ಕೈಗೆಟುಕುವ ಬೆಲೆಯಲ್ಲಿ ಕೊಳ್ಳಬಹುದಾದ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಕೆಲವು ಜನಪ್ರಿಯ ಬೈಕ್ ಗಳಲ್ಲೇ ರೇರ್ ಡಿಸ್ಕ್ ಬ್ರೇಕ್ ಇಲ್ಲದಿರುವುದನ್ನು ಕಾಣಬಹುದಾಗಿದ್ದು, ಕೈಗೆಟುವ ದರದಲ್ಲಿ ಖರೀದಿಸಬಹುದಾದ ಬೈಕ್ ಮಾದರಿಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

By Praveen

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಫ್ರಂಟ್ ಡಿಸ್ಕ್ ಬ್ರೇಕ್ ಹೊಂದಿರುವ ಹಲವಾರು ಬೈಕ್ ಮಾದರಿಗಳು ಖರೀದಿದೆ ಲಭ್ಯವಿವೆ. ಆದ್ರೆ ಕೆಲವು ಜನಪ್ರಿಯ ಬೈಕ್ ಗಳಲ್ಲೇ ರೇರ್ ಡಿಸ್ಕ್ ಬ್ರೇಕ್ ಇಲ್ಲದಿರುವುದನ್ನು ಕಾಣಬಹುದಾಗಿದ್ದು, ಕೈಗೆಟುವ ದರದಲ್ಲಿ ಖರೀದಿಸಬಹುದಾದ ಬೈಕ್ ಮಾದರಿಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಬೈಕ್‌ಗಳಲ್ಲಿ ಮುಂಭಾಗದ ಡಿಸ್ಕ್ ಬ್ರೇಕ್‌ಗಳು ಎಷ್ಟು ಅವಶ್ಯಕವೋ ಅಷ್ಟೇ ಪ್ರಮಾಣದಲ್ಲಿ ಹಿಂಭಾಗದ ಡಿಸ್ಕ್ ಬ್ರೇಕ್‌ಗಳು ಕೂಡಾ ಅಷ್ಟೇ ಮುಖ್ಯ ಪಾತ್ರ ವಹಿಸುತ್ತವೆ. ಹೀಗಾಗಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕೈಗಟ್ಟುವ ಬೆಲೆಯಲ್ಲಿ ಖರೀದಿಸಬಹುದಾದ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಹೊಂದಿರುವಂತ ಬೈಕ್‌ಗಳ ಬಗೆಗೆ ತಿಳಿಸಲಿದ್ದೇವೆ.

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಬಜಾಜ್ ಪಲ್ಸರ್ 180

ಬಜಾಜ್ ಪಲ್ಸರ್ ಬ್ರಾಂಡ್ ದೀರ್ಘ ಕಾಲದಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸುತ್ತಿದ್ದು, ಪಲ್ಸರ್ ಸ್ವತಃ ಒಂದು ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ ಎನ್ನಬಹುದು. ಜೊತೆಗೆ ದೇಶಿಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದಾದ ಪರ್ಫಾಮೆನ್ಸ್ ಬೈಕುಗಳಲ್ಲಿ ಇದು ಕೂಡಾ ಒಂದಾಗಿದೆ.

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಪಲ್ಸರ್ 180 ಬೈಕ್‌ಗಳು ಸಿಂಗಲ್ ಸಿಲಿಂಡರ್ 178ಸಿಸಿ ಎಂಜಿನನ್ನು ಹೊಂದಿದ್ದು, 17ಬಿಹೆಚ್ ಪಿ ಮತ್ತು 14ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. 260ಎಂಎಂ ಡಿಸ್ಕ್ ಬ್ರೇಕ್ ಮುಂಭಾಗದಲ್ಲಿ ಹಾಗು 230 ಎಂಎಂ ಡಿಸ್ಕ್ ಬ್ರೇಕನ್ನು ಹಿಂಭಾದಲ್ಲಿ ಪಡೆದಿದೆ. ಆದರೆ ಈ ಬೈಕಿನಲ್ಲಿ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿಲ್ಲ.

