ಆಟೋ ಎಕ್ಸ್ ಪೋ 2018: ಸುಜುಕಿ ಜಿಎಸ್ಎಕ್ಸ್-ಎಸ್750 ಸೂಪರ್ ಬೈಕ್ ಅನಾವರಣ

Written By: Rahul

ಜಪಾನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಸುಜುಕಿಯು ತನ್ನ ವಿನೂತನ ಜಿಎಸ್ಎಕ್ಸ್-ಎಸ್750 ಬೈಕನ್ನು ದೆಹಲಿಯಲ್ಲಿ ನಡೆಯುತ್ತಿರುವ 2018ರ ಆಟೋ ಎಕ್ಸ್ ಪೋನಲ್ಲಿ ಅನಾವರಣಗೊಳಿಸಿದೆ.

ಆಟೋ ಎಕ್ಸ್ ಪೋ 2018: ಸುಜುಕಿ ಜಿಎಸ್ಎಕ್ಸ್-ಎಸ್750 ಸೂಪರ್ ಬೈಕ್ ಅನಾವರಣ

ಸುಜುಕಿ ಪರಿಚಯಿಸಿರುವ ಜಿಎಸ್ಎಕ್ಸ್-ಎಸ್750 ಬೈಕ್‌ಗಳು ಈ ಹಿಂದಿನ ಜಿಎಸ್ಎಕ್ಸ್-ಎಸ್1000 ಬೈಕಿನ ವಿನ್ಯಾಸಗಳ ಹೋಲಿಕೆ ಇದ್ದು, ಸಿಂಗಲ್ ಹೆಡ್ ಲ್ಯಾಂಪ್ ನೊಂದಿಗೆ ಶಾರ್ಪ್ ಫ್ರಂಟ್ ಎಂಡ್, ಶಕ್ತಿಶಾಲಿ ಫ್ಯುಯಲ್ ಟ್ಯಾಂಕ್ ಮತ್ತು ವಿಭಜಿತ ಆಸನ (split seat)ಸೆಟಪ್ ಬೈಕಿಗೆ ಸ್ಪೋರ್ಟಿ ನೋಟವನ್ನು ನೀಡಿದೆ.

ಆಟೋ ಎಕ್ಸ್ ಪೋ 2018: ಸುಜುಕಿ ಜಿಎಸ್ಎಕ್ಸ್-ಎಸ್750 ಸೂಪರ್ ಬೈಕ್ ಅನಾವರಣ

ಎಂಜಿನ್ ಸಾಮರ್ಥ್ಯ

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್‌ಗಳು 749 ಸಿಸಿ ಇನ್ ಲೈನ್, ನಾಲ್ಕು ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 110-ಬಿಹೆಚ್‌ಪಿ ಮತ್ತು 81-ಎನ್ಎಂ ಟಾರ್ಕನ್ನು ಉತ್ಪಾದಿಸಬಲ್ಲವು. ಜೊತೆಗೆ 6-ಸ್ಪೀಡ್ ಗೇರ್ ಬೈಕಿಗೆ ಜೋಡಣೆ ಹೊಂದಿದೆ.

ಆಟೋ ಎಕ್ಸ್ ಪೋ 2018: ಸುಜುಕಿ ಜಿಎಸ್ಎಕ್ಸ್-ಎಸ್750 ಸೂಪರ್ ಬೈಕ್ ಅನಾವರಣ

ಜಿಎಸ್ಎಕ್ಸ್-ಎಸ್750 ಬೈಕ್ ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೋಶಾಕ್ ಸಸ್ಪೆಷನ್ ಅನ್ನು ಹೊಂದಿದ್ದು, ಎರಡೂ ಬದಿಯಲ್ಲೂ ಡಿಸ್ಕ್ ಬ್ರೇಕ್ ಗಳು ಹಾಗು ಎಬಿಎಸ್ ಟೆಕ್ನಾಲಜಿಯನ್ನು ಹೊಂದಿದೆ.

ಆಟೋ ಎಕ್ಸ್ ಪೋ 2018: ಸುಜುಕಿ ಜಿಎಸ್ಎಕ್ಸ್-ಎಸ್750 ಸೂಪರ್ ಬೈಕ್ ಅನಾವರಣ

ಇನ್ನು ಈ ಬೈಕ್ ಸುಜುಕಿಯ ವಿಶೇಷವಾದ ಅಡ್ವಾನ್ಸ್ಡ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದ್ದರು ಈ ಬೈಕಿನಲ್ಲಿ ಯಾವುದೇ ಎಲೆಕ್ಟ್ರಿಕ್ ಸಹಾಯಕಗಳನ್ನು ಹೊಂದಿಲ್ಲ ಎಂಬುವುದು ಖಚಿತವಾಗಿದೆ.

ಆಟೋ ಎಕ್ಸ್ ಪೋ 2018: ಸುಜುಕಿ ಜಿಎಸ್ಎಕ್ಸ್-ಎಸ್750 ಸೂಪರ್ ಬೈಕ್ ಅನಾವರಣ

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್‌ಗಳನ್ನು 2018ರ ದ್ವಿತೀಯ ತ್ರೈಮಾಸಿಕ ಅವಧಿಗೆ ಬಿಡುಗಡೆ ಮಾಡುವ ನೀರಿಕ್ಷೆಗಳಿದ್ದು, ಕವಾಸಕಿ ಝೆಡ್900, ಯಮಹಾ ಎಂಟಿ-09 ಮತ್ತು ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಬೈಕುಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ಆಟೋ ಎಕ್ಸ್ ಪೋ 2018: ಸುಜುಕಿ ಜಿಎಸ್ಎಕ್ಸ್-ಎಸ್750 ಸೂಪರ್ ಬೈಕ್ ಅನಾವರಣ

ಹಾಗೆಯೇ ಈ ಬೈಕ್ ಭಾರತದಲ್ಲಿಯೇ ಸ್ಥಳಿಯವಾಗಿ ಜೋಡಿಸಲ್ಪಡುವ ಎರಡನೇ ಬೈಕ್ ಮಾದರಿಯಾಗಿದ್ದು, ಮೊದಲನೇ ಸ್ಥಾನದಲ್ಲಿ ಜನಪ್ರಿಯ ಹಯಾಬುಸಾ ಬೈಕ್ ಕೂಡಾ ಭಾರತದಲ್ಲೇ ಪೂರ್ಣಪ್ರಮಾಣದಲ್ಲಿ ಸಿದ್ದಗೊಂಡಿದೆ.

ಆಟೋ ಎಕ್ಸ್ ಪೋ 2018: ಸುಜುಕಿ ಜಿಎಸ್ಎಕ್ಸ್-ಎಸ್750 ಸೂಪರ್ ಬೈಕ್ ಅನಾವರಣ

ಜಿಎಸ್ಎಕ್ಸ್-ಎಸ್750 ಬೈಕ್‌ಗಳು ಸುಜುಕಿ ಸಂಸ್ಥೆಯ ಮಿಡ್ ವೈಟ್ ನೇಕೆಡ್ ಮೋಟಾರ್ ಸೈಕಲ್ ಆಗಿದ್ದು, ಭಾರತದಲ್ಲೇ ನಿರ್ಮಾಣವಾಗುತ್ತಿರುವ ಹಿನ್ನೆಲೆ ಬೈಕಿನ ಬೆಲೆಗಳು ಸುಮಾರು 8 ಲಕ್ಷದಿಂದ 9 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದೆ.

English summary
Auto Expo 2018: Suzuki GSX-S750 Unveiled - Expected Launch, Specifications, Features & Images.
Story first published: Friday, February 9, 2018, 18:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark