ಹಯಾಬುಸಾ ಮತ್ತು ಜಿಎಸ್ಎಕ್ಸ್ ಆರ್1000ಆರ್ ಬೈಕ್‌ಗಳ ಬೆಲೆ ಕಡಿತ...
ಸೂಪರ್ ಸ್ಪೋರ್ಟ್ಸ್ ಬೈಕುಗಳಿಂದಲೇ ಹೆಚ್ಚು ಜನಪ್ರಿಯತೆಯನ್ನು ಕಂಡ ಸುಜುಕಿ ವಾಹನ ತಯಾರಕ ಸಂಸ್ಥೆಯು ಭಾರತದಲ್ಲಿ ಹಯಾಬುಜಾ ಮತ್ತು ಜಿಎಸ್ಎಕ್ಸ್ ಆರ್1000ಆರ್ ಬೈಕ್‌ಗಳ ಮೇಲೆ ಶೇಕಡ 25 ರಷ್ಟು ಬೆಲೆ ಕಡಿತ ಮಾಡಿದೆ.
ಸೂಪರ್ ಸ್ಪೋರ್ಟ್ಸ್ ಬೈಕುಗಳಿಂದಲೇ ಹೆಚ್ಚು ಜನಪ್ರಿಯತೆಯನ್ನು ಕಂಡ ಸುಜುಕಿ ವಾಹನ ತಯಾರಕ ಸಂಸ್ಥೆಯು ಭಾರತದಲ್ಲಿ ಹಯಾಬುಜಾ ಮತ್ತು ಜಿಎಸ್ಎಕ್ಸ್ ಆರ್1000ಆರ್ ಬೈಕ್‌ಗಳ ಮೇಲೆ ಶೇಕಡ 25 ರಷ್ಟು ಬೆಲೆ ಕಡಿತ ಮಾಡಿದ್ದು, ಆಮದು ಸುಂಕಗಳು ತಗ್ಗಿರುವ ಹಿನ್ನೆಲೆ ಬೆಲೆ ಕಡಿತಗೊಳಿಸಲಾಗಿದೆ.

ಹೀಗಾಗಿ ಸುಜುಕಿ ಹಯಾಬುಸಾ ಸದ್ಯ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 28 ಸಾವಿರ ಬೆಲೆ ಕಡಿತವನ್ನು ಕಂಡಿದ್ದು, ಇದರಿಂದ ಪ್ರಸ್ತುತ ಬೆಲೆಗಳು ರೂ.13.87 ಲಕ್ಷದಿಂದ ರೂ 13.59 ಲಕ್ಷಕ್ಕೆ ಇಳಿಕೆಯಾಗಿವೆ. ಹಾಗೆಯೇ ಜಿಎಸ್ಎಕ್ಸ್ ಬೈಕ್ ರೂ. 22 ಲಕ್ಷದಿಂದ ರೂ. 19.8 ಲಕ್ಷಕ್ಕೆ ಸಣ್ಣ ಪ್ರಮಾಣದ ಬೆಲೆ ಇಳಿಕೆ ಮಾಡಲಾಗಿದೆ.

ಜೊತೆಗೆ ಸುಜುಕಿ ಸಂಸ್ಥೆಯು ಜಿಎಸ್ಎಕ್ಸ್-ಎಸ್1000ಎಫ್, ಜಿಎಸ್ಎಕ್ಸ್-ಎಸ್1000, ಜಿಎಸ್ಎಕ್ಸ್ ಆರ್1000 ಮತ್ತು ವಿ-ಸ್ಟೋರ್ಮ್ 1000 ಬೈಕುಗಳನ್ನು ಕೂಡಾ ಆಮದು ಮಾದರಿಯಾಗಿದ್ದು, ಮುಂಬರುವ ದಿನಗಳಲ್ಲಿ ಈ ಬೈಕುಗಳ ಮೇಲೂ ಕೂಡಾ ಬೆಲೆ ಕಡಿತ ಮಾಡುವ ಸಾಧ್ಯತೆಗಳಿವೆ.