ಬೆಲೆ (ಎಕ್ಸ್ ಶೋರಂ ದೆಹಲಿ)- ರೂ.81,331

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಸುಜುಕಿ ಜಿಕ್ಸರ್ ಎಸ್ಎಫ್

154 ಸಿಸಿ ಫ್ಯೂಲ್ ಇಂಜೆಕ್ಟಡ್ ಎಂಜಿನ್ ಹೊಂದಿರುವ ಜಿಕ್ಸರ್ ಆವೃತ್ತಿಗಳು 14.5-ಬಿಎಚ್‌ಪಿ ಮತ್ತು 14-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದ್ದು, ಎಬಿಎಸ್ ಟೆಕ್ನಾಲಜಿ ಜೊತೆಗೆ 240 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್ ಅನ್ನು ಒಂದು ಆಯ್ಕೆಯಾಗಿ ಸೇರಿಸಿದೆ.

ಬೆಲೆ (ಎಕ್ಸ್ ಶೋರಂ ದೆಹಲಿ)- ರೂ.96,221

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಬಜಾಜ್ ಪಲ್ಸರ್ 200 ಎನ್ಎಸ್

ಬಜಾಜ್ ಪಲ್ಸರ್ 200 ಎನ್ಎಸ್ ಪಲ್ಸರ್ ಬೈಕ್‌ಗಳು ಹೊಸದಾಗಿ ಬಿಡುಗಡೆಗೊಂಡಿದ್ದು, 199.5 ಸಿಸಿ ಲಿಕ್ವಿಡ್ ಕೂಲ್ಡ್ ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿದ್ದು, 23-ಬಿಎಚ್‌ಪಿ ಮತ್ತು 18.3-ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಇನ್ನು ಬೈಕಿನ ಬ್ರೇಕಿಂಗ್ ಸಿಸ್ಟಂ ವಿಚಾರದಲ್ಲಿ ಫ್ಲೋಟಿಂಗ್ ಕ್ಯಾಲಿಪರ್ ಮತ್ತು ಪೆಟಲ್ ಡಿಸ್ಕ್ ಬ್ರೇಕ್ ಸಿಸ್ಟಂ ಹೊಂದಿದ್ದು, ಮುಂಭಾಗದಲ್ಲಿ 280-ಎಂಎಂ ಡಿಸ್ಕ್ ಮತ್ತು 230-ಎಂಎಂ ಡಿಸ್ಕ್ ಬ್ರೇಕನ್ನು ಆಯ್ಕೆ ಯಾಗಿ ನೀಡಲಾಗಿದೆ.

ಬೆಲೆ (ಎಕ್ಸ್ ಶೋರಂ ದೆಹಲಿ)- ರೂ. 1.04 ಲಕ್ಷ

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಟಿವಿಎಸ್ ಅಪಾಚೆ ಆರ್ ಟಿಆರ್ 160

ಎಂಟ್ರಿ ಲೆವೆಲ್ ಪರ್ಫಾರ್ಮೆನ್ಸ್ ಹೊಂದಿರುವ ಈ ಬೈಕ್ ಅಪಾಚೆ ಸರಣಿಯಲ್ಲಿ ಸಣ್ಣದಾಗಿದ್ದು, ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಕೊಳ್ಳಬಹುದಾದ ಪೆಟಲ್ ಡಿಸ್ಕ್ ಬ್ರೇಕ್ ಹೊಂದಿರುವ ಬೈಕ್ ಇದಾಗಿದೆ.

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಆರ್‌ಟಿಆರ್ 160 ಮಾದರಿಯು 159.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಮೂಲಕ 15.2-ಬಿಎಚ್‌ಪಿ, 13.1-ಎನ್ಎಂಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮುಂಭಾಗದಲ್ಲಿ 270ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 130ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಬೆಲೆ (ಎಕ್ಸ್ ಶೋರಂ ದೆಹಲಿ)- ರೂ. 86,177

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಯಮಹಾ ಎಫ್‌ಝೆಡ್-ಎಸ್

ಮಾರುಕಟ್ಟೆಯಲ್ಲಿ ಯುವ ಜನರನ್ನು ಸೆಳೆದ ಯಮಹಾ ಎಫ್‌ಝೆಡ್-ಎಸ್ ಬೈಕ್ ಮಸ್ಕ್ಯೂಲಿನ್ ಮತ್ತು ಬೋಲ್ಡ್ ರೂಪವನ್ನು ಹೊಂದಿದೆ. ಇನ್ನು ಬೈಕ್ ಫ್ಯುಯಲ್ ಇಂಜೆಕ್ಟೆಡ್ ಎಂಜಿನನ್ನು ಹೊಂದಿದ್ದು, 13.8-ಬಿಹೆಚ್ ಪಿ ಮತ್ತು 13.6-ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಈ ಬೈಕಿನ ಹಿಂಭಾಗದಲ್ಲಿ 130ಎಂಎಂ ಡಿಸ್ಕ್ ಬ್ರೇಕ್ ಅನ್ನು ಆಯ್ಕೆಯಾಗಿ ನೀಡಿದ್ದು, ಮುಂಭಾಗದಲ್ಲಿ 282ಎಂಎಂ ಡಿಸ್ಕ್ ಬ್ರೇಕನ್ನು ಪಡೆದಿದೆ.

ಬೆಲೆ (ಎಕ್ಸ್ ಶೋರಂ ದೆಹಲಿ)- ರೂ.91,675

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಹೋಂಡಾ ಸಿಬಿ ಹಾರ್ನೆಟ್ 160ಆರ್

ಹೋಂಡಾ ಸಿಬಿ ಹಾರ್ನೆಟ್ 160 ಆರ್ ಬ್ರಾಂಡ್‌ನಿಂದ ಪ್ರೀಮಿಯಂ ಪ್ರಯಾಣಿಕ ಬೈಕ್ ಆಗಿದ್ದು, ಶಾರ್ಪ್ ಲುಕ್ ಹೊಂದಿರುವ ಈ ಬೈಕ್ ಡ್ಯುಯಲ್ ಡಿಸ್ಕ್ ಬ್ರೇಕ್ ಹೊಂದಿರುವ ಬೈಕ್ ಸರಣಿಯಲ್ಲಿ ಇದು ಕಡಿಮೆ ಬೆಲೆಯಿದೆ ಎನ್ನಬಹುದು.

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಏರ್ ಕೂಲಿಂಗ್ ಸಿಸ್ಟಂ, 162 ಸಿಸಿ ಎಂಜಿನ್ ಹೊಂದಿರುವ ಈ ಬೈಕ್ 15.66-ಬಿಹೆಚ್ ಪಿ ಮತ್ತು 14.76-ಎನ್ಏಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ. ಬೈಕಿನ ಹಿಂಭಾಗದಲ್ಲಿ ಮೋನೊ-ಶಾಕ್ ಸಸ್ಪೆಷನ್ ಹೊಂದಿದ್ದು, ಹೋಂಡಾ ಸಂಸ್ಥೆಯ ಸಿಬಿಎಸ್ ಅನ್ನು ಆಯ್ಕೆಯಾಗಿ ಪಡೆದಿದೆ.

