, ಅದೇ ದುಬಾರಿ ಬೆಲೆಯ ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳಲ್ಲಿ ಈ ಸೌಲಭ್ಯವನ್ನು ನೀಡಿಲ್ಲ ಎನ್ನವುದೇ ಪೆಗಾಸಸ್ ಬೈಕ್ ಮಾಲೀಕರ ಆಕ್ರೋಶವನ್ನು ಹೆಚ್ಚಿಸುವಂತೆ ಮಾಡಿತ್ತು.

ನೊಂದ ಆರ್‌ಇ ಪೆಗಾಸಸ್ ಬೈಕ್ ಮಾಲೀಕರಿಗೆ ಸಿಗಲಿದೆ ಹೊಸ ಟ್ವಿನ್ 650 ಬೈಕ್

ಇದರಿಂದ ಕೆರಳಿದ ಕೆಲವು ಪೆಗಾಸಸ್ ಬೈಕ್ ಮಾಲೀಕರು ಕ್ಲಾಸಿಕ್ ಸಿಗ್ನಲ್ಸ್ 350 ಬೈಕಿನಲ್ಲಿರುವ ಸೌಲಭ್ಯಗಳು ನಮಗೆ ಯಾಕಿಲ್ಲ ಅಂತಾ ಲಿಖಿತ ದೂರು ನೀಡಿದಲ್ಲದೆ, ಎಬಿಎಸ್ ಸೌಲಭ್ಯವನ್ನು ನೀಡಿ ಇಲ್ಲವಾದ್ರೆ ನಿಮ್ಮ ಹೊಸ ಬೈಕ್ ವಾಪಸ್ ಪಡೆದು ಹಣ ಮರಳಿಸಿ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು.

ನೊಂದ ಆರ್‌ಇ ಪೆಗಾಸಸ್ ಬೈಕ್ ಮಾಲೀಕರಿಗೆ ಸಿಗಲಿದೆ ಹೊಸ ಟ್ವಿನ್ 650 ಬೈಕ್

ಇದಲ್ಲದೇ ಕೆಲವು ಬೈಕ್ ಮಾಲೀಕರು ಹೊಸ ಪೆಗಾಸಸ್ ಬೈಕ್‌ಗಳನ್ನು ಕಸದ ರಾಶಿಗೆ ಹಾಕಿ ಪ್ರತಿಭಟಿಸಿದ್ದಲ್ಲದೆ ಕ್ಲಾಸಿಕ್ 350 ಸಿಗ್ನಲ್ಸ್ ಬೈಕಿನಲ್ಲಿ ನೀಡಲಾಗಿರುವ ಸೌಲಭ್ಯವನ್ನು ನಮಗೂ ನೀಡುವಂತೆ ಪಟ್ಟು ಹಿಡಿದಿದ್ದರು. ಇದಕ್ಕೆ ಮಣಿದಿರುವ ಆರ್‌ಇ ಸಂಸ್ಥೆಯು ಕೊನೆಗೂ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.

ನೊಂದ ಆರ್‌ಇ ಪೆಗಾಸಸ್ ಬೈಕ್ ಮಾಲೀಕರಿಗೆ ಸಿಗಲಿದೆ ಹೊಸ ಟ್ವಿನ್ 650 ಬೈಕ್

ಪೆಗಾಸಸ್ ಬದಲಿಗೆ ಟ್ವಿನ್ ಬೈಕ್ ಎಕ್ಸ್‌ಚೆಂಜ್..!

ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಂಡ್ ಇಮೇಜ್ ಹಾಳಾಗುತ್ತಿರುವುದನ್ನು ಕಂಡು ಹೊಸ ಪ್ಲ್ಯಾನ್ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಅಸಮಾಧಾನ ಹೊಂದಿರುವ ಪೆಗಾಸಸ್ ಮಾಲೀಕರಿಂದ ಹೊಸ ಬೈಕ್‌ಗಳನ್ನು ವಾಪಸ್ ಪಡೆಯಲು ಮುಂದಾಗಿದೆ.

ನೊಂದ ಆರ್‌ಇ ಪೆಗಾಸಸ್ ಬೈಕ್ ಮಾಲೀಕರಿಗೆ ಸಿಗಲಿದೆ ಹೊಸ ಟ್ವಿನ್ 650 ಬೈಕ್

ಪೆಗಾಸಸ್ ಬೈಕ್ ಎಕ್ಸ್‌ಚೆಂಜ್ ಬಯಸುವ ಗ್ರಾಹಕರಿಗೆ ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‍‍ಸೆಪ್ಟರ್ 650 ಬೈಕ್‍‌ಗಳೊಂದಿಗೆ ಎಕ್ಸ್‌ಚೆಂಜ್ ಮಾಡಿಕೊಳ್ಳಬಹುದಾದ ಅವಕಾಶ ನೀಡುತ್ತಿದ್ದು, ಆರ್‌ಇ ನಿರ್ಧಾರದಿಂದ ಆಕ್ರೋಶಗೊಂಡಿದ್ದ ಪೆಗಾಸಸ್ ಬೈಕ್ ಮಾಲೀಕರ ಮೊಗದಲ್ಲಿ ಮಂದಹಾಸ ತರಿಸಿದೆ.

