2017ರಲ್ಲಿ ಸಾಮಾಜಿಕ ಜಾಣತಾಣಗಳಲ್ಲಿ ಅತಿಹೆಚ್ಚು ಸದ್ದು ಮಾಡಿದ ಟಾಪ್ 10 ಬೈಕ್‌ಗಳು....
ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಹೊಸ ಬಗೆಯ ಬೈಕ್‌ಗಳು ಬಿಡುಗಡೆಯಾಗಿದ್ದು, ಇನ್ನು ಕೆಲ ಬೈಕ್ ಮಾದರಿಗಳು ಬಿಡುಗಡೆಯ ತವಕದಲ್ಲಿವೆ. ಹೀಗಾಗಿ ಎಲ್ಲಾ ಬಗೆಯ ಬೈಕ್ ಮಾದರಿಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.
2017 ಕಳೆದು 2018 ನಮ್ಮೆಲ್ಲರ ಜೀವನದಲ್ಲೂ ಹೊಸ ಹುರಷಕ್ಕೆ ಕಾರಣವಾಗಿದೆ. ಆದ್ರೆ ಹೊಸ ವರುಷದ ಸಂಭ್ರಮದಲ್ಲಿ ಹಳೆಯ ನೆನಪುಗಳನ್ನು ಮರೆಯಲು ಸಾಧ್ಯವೇ ಇಲ್ಲ. ಹೀಗಾಗಿಯೇ ಕಳೆದ ವರ್ಷ ಆಟೋ ಉದ್ಯಮದಲ್ಲಿ ಆದ ಮಹತ್ಪದ ಬೆಳವಣಿಗೆಗಳ ಬಗ್ಗೆ ಇಲ್ಲಿ ಮೆಲಕು ಹಾಕಲಾಗಿದ್ದು, ಓದುಗ ಮಿತ್ರರಿಂದ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಹುಡುಕ್ಪಟ್ಟ ಟಾಪ್ 10 ಬೈಕ್ ಮಾದರಿಗಳ ಬಗ್ಗೆ ಚರ್ಚಿಸಿದ್ದೇವೆ.

ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಹೊಸ ಬಗೆಯ ಬೈಕ್‌ಗಳು ಬಿಡುಗಡೆಯಾಗಿದ್ದು, ಇನ್ನು ಕೆಲ ಬೈಕ್ ಮಾದರಿಗಳು ಬಿಡುಗಡೆಯ ತವಕದಲ್ಲಿವೆ. ಹೀಗಾಗಿ ಎಲ್ಲಾ ಬಗೆಯ ಬೈಕ್ ಮಾದರಿಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.

10. ಯಮಹಾ ಆರ್1
2017ರ ಡಿಸೆಂಬರ್ 5ರಂದು ಬಿಡುಗಡೆಯಾಗಿರುವ 998ಸಿಸಿ ಸಾಮರ್ಥ್ಯದ ಯಮಹಾ ಆರ್1 (ಬೆಲೆ- 20 ಲಕ್ಷ) ಬೈಕ್ ಸದ್ಯ ಸೂಪರ್ ಬೈಕ್ ಪ್ರಿಯರ ಹಾಟ್ ಫೆವರೀಟ್ ಆಗಿದ್ದು, ಗೂಗಲ್ ಸರ್ಚಿಂಗ್ ಲಿಸ್ಟ್‌ನಲ್ಲಿ ಟಾಪ್ 10 ಸ್ಥಾನ ಪಡೆದಿದೆ.
Recommended Video


09. ಟ್ರಯಂಫ್ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್
ಐಷಾರಾಮಿ ಬೈಕ್ ಮಾದರಿಗಳಲ್ಲಿ ಒಂದಾಗಿರುವ ಟ್ರಯಂಫ್ ಸಂಸ್ಥೆಯ ಬೋನೆವಿಲ್ಲೆ ಸ್ಪೀಡ್ ಮಾಸ್ಟರ್ ಸೂಪರ್ ಬೈಕ್ ಆವೃತ್ತಿಯು ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದು, ಕ್ಲಾಸಿಕ್ ಬೈಕ್ ಅಂಶಗಳಿಂದಾಗಿ ಬೈಕ್ ಪ್ರಿಯರನ್ನು ಸೆಳೆಯುವ ಮೂಲಕ 9ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

