ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಹೋಂಡಾ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಮೋಟಾರ್‍‍‍ಸೈಕಲ್ಸ್ ಆಂಡ್ ಸ್ಕೂಟರ್ಸ್ ತಮ್ಮ ಜನಪ್ರಿಯ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್‍ ಡ್ರಮ್ ಬ್ರೇಕ್ ವೇರಿಯಂಟ್‍‍ಗಳಿಗೆ ಹೊಸ ಅಪ್‍ಡೇಟ್‍ ಅನ್ನು ನೀಡಿ ಬಿಡುಗಡೆ ಮಾಡಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಹೋಂಡಾ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್

ಹೊಸ ಅಪ್ಡೇಟ್ ಅನ್ನು ಪಡೆದ ಹೋಂಡಾ ಸಿಬಿ ಶೈನ್ ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 59,338 ಮತ್ತು ಹೋಂಡಾ ಸಿಬಿ ಶೈನ್ ಎಸ್‍ಪಿ ಬೈ ರೂ. 64,098 ಬೆಲೆಯನ್ನು ಪಡೆದುಕೊಂಡಿದೆ. ಈ ಎರಡೂ ಹೊಸ ಬೈಕ್‍ಗಳು ಕೇಂದ್ರ ಸರ್ಕಾರದ ಹೊಸ ಸುರಕ್ಷಾ ಸಾಧನದ ಕಾಯ್ದೆಯ ಅನುಸಾರ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಹೋಂಡಾ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್

ಹೊಸ ದ್ವಿಚಕ್ರ ವಾಹನಗಳನ್ನು ಖರೀದಿಸುವ ಮತ್ತು ಅದರಲ್ಲಿ ಪ್ರಯಾಣಿಸುವ ರೈಡರ್‍‍ಗಳ ಸುರಕ್ಷತೆಗೆ ಹೆಚ್ಚು ಒತನ್ನು ನೀಡುವ ಸಲುವಾಗಿ, ಎಪ್ರಿಲ್ 1, 2019ರ ನಂತರ ಬಿಡುಗಡೆಯಾಗಲಿರುವ 125ಸಿಸಿ ಮೇಲ್ಪಟ್ಟ ವಾಹನಗಳು ಆಂಟಿ ಲಾಕಿಂಗ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಮತ್ತು 125ಸಿಸಿ ಗಿಂತಲೂ ಕಡಿಮೆ ಸಾಮರ್ಥ್ಯವನ್ನು ಹೊಂದಿರುವ ವಾಹನಗಳು ಕಾಂಬಿ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್) ಅನ್ನು ಖಡ್ಡಾಯವಾಗಿ ಪಡೆದಿರಬೇಕಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಹೋಂಡಾ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್

ಡಿಸ್ಕ್ ಬ್ರೇಕ್ ಅನ್ನು ಪಡೆದ ಈ ಬೈಕ್‍ಗಳು ಈಗಾಗಲೆ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಂಡಿದ್ದು, ಇದೀಗ ಸಂಸ್ಥೆಯು ಈ ಬೈಕ್‍ಗಳ ಡ್ರಂ ಬ್ರೇಕ್ ವೇರಿಯಂಟ್‍ಗೆ ಸಿಬಿಎಸ್ ಅನ್ನು ಅಳವಡಿಸಲಾಗಿದೆ. ಹೀಗಾಗಿ ಕೇವಲ ಸಿಬಿಎಸ್ ಅನ್ನು ಹೊರತು ಪಡಿಸಿ ಈ ಬೈಕ್‍ಗಳು ತಾಂತ್ರಿಕವಾಗಲಿ ಅಥವಾ ವಿನ್ಯಾಸದಲ್ಲಾಗಲಿ ಬೇರಾವ ಬದಲಾವಣೆಗಳನ್ನು ಪಡೆದಿರುವುದಿಲ್ಲ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಹೋಂಡಾ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್

ಎಂಜಿನ್ ಸಾಮರ್ಥ್ಯ

ಹೋಂಡಾ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್‍ಗಳು 124ಸಿಸಿ, ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 10.1 ಬಿಹೆಚ್‍ಪಿ ಮತ್ತು 10.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಇನ್ನು ಎಂಜಿನ್‍ಗಳನ್ನು 4 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಹೋಂಡಾ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್

