ರಾಯಲ್ ಎನ್‌ಫೀಲ್ಡ್ ಸ್ವಾಮ್ಯದ ಮೊದಲ 'ವಿಂಟೇಜ್' ಸ್ಟೋರ್ ಆರಂಭ

Written By:

ಕ್ಲಾಸಿಕ್ ಬೈಕ್‌ಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಫ್ರೀ ಓನ್ಡ್(ಸೇಕೇಂಡ್ ಹ್ಯಾಂಡ್) ಬೈಕ್‌ಗಳ ಮಾರಾಟ ಉದ್ದೇಶದಿಂದ ದೇಶದಲ್ಲಿ ಮೊದಲ ಬಾರಿಗೆ ವಿಂಟೇಜ್ ಸ್ಪೋರ್ ಆರಂಭಿಸಿದ್ದು, ರಾಯಲ್ ಎನ್‌ಫೀಲ್ಡ್ ಆಸಕ್ತ ಗ್ರಾಹಕರಿಗೆ ಮತ್ತೊಂದು ಸುವರ್ಣ ಅವಕಾಶ ನೀಡುತ್ತಿದೆ.

ರಾಯಲ್ ಎನ್‌ಫೀಲ್ಡ್ ಸ್ವಾಮ್ಯದ ಮೊದಲ 'ವಿಂಟೇಜ್' ಸ್ಟೋರ್ ಆರಂಭ

ಗುಣಮಟ್ಟ ಮತ್ತು ಪ್ರಮಾಣೀಕೃತ ಕ್ಲಾಸಿಕ್ ಬೈಕ್‌ಗಳ ಮಾರಾಟಕ್ಕೆ ಅನುಕೂಲಕವಾಗುವ ಉದ್ದೇಶದಿಂದ ವಿಂಟೇಜ್ ಸ್ಟೋರ್ ಆರಂಭಿಸಿದ್ದು, ಇನ್ಮುಂದೆ ಫ್ರೀ ಓನ್ಡ್ ಕ್ಲಾಸಿಕ್, ಬುಲೆಟ್ ಮತ್ತು ಥಂಡರ್‌ಬರ್ಡ್ ಬೈಕ್‌ಗಳನ್ನು ಅಧಿಕೃತ ಡೀಲರ್ಸ್ ಬಳಿಯೇ ಖರೀದಿ ಮಾಡಬಹುದಾಗಿದೆ.

Recommended Video - Watch Now!
[Kannada] Maruti Swift 2018 - Full Specifications, Features, Price, Mileage, Colours - DriveSpark
ರಾಯಲ್ ಎನ್‌ಫೀಲ್ಡ್ ಸ್ವಾಮ್ಯದ ಮೊದಲ 'ವಿಂಟೇಜ್' ಸ್ಟೋರ್ ಆರಂಭ

ಚೆನ್ನೈನಲ್ಲಿ ಮೊದಲ ವಿಂಟೇಜ್ ಸ್ಟೋರ್ ಆರಂಭಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಆಯ್ದ ಪ್ರಮುಖ ನಗರಗಳಲ್ಲಿ ಫ್ರೀ ಓನ್ಡ್ ಬೈಕ್ ವ್ಯವಹಾರವನ್ನು ಕೂಡಾ ನಡೆಸಲಿದೆ.

ರಾಯಲ್ ಎನ್‌ಫೀಲ್ಡ್ ಸ್ವಾಮ್ಯದ ಮೊದಲ 'ವಿಂಟೇಜ್' ಸ್ಟೋರ್ ಆರಂಭ

ಸದ್ಯ ಕಾರು ಮಾರಾಟಗಾರರು ಮಾತ್ರ ಫ್ರೀ ಓನ್ಡ್ ಸ್ಟೋರ್‌ಗಳನ್ನು ಹೊಂದಿದ್ದು, ಇದೀಗ ಬೈಕ್ ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ರಾಯಲ್ ಎನ್‌ಫೀಲ್ಡ್ ಮೊದಲ ಬಾರಿಗೆ ಹೊಸ ಯೋಜನೆಯೊಂದನ್ನು ರೂಪಿಸಿರುವುದು ವಿಶೇಷವಾಗಿದೆ.

ರಾಯಲ್ ಎನ್‌ಫೀಲ್ಡ್ ಸ್ವಾಮ್ಯದ ಮೊದಲ 'ವಿಂಟೇಜ್' ಸ್ಟೋರ್ ಆರಂಭ

ಮತ್ತೊಂದು ಪ್ರಮುಖ ವಿಚಾರ ಅಂದರೇ, ಪ್ರಮಾಣೀಕೃತ ಬೈಕ್ ಮಾರಾಟಗಾರರ ಬಳಿ ಫ್ರೀ ಓನ್ಡ್ ಬೈಕ್‌ಗಳ ಖರೀದಿಯಿಂದಾಗಿ ಗ್ರಾಹಕರು ಮೋಸ ವ್ಯವಹಾರದಿಂದ ತಪ್ಪಿಸಿಕೊಳ್ಳಬಹುದಾಗಿದ್ದು, ಬೈಕ್ ಸರ್ವೀಸ್ ವಿಚಾರವಾಗಿಯೂ ಅನುಕೂಲಕರ ಎನ್ನಬಹುದು.

ರಾಯಲ್ ಎನ್‌ಫೀಲ್ಡ್ ಸ್ವಾಮ್ಯದ ಮೊದಲ 'ವಿಂಟೇಜ್' ಸ್ಟೋರ್ ಆರಂಭ

ಇನ್ನು ಚೆನ್ನೈನ ವೇಲಾಚರಿನಲ್ಲಿ ಆರಂಭವಾಗಿರುವ ವಿಂಟೇಜ್ ಸ್ಟೋರ್‌ನಲ್ಲಿ ಎರಡು ಮಾದರಿಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಫ್ರೀ ಓನ್ಡ್ (ಪೂರ್ವ ಸ್ವಾಮ್ಯದ), ನವೀಕರಿಸಿದ ಬೈಕ್‌ಗಳನ್ನು ಖರೀದಿ ಮಾಡಬಹುದು.

ರಾಯಲ್ ಎನ್‌ಫೀಲ್ಡ್ ಸ್ವಾಮ್ಯದ ಮೊದಲ 'ವಿಂಟೇಜ್' ಸ್ಟೋರ್ ಆರಂಭ

ನವೀಕರಿಸಿದ ಬೈಕ್‌ಗಳಿಗೆ ನೀಡಲಾಗುವ ಫ್ರೀ ಸರ್ವೀಸ್‌ಗಳನ್ನು ರಾಯಲ್ ಎನ್‌ಫೀಲ್ಡ್ ಸಂಸ್ಥೆಯೇ ಭರಿಸಲಿದ್ದು, ಬೈಕ್‌ಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಮತ್ತಷ್ಟು ನೆರವಾಗಲಿದೆ ಎನ್ನಬಹುದು.

English summary
Royal Enfield Pre-Owned Motorcycle Store ‘Vintage’ Launched.
Story first published: Friday, March 9, 2018, 11:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark