ಬಿಡುಗಡೆಗೂ ಮುನ್ನ ರಾಯಲ್ ಎನ್‌ಫೀಲ್ಡ್ ಹೊಸ ಬೈಕ್‌ಗಳ ಬ್ರೌಷರ್ ಸೋರಿಕೆ..
ಇದೇ ತಿಂಗಳು 28ಕ್ಕೆ ವಿನೂತನ ಟಂಡರ್ ಬರ್ಡ್ ಎಕ್ಸ್ 350 ಮತ್ತು ಟಂಡರ್ ಬರ್ಡ್ ಎಕ್ಸ್ 500 ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಆದ್ರೆ ಹೊಸ ಬೈಕ್ ಬಿಡುಗಡೆಗೆ ಇನ್ನೇರಡು ದಿನ ಬಾಕಿ ಇರುವಾಗಲೇ ತಾಂತ್ರಿಕ ಅಂಶಗಳ ಬ್ರೌಷರ್ ಸೋರಿಕೆಯಾಗಿದೆ.
Recommended Video

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇದೇ ತಿಂಗಳು 28ಕ್ಕೆ ವಿನೂತನ ಟಂಡರ್ ಬರ್ಡ್ ಎಕ್ಸ್ 350 ಮತ್ತು ಟಂಡರ್ ಬರ್ಡ್ ಎಕ್ಸ್ 500 ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಆದ್ರೆ ಹೊಸ ಬೈಕ್ ಬಿಡುಗಡೆಗೆ ಇನ್ನೇರಡು ದಿನ ಬಾಕಿ ಇರುವಾಗಲೇ ತಾಂತ್ರಿಕ ಅಂಶಗಳ ಬ್ರೌಷರ್ ಸೋರಿಕೆಯಾಗಿದೆ.

ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಬಿಡುಗಡೆ ಮಾಡುವ ತವಕಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಅದಕ್ಕೂ ಮುನ್ನ ಟಂಡರ್ ಬರ್ಡ್ ಸರಣಿಯ ಮುಂದುವರಿದ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಸೋರಿಕೆಯಾದ ಬ್ರೌಷರ್‌ನಲ್ಲಿರುವ ಮಾಹಿತಿಗಳು ಇಲ್ಲಿವೆ ನೋಡಿ.

ಸದ್ಯ ಟಂಡರ್ ಬರ್ಡ್ 500ಎಕ್ಸ್ ಹಾಗೂ ಟಂಡರ್ ಬರ್ಡ್ 300 ಎಕ್ಸ್ ಬೈಕ್ ಆವೃತ್ತಿಗಳನ್ನು ಪ್ರಮುಖ ಡೀಲರ್ ಯಾರ್ಡ್‌ಗಳಲ್ಲಿ ಸ್ಟಾಕ್ ಮಾಡಲಾಗಿದ್ದು, ಇದೇ ತಿಂಗಳು 28ಕ್ಕೆ ಭರ್ಜರಿಯಾಗಿ ಬಿಡುಗಡೆ ಮಾಡುವ ಬಗ್ಗೆ ರಾಯಲ್ ಎನ್‌ಫೀಲ್ಡ್ ಕೂಡಾ ಅಧಿಕೃತ ಮಾಹಿತಿ ನೀಡಿದೆ.

ಡೀಲರ್ ಯಾರ್ಡ್‌ಗಳಲ್ಲಿ ಸೆರೆ ಸಿಕ್ಕ ಟಂಡರ್‌ಬರ್ಡ್ 500ಎಕ್ಸ್ ಹಾಗೂ ಟಂಡರ್‌ಬರ್ಡ್ 300ಎಕ್ಸ್ ಚಿತ್ರಗಳ ಪ್ರಕಾರ ಹೊಸ ಬೈಕ್‌ಗಳು ಮಹತ್ವದ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಬೈಕ್ ವಿನ್ಯಾಸಗಳನ್ನು ಸ್ಪೋರ್ಟ್ ಲುಕ್ ನೀಡಲಾಗಿದೆ.

ಜೊತೆಗೆ ಹೊಸ ಬೈಕ್‌ಗಳಲ್ಲಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ವಿಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದ್ದು, ಈ ಮೂಲಕ ಫ್ಯೂಲ್ ಟ್ಯಾಂಕ್ ವಿನ್ಯಾಸವು ಹೊಸ ಬೈಕಿಗೆ ಮತ್ತಷ್ಟು ಮೆರಗು ತಂದಿದೆ ತಪ್ಪಾಗಲಾರದು.

ಇದಷ್ಟೇ ಅಲ್ಲದೇ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್ ಮಾದರಿಯನ್ನು ಪ್ರಮುಖ ಮೂರು ಬಣ್ಣಗಳಲ್ಲಿ ಪರಿಚಯಿಸಲಾಗುತ್ತಿದ್ದು, ಫ್ರಂಟ್ ಹಾಗೂ ಬ್ಯಾಕ್ ವೀಲ್ಹ್‌ಗಳಿಗೆ ಡಿಸ್ಕ್ ಬ್ರೇಕ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇನ್ನು ಎಂಜಿನ್ ಸಾಮರ್ಥ್ಯವನ್ನು ಈ ಹಿಂದಿನಂತಯೇ ಮುಂದುವರಿಸಲಾಗಿದ್ದು, 500ಎಕ್ಸ್‌ನಲ್ಲಿ 500-ಸಿಸಿ ಮತ್ತು 300ಎಕ್ಸ್‌ನಲ್ಲಿ 300-ಸಿಸಿ ಸಿಂಗಲ್ ಮತ್ತು ಸಿಲಿಂಡರ್ ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ. ಹೀಗಾಗಿ ಹಳೆಯ ಆವೃತ್ತಿಯಂತೆ ಹೊಸ ಬೈಕಿನಲ್ಲಿ ಯಾವುದೇ ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡಿಲ್ಲ ಎಂಬುವುದು ಸ್ಪಷ್ಟವಾಗಿದೆ.

ಬೆಲೆ (ಅಂದಾಜು)
ಹೊಸ ಬೈಕ್‌ಗಳ ಬೆಲೆ ಮಾಹಿತಿಗಳು ಅಧಿಕೃತವಾಗಿಲ್ಲವಾದರೂ ಕೆಲ ವರದಿಗಳ ಪ್ರಕಾರ ಪ್ರಸ್ತುತ ಟಂಡರ್‌ಬರ್ಡ್ ಆವೃತ್ತಿಗಳಿಂತ ರೂ.8 ಸಾವಿರದಿಂದ ರೂ.10 ಸಾವಿರ ಹೆಚ್ಚಾಗಲಿವೆ ಎನ್ನಲಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಕ್ಲಾಸಿಕ್ ಬೈಕ್ ನಿರ್ಮಾಣ ಮತ್ತು ಮಾರಾಟ ತನ್ನದೇ ಆದ ಮುನ್ನಡೆ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬದಲಾದ ಮಾರುಕಟ್ಟೆ ಸನ್ನಿವೇಶಗಳಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಹೀಗಾಗಿ ಎಲ್ಲ ವರ್ಗಗಳನ್ನು ಸೆಳೆಯಬಹುದಾದ ಬೈಕ್‌ಗಳ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನಹರಿಸುತ್ತಿದೆ.
Trending On DriveSpark Kannada:
ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?
ಕೈಗೆಟುಕುವ ಬೆಲೆಯಲ್ಲಿ ಕೊಳ್ಳಬಹುದಾದ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..


Click it and Unblock the Notifications