ಎಬಿಎಸ್ ತಂತ್ರಜ್ಞಾನ ಪಡೆದ ಆರ್‍ಇ ಥಂಡರ್‍‍ಬರ್ಡ್ 350ಎಕ್ಸ್ ಬೈಕ್

ಕೆಂದ್ರ ಸರ್ಕಾರವು ಏಪ್ರಿಲ್ 2019ರ ನಂತರ ಮಾರುಕಟ್ಟೆಯಲ್ಲಿರುವ ಎಲ್ಲಾ 125ಸಿಸಿ ಗಿಂತಾ ಅಧಿಕ ಸಾಮರ್ಥ್ಯ ಇರುವ ದ್ವಿಚಕ್ರ ವಾಹನಗಳಲ್ಲಿ ಕಡ್ಡಯಾವಾಗಿ ಎಬಿಎಸ್ ತಂತ್ರಜ್ಞಾನ ಅಳವಡಿಸಿರಬೇಕಂದು ಆದೇಶಿಸಿದೆ. ಆದುದರಿಂದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಈ ವಿಷಯವನ್ನು ಗಂಬೀರವಾಗಿ ಪರಿಗಣಿಸಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಆರ್‍ಇ ಥಂಡರ್‍‍ಬರ್ಡ್ 350ಎಕ್ಸ್ ಬೈಕ್

ಇನ್ನಿತರೆ ಸಂಸ್ಥೆಗಳಂತೆಯೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಕೂಡಾ ತಮ್ಮ 150ಸಿಸಿ ಗಿಂತಾ ಅಧಿಕ ಸಾಮರ್ಥ್ಯವುಳ್ಳ ಬೈಕ್‍‍ಗಳಲ್ಲಿ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ನೀಡಲು ಮುಂದಾಗಿದ್ದು, ಇದೀಗ ತಮ ಥಂಡರ್‍‍ಬರ್ಡ್ 350ಎಕ್ಸ್ ಬೈಕಿಗು ಸಹ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ನೀಡಿ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.60 ಲಕ್ಷದ ಮಾರಾಟದ ಬೆಲೆಯನ್ನು ನಿಗದಿ ಮಾಡಲಾಗಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಆರ್‍ಇ ಥಂಡರ್‍‍ಬರ್ಡ್ 350ಎಕ್ಸ್ ಬೈಕ್

ಎಬಿಎಸ್ ಅಧಾರಿತ ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ 350 ಬೈಕ್‍ಗಳನ್ನು ಖರೀದಿಸಲು ಬಯಸುವ ಆಸಕ್ತ ಗ್ರಾಹಕರು ನಿಮ್ಮ ಹತ್ತಿರದ ಅಧಿಕೃತ ಆರ್‍ಇ ಡೀಲರ್‍‍ನ ಬಳಿ ರೂ. 5,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದ್ದು, ದೇಶದಲ್ಲಿನ ಎಲ್ಲಾ ರಾಯಲ್ ಎನ್‍ಫೀಲ್ಡ್ ಡೀಲರ್‍‍ಗಳ ಬಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಆರ್‍ಇ ಥಂಡರ್‍‍ಬರ್ಡ್ 350ಎಕ್ಸ್ ಬೈಕ್

ಹೊಸದಾಗಿ ಅಳವಡಿಸಲಾದ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಹೊರತುಪಡಿಸಿ ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ 350ಎಕ್ಸ್ ಬೈಕ್ ವಿನ್ಯಾಸದಲ್ಲಿ ಮತ್ತು ತಾಂತ್ರಿಕವಾಗಿ ಬೇರಾವ ಬದಲಾವಣೆಗಳನ್ನು ಪಡೆದುಕೊಂಡಿರುವುದಿಲ್ಲ ಎನ್ನಲಾಗಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಆರ್‍ಇ ಥಂಡರ್‍‍ಬರ್ಡ್ 350ಎಕ್ಸ್ ಬೈಕ್

ಎಬಿಎಸ್ ಅಧಾರಿತ ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ 350ಎಕ್ಸ್ ಬೈಕಿನ ಮುಂಭಾಗದಲ್ಲಿ 41ಎಂಎಂ ಟೆಲಿಸ್ಕೋಪಿಕ್ ಫೋರ್ಕ್‍ಗಳನ್ನು ನೀಡಲಾಗಿದ್ದು, ಹಿಂಭಾಗದಲ್ಲಿ ಟ್ವಿನ್ ಗ್ಯಾಸ್ ಚರ್ಜ್ಡ್ ಶಾಕ್ ಅಬ್ಸಾರ್ಬರ್‍‍ಗಳಾನ್ನು ನೀಡಲಾಗಿದೆ. ಮತ್ತು ರಿಯರ್ ಸಸ್ಪೆಂಷನ್ 5 ವಿಧಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಪ್ರೀಲೋಡ್ ಫಂಕ್ಷನ್ ಅನ್ನು ಸಹ ಪಡೆದುಕೊಂಡಿರಲಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಆರ್‍ಇ ಥಂಡರ್‍‍ಬರ್ಡ್ 350ಎಕ್ಸ್ ಬೈಕ್

