ಭಾರತೀಯ ಮಾರುಕಟ್ಟೆಗೆ ನಾಲ್ಕು ಹೊಸ ಡರ್ಟ್ ಬೈಕ್‍‍ಗಳನ್ನು ಪರಿಚಯಿಸಲಿರುವ ಸುಜುಕಿ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟರ್‍‍ಸೈಕಲ್ಸ್ ದೇಶಿಯ ಮಾರುಕಟ್ಟೆಗೆ ನಾಲ್ಕು ಹೊಸ ಡರ್ಟ್ ಬೈಕ್‍‍ಗಳನ್ನು ಬಿಡುಗಡೆಗೊಳಿಸುವುದರ ಬಗ್ಗೆ ಸುಳಿವು ನೀಡಿದ್ದು, ಮಾಹಿತಗಳ ಪ್ರಕಾರ ಈ ಬೈಕ್‍‍ಗಳು ಭಾರತಕ್ಕೆ ಕಂಪ್ಲೀಟ್ಲಿ ಬ್ಯುಲ್ತ್ ಯ

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟರ್‍‍ಸೈಕಲ್ಸ್ ದೇಶಿಯ ಮಾರುಕಟ್ಟೆಗೆ ನಾಲ್ಕು ಹೊಸ ಡರ್ಟ್ ಬೈಕ್‍‍ಗಳನ್ನು ಬಿಡುಗಡೆಗೊಳಿಸುವುದರ ಬಗ್ಗೆ ಸುಳಿವು ನೀಡಿದ್ದು, ಮಾಹಿತಿಗಳ ಪ್ರಕಾರ ಈ ಬೈಕ್‍‍ಗಳು ಭಾರತಕ್ಕೆ ಕಂಪ್ಲೀಟ್ಲಿ ಬ್ಯುಲ್ಟ್ ಯೂನಿಟ್‍ ಮಾರ್ಗದಲ್ಲಿ ಎಂಟ್ರಿ ಕೊಡಲಿದೆ ಎನ್ನಲಾಗಿದೆ.

ಭಾರತೀಯ ಮಾರುಕಟ್ಟೆಗೆ ನಾಲ್ಕು ಹೊಸ ಡರ್ಟ್ ಬೈಕ್‍‍ಗಳನ್ನು ಪರಿಚಯಿಸಲಿರುವ ಸುಜುಕಿ..

ಈಗಾಗಲೆ ದೇಶದಲ್ಲಿನ ಹಲವಾರು ಸುಜುಕಿ ಡೀಲರ್‍‍ಗಳು ಆರ್‍ಎಂ-ಜೆಡ್250 ಬೈಕ್‍‍ಗಳನ್ನು ಸ್ವೀಕರಿಸಿದ್ದು, ಸುಜುಕಿ ಬಿಡುಗಡೆಗೊಳಿಸಲಿರುವ ಡರ್ಟ್ ಬೈಕ್‍‍ಗಳು ಡಿಆರ್-ಜೆಡ್50, ಆರ್‍ಎಂ-ಜೆಡ್250, ಆರ್‍ಎಂ-ಜೆಡ್450 ಮತ್ತು ಆರ್‍ಎಂಎಕ್ಸ್450ಜೆಡ್ ಎಂದು ಹೇಳಲಾಗಿದೆ. ಆದರೆ ಇದರಲ್ಲಿನ ಡಿಆರ್-ಜೆಡ್50 ಬೈಕ್ ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಭಾರತೀಯ ಮಾರುಕಟ್ಟೆಗೆ ನಾಲ್ಕು ಹೊಸ ಡರ್ಟ್ ಬೈಕ್‍‍ಗಳನ್ನು ಪರಿಚಯಿಸಲಿರುವ ಸುಜುಕಿ..