ಬೈಕ್‍ಗಳ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಪ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. ಇನ್ನು ಈ ಬೈಕ್‍ಗಳು, ಎರಡೂ ಬದಿಯಲ್ಲಿ 130ಎಂಎಂ ಡರಂ ಬ್ರೇಕ್ ಅಳವಡಿಸಲಗಿರುವ ವೇರಿಯಂಟ್ ಹಾಗು, ಮುಂಭಾಗದಲ್ಲಿ 130ಎಂಎಂ ಡ್ರಂ ಬೆಕ್ ಮತ್ತು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ಪಡೆದಿರುವ ವೇರಿಯಂಟ್‍ಗಳಲ್ಲಿ ಖರೀದಿಗೆ ಲಭ್ಯವಿದೆ. ಇದೀಗ ಈ ಬೈಕ್‍ಗಳಿಗೆ ಸಿಬಿಎಸ್ ಅನ್ನು ಕೂಡಾ ನೀಡಲಾಗಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಹೋಂಡಾ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಾದ ರಾಯಲ್ ಎನ್‍‍ಫೀಲ್ಡ್, ಸುಜುಕಿ ಮೋಟರ್‍‍ಸೈಕಿಲ್ಸ್ ಮತ್ತು ಇನ್ನಿತರೆ ಸಂಸ್ಥೆಗಳು ತಮ್ಮ ವಾಹನಗಳಿಗೆ ಎಬಿಎಸ್ ಮತ್ತು ಕಡಿಮೆ ಸಾಮರ್ಥ್ಯದ ವಾಹನಗಳಿಗೆ ಸುರಕ್ಷತೆಯ ಅನುಸಾರ ಸಿಬಿಎಸ್ ಮತ್ತು ಎಬಿಎಸ್ ಅನ್ನು ಅಳವಡಿಸುವ ಯೋಜನೆಯಲಿದ್ದು, ಇದೀಗ ಹೋಂಡಾ ಮೋಟಾರ್‍‍ಸೈಕಲ್ಸ್ ಆಂಡ್ ಸ್ಕೂಟರ್ಸ್ ಸಹ ತಮ್ಮ ವಾಹನಗಳಿಗೆ ಹೆಚ್ಚು ಸುರಕ್ಷತೆಯನ್ನು ನೀಡಲು ಮುಂದಾಗಿದ್ದಾರೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಹೋಂಡಾ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್

ಇಷ್ಟೆ ಅಲ್ಲದೇ ಹೋಂಡಾ ಸಂಸ್ಥೆಯು ಕಳೆದ 2017ರಲ್ಲೇ ಇಟಾಲಿಯಲ್ಲಿ ನಡೆದ ಇಐಸಿಎಂಎ ಆಟೋ ಮೇಳದಲ್ಲಿ ಸಿಬಿ300ಆರ್ ಬೈಕ್ ಪ್ರದರ್ಶನ ಮಾಡಿದಲ್ಲದೇ ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಮಾಹಿತಿ ನೀಡಿತ್ತು. ಅದರಂತೆ ಇದೀಗ ಹೊಸ ಸಿಬಿ300ಆರ್ ಬೈಕ್ ಅನ್ನು ಮುಂದಿನ ತಿಂಗಳು ಫೆಬ್ರುವರಿ 8ರಂದು ಬಿಡುಗಡೆಗೊಳಿಸುತ್ತಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಹೋಂಡಾ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್

ಹೋಂಡಾ ಸಂಸ್ಥೆಯು ಕಳೆದ 2017ರಲ್ಲೇ ಇಟಾಲಿಯಲ್ಲಿ ನಡೆದ ಇಐಸಿಎಂಎ ಆಟೋ ಮೇಳದಲ್ಲಿ ಸಿಬಿ300ಆರ್ ಬೈಕ್ ಪ್ರದರ್ಶನ ಮಾಡಿದಲ್ಲದೇ ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಮಾಹಿತಿ ನೀಡಿತ್ತು. ಅದರಂತೆ ಇದೀಗ ಹೊಸ ಸಿಬಿ300ಆರ್ ಬೈಕ್ ಅನ್ನು ಮುಂದಿನ ತಿಂಗಳು ಫೆಬ್ರುವರಿ 8ರಂದು ಬಿಡುಗಡೆಗೊಳಿಸುತ್ತಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಹೋಂಡಾ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಭಾರತದಲ್ಲಿರುವ ಕೆಲವೇ ಕೆಲವು ಹೋಂಡಾ ಡೀಲರ್ಸ್ ಬಳಿ ಸಿಬಿ300ಆರ್ ಬೈಕ್ ಖರೀದಿಗಾಗಿ ರೂ. 5,000 ಮುಂಗಡವಾಗಿ ನೀಡಿ ಬುಕ್ಕಿಂಗ್ ಮಾಡಬಹುದಾಗಿದ್ದು, ಕರ್ನಾಟಕದಲ್ಲಿ ಒಂದೇ ಒಂದು ಡೀಲರ್ಸ್‌ನಲ್ಲಿ ಮಾತ್ರವೇ ಸಿಬಿ300ಆರ್ ಖರೀದಿಗಾಗಿ ಬುಕ್ಕಿಂಗ್ ಮಾಡಬಹುದಾಗಿದೆ.

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಯಾದ ಹೋಂಡಾ ಸಿಬಿ ಶೈನ್ ಮತ್ತು ಸಿಬಿ ಶೈನ್ ಎಸ್‍ಪಿ ಬೈಕ್

ಬೆಂಗಳೂರಿನಲ್ಲಿರುವ ಸಿಲಿಕಾನ್ ಮೋಟಾರ್ಸ್ ಡೀಲರ್ಸ್ ಬಳಿ ಮಾತ್ರವೇ ಸಿಬಿ300ಆರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಮಾಡಬಹುದಾಗಿದ್ದು, ಹೊಸ ಬೈಕ್ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೀಮಿತ ವ್ಯಾಪ್ತಿಯಲ್ಲಿ ಬೈಕ್ ಲಭ್ಯವಿರಲಿವೆ.

Most Read Articles

Kannada
English summary
Honda CB Shine & CB Shine SP Launched In India With Combined Braking System. Read In Kannada
Story first published: Thursday, February 7, 2019, 9:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X