ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಶುರು..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ತನ್ನ ಹೊಸ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ತವಕದಲ್ಲಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ತನ್ನ ಹೊಸ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ತವಕದಲ್ಲಿದ್ದು, ಮೊನ್ನೆಯಷ್ಟೆ ಹರಿಯಾಣದ ಗುರುಗ್ರಾಮ್ ನಗರದಲ್ಲಿ ಜಾಹಿರಾತಿಗಾಗಿ ವಿಡಿಯೊ ಶೂಟ್ ಮಾಡುವ ವೇಳೆ ಕಾಣಿಸಿಕೊಂಡಿದೆ.

ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಶುರು..

ಶೀಘ್ರದಲ್ಲೆ ಬಿಡುಗಡೆಗೊಳ್ಳಲಿರುವ ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ ಸ್ಕೂಟರ್ ಖರೀದಿಗಾಗಿ ಸುಜುಕಿ ಸಂಸ್ಥೆಯ ಅಧಿಕೃತ ಡೀಲರ್‍‍ಗಳು ಈಗಾಗಲೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಶುರು ಮಾಡಿದ್ದು, ಗ್ರಾಹಕರು ಹೊಸ ಸ್ಕೂಟರ್ ಖರೀದಿಸಲು ರೂ. 5000 ಪ್ರೀ ಬುಕ್ಕಿಂಗ್ ಮಾಡಬಹುದಾಗಿದೆ.

ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಶುರು..

ಹತ್ತು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಗೆ ಸಿದ್ದವಾಗಿರುವ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್ ಮಾದರಿಯು ಭಾರತದ ಮೊದಲ ಯೂರೋಪಿಯನ್ ಶೈಲಿಯ ಕಟಿಂಗ್ ಎಡ್ಜ್ - ಮಾಕ್ಸಿ ಸ್ಕೂಟರ್ ಎಂಬ ಖ್ಯಾತಿಯನ್ನು ಪಡೆದಿರಲಿದೆ.

ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಶುರು..

ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್, ಟೆಲಿ ಸ್ಕೊಪಿಕ್ ಫೋರ್ಕ್, ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಮಲ್ಟಿ ಫಂಕ್ಷನ್ ಕೀ ಸ್ಲಾಟ್, ದೊಡ್ಡದಾದ ರೈಡರ್ ಸೀಟ್, 12ವಿ ಚಾರ್ಜಿಂಗ್ ಪಾಯಿಂಟ್, ಟ್ಯೂಬ್‍ಲೆಸ್ ಟೈರ್ಸ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್ ಹೊಂದಿರಲಿದೆ.

ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಶುರು..

ಹೊಸ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರ್‌ಗಳು ಇಂಟಿಗ್ರೇಟೆಡ್ ಎಲ್ಇಡಿ ಹೆಡ್‍ಲ್ಯಾಂಪ್ಸ್ ನೊಂದಿಗೆ ಅಗಲವಾದ ಫ್ರಂಟ್ ಏಪ್ರಾನ್ ಅನ್ನು ಹೊಂದಿದ್ದು, ಬಾಡಿ ಮೌನ್ಟೆಡ್ ವಿಂಡ್‍ಸ್ಕ್ರೀನ್ ಹ್ಯಾಂಡಲ್‍‍ಬಾರ್ ವಿನ್ಯಾಸವನ್ನು ಪಡೆದಿದೆ. ಹಾಗೆಯೇ ಇದರ ಸೀಟ್ ವಿನ್ಯಾಸವು ಕೂಡ ವಿಶಾಲವಾಗಿದ್ದು ಪಿಲಿಯಾನ್ ಸೀಟ್ ಅನ್ನು ಪಡೆದಿದೆ.

ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಶುರು..

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳಲಿರುವ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್ 124.3ಸಿಸಿ ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್, 4 ಸ್ಟ್ರೋಕ್ ಎಂಜಿನ್ ಸಹಾಯದಿಂದ 11.8 ಬಿಹೆಚ್‍ಪಿ ಮತ್ತು 10.8 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಸಿವಿಟಿ ಟ್ರ್ಯಾನ್ಸ್ ಮಿಶನ್‍‍ನೊಂದಿಗೆ ಜೋಡಿಸಲಾಗಿದೆ.

ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಶುರು..

ಸುಜುಕಿ ಬರ್ಗ್‍ಮನ್ ಸ್ಟ್ರೀಟ್ 125 ಸ್ಕೂಟರ್ 2,055ಎಮ್ಎಮ್ ಉದ್ದ, 740ಎಮ್ಎಮ್ ಅಗಲ ಮತ್ತು 1,355ಎಮ್ಎಮ್ ಅಗಲ, 130ಎಮ್ಎಮ್ ಗ್ರೌಂಡ್ ಕಿಲಯರೆನ್ಸ್ ಅನ್ನು ಹೊಂದಿದ್ದು, ಜೊತೆಗೆ 10.5 ಲೀಟರ್ ಬೂಟ್ ಸ್ಪೇಸ್ ಅನ್ನು ಪಡೆದುಕೊಂಡಿದೆ.

ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಶುರು..

ಪ್ರತಿ ಲೀಟರ್‍‍ಗೆ 45-50 ಕಿಲೋಮೀಟರ್ ಮೈಲೇಜ್ ನೀಡಲಿರುವ ಈ ಸ್ಕೂಟರ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 65,000 ಸಾವಿರ ಬೆಲೆ ಇರಬಹುದೆಂದು ಅಂದಾಜಿಸಲಾಗಿದ್ದು, ಶೀಘ್ರವೆ ಮಾರುಕಟ್ಟೆಗೆ ಕಾಲಿಡಲಿದೆ.

ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125 ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಶುರು..

ದೇಶದಲ್ಲಿನ ಯುವ ಸಮುದಾಯವನ್ನು ಸೆಳೆಯಲು ಸ್ಪೋರ್ಟಿ ಲುಕ್ ಮತ್ತು ಪ್ರೀಮಿಯಮ್ ವೈಶಿಷ್ಟ್ಯತೆಗಳನ್ನು ಪಡೆದಿರುವ ಈ ಸ್ಕೂಟರ್ ಮಾರುಕಟ್ಟೆಯಲ್ಲಿರುವ ಹೋಂಡಾ ಗ್ರಾಜಿಯಾ, ಟಿವಿಎಸ್ ಎನ್‍‍ಟಾರ್ಕ್ ಮತ್ತು ಎಪ್ರಿಲಿಯಾ ಎಸ್‍ಆರ್ 125 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Friday, June 15, 2018, 9:16 [IST]
English summary
Suzuki Burgman 125 automatic scooter bookings open.
Read more on suzuki scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+