ಆರ್‍ಎಂ-ಜೇಡ್250 ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.7.20 ಲಕ್ಷ, ಡಿಆರ್-ಜೆಡ್50 ಬೈಕ್ ರೂ.2.65 ಲಕ್ಷ, ಆರ್‍ಎಂ-ಜೆಡ್450 ಬೈಕ್ ರೂ.8.40 ಲಕ್ಷ ಮತ್ತು ಆರ್‍‍ಎಂ‍ಎಕ್ಸ್450ಜೆಡ್ ಬೈಕ್‍‍ನ ಬೆಲೆಯನ್ನು ರೂ.8.75 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಭಾರತೀಯ ಮಾರುಕಟ್ಟೆಗೆ ನಾಲ್ಕು ಹೊಸ ಡರ್ಟ್ ಬೈಕ್‍‍ಗಳನ್ನು ಪರಿಚಯಿಸಲಿರುವ ಸುಜುಕಿ..

ಸುಜುಕಿ ಬಿಡುಗಡೆಗೊಳಿಸಲಿರುವ ಈ ನಾಲ್ಕು ಡರ್ಟ್ ಬೈಕ್‍‍ಗಳು ಹೆಡ್‍‍ಲೈಟ್‍‍ಗಳು, ಟರ್ನ್ ಇಂಡಿಕೇಟರ್‍‍ಗಳು, ಟೈಲ್ ಲೈಟ್ಸ್ ಮತ್ತು ರಸ್ತೆಗೆ ಅನುಗುಣವಾದ ಟೈರ್‍‍ಗಳನ್ನು ಪಡೆದಿರುವುದಿಲ್ಲ. ಈ ಬೈಕ್‍‍ಗಳು ತೂಕದಲ್ಲಿ ಸರಳವಾಗಿದ್ದು, ನಿಯಂತ್ರಿತ ಪರಿಸ್ಥಿತಿಗಳಲ್ಲಿ ಅಥವಾ ಸ್ಪರ್ಧೆಗಳಲ್ಲಿ ಬಳಸಲು ಉದ್ದೇಶಿಸಲಾಗಿದೆ.

ಭಾರತೀಯ ಮಾರುಕಟ್ಟೆಗೆ ನಾಲ್ಕು ಹೊಸ ಡರ್ಟ್ ಬೈಕ್‍‍ಗಳನ್ನು ಪರಿಚಯಿಸಲಿರುವ ಸುಜುಕಿ..

ಸುಜುಕಿ ಸಂಸ್ಥೆಯು ಡಿಆರ್-ಜೆಡ್50 ಬೈಕ್‍‍ಗಳನ್ನು ಯುವ ಜನತೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಇದರಲ್ಲಿ 49ಸಿಸಿ ನಾಲ್ಕು ಸಿಲೆಂಡರ್, ಏರ್-ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಅನ್ನು ಹೊಂದಿರಲಿದೆ. ಈ ಬೈಕ್ 560ಎಂಎಂನ ಸೀಟ್ ಹೈಟ್ ಅನ್ನು ಪಡೆದುಕೊಂಡಿರಲಿದ್ದು, 54 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿದೆ.

ಭಾರತೀಯ ಮಾರುಕಟ್ಟೆಗೆ ನಾಲ್ಕು ಹೊಸ ಡರ್ಟ್ ಬೈಕ್‍‍ಗಳನ್ನು ಪರಿಚಯಿಸಲಿರುವ ಸುಜುಕಿ..

ಇನ್ನು ಆರ್‍ಎಂ-ಜೆಡ್250 ಬೈಕ್ 250ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಬೈಕ್‍‍ನಲ್ಲಿ ಕೆವೈಬಿ ಅಡ್ಜಸ್ಟಬಲ್ ಸಸ್ಪೆಂಷನ್ ಅನ್ನು ಎರಡೂ ಬದಿಗಳಲ್ಲಿ ಅಳವಡಿಸಲಾಗಿದೆ. ಈ ಬೈಕ್ 955ಎಂಎಂ ಸೀಟ್ ಹೈಟ್ ಅನ್ನು ಪಡೆದುಕೊಂಡಿರಲಿದ್ದು, 106 ಕಿಲೋಗ್ರಾಂ ತೂಕವನ್ನು ಪಡೆದುಕೊಂಡಿರಲಿದೆ.