ಬೆಲೆ (ಎಕ್ಸ್ ಶೋರುಂ ದೆಹಲಿ)- ರೂ. 83,340

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಹೀರೋ ಎಕ್ಸ್‌ಟ್ರಿಮ್ ಸ್ಪೋರ್ಟ್

ಹೀರೋ ಎಕ್ಸ್‌ಟ್ರಿಮ್ ಸ್ಪೋರ್ಟ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದ್ದು, 149.2 ಸಿಸಿ ಸಿಂಗಲ್ ಸಿಲಿಂಡರ್ ಹೊಂದಿರುವ ಈ ಬೈಕ್ 15.6-ಬಿಹೆಚ್ ಪಿ ಮತ್ತು 13.50-ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯುತ್ತದೆ.

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಇನ್ನು ಬೈಕಿಗೆ ಡ್ಯುಯಲ್ ಡಿಸ್ಕ್ ವರ್ಷನ್ ಆಯ್ಕೆಯಾಗಿ ನೀಡಿದ್ದು, ಮುಂಭಾಗದಲ್ಲಿ 240-ಎಂಎಂ ಡಿಸ್ಕ್ ಬ್ರೇಕ್ ಮತ್ತು, 220-ಎಂಎಂ ಡಿಸ್ಕ್ ಬ್ರೇಕನ್ನು ಹಿಂಭಾಗದಲ್ಲಿ ಪಡೆದಿದೆ.

ಬೆಲೆ (ಎಕ್ಸ್ ಶೋರಂ ದೆಹಲಿ)- ರೂ. 85,678

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಯಮಹಾ ವೈಝೆಡ್ಎಫ್-ಆರ್15

ಯಮಹಾ ವೈಝೆಡ್ಎಫ್-ಆರ್15 3.0 ವರ್ಷನ್ ಭಾರತದಲ್ಲಿ ಹೊಸದಾಗಿ ಬಿಡುಗಡೆಗೊಂಡಿದ್ದು, ಲಿಕ್ವಿಡ್-ಕೂಲ್ಡ್ ಇಂಜಿನ್, ಸ್ಲಿಪ್ಪರ್ ಕ್ಲಚ್, ಎಬಿಎಸ್ ಮತ್ತು ಪೂರ್ಣ ಡಿಜಿಟಲ್ ಕಂಸೋಲ್ ಅನ್ನು ಹೊಂದಿದೆ.

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

155-ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೊತೆ ಫ್ಯೂಲ್ ಇಂಜೆಕ್ಷನ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು 19.7-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹಾಗೆಯೇ ಈ ಬೈಕ್ ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

ಬೆಲೆ (ಎಕ್ಸ್ ಶೋರಂ ದೆಹಲಿ)- 1.25 ಲಕ್ಷ

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಸುಜುಕಿ ಇನ್‌ಟ್ರುಡರ್ 150

ಇನ್‌ಟ್ರುಡರ್ 150 ಆವೃತ್ತಿಯು ಎಂ 1880 ಆರ್ ಬೈಕ್ ಲುಕ್ ಹೊಂದಿದ್ದು, ಕೇವಲ 154.9 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದರು ಪ್ರಿಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿದೆ.

ಕಡಿಮೆ ಬೆಲೆಯ ಡ್ಯುಯಲ್ ರಿರ್ ಡಿಸ್ಕ್ ಬ್ರೇಕ್ ಬೈಕ್‌ಗಳಿವು..

ಇನ್‌ಟ್ರುಡರ್ 150 ಬೈಕ್ ಆವೃತ್ತಿಯು 14-ಬಿಎಚ್‌ಪಿ ಮತ್ತು 14-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, ಮುಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಮತ್ತು 240 ಎಂಎಂ ಡಿಸ್ಕ್ ಬ್ರೇಕ್ ಹಿಂಭಾಗದಲ್ಲಿ ಹೊಂದಿದೆ.

ಬೆಲೆ (ಎಕ್ಸ್ ಶೋರಂ ದೆಹಲಿ) 1.07ಲಕ್ಷ

Source: Cartoq

Most Read Articles

Kannada
Read more on bikes top 10
English summary
Most affordable bikes in India with dual (rear) disc brakes.
Story first published: Friday, February 23, 2018, 17:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X