ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

By Praveen Sannamani

2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸ್ಕೂಟರ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಸುಜುಕಿ ಹೊಸ ಪ್ರಿಮಿಯಂ ಸ್ಕೂಟರ್ ಬರ್ಗಮನ್ ಸ್ಟ್ರೀಟ್ ಇಂದು ಬೆಂಗಳೂರಿನಲ್ಲಿ ಬಿಡುಗಡೆಗೊಂಡಿದ್ದು, ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ಹೊಸ ಸ್ಕೂಟರ್ ಬೆಲೆಯನ್ನು ರೂ.70,105ಕ್ಕೆ ನಿಗದಿಗೊಳಿಸಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಬಿಡುಗಡೆ ಮಾಡಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಮಾದರಿಯು ಪ್ರಿಮಿಯಂ ವೈಶಿಷ್ಟ್ಯತೆಗಳೊಂದಿಗೆ ಅತ್ಯುತ್ತಮ ಚಾಲನಾ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಭಾರತದಲ್ಲಿ ಯುರೋಪಿಯನ್ ಸ್ಟೈಲ್‌ನಲ್ಲಿರುವ ಸಿದ್ದಗೊಂಡಿರುವ ಮೊದಲ ಸುಜುಕಿ ಸ್ಕೂಟರ್ ಇದಾಗಿದೆ ಎಂಬುವುದು ಮತ್ತೊಂದು ವಿಶೇಷ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

ಸ್ಕೂಟರ್ ಮುಂಭಾದ ವಿನ್ಯಾಸವು ಭಾರತದಲ್ಲಿ ಮಾರಾಟವಾಗುತ್ತಿರುವ ಸುಜುಕಿ ನಿರ್ಮಾಣದ ಇತರೆ ಸ್ಕೂಟರ್‌ಗಳಿಂತಲೂ ವಿಭಿನ್ನವಾಗಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು, ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಬರ್ಗಮನ್ ಮ್ಯಾಕ್ಸಿ ಸ್ಕೂಟರ್ ಸರಣಿಯೆಂತೆಯೇ ಹಲವು ಡಿಸೈನ್‌ಗಳನ್ನು ಪಡೆದುಕೊಂಡಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

ಸುಜುಕಿ ಸಂಸ್ಥೆಯು ಭಾರತವನ್ನು ಹೊರತುಪಡಿಸಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬರ್ಗಮನ್ ಸ್ಟ್ಪೀಟ್ ಸ್ಕೂಟರ್‌ಗಳಲ್ಲೇ 150ಸಿಸಿ, 200ಸಿಸಿ, 350ಸಿಸಿ, 500ಸಿಸಿ ಸಾಮರ್ಥ್ಯದ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಭಾರತದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 125 ಸಿಸಿ ಸಾಮರ್ಥ್ಯ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಪರಿಚಯಿಸಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

ಪ್ರಿಮಿಯಂ ಸ್ಕೂಟರ್ ಪ್ರಿಯರನ್ನು ಮೊದಲ ನೋಟದಲ್ಲೇ ಸೆಳೆಯುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು ಸ್ಟೈಲಿಷ್ ಎಲ್‌ಇಡಿ ಟೈಲ್ ಲೈಟ್, ಏರಿಳಿತವಾದ ಸೀಟುಗಳ ಡಿಸೈನ್, ಡಿಜಿಟಲ್ ಇನ್‌ಸ್ಟ್ರೂಮೆಂಟಲ್ ಕ್ಲಸ್ಟರ್, ಆರ್ಪಾನ್ ಮೌಟೆಂಡ್ ಎಲ್ಇಡಿ ಹೆಡ್‌ಲ್ಯಾಂಪ್, ಮಲ್ಟಿ ಫಂಕ್ಷನ್ ಕೀ ಸ್ಲಾಟ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಇದರಲ್ಲಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

ಜೊತೆಗೆ 21.5-ಲೀಟರ್‌ನಷ್ಟು ಸೀಟ್ ಅಂಡರ್ ಸ್ಟೋರೇಜ್ ಸ್ಪೆಸ್ ಹೊಂದಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು, 108 ಕೆ.ಜಿ ತೂಕದೊಂದಿಗೆ 5.6-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಸೌಲಭ್ಯವನ್ನು ಪಡೆದುಕೊಂಡಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

ಎಂಜಿನ್ ಸಾಮರ್ಥ್ಯ

124.3ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಮಾದರಿಗಳು ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ 8.5-ಬಿಎಚ್‌ಪಿ ಮತ್ತು 10.2-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು. ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸುಜುಕಿ ನಿರ್ಮಾಣದ ಆಕ್ಸೆಸ್ 125 ಸ್ಕೂಟರ್‌ನಲ್ಲಿ ಬಳಕೆ ಮಾಡಿರುವ ಎಂಜಿನ್ ಮಾದರಿಯನ್ನೇ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ನಲ್ಲಿ ಬಳಕೆ ಮಾಡಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