ಎಂಜಿನ್ ಸಾಮರ್ಥ್ಯ

ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ 350ಎಕ್ಸ್ ಬೈಕ್ 346ಸಿಸಿ, ಏರ್ ಕೂಲ್ಡ್, ಸಿಂಗಲ್ ಸಿಸ್ಲೆಂಡರ್ ಎಂಜಿನ್ ಸಹಾಯದಿಂದ 19.8ಬಿಹೆಚ್‍ಪಿ ಮತ್ತು 28ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಆರ್‍ಇ ಥಂಡರ್‍‍ಬರ್ಡ್ 350ಎಕ್ಸ್ ಬೈಕ್

ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ 350ಎಕ್ಸ್ ಎಬಿಎಸ್ ಬೈಕ್ ಮುಂಭಾಗದಲ್ಲಿ 19 ಇಂಚಿನ ಮಲ್ಟಿ ಸ್ಪೋಕ್ ಮತ್ತು ಹಿಂಭಾಗದಲ್ಲಿ 18ಇಂಚಿನ ಟೈರ್‍‍ಗಳನ್ನು ಉದಗಿಲಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ 280ಎಮ್ಎಮ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240ಎಮ್ಎಮ್ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್ ಅನ್ನು ನೀಡುವುದರ ಜೊತೆಗೆ ಎರಡು ಭಾಗದಲ್ಲಿ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಆರ್‍ಇ ಥಂಡರ್‍‍ಬರ್ಡ್ 350ಎಕ್ಸ್ ಬೈಕ್

ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ 350ಎಕ್ಸ್ ಬೈಕ್ ದೇಶದಲಿನ ಯುವ ಸಮುದಾಯವನ್ನು ಆಕರ್ಷಿಸಲು ಸಂಸ್ಥೆಯು ವಿನ್ಯಾಸ ಮಾಡಲಾಗಿದ್ದು, ರೋವಿಂಗ್ ರೆಡ್ ಮತ್ತು ವ್ಹಿಂಸಿಕಲ್ ವೈಟ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಆರ್‍ಇ ಥಂಡರ್‍‍ಬರ್ಡ್ 350ಎಕ್ಸ್ ಬೈಕ್

ಸ್ಟ್ಯಾಂಡರ್ಡ್ ಮಾಡಲ್‍ ಅನ್ನು ಹೋಲಿಸಿದರೆ ಥಂಡರ್‍‍ಬರ್ಡ್ 350ಎಕ್ಸ್ ಬೈಕ್ ಸ್ಪೋರ್ಟಿ ರೈಡಿಂಗ್ ಪೊಸಿಷನ್, ಫ್ಲ್ಯಾಟ್ ಹ್ಯಾಂಡಲ್‍‍ಬಾರ್ಸ್, ಸ್ಪ್ಲಿಟ್ ಗ್ರ್ಯಾಬ್ ರೈಲ್ಸ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್ ಮತ್ತು 20 ಲೀಟರ್‍‍ನ ಪ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಆರ್‍ಇ ಥಂಡರ್‍‍ಬರ್ಡ್ 350ಎಕ್ಸ್ ಬೈಕ್

ಮಾಹಿತಿಗಳ ಪ್ರಕಾರ ಚೆನ್ನೈ ಮೂಲದ ವಾಹನ ತಯಾರಕ ಸಂಸ್ಥೆಯಾದ ರಾಯಲ್ ಎನ್‍‍ಫೀಲ್ಡ್ ಮಾರುಕಟ್ತೆಯಲ್ಲಿ ತಮ್ಮ ಎದುರಾಳಿಯಾದ ಜಾವಾ ಮೋಟಾರ್‍‍ಸೈಕಲ್ ಕಡಿಮೆ ಬೆಲೆಯಲ್ಲಿ ವಾಹನಗಳನ್ನು ಬಿಡುಗಡೆಗೊಳಿಸಲಿರುವ ಮೂಲಕ ಎಚ್ಚೆತ್ತುಕೊಂದು ತಮ್ಮ ಬೈಕ್‍ಗಳಿಗೆ ಹೊಸ ವೈಶಿಷ್ಟ್ಯತೆಗಳನ್ನು ನೀಡಲು ಮುಂದಾಗುತ್ತಿದೆ ಅನ್ನಲಾಗಿದೆ.

ಎಬಿಎಸ್ ತಂತ್ರಜ್ಞಾನ ಪಡೆದ ಆರ್‍ಇ ಥಂಡರ್‍‍ಬರ್ಡ್ 350ಎಕ್ಸ್ ಬೈಕ್

ಅಷ್ಟೆ ಅಲ್ಲದೇ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು 650ಸಿಸಿ ಸಾಮರ್ಥ್ಯ ಹೊಂದಿರುವ ಕಾಂಟಿನೆಂಟಲ್ ಜಿಟಿ ಮತ್ತು ಇಂಟರ್‍‍ಸೆಪ್ಟರ್ 650 ಬೈಕ್‍‍ಗಳನ್ನು ಇದೇ ತಿಂಗಳು 14ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದ್ದು, ಜಾವಾ ಮೋಟರ್‍‍ಸೈಕಲ್‍ಗಳಿಗೆ ಯಾವ ರೀತಿಯ ಟಾಂಗ್ ನೀಡಲಿದೆ ಎಂದು ಕಾಯ್ದು ನೋಡಬೇಕಿದೆ.

Source: YouTube/Abinash Panigrahi

Article Published On: Friday, November 9, 2018, 17:58 [IST]
English summary
Royal Enfield Thunderbird 350X ABS Launched In India; Priced At Rs 1.60 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+