ಸುಜುಕಿ ಬಹುನಿರೀಕ್ಷಿತ ವಿ-ಸ್ಟ್ರೋಮ್ 650 ಎಕ್ಸ್‌ಟಿ ಅಡ್ವೆಂಚರ್ ಬೈಕ್ ಬಿಡುಗಡೆ
ಸುಜುಕಿ ಮೋಟಾರ್ ಸೈಕಲ್ ಸಂಸ್ಥೆಯು ದೇಶದಲ್ಲಿ ವಿವಿಧ ಮಾದರಿಯ ಅಡ್ವೆಂಚರ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಬೈಕ್ ಪ್ರೇಮಿಗಳಲ್ಲಿ ಕುತೂಹಲ ಹುಟ್ಟುಹಾಕಿದ್ದ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಸುಜುಕಿ ಸಂಸ್ಥೆಯು ಹೊಸ ವಿ-ಸ್ಟ್ರೋಮ್ 650 ಎಕ್ಸ್‌ಟಿ ಅಡ್ವೆಂಚರ್ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.64 ಲಕ್ಷಕ್ಕೆ ನಿಗದಿಗೊಳಿಸಿದ್ದು, ಸ್ಥಳೀಯವಾಗಿ ಬೀಡಿಭಾಗಗಳ ಜೋಡಣೆ ಹೊಂದಿರುವ ಈ ಬೈಕ್ ಸಂಪೂರ್ಣ ಸಿಕೆಡೆ ಮಾರ್ಗದ ಮೂಲಕ ಭಾರತದಲ್ಲಿ ಮಾರಾಟಗೊಳ್ಳಲಿದೆ.

ಅಂದರೇ, ಎಂಜಿನ್ ವಿಭಾಗವನ್ನು ಜಪಾನ್ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳುವ ಸುಜುಕಿ ಸಂಸ್ಥೆಯು ಭಾರತದಲ್ಲಿ ಬೀಡಿಭಾಗಳನ್ನು ಜೋಡಣೆ ಮಾಡಿ ಮಾರಾಟ ಮಾಡಲಿದ್ದು, ಜಿಎಸ್ಎಕ್ಸ್-ಎಸ್750 ಮತ್ತು ಹಯಾಬುಸಾ ಬೈಕ್ ಮಾದರಿಯಲ್ಲೇ ಇದು ಕೂಡಾ ಮಾರಾಟಕ್ಕೆ ಲಭ್ಯವಿರಲಿದೆ.

ಸುಜುಕಿ ಸಂಸ್ಥೆಯ ಮತ್ತೊಂದು ಬೈಕ್ ಮಾದರಿಯಾದ ಅಂತರಾಷ್ಟ್ರಿಯ ಮಾರುಕಟ್ಟೆಯ ವಿ-ಸ್ಟ್ರೋಮ್ 1000 ಪ್ರೇರಣೆ ಹೊಂದಿರುವ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್‌ಗಳು ಬಹುತೇಕ ವಿನ್ಯಾಸಗಳನ್ನು ಎರವಲು ಪಡೆದಿದ್ದು, ಎಕ್ಸ್‌ಟಿ ವರ್ಷನ್‌ಗಳಲ್ಲಿ ಸುಜುಕಿ ಸಂಸ್ಥೆಯು ಪ್ರಮುಖ ಎರಡು ವೆರಿಯೆಂಟ್‌ಗಳನ್ನು ಅಭಿವೃದ್ಧಿಗೊಳಿಸಿದೆ.

ವಿ-ಸ್ಟ್ರೋಮ್ 650 ಎಕ್ಸ್‌ಟಿ ವರ್ಷನ್‌ಗಳಲ್ಲಿ ಬಿಡುಗಡೆ ಮಾಡಲಾಗಿರುವ ಸಾಮಾನ್ಯ ಮತ್ತು ಅಡ್ವೆಂಚರ್ ವೆರಿಯೆಂಟ್‌ಗಳಲ್ಲಿ ಅಡ್ವೆಂಚರ್ ವಿ-ಸ್ಟ್ರೋಮ್ 650 ಎಕ್ಸ್‌ಟಿ ಮಾತ್ರವೇ ಭಾರತದಲ್ಲಿ ಬಿಡುಗಡೆಯಾಗಿದ್ದು, ಅಂತಾರಾಷ್ಟ್ರಿಯ ಮಾರುಕಟ್ಟೆಗಳಲ್ಲಿ ಎರಡು ವೆರಿಯೆಂಟ್ ಸಹ ಖರೀದಿಗೆ ಲಭ್ಯವಾಗಿವೆ.

ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗಿರುವ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್‌ಗಳು ಅಡ್ವೆಂಚರ್ ವಿಭಾಗಕ್ಕಾಗಿಯೇ ವಿಶೇಷವಾಗಿ ಸಿದ್ದತೆಗೊಂಡಿದ್ದು, ಆಪ್ ರೋಡ್ ಮತ್ತು ದಿನಬಳಕೆಗೂ ಅನೂಕಲಕರವಾಗುವಂತೆ ಬೈಕಿನ ವಿನ್ಯಾಸವನ್ನು ಸಿದ್ದಗೊಳಿಸಿಲಾಗಿದೆ.

ಎಂಜಿನ್ ಸಾಮರ್ಥ್ಯ
ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್‌ಗಳು 645ಸಿಸಿ, ವಿ-ಟ್ವಿನ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 70-ಬಿಎಚ್‌ಪಿ ಮತ್ತು 62.3-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು. ಜೊತೆಗೆ ಬೈಕಿನಲ್ಲಿ ಸುರಕ್ಷತೆಗಾಗಿ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಮುಂಭಾಗದ ಚಕ್ರದಲ್ಲಿ ಡ್ಯುಯಲ್ 310ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ ಸಿಂಗಲ್ 260ಎಂಎಂ ಡಿಸ್ಕ್ ಬ್ರೇಕ್ ಜೋಡಣೆ ಮಾಡಲಾಗಿದೆ.

ಬೈಕಿನ ವೈಶಿಷ್ಟ್ಯತೆ
ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್‌ಗಳಲ್ಲಿ ಬೈಕ್ ಸವಾರರು ಮೂರು ಹಂತದಲ್ಲಿ ಬೈಕಿನ ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸೌಲಭ್ಯ ಹೊಂದಿದ್ದು, ವಿ-ಸ್ಟ್ರೋಮ್ 1000 ಬೈಕಿನ ಮಾದರಿಯಲ್ಲಿ ಇಸಿ ಸ್ಟಾರ್ಟ್ ಸಿಸ್ಟಂ, ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ತ್ರಿ ಸ್ಟೆಜ್ ಟ್ರಾಕ್ಷನ್ ಕಂಟ್ರೋಲ್ ಪಡೆದುಕೊಂಡಿದೆ.

ಇದಲ್ಲದೆ ಹೊಸ ಬೈಕಿನಲ್ಲಿ ಬ್ರಿಡ್ಜ್‌ಸ್ಟೋನ್ ಬ್ಯಾಟ್‌ಲ್ಯಾಕ್ಸ್ ಅಡ್ವೆಂಚರ್ ಎ40 ಟ್ಯೂಬಲೆಸ್ ಟೈರ್ಸ್ ಬಳಕೆ ಮಾಡಲಾಗಿದ್ದು, ಕನ್ವರ್ಷನಲ್ ಟೆಲಿಸ್ಕೋಪಿಕ್ ಫ್ರಂಟ್ ಫೋಕ್ಸ್ ಮತ್ತು ರಿಯರ್ ಮೋನೊಶಾರ್ಕ್ ಸೌಲಭ್ಯದೊಂದಿಗೆ ಆಪ್ ರೋಡ್‌ನಲ್ಲಿ ಅತ್ಯುತ್ತಮ ಕೌಶಲ್ಯ ಪ್ರದರ್ಶನಕ್ಕೆ ಸಹಕಾರಿಯಾಗುವಂತೆ ಹಲವು ವಿಶ್ವದರ್ಜೆ ಸವಲತ್ತುಗಳನ್ನು ಅಳವಡಿಸಲಾಗಿದೆ.

ಒಟ್ಟಿನಲ್ಲಿ ಅಡ್ವೆಂಚರ್ ಟೂರರ್ ಬೈಕ್ ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಲು ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್ ಬಿಡುಗಡೆ ಮಾಡಿರುವ ಸುಜುಕಿ ಸಂಸ್ಥೆಯು ಜಿಎಸ್ಎಕ್ಸ್-ಎಸ್750 ಬೈಕಿಗಿಂತಲೂ ಹೆಚ್ಚಿನ ಸೌಲಭ್ಯವನ್ನು ಹೊಸ ಬೈಕಿನಲ್ಲಿ ಒದಗಿಸಿದ್ದು, ಕವಾಸಕಿ ಜನಪ್ರಿಯ ವರ್ಸ್ಸಿ 650 ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.
ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಅಡ್ವೆಂಚರ್ ಬೈಕ್ ಫೋಟೋ ಗ್ಯಾಲರಿ..!


Click it and Unblock the Notifications