ಸುರಕ್ಷಾ ಸೌಲಭ್ಯಗಳು

ಸಿಬಿಎಸ್(ಕೊಂಬಿ ಬ್ರೇಕ್ ಸಿಸ್ಟಂ) ಸೌಲಭ್ಯ ಪಡೆದಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಮುಂಭಾಗದ ಚಕ್ರದಲ್ಲಿ ನಿಸ್ಸಿನ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿದ್ದರೇ ಹಿಂಭಾಗದ ಚಕ್ರಗಳಲ್ಲಿ ಡ್ರಮ್ ಬ್ರೇಕ್ ಹೊಂದಿರಲಿವೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

ಇನ್ನು ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳಲ್ಲಿ 5-ಸ್ಪೋಕ್ 12 ಇಂಚು ಸುತ್ತಳತೆಯ ಮುಂಭಾಗದ ಚಕ್ರಗಳನ್ನು ಬಳಕೆ ಮಾಡಿದ್ದು, ಹಿಂಭಾಗದಲ್ಲಿ 10 ಇಂಚಿನ ಸುತ್ತಳತೆಯ ಚಕ್ರಗಳನ್ನು ಜೋಡಿಸಿರುವುದು ಸ್ಕೂಟರ್ ವಿನ್ಯಾಸಕ್ಕೆ ಮತ್ತಷ್ಟು ಮೆರಗು ತಂದಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

ಲಭ್ಯವಿರುವ ಬಣ್ಣಗಳು ಪ್ರಮುಖ

3 ಬಣ್ಣಗಳಲ್ಲಿ ಲಭ್ಯವಿರುವ ಸುಜುಕಿ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳನ್ನ ಮೆಟಾಲಿಕ್ ಮ್ಯಾಟ್ ಫಿಬ್ರೊಯಿನ್, ಗ್ಲ್ಯಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಪರ್ಲ್ ಮಿರಾಜ್ ವೈಟ್ ಬಣ್ಣಗಳಲ್ಲಿ ಖರೀದಿಸಬಹುದು.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

ಪ್ರತಿಸ್ಪರ್ಧಿಗಳು

ಪ್ರಿಮಿಯಂ ಗುಣಲಕ್ಷಣಗಳನ್ನು ಹೊಂದಿರುವ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳು ಹಲವು ವಿಶೇಷಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆದಿದ್ದು, ಹೋಂಡಾ ಗ್ರಾಜಿಯಾ, ಟಿವಿಎಸ್ ಎನ್‌ಟಾರ್ಕ್ 125 ಮತ್ತು ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್‌ಗಳಿಗೆ ತೀವ್ರ ಪೈಟೋಟಿ ನೀಡುವ ತವಕದಲ್ಲಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

ಇಲ್ಲಿ ಗಮನಸಬೇಕಾದ ಮತ್ತೊಂದು ಅಂಶ ಅಂದ್ರೆ ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯ ಭಾರತದಲ್ಲಿ 125ಸಿಸಿ ಸಾಮರ್ಥ್ಯದ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವುದಲ್ಲದೇ ಭಾರತದಿಂದಲೇ ವಿಶ್ವದ ಪ್ರಮುಖ 30 ರಾಷ್ಟ್ರಗಳಿಗೆ ಇಲ್ಲಿಂದಲೇ ಹೊಸ ಸ್ಕೂಟರ್‌ಗಳನ್ನು ರಫ್ತು ಮಾಡುವ ಬೃಹತ್ ಯೋಜನೆ ಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾದ ಪ್ರಿಮಿಯಂ ಸ್ಕೂಟರ್ ಸುಜುಕಿ ಬರ್ಗಮನ್ ಸ್ಟ್ರೀಟ್

ಒಟ್ಟಿನಲ್ಲಿ ಪ್ರಿಮಿಯಂ ಸ್ಕೂಟರ್ ಪ್ರಿಯರ ಆಕರ್ಷಣೆಗೆ ಕಾರಣವಾಗಿರುವ ಬರ್ಗಮನ್ ಸ್ಟೀಟ್ ಸ್ಕೂಟರ್‌ಗಳು ಯುರೋಪಿಯನ್ ಡಿಸೈನ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸಲಿದ್ದು, ಮುಂಬುವರ ದಿನಗಳಲ್ಲಿ ಯಾವ ಮಟ್ಟದ ಬೇಡಿಕೆ ಪಡೆದುಕೊಳ್ಳಲಿದೆ ಎಂಬುವುದನ್ನ ಕಾಯ್ದು ನೋಡಬೇಕಿದೆ.

More from DriveSpark

Article Published On: Saturday, July 21, 2018, 19:36 [IST]
English summary
Suzuki Burgman Street Launched In Bangalore; Priced At Rs 70,105.
Read more on suzuki motorcycle scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+