MOST READ: ಇನ್ಮುಂದೆ ನೀವು ಹಿಗೆಲ್ಲಾ ಮಾಡಿದ್ರೆ ವಾಹನ ವಿಮೆ ಮೊತ್ತದ ಕಥೆ ಅಷ್ಟೇ..!

ನೊಂದ ಆರ್‌ಇ ಪೆಗಾಸಸ್ ಬೈಕ್ ಮಾಲೀಕರಿಗೆ ಸಿಗಲಿದೆ ಹೊಸ ಟ್ವಿನ್ 650 ಬೈಕ್

ಹೊಸ ಇಂಟರ್‍‍ಸೆಪ್ಟರ್ 650 ಹಾಗೂ ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳ ಬೆಲೆಯು ಭಾರತದಲ್ಲಿ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 3 ಲಕ್ಷದಿಂದ ರೂ.3.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.

ನೊಂದ ಆರ್‌ಇ ಪೆಗಾಸಸ್ ಬೈಕ್ ಮಾಲೀಕರಿಗೆ ಸಿಗಲಿದೆ ಹೊಸ ಟ್ವಿನ್ 650 ಬೈಕ್

ಈ ಹಿಂದೆ ಮಹಾರಾಷ್ಟ್ರ ಎಕ್ಸ್‌ಶೋರೂಂ ಪ್ರಕಾರ ರೂ. 2.49 ಲಕ್ಷ ಕೊಟ್ಟು ಪೆಗಾಸಸ್ ಬೈಕ್ ಖರೀದಿ ಮಾಡಿದ್ದ ಗ್ರಾಹಕರು ಇದೀಗ ಬಿಡುಗಡೆಯಾಗಿ ಸಿದ್ದವಾಗಿರುವ ಟ್ವಿನ್ 650 ಬೈಕ್‌ಗಳು ಬೇಕಾದಲ್ಲಿ ಹೆಚ್ಚುವರಿ ಮೊತ್ತ ಪಾವತಿ ಎಕ್ಸ್‌ಚೆಂಜ್ ಮಾಡಿಕೊಳ್ಳಬಹುದಾದ ಅನಿವಾರ್ಯತೆ ಇದ್ದು, ಇದರಿಂದ ಎಕ್ಸ್‌ಚೆಂಜ್ ಬೇಡ ಅದೇ ಬೈಕ್ ಇರಲಿ ಎನ್ನುವ ಗ್ರಾಹಕರಿಗೆ ಕೆಲವು ಹೆಚ್ಚುವರಿ ಉಚಿತ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದೆ.

MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ನೊಂದ ಆರ್‌ಇ ಪೆಗಾಸಸ್ ಬೈಕ್ ಮಾಲೀಕರಿಗೆ ಸಿಗಲಿದೆ ಹೊಸ ಟ್ವಿನ್ 650 ಬೈಕ್

ಈ ಮೂಲಕ ಬ್ರಾಂಡ್ ಇಮೇಜ್‌ಗೆ ಧಕ್ಕೆ ತರುತ್ತಿರುವ ಗ್ರಾಹಕರನ್ನು ಸುಮ್ಮನಾಗಿಸಲು ಯತ್ನಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪೆಗಾಸಸ್ ಬೈಕ್ ಮಾಲೀಕರಿಗೆ ಹೊಸ ಆಫರ್ ನೀಡುತ್ತಿದ್ದು, ಈ ಕೆಲಸವನ್ನು ಮೊದಲೇ ಮಾಡಿದ್ದರೇ ಇಷ್ಟೆೇಲ್ಲಾ ರಗಳೆಯೇ ಆಗುತ್ತಿರಲಿಲ್ಲಾ ಎನ್ನಬಹುದು.

ನೊಂದ ಆರ್‌ಇ ಪೆಗಾಸಸ್ ಬೈಕ್ ಮಾಲೀಕರಿಗೆ ಸಿಗಲಿದೆ ಹೊಸ ಟ್ವಿನ್ 650 ಬೈಕ್

ಇನ್ನು ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍‍ಗಳು 648ಸಿಸಿ ಆಯಿಲ್ ಕೂಲ್ಡ್, ಪ್ಯಾರಾಲಲ್-ಟ್ವಿನ್ ಎಂಜಿನ್ ಸಹಾಯದಿಂದ 47-ಬಿಹೆಚ್‍‍ಪಿ ಮತ್ತು 52ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಹೊಸ ಎಂಜಿನ್ ಅನ್ನು 6-ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
English summary
Royal Enfield Pegasus Owners Can Now Replace Their Motorcycles With The New 650 Twins.
Story first published: Saturday, October 27, 2018, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X