ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ಹಯಾಬುಸ ಹೆಸರು ಕೇಳಿದ್ರೆ ಸಾಕು ಸೂಪರ್ ಬೈಕ್ ಪ್ರಿಯರ ಕಿವಿ ನೆಟ್ಟಗಾಗುತ್ತವೆ. ಯಾಕೆಂದ್ರೆ ಹಯಾಬುಸ ಪರ್ಫಾಮೆನ್ಸ್‌ಗೆ ಮನಸೋಲದ ಬೈಕ್ ಸವಾರರೇ ಇಲ್ಲ. ಹೀಗಿರುವಾಗ ಕಳೆದ 20 ವರ್ಷಗಳಿಂದ ಜಾಗತಿಕವಾಗಿ ತನ್ನದೇ ಹವಾ ಸೃಷ್ಠಿಸಿರುವ ಹಯಾಬುಸ ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಿಂದ ನಿರ್ಗಮಿಸುವ ದಿನಗಳು ಹತ್ತಿರವಾಗುತ್ತಿವೆ.

ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸಾ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ಹೌದು, ಜಪಾನ್ ಮೂಲದ ದೈತ್ಯ ಮೋಟಾರ್ ಸೈಕಲ್ ಉತ್ಪಾದನಾ ಸಂಸ್ಥೆಯಾಗಿರುವ ಸುಜುಕಿ ಮುಂದಿನ ಕೆಲವೇ ದಿನಗಳಲ್ಲಿ ತನ್ನ ಯಶಸ್ವಿ ಬೈಕ್ ಮಾದರಿಯಾದ ಹಯಾಬುಸ ಮಾರಾಟಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ್ದು, ಆಟೋ ಉದ್ಯಮದಲ್ಲಿ ಆಗುತ್ತಿರುವ ಕೆಲವು ಬದಲಾವಣೆಗಳಿಂದಾಗಿ ಹಯಾಬುಸ ಉತ್ಪಾದನೆ ಮತ್ತು ಮಾರಾಟಕ್ಕೆ ಕುತ್ತುಬಂದಿದೆ.

ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸಾ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ಭಾರತದಲ್ಲಿ ಸದ್ಯ ಜಾರಿಯಲ್ಲಿರುವ ಬಿಎಸ್-4 ಮಾದರಿಯಂತೆ ಯುರೋಪ ರಾಷ್ಟ್ರಗಳಲ್ಲಿ ಯುರೋ-6 ಜಾರಿಯಲ್ಲಿದ್ದು, ಹೊಸ ವಾಹನಗಳ ಸುರಕ್ಷತೆ ಮತ್ತು ಪರಿಣಾಮಕಾರಿಯಾಗಿ ಮಾಲಿನ್ಯ ತಡೆಯುವ ಉದ್ದೇಶದಿಂದ ಹತ್ತಾರು ಹೊಸ ಬಗೆಯ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸಾ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ಯುರೋ-6 ಕಾಯ್ದೆ ಅಡಿಯಲ್ಲಿ ವಾಹನಗಳಲ್ಲಿ ಗರಿಷ್ಠ ಮಟ್ಟದ ಸುರಕ್ಷತೆಗಳು ಇರಬೇಕಲ್ಲದೇ ನಿಗದಿ ಮಟ್ಟಕ್ಕಿಂತ ಹೆಚ್ಚು ಮಾಲಿನ್ಯ ಹೊರಸೂಸುವ ವಾಹನಗಳಿಗೆ ಬ್ರೇಕ್ ಹಾಕಲಾಗುತ್ತಿದೆ. ಇದೇ ಕಾರಣಕ್ಕೆ ಯುರೋ-6 ಪರೀಕ್ಷೆಯಲ್ಲಿ ಮುಗ್ಗರಿಸಿರುವ ಹಯಾಬುಸ ಬೈಕಿಗೆ ಸಂಕಷ್ಟ ಎದುರಾಗಿದೆ.

ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸಾ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ಹಯಾಬುಸ ಬೈಕಿನಲ್ಲಿ ಎಂಜಿನ್ ಸಾಮರ್ಥ್ಯಕ್ಕೆ ತಕ್ಕಂತೆ ಸುರಕ್ಷತೆಗಳಿಲ್ಲದಿರುವ ಮತ್ತು ಅತಿಯಾದ ಮಾಲಿನ್ಯ ಹೊರಸೂಸುವಿಕೆಯ ಸಮಸ್ಯೆ ಎದುರಿಸುತ್ತಿದ್ದು, ಇದು ಯುರೋ-6 ಕಾಯ್ದೆಗೆ ಸಂಪೂರ್ಣ ವಿರುದ್ಧವಾಗಿದೆ ಎನ್ನಲಾಗಿದೆ.

ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸಾ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ಹೀಗಾಗಿ ಮುಂದಿನ ತಿಂಗಳು ಜನವರಿ ಅಂತ್ಯದೊಳಗೆ ಹೊಸದಾಗಿ ಉತ್ಪಾದನೆಗೊಳ್ಳುವ ಹಯಾಬುಸ ಬೈಕ್‌ಗಳಲ್ಲಿ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಒದಗಿಸಬೇಕಲ್ಲದೇ ಮಾಲಿನ್ಯವನ್ನು ತಡೆಯುವ ಉದ್ದೇಶ ಸುಧಾರಿತ ಮಾದರಿಯ ಎಂಜಿನ್ ಬಳಕೆ ಮಾಡಬೇಕಾದ ಅನಿವಾರ್ಯತೆಗಳಿವೆ.

ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸಾ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ಆದ್ರೆ ಹೊಸ ಎಂಜಿನ್ ಮತ್ತು ಗರಿಷ್ಠ ಮಟ್ಟದ ಸುರಕ್ಷೆತೆ ಒದಗಿಸಲು ಮುಂದಾದರೇ ಬೈಕಿನ ಬೆಲೆಯು ಸದ್ಯದ ಬೆಲೆಗಳಿಂತ ಶೇ. 40 ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಇದರಿಂದ ಹಯಾಬುಸಾ ಬೈಕ್‌ಗಳನ್ನು ಉನ್ನತಿಕರಿಸುವ ಬದಲು ಬೈಕ್ ಮಾರಾಟಕ್ಕೆ ಬ್ರೇಕ್ ಹಾಕುವುದೇ ಲೇಸು ಎನ್ನುವುದು ಸುಜುಕಿ ಲೆಕ್ಕಾಚಾರ.

ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸಾ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ಯಾಕೆಂದ್ರೆ ಹಯಾಬುಸ ಬೈಕ್‌ಗಳನ್ನು ಉನ್ನತಿಕರಿಸಿ ಮಾರಾಟ ಮಾಡಿದರೂ ಸಹ ನಷ್ಟ ಸಾಧ್ಯತೆಗಳಿದ್ದು, ಅದರ ಬದಲಾಗಿ ಹೊಸ ಮಾದರಿಯ ಬೈಕ್ ಮಾದರಿಗಳನ್ನು ಹೊರತರುವ ಕುರಿತಾಗಿ ಸುಜುಕಿ ಮೋಟಾರ್‌ಸೈಕಲ್ ಸಂಸ್ಛೆಯು ಸುಳಿವು ನೀಡಿದೆ.

ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸಾ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ಭಾರತದಲ್ಲಿ ಹಯಾಬುಸ ಬಂದ್ ಆಗುತ್ತಾ?

ಈ ಪ್ರಶ್ನೆ ಬಹುತೇಕ ವಾಹನ ಪ್ರೇಮಿಗಳಿಗೆ ಕಾಡಿಯೇ ಕಾಡುತ್ತೆ. ಸದ್ಯಕ್ಕೆ ಯುರೋಪ್ ಮಾರುಕಟ್ಟೆಯಲ್ಲಿ ಯುರೋ-6 ನಿಯಮದಂತೆ ಹಯಾಬುಸ ಮಾರಾಟಕ್ಕೆ ಬ್ರೇಕ್ ಬೀಳುತ್ತಿದ್ದು, ಭಾರತದಲ್ಲಿ ಹಯಾಬುಸ ಬೈಕ್‌ಗಳಿಗೆ ಮುಂದಿನ ಒಂದು ವರ್ಷದ ತನಕ ಕೊಂಚ ನಿರಾಳ ಎನ್ನಬಹುದು.

MOST READ: ಬಿಡುಗಡೆಯಾಗಲಿರುವ ಹೊಸ ಆರ್‌ಎಕ್ಸ್100 ಬೈಕ್ ಹೇಗಿರಲಿವೆ ಗೊತ್ತಾ?

ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸಾ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ಇದಕ್ಕೆ ಕಾರಣ, ಭಾರತದಲ್ಲಿ ಜಾರಿಯಲ್ಲಿರುವ ಬಿಎಸ್-4 ಕಾಯ್ದೆಯು 2020ರ ಮಾರ್ಚ್ 31ಕ್ಕೆ ಅಂತ್ಯಗೊಳ್ಳಲಿದ್ದು, ಬಿಎಸ್-6 ಕಾಯ್ದೆಯು ಕಡ್ಡಾಯವಾಗಿ ಅನುಷ್ಠಾನಗೊಳ್ಳಲಿದೆ. ಆಗ ಹಯಾಬುಸ ಬೈಕಿಗೆ ದೇಶಿಯ ಮಾರಕಟ್ಟೆಯಲ್ಲೂ ತನ್ನ ನೆಲೆ ಕಳೆದುಕೊಳ್ಳಲಿದೆ.

ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸಾ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ಬಿಎಸ್-4 ಗಿಂತಲೂ ಬಿಎಸ್-6 ಹೆಚ್ಚಿನ ಮಟ್ಟದ ತಾಂತ್ರಿಕ ಅಂಶವಾಗಿದ್ದು, ಹೊಸ ವಾಹನಗಳಲ್ಲಿ ಮಾಲಿನ್ಯವನ್ನು ತಡೆಯಲು ಇದು ಸಾಕಷ್ಟು ಸಹಕಾರಿಯಾಗುತ್ತೆ. ಇದರಿಂದಾಗಿ ಭಾರತದಲ್ಲಿ 20202ರ ಹೊತ್ತಿಗೆ ಹೊಸ ನಿಯಮವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದ 15ಕ್ಕೂ ವಾಹನಗಳ ಮಾರಾಟಕ್ಕೆ ಬ್ರೇಕ್ ಬೀಳುವುದು ಖಚಿತವಾಗಿದೆ.

MOST READ: ಸುಪ್ರೀಂಕೋರ್ಟ್ ಹೊಸ ಆದೇಶದಿಂದಾಗಿ ಗಗನಮುಖಿಯಾಗಲಿವೆ ವಾಹನಗಳ ಬೆಲೆ..!

ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸಾ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ಇನ್ನು ಹಯಾಬುಸ ಬೈಕ್‌ಗಳು 1998ರಲ್ಲಿ ಮೊದಲ ಬಾರಿಗೆ ಬಿಡುಗಡೆಯ ನಂತರ ಕಾಲಕ್ಕೆ ತಕ್ಕಂತೆ ಬದಲಾವಣೆಗೊಂಡಿದ್ದರೂ ಸಹ ಈ ಯುರೋ-6 ಕಾಯ್ದೆ ಅಳವಡಿಕೆ ಅಸಾಧ್ಯ ಎನ್ನುವ ನಿರ್ಧಾರಕ್ಕೆ ಬರಲಾಗಿದ್ದು, 1340 ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ 197-ಬಿಎಚ್‌ಪಿ ಮತ್ತು 155-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಈಗಲೂ ಬಹುಬೇಡಿಕೆಯ ಸೂಪರ್ ಬೈಕ್ ಆವೃತ್ತಿಯಾಗಿ ಮಾರಾಟಗೊಳ್ಳುತ್ತಿದೆ.

ಸೂಪರ್ ಬೈಕ್ ಪ್ರಿಯರಿಗೆ ಶಾಕಿಂಗ್ ಸುದ್ದಿ- ಹಯಾಬುಸಾ ಮಾರಾಟಕ್ಕೆ ಬ್ರೇಕ್ ಹಾಕಿದ ಸುಜುಕಿ?

ದೆಹಲಿ ಎಕ್ಸ್‌ಶೋರೂಂ ಪ್ರಕಾರ, 13.50 ಲಕ್ಷ ಬೆಲೆ ಹೊಂದಿರುವ ಹಯಾಬುಸ ಬೈಕ್ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿದ್ದು, ಪ್ರತಿ ಗಂಟೆಗೆ 320 ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಹಯಾಬುಸಾ ಸದ್ದು ಇನ್ಮುಂದೆ ಮಾರುಕಟ್ಟೆಯಿಂದ ಮರೆಯಾಗಲಿದೆ.

More from DriveSpark

Article Published On: Saturday, December 8, 2018, 11:19 [IST]
English summary
Suzuki Hayabusa To Be Discontinued? — End Of A 20-Year-Old Litre-Class Legacy. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+