ಸುಜುಕಿ ವಿ-ಸ್ಟ್ರೋಮ್ 650 ಬೈಕ್‍ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟರ್‍‍ಸೈಕಲ್ಸ್ ದೇಶಿಯ ಮಾರುಕಟ್ಟೆಗೆ ಮಧ್ಯಮಗಾತ್ರದ ವಿ-ಸ್ಟ್ರೋಮ್ 650 ಬೈ ಅಡ್ವೆಂಚರ್ ಬೈಕ್‍‍ಗಳನ್ನು ಪರಿಚಯಿಸುವ ಯೋಜನೆಯಲಿದ್ದು, ಮಾಹಿತಿಗಳ ಪ್ರಕಾರ ಇದೀಗ ಸಂಸ್ಥೆಯು ತಮ್ಮ ವಿ-ಸ್ಟೋರ್ಮ್ 650

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟರ್‍‍ಸೈಕಲ್ಸ್ ದೇಶಿಯ ಮಾರುಕಟ್ಟೆಗೆ ಮಧ್ಯಮಗಾತ್ರದ ವಿ-ಸ್ಟ್ರೋಮ್ 650 ಬೈ ಅಡ್ವೆಂಚರ್ ಬೈಕ್‍‍ಗಳನ್ನು ಪರಿಚಯಿಸುವ ಯೋಜನೆಯಲಿದ್ದು, ಮಾಹಿತಿಗಳ ಪ್ರಕಾರ ಇದೀಗ ಸಂಸ್ಥೆಯು ತಮ್ಮ ವಿ-ಸ್ಟೋರ್ಮ್ 650 ಬೈಕ್ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಶುರು ಮಾಡಿದೆ.

ಸುಜುಕಿ ವಿ-ಸ್ಟ್ರೋಮ್ 650 ಬೈಕ್‍ಗಾಗಿ ಬುಕ್ಕಿಂಗ್ ಪ್ರಾರಂಭ..

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಸುಜುಕಿ ವಿ-ಸ್ಟ್ರೋಮ್ 650 ಅಡ್ವೆಂಚರ್‍ ಬೈಕ್‍‍ನ ಖರೀದಿಗಾಗಿ ನಿಮ್ಮ ಹತ್ತಿರದ ಸುಜುಕಿ ಅಧಿಕೃತ ಡೀಲರ್‍‍ನ ಹತ್ತಿರ ಮುಂಗಡವಾಗಿ ರೂ. 50,000 ಸಾವಿರದ ಮೊತ್ತವನ್ನು ನೀಡಿ ಪ್ರೀ ಬುಕ್ಕಿಂಗ್ ಮಾದಿಕೊಳ್ಳಬಹುದಾಗಿದ್ದು, ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ಸುಜುಕಿ ವಿ-ಸ್ಟ್ರೋಮ್ 650 ಬೈಕ್‍ಗಾಗಿ ಬುಕ್ಕಿಂಗ್ ಪ್ರಾರಂಭ..

ಇನ್ನೊಂದು ಮುಖ್ಯ ವಿಚಾರ ಅಂದ್ರೆ, ಭಾರತದಲ್ಲಿ ಬಿಡುಗಡೆಯಾಗುವ ವಿ-ಸ್ಟೋರ್ಮ್ 650 ಅಡ್ವೆಂಚರ್ ಬೈಕ್‌ಗಳು ಸಿಕೆಡಿ(ಕಂಪ್ಲಿಟ್ಲಿ ನಾಕ್ಡ್ ಡೌನ್) ಆಧಾರದ ಮೇಲೆ ಭಾರತದಲ್ಲಿ ಮಾರಾಟವಾಗಲಿದ್ದು, ಬಿಡಿಭಾಗಗಳನ್ನು ಜಪಾನ್ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ಭಾರತದಲ್ಲಿ ಅಸೆಂಬ್ಲಿ ಮಾಡಿ ಮಾರಾಟ ಮಾಡಲಾಗುತ್ತದೆ.

ಸುಜುಕಿ ವಿ-ಸ್ಟ್ರೋಮ್ 650 ಬೈಕ್‍ಗಾಗಿ ಬುಕ್ಕಿಂಗ್ ಪ್ರಾರಂಭ..

ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ಸುಜುಕಿ ವಿ-ಸ್ಟೋರ್ಮ್ 650 ಅಡ್ವೆಂಚರ್ ಟೂರರ್ ಬೈಕ್‍‍ಗಳು ಸ್ಟ್ಯಾಂಡರ್ಡ್ ಮತ್ತು ಎಕ್ಸ್‌ಟಿ ಎಂಬ ಎರಡು ಪ್ರಮುಖ ವೆರಿಯೆಂಟ್‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಸುಜುಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಎಕ್ಸ್‌ಟಿ ವೇರಿಯಂಟ್ ಅನ್ನು ಮಾತ್ರ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಸುಜುಕಿ ವಿ-ಸ್ಟ್ರೋಮ್ 650 ಬೈಕ್‍ಗಾಗಿ ಬುಕ್ಕಿಂಗ್ ಪ್ರಾರಂಭ..

ಹೊಸ ಬೈಕಿನ ವಿನ್ಯಾಸ

ವಿ-ಸ್ಟೋರ್ಮ್ 650 ಎಕ್ಸ್‌ಟಿ ಬೈಕಿನ ವಿನ್ಯಾಸವು ಸಂಸ್ಥೆಯ ಮತ್ತೊಂದು ಬೈಕ್ ಮಾದರಿಯಾದ ವಿ-ಸ್ಟೋರ್ಮ್ 1000 ಎಕ್ಸ್‌ಟಿ ಕೆಲವು ವಿನ್ಯಾಸಗಳನ್ನು ಎರವಲು ಪಡೆದಿದ್ದು, ಪ್ರೀಮಿಯಂ ಅನೊಡೈಸ್ಡ್ ವೈರ್ ಸ್ಪೋಕ್ ರಿಮ್ಸ್ ಮತ್ತು ಬ್ರಿಡ್ಜ್ ಸ್ಟೋನ್ ಬ್ಯಾಟ್ಲಕ್ಸ್ ಎ40 ಅಡ್ವೆಂಚರ್ ಟೈರ್‍‍ಗಳನ್ನು ಪಡೆದುಕೊಂಡಿದೆ.

ಕನ್ನಡ ವಿಭಾಗದಲ್ಲಿ ಅತಿ ಹೆಚ್ಚು ಓದಿದ ಲೇಖನ: ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಮರಾಜೊ ಹೊಸ ಎಂಪಿವಿ

ಸುಜುಕಿ ವಿ-ಸ್ಟ್ರೋಮ್ 650 ಬೈಕ್‍ಗಾಗಿ ಬುಕ್ಕಿಂಗ್ ಪ್ರಾರಂಭ..

ಇನ್ನು ಬೈಕ್ ಸವಾರರ ಸುರಕ್ಷತೆಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾರ್ಕ್ ಸಸ್ಷೆಷನ್ ಅನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 310ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 260ಎಂಎಂ ಸಿಂಗಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಂದಿದೆ. ಇದಲ್ಲದೆ ಈ ಬೈಕಿನಲ್ಲಿ ಎಬಿಎಸ್ ಟೆಕ್ನಾಲಜಿಯನ್ನು ಸಹ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಸುಜುಕಿ ವಿ-ಸ್ಟ್ರೋಮ್ 650 ಬೈಕ್‍ಗಾಗಿ ಬುಕ್ಕಿಂಗ್ ಪ್ರಾರಂಭ..

ಎಂಜಿನ್ ಸಾಮರ್ಥ್ಯ

ಹೊಸ ಸುಜುಕಿ ವಿ-ಸ್ಟೋರ್ಮ್ 650 ಎಕ್ಸ್‌ಟಿ ಬೈಕ್‌ಗಳು 645-ಸಿಸಿ ವಿ-ಟ್ವಿನ್ ಎಂಜಿನ್ ಸಹಾಯದಿಂದ 70-ಬಿಹೆಚ್‍ಪಿ ಮತ್ತು 62.3-ಎನ್ಎಂ ಟಾರ್ಕ್ ಅನ್ನು ಅಳವಡಿಸಲಾಗಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸುಜುಕಿ ವಿ-ಸ್ಟ್ರೋಮ್ 650 ಬೈಕ್‍ಗಾಗಿ ಬುಕ್ಕಿಂಗ್ ಪ್ರಾರಂಭ..

ಇದಲ್ಲದೇ ವಿ-ಸ್ಟೋರ್ಮ್ 650 ಎಕ್ಸ್ ಟಿ ಬೈಕ್‍‍ಗಳು ಮೂರು ವಿಧಾನಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ವಿಂಡ್ ಸ್ಕ್ರೀನ್, ಮೂರು ಹಂತದ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಸುಜುಕಿಯ ಈಜಿ ಸ್ಟಾರ್ಟ್ ಸಿಸ್ಟಂ ಮತ್ತು ಡಿಜಿಟಲ್ ಅನಾಲಾಗ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿರಲಿದೆ.

ಸುಜುಕಿ ವಿ-ಸ್ಟ್ರೋಮ್ 650 ಬೈಕ್‍ಗಾಗಿ ಬುಕ್ಕಿಂಗ್ ಪ್ರಾರಂಭ..

ಹೊಸ ಸುಜುಕಿ ವಿ-ಸ್ಟೋರ್ಮ್ 650 ಎಕ್ಸ್‌ಟಿ ಬೈಕ್‍‍‍ನ ಬೆಲೆಯ ಬಗೆಗೆ ಯಾವುದೇ ಮಾಹಿತಿ ಇಲ್ಲವಾದರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 6.50 ಲಕ್ಷದಿಂದ ರೂ. 7 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಕವಾಸಕಿ ವರ್ಸಿಸ್ 650 ಬೈಕ್‍‍ಗಳಿಗೆ ಇದು ತೀವ್ರ ಪೈಪೋಟಿಯನ್ನು ನೀಡಲಿದೆ ಎನ್ನಬಹುದು.

Article Published On: Monday, September 3, 2018, 11:35 [IST]
English summary
Suzuki Accepting Bookings For The V-Strom 650 In India.
Read more on suzuki motorcycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+