ಭಾರತೀಯ ಮಾರುಕಟ್ಟೆಗೆ ನಾಲ್ಕು ಹೊಸ ಡರ್ಟ್ ಬೈಕ್‍‍ಗಳನ್ನು ಪರಿಚಯಿಸಲಿರುವ ಸುಜುಕಿ..

ಮತ್ತೊಂದು ಕಡೆ ಆರ್‍ಎಂ-ಜೆಡ್450 ಬೈಕ್ 449ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಅನ್ನು ಪಡೆದುಕೊಂಡಿದೆ. ಈ ಬೈಕ್ 960ಎಂಎಂ ಸೀಟ್ ಹೈಟ್ ಅನ್ನು ಪಡೆದುಕೊಂಡಿರಲಿದ್ದು, 112ಕಿಲೋಗ್ರಾಂ ತೂಕವನ್ನು ಪಡೆದುಕೊಂಡಿದೆ. ಇನ್ನು ಆರ್‍ಎಂಎಕ್ಸ್450ಜೆಡ್ ಕೂಡಾ ಇದೇ ಎಂಜಿನ್ ಅನ್ನು ಆಧರಿಸಲಿದ್ದು, ಎಂಡ್ಯೂರೊ ರೈಡಿಂಗ್‍‍ಗಾಗಿ ಹೆಡ್‍‍ಲೈಟ್ ಅನ್ನು ಒದಗಿಸಲಾಗಿದೆ.

ಭಾರತೀಯ ಮಾರುಕಟ್ಟೆಗೆ ನಾಲ್ಕು ಹೊಸ ಡರ್ಟ್ ಬೈಕ್‍‍ಗಳನ್ನು ಪರಿಚಯಿಸಲಿರುವ ಸುಜುಕಿ..

ಹೊಸ ಸುಜುಕಿ ಡರ್ಟ್ ಬೈಕ್‍‍ಗಳು ಕವಾಸಕಿಯ ಕೆಎಕ್ಸ್ ಮತ್ತು ಕೆಎಲ್ಎಕ್ಸ್ ರೇಂಜ್ ಬೈ‍ಕ್‍‍ಗಳಿಗೆ ಪೈಪೋಟಿಯನ್ನು ನೀಡಲಿದೆ ಆದರೆ ಅಕವಾಸಕಿಯು ಕೆಎಲ್ಎಕ್ಸ್110 ಮತ್ತು ಕೆಎಲ್ಎಕ್ಸ್140ಜಿ ಎಂಬ ಇನ್ನು ಬಲಿಷ್ಠವಾದ ಡರ್ಟ್ ಬೈಕ್‍‍ಗಳನ್ನು ಹೊಂದಿದೆ.

ಭಾರತೀಯ ಮಾರುಕಟ್ಟೆಗೆ ನಾಲ್ಕು ಹೊಸ ಡರ್ಟ್ ಬೈಕ್‍‍ಗಳನ್ನು ಪರಿಚಯಿಸಲಿರುವ ಸುಜುಕಿ..

ಡ್ರೈವ್‍‍‍ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಸಂಸ್ಥೆಯು ಕೊನೆಗು ತಮ್ಮ ಡರ್ಟ್ ಬೈಕ್‍‍ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಇದರಲ್ಲಿ ಮಕ್ಕಳಿಗೂ ಕೂಡಾ ಒಂದು ವಿಶೇಷವಾದ ಡರ್ಟ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಆಫ್‍-ರೋಡ್ ಪ್ರಿಯರಿಗೆ ಈ ವಿಷಯ ಸಿಹಿಸುದ್ಧಿಯಾಗಿದ್ದು, ಸುಜುಕಿಯು ಕಡಿಮೆ ತೂಕದಲ್ಲಿ 450ಸಿಸಿ ಎಂಜಿನ್ ಪ್ರೇರಿತ ಬೈಕ್‍‍ಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಿದೆ.

Most Read Articles

Kannada
Read more on suzuki motorcycle
English summary
Suzuki To Introduce Four New Dirt Bikes In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X