ಹೆಚ್ಚು ಸಾಮರ್ಥ್ಯದ ಸೈಲೆನ್ಸರ್ ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್..

ಇಟಲಿ ಮೂಲದ ಪ್ರಮುಖ ಪರ್ಫಾರ್‍‍ಮೆನ್ಸ್ ಎಕ್ಸಾಸ್ಟ್ ಉತ್ಪಾದನ ಸಂಸ್ಥೆಯಾದ ಟೆರ್ಮಿಗ್ನೊನಿ 2018ರ ಹೊಸ ಎನ್‍‍ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಮೋಟಾರ್‍‍ಸೈಕಲ್‍‍ಗಾಗಿ ವಿನೂತನವಾದ ಸ್ಲಿಪ್-ಆನ್ ಎಕ್ಸಾಸ್ಟ್ ಸಿಸ್ಟಮ್ ಅನ್ನು ತಯಾರುಮಾಡಿದೆ.

By Rahul Ts

ಇಟಲಿ ಮೂಲದ ಪ್ರಮುಖ ಪರ್ಫಾಮೆನ್ಸ್ ಎಕ್ಸಾಸ್ಟ್ ಉತ್ಪಾದನಾ ಸಂಸ್ಥೆಯಾದ ಟೆರ್ಮಿಗ್ನೊನಿ 2018ರ ಹೊಸ ಎನ್‍‍ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಮೋಟಾರ್‌ಸೈಕಲ್‌ಗಳಿಗಾಗಿ ವಿನೂತನ ಸ್ಲಿಪ್-ಆನ್ ಎಕ್ಸಾಸ್ಟ್ ಸಿಸ್ಟಮ್ ಅನ್ನು ತಯಾರುಮಾಡಿದೆ. ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಲ್ಲಿ ಟೆರ್ಮಿಗ್ನೋನಿ ಸಂಸ್ಥೆಯ ಸೈಲೆನ್ಸರ್‌ ಹೊಂದಿರಲಿರುವ ಮೊದಲ ಬೈಕ್ ಇದಾಗಿರಲಿದೆ.

ಹೆಚ್ಚು ಸಾಮರ್ಥ್ಯದ ಸೈಲೆನ್ಸರ್ ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್..

ರಾಯಲ್ ಎನ್‍‍ಫೀಲ್ಡ್ ಅತ್ಯಂತ ಶಕ್ತಿಯುತವಾದ ಹಲವು ಐಕಾನಿಕ್ ಮೋಟಾರ್‍‍‍‍ಸೈಕಲ್‍‍ಗಳನ್ನು ತಯಾರಿಸುತ್ತಿದೆ. ಆದರೆ ಅಡ್ವೆಂಚರ್ ಅನುಕೂಲತೆಗಾಗಿ ಪ್ರತ್ಯೇಕವಾಗಿ ತಯಾರು ಮಾಡಲಾದ ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿದ ಹಿಮಾಲಯನ್ ಬೈಕ್‍‍ಗಾಗಿ ಟೆರ್ಮಿಗ್ನೊನಿ ಸೈಲೆನ್ಸರ್‌ ತಯಾರು ಮಾಡಿದೆ.

ಹೆಚ್ಚು ಸಾಮರ್ಥ್ಯದ ಸೈಲೆನ್ಸರ್ ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್..

ಟೆರ್ಮಿಗ್ನೊನಿ ಕಂಪೆನಿಯು ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಾಗಿ ತಯಾರು ಮಾಡಿದ ಸೈಲೆನ್ಸರ್ ಪೂರ್ತಿಯಾಗಿ ಸ್ಟೈನ್ ಲೆಸ್ ಕಬ್ಬಿಣದಿಂದ ತಯಾರು ಮಾಡಲಾಗಿದ್ದು, ಇದರ ಕೊನೆಯಲ್ಲಿ ಕಪ್ಪು ಬಣ್ಣದ ಕ್ಯಾಪ್ ಅನ್ನು ಅಳವಡಿಸಲಾಗಿದೆ.

ಹೆಚ್ಚು ಸಾಮರ್ಥ್ಯದ ಸೈಲೆನ್ಸರ್ ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್..

ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಅಳವಡಿಸಿರುವ ಸೈಲೆನ್ಸರ್‍‍‍ಗಿಂತ ಟೆರ್ಮಿಗ್ನೊನಿ ಸೈಲೆನ್ಸರ್ ಬಹಳ ಸರಳವಾಗಿದ್ದು, ಇದು ಬೈಕಿನ ಎರಡು ಕೆಜಿ ತೂಕವನ್ನು ಕಡಿಮೆಗೊಳಿಸುತ್ತದೆ.

ಹೆಚ್ಚು ಸಾಮರ್ಥ್ಯದ ಸೈಲೆನ್ಸರ್ ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್..

ಟೆರ್ಮಿಗ್ನೊನಿ ಸ್ಲಿಪ್-ಆನ್ ಎಕ್ಸಾಸ್ಟ್ ಸಿಸ್ಟಮ್ ಮುಖಾಂತರ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ 0.7 ಬಿಹೆಚ್‍‍ಪಿ ಮತ್ತು 1.65ಎನ್ಎಮ್ ಟಾರ್ಕ್ ಅನ್ನು ಅಧಿಕವಾಗಿ ಒದಗಿಸಲಬಲ್ಲದು. ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳಿಗೆ ಹೋಲಿಸಿದರೆ ಟೆರ್ಮಿಗ್ನೊನಿ ಸೈಲೆನ್ಸರ್ ಹೊಂದಿರಲಿರುವ ಹಿಮಾಲಯನ್ ಬೈಕ್‍‍ಗಳು ಆಫ್ ರೋಡ್‍‍ನ ಸಾಮರ್ಥ್ಯವನ್ನು ಹೆಚ್ಚಾಗಿ ಪಡೆಯಲಿದೆ.

ಹೆಚ್ಚು ಸಾಮರ್ಥ್ಯದ ಸೈಲೆನ್ಸರ್ ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್..

ಟೆರ್ಮಿಗ್ನೊನಿ ಸಂಸ್ಥೆಯು ನೀಡಿರುವ ಮಾಹಿತಿಯ ಪ್ರಕಾರ, ತನ್ನ ಎಕ್ಸಾಸ್ಟ್ ಸಿಸ್ಟಮ್ ಅನ್ನು ಹೊಂದಿರಲಿರುವ ಹಿಮಾಲಯನ್ ಬೈಕ್ 23.7ಬಿಹೆಚ್‍‍ಪಿ ಮತ್ತು 31.9 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಅದೆ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯ ಸೈಲೆನ್ಸರ್ ಹೊಂದಿರುವ ಹಿಮಾಲಯನ್ ಬೈಕ್ 23 ಬಿಹೆಚ್‍‍ಪಿ ಮತ್ತು 30.8 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಹೆಚ್ಚು ಸಾಮರ್ಥ್ಯದ ಸೈಲೆನ್ಸರ್ ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್..

ಪ್ರತ್ಯೇಕವಾಗಿ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಾಗಿ ರೂಪಿಸಲದ ಹೊಸ ಟೆರ್ಮಿಗ್ನೊನಿ ಫರ್ಫಾರ್ಮೆನ್ಸ್ ಸೈಲೆನ್ಸರ್‍‍ನ ಮೇಲೆ ಲೆಂಜಂಡಿ ಮೆಟಾಲಿಕ್ ಚಿನ್ಹೆಯನ್ನು ಹೊಂದಿದೆ. ನೆಲಕ್ಕೆ ಸಮಾಂತರವಾಗಲ್ಲದೆ ಸ್ವಲ್ಪ ಎತ್ತರದಲ್ಲಿ ಅಳವಡಿಸಲಾಗಿರುವ ಆಫ್ ರೋಡ್ ಫರ್‍‍ಫಾರ್ಮೆನ್ಸ್ ಹೊಸ ಲುಕ್ ಅನ್ನು ನೀಡಿದೆ.

ಹೆಚ್ಚು ಸಾಮರ್ಥ್ಯದ ಸೈಲೆನ್ಸರ್ ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್..

ಹಿಮಾಲಯನ್ ಬೈಕ್‍‍ಗಾಗಿ ರೂಪಿಸಲಾದ ಟೆರ್ಮಿಗ್ನೊನಿ ಎಕ್ಸಾಸ್ಟ್ ಸಿಸ್ಟಮ್‍‍ನಲ್ಲಿ ಸೈಲೆನ್ಸರ್ ಅಲ್ಯೂಮೀನಿಯಮ್ ಸ್ಪೇಸರ್, ವಾಶರ್ ಸೈಲೆಂಟ್ ಬ್ಲ್ಯಾಕ್, ಸ್ಪೇಸರ್ ಸೈಲೆಂಟ್ ಬ್ಲಾಕ್, ವಾಶರ್ 8X24, ಸೆಲ್ಫ್-ಲಾಕಿಂಗ್ ನಟ್ ಎಮ್8, ಸ್ಕ್ರೂ 8X30 ಮತು ಮೆಟಲ್ ಮೋಟಾರ್ ಕ್ಲಾಂಪ್‍‍ಗಳಿವೆ.

ಹೆಚ್ಚು ಸಾಮರ್ಥ್ಯದ ಸೈಲೆನ್ಸರ್ ಪಡೆಯಲಿದೆ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್..

ತಾಂತ್ರಿಕವಾಗಿ ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್‍‍ಗಳು 411ಸಿಸಿ ಆಯಿಲ್ ಕೂಲ್ಡ್, ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 24.5 ಬಿಹೆಚ್‍‍ಪಿ ಮತ್ತು 32ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
Read more on royal enfield
English summary
Termignoni Reveals Performance Exhaust For Royal Enfield Himalayan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X