ಬಿಡುಗಡೆಗೊಂಡ ಸುಜುಕಿ ಇಂಟ್ರೂಡರ್ ಸ್ಪೆಷಲ್ ಎಡಿಷನ್ ಬೈಕಿನ ವಿಶೇಷತೆ ಏನು.?

ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾ ತಮ್ಮ ಜನಪ್ರಿಯ ಇಂಟ್ರೂಡರ್ ಕ್ರೂಸರ್‍‍ನ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಸುಜುಕಿ ಇಂಟ್ರೂಡರ್ ಸ್ಪೆಷಲ್ ಎಡಿಷನ್ ಎಸ್‍ಪಿ ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದ್ದು, ಇನ್ನು ಎಫ್‍ಪಿ ಬೈಕ್‍ ರೂ.1.07 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಸುಜುಕಿ ಇಂಟ್ರೂಡರ್ ಸ್ಪೆಷಲ್ ಎಡಿಷನ್ ಬೈಕಿನ ವಿಶೇಷತೆ ಏನು.?

ಹೊಸ ಸ್ಪೆಷಲ್ ಎಡಿಷನ್ ಇಂಟೂಡರ್ ಎಸ್‍ಪಿ ಬೈಕ್ ವಿನ್ಯಾಸದಲ್ಲಿ ಮಾತ್ರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿರುವುದಿಲ್ಲ. ಆದರೆ ಈ ಬಾರಿ ಹೊಸ ಡ್ಯುಯಲ್ ಟೋನ್ ಬಣ್ಣಗಳನ್ನು ಪಡೆದುಕೊಳ್ಳಲಿದೆ.

ಬಿಡುಗಡೆಗೊಂಡ ಸುಜುಕಿ ಇಂಟ್ರೂಡರ್ ಸ್ಪೆಷಲ್ ಎಡಿಷನ್ ಬೈಕಿನ ವಿಶೇಷತೆ ಏನು.?

ಸಾಧಾರಣ ಸುಜುಕಿ ಇಂಟ್ರೂಡರ್‍ ಬೈಕ್‍ಗಳಲ್ಲಿ ನೀಡಿದ ಹಾಗೆಯೆ ಈ ಬೈಕ್ ಕೂಡಾ ಡಿಆರ್‍ಎಲ್ ಪ್ರೇರಿತ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಟೈಲ್‍‍ಲೈಟ್ಸ್, ಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಡ್ಯುಯಲ್ ಎಕ್ಸಾಸ್ಟ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿರಲಿದೆ.

ಬಿಡುಗಡೆಗೊಂಡ ಸುಜುಕಿ ಇಂಟ್ರೂಡರ್ ಸ್ಪೆಷಲ್ ಎಡಿಷನ್ ಬೈಕಿನ ವಿಶೇಷತೆ ಏನು.?

ಹೊಸ ಸ್ಪೆಷಲ್ ಎಡಿಷನ್ ಇಂಟ್ರೂಡರ್ ಬೈಕ್ ಮೇಟ್ ಬ್ಲಾಕ್ ಪೆಯಿಂಟ್‍‍ನೊಂದಿಗೆ ಕ್ಯಾಂಡಿ ಸನೊಮಾ ರೆಡ್ ಆಕ್ಸೆಂಟ್ ಬಣ್ಣವನ್ನು ಪಡೆದುಕೊಂಡಿದೆ. ಇದಲ್ಲದೆ ಸ್ಟ್ಯಾಂಡರ್ಡ್ ಆಗಿ ಪಿಲಿಯಾನ್ ಬ್ಯಾಕ್‍ರೆಸ್ಟ್ ಅನ್ನು ಒದಗಿಸಲಾಗಿದ್ದು, ರಿಯರ್ ವ್ಯೂ ಮಿರರ್ ಹೌಸಿಂಗ್ ಹಾಗು ಸೈಲೆನ್ಸರ್ ಗಾರ್ಡ್ ಅನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಬಿಡುಗಡೆಗೊಂಡ ಸುಜುಕಿ ಇಂಟ್ರೂಡರ್ ಸ್ಪೆಷಲ್ ಎಡಿಷನ್ ಬೈಕಿನ ವಿಶೇಷತೆ ಏನು.?

ಜೊತೆಗೆ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ರಿರ್ ಪ್ಲೆಂಡರ್ ಮತ್ತು ಬಕೆಟ್ ಸ್ಟೈಲ್ ಸೀಟುಗಳು ಸೂಪರ್ ಬೈಕ್ ಲುಕ್ ನೀಡಿದ್ದು, ಜಿಕ್ಸರ್ ಎಸ್ಎಫ್ ಮಾದರಿಯಲ್ಲೇ ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಸುಜುಕಿ ಇಂಟ್ರೂಡರ್ ಸ್ಪೆಷಲ್ ಎಡಿಷನ್ ಬೈಕಿನ ವಿಶೇಷತೆ ಏನು.?

ಇದಲ್ಲದೇ ಜಿಕ್ಸರ್‍‍ನಿಂದ ಪಡೆದ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, ಇದು ಬೈಕಿನ ವೇಗ, ಎರಡೂ ಕಡೆಯ ಟ್ರಿಪ್ ಮೀಟರ್, ಓಡೊ ಮೀಟರ್, ಗೇರ್ ಇಂಡಿಕೇಟರ್, ಟಾಚೋಮೀಟರ್, ಫ್ಯುಯಲ್ ಇಂಡೀಕೇಟರ್ ಮತ್ತು ಸಮಯವನ್ನು ತೋರಿಸುತ್ತದೆ.

ಬಿಡುಗಡೆಗೊಂಡ ಸುಜುಕಿ ಇಂಟ್ರೂಡರ್ ಸ್ಪೆಷಲ್ ಎಡಿಷನ್ ಬೈಕಿನ ವಿಶೇಷತೆ ಏನು.?

ಎಂಜಿನ್ ಸಾಮರ್ಥ್ಯ

ತೂಕವಾದ ಪ್ಲಾಸ್ಟಿಕ್‍‍ನೊಂದಿಗೆ ಈ ಬೈಕ್ 155ಸಿಸಿ ಎಂಜಿನ್ ಅನ್ನು ಪಡೆದುಕೊಂಡಿರಲಿದೆ. ಆದರೆ ಈ ಬಾರಿ ಈ ಬೈಕ್‍‍ನಲ್ಲಿ ಮರುವಿನ್ಯಾಸಗೊಳಿಸಲಾದ ಏರ್‍‍ಬಾಕ್ಸ್ ಮತ್ತು ಮರು ವಿನ್ಯಾಸಗೊಳಿಸಲಾದ ಎಕ್ಸಾಸ್ಟ್ ಅನ್ನು ಒದಗಿಸಲಾಗಿದ್ದು, ಇದು 14.5 ಬಿಹೆಚ್‍‍ಪಿ ಮತ್ತು 14 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಮತ್ತು ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಸುಜುಕಿ ಇಂಟ್ರೂಡರ್ ಸ್ಪೆಷಲ್ ಎಡಿಷನ್ ಬೈಕಿನ ವಿಶೇಷತೆ ಏನು.?

ಹಬ್ಬದ ಋತುವಿನಲ್ಲಿ ಕ್ರೂಸರ್ ಪ್ರಿಯರಿಗಾಗಿ ನಮ್ಮ ಇಂಟ್ರೂಡರ್ ಬೈಕಿನ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದ್ದೇವೆ. ಅದರ ಆಕರ್ಷಕ ವಿನ್ಯಾಸ, ಐಷಾರಾಮಿ ಸೌಲತ್ತು ಮತ್ತು ಸ್ಪೋರ್ಟಿ ಲುಕ್, ಸುಜುಕಿ ಇಂಟ್ರುಡರ್ ಮತ್ತು ಫಿನ್ ರೂಪಾಂತರಗಳು ಜನಸಂದಣಿಯಿಂದ ಹೊರಬರಲು ಬಯಸುವ ಜನರಿಗೆ ಯೋಗ್ಯವಾದ ಫಿಟ್ ಆಗಿವೆ.ಇದು ಸವಾಲುಗಳನ್ನು ನ್ಯಾವಿಗೇಟ್ ಮಾಡುವ ಮತ್ತು ಸೋದರತ್ವದೊಂದಿಗೆ ಸವಾರಿ ಮಾಡುವ ಜನರಿಗೆ ಮಾತ್ರ. ಎಂದು ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಆದ ಸತೊಶಿ ಉಚಿಡರವರು ಹೇಳಿಕೊಂಡಿದ್ದಾರೆ.

Article Published On: Saturday, September 29, 2018, 12:32 [IST]
English summary
Suzuki Intruder Special Edition Launched In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+