ಇನ್ನು ಹಯಾಬುಸಾದ ಬೆಲೆ ಕಡಿತದ ಹಿಂದಿನ ಕಾರಣವೆಂದರೆ, ಪೂರ್ವ ಸಂಯೋಜಿತ ಎಂಜಿನ್ ಮತ್ತು ಗೇರ್‍ಬಾಕ್ಸ್ ನೊಂದಿಗೆ ಮೋಟಾರ್ ರ್ಸೈಕಲ್ ಕಿಟ್‍ಗಳಲ್ಲಿ ಕಸ್ಟಂ ಡ್ಯುಟಿಗಳ ಮೂಲಕ ಬೆಲೆ ಕಡೆಮೆಗೊಂಡಿದೆ. ಇದರಿಂದಾಗಿ ಕಿಟ್‍ಗಳಲ್ಲಿನ ಕಸ್ಟಂ ಡ್ಯುಟಿಗಳು ಶೇ.30 ರಿಂದ ಶೇ.25ಕ್ಕೆ ಕಡಿಮೆ ಮಾಡಲಾಗಿದೆ. ಆದರೂ ಸರ್ಕಾರದ ಸಿಕೆಡಿ ಕಸ್ಟಂ ಡ್ಯುಟಿಯನ್ನು ಶೇ.10 ರಿಂದ ಶೇ.15ಕ್ಕೆ ಹೆಚ್ಚಿಸಿದೆ.

ಸುಜುಕಿ ಸಂಸ್ಥೆಯು ಸ್ವಲ್ಪ ದಿನಗಳ ಹಿಂದಷ್ಟೆ 2018ರ ಹಯಾಬುಸಾ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಪರ್ಲ್ ಮಿರಾ ರೆಡ್, ಪರ್ಲ್ ಗ್ಲಾಶಿಯರ್ ವೈಟ್ ಮತ್ತು ಗ್ಲಾಸ್ ಸ್ಪಾರ್ಕಲ್ ಬ್ಲಾಕ್ ಬಣ್ಣಗಳಲ್ಲಿ ದೊರೆಯುತ್ತಿದೆ.

ಎಂಜಿನ್ ವೈಶಿಷ್ಟ್ಯತೆ
1,340ಸಿಸಿ ಇನ್‍ಲೈನ್ ನಾಲ್ಕು ಸಿಲಿಂಡರ್, ಫ್ಯುಯಲ್ ಇಂಜೆಕ್ಟೆಡ್, ಲಿಕ್ವಿಡ್ ಕೂಲ್ಡ್ ಡಿಒಹೆಚ್‍ಸಿ ಎಂಜಿನ್ ಹೊಂದಿರುವ ಹಯಾಬುಸಾ, 197ಬಿಹೆಚ್‍ಪಿ ಮತ್ತು 155ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಸುಜುಕಿ ಜಿಎಸ್ಎಕ್ಸ್ ಆರ್1000ಆರ್ ಬೈಕ್ 2017 ರ ಮೇ ತಿಂಗಳಲ್ಲಿ ಬಿಡುಗಡೆಗೊಂಡಿದ್ದು, 1,000ಸಿಸಿ ಇನ್‍ಲೈನ್, ನಾಲ್ಕು ಸಿಲೆಂಡರ್ ಎಂಜಿನ್ 202ಬಿಹೆಚ್‍ಪಿ ಮತ್ತು 117.6ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಇದಲ್ಲದೇ ಜಿಎಸ್ಎಕ್ಸ್ ಆರ್1000ಆರ್ ಬೈಕ್ ಕೂಡಾ ಇನ್ ಆಂಗಲ್ ಸೆನ್ಸಿಟಿವ್ ಎಬಿಎಸ್, ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್, ಲಾಂಚ್ ಕಂಟ್ರೋಲ್, ಲೈಟ್‍ವೈಟ್ ಅಪ್ಪರ್ ಯೋಕ್ ಮತ್ತು ಲೈಟ್‍ವೈಟ್ ಬ್ಯಾಟರಿಯನ್ನು ಹೊಂದಿದೆ.


Click it and Unblock the Notifications