08. ಹಿರೋ ಎಕ್ಸ್‌ಪಲ್ಸ್
ಅಡ್ವೆಂಚರ್ ಬೈಕ್‌ಗಳಲ್ಲೇ ವಿಶೇಷ ವಿನ್ಯಾಸ ಹೊಂದಿರುವ ಎಕ್ಸ್‌ಪಲ್ಸ್ ಬೈಕ್ ಮಾದರಿಯು 2018ರ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದ್ದು, ಇದಕ್ಕೂ ಮುನ್ನವೇ ಹೊಸ ಬೈಕ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಚರ್ಚೆಗಳಾಗಿವೆ.
ತಪ್ಪದೇ ಓದಿ- ರಿವರ್ಸ್ ಗೇರ್ ಇರೋ ಬುಲೆಟ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ....

07. ಟಿವಿಎಸ್ ಅಪಾಚಿ ಆರ್‌ಆರ್ 310
ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ಮೋಟಾರ್ಸ್, ಬಹುನಿರೀಕ್ಷಿತ ಅಪಾಚಿ ಆರ್‌ಆರ್ 310 ಕ್ರೀಡಾ ಬೈಕ್ ದೇಶದಲ್ಲಿ ಬಿಡುಗಡೆಗೊಳಿಸಿದೆ. ಈ ಮೂಲಕ ಸೂಪರ್ ಬೈಕ್ ಪ್ರಿಯರಿಗೆ ಮಗದೊಂದು ಆಯ್ಕೆ ನೀಡಿರುವ ಟಿವಿಎಸ್ ಸಂಸ್ಥೆಯು ಗೂಗಲ್ ಸರ್ಚಿಂಗ್‌ನಲ್ಲೂ ಉತ್ತಮ ರ‍್ಯಾಂಕಿಂಗ್ ಗಿಟ್ಟಿಸಿಕೊಂಡಿದೆ.

06. ಬಿಎಂಡಬ್ಲ್ಯು ಆರ್ ನೈನ್ ಟಿ
ಬಿಎಂಡಬ್ಲ್ಯು ಬೈಕ್ ಉತ್ಪಾದನಾ ವಿಭಾಗವಾದ ಬಿಎಂಡಬ್ಲ್ಯು ಮೋಟರ್ರಾಡ್ ಸಂಸ್ಥೆಯು ಭಾರತದಲ್ಲಿ ಆರ್ ನೈನ್ ಟಿ ಎಂಬ ಕ್ಲಾಸಿಕ್ ಬೈಕ್ ಮಾದರಿಯನ್ನು ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಿದ್ದು, 1170 ಸಿಸಿ ಎಂಜಿನ್‌ನೊಂದಿಗೆ ಲಗ್ಷುರಿ ಬೈಕ್ ವಿಭಾಗದಲ್ಲಿ ಅತಿ ಹೆಚ್ಚು ಚರ್ಚೆಗೆ ಕಾರಣವಾಗಿದೆ.

05. ರಾಯಲ್ ಎನ್‌ಫೀಲ್ಡ್ 650 ಟ್ವಿನ್ಸ್
ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಬೈಕ್ ಮಾದರಿಗಳಾದ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮೋಟರ್ ಸೈಕಲ್‌ಗಳನ್ನು ಮೊದಲ ಬಾರಿಗೆ ಭಾರತದಲ್ಲಿ ಪ್ರದರ್ಶನ ಮಾಡಿದ್ದು, ಬಿಡುಗಡೆಗೂ ಮುನ್ನವೇ ಹೊಸ ಬೈಕ್‌ಗಳ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಚರ್ಚೆಗಳಾಗಿವೆ.
ತಪ್ಪದೇ ಓದಿ-ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

04. ಕವಾಸಕಿ ನಿಂಜಾ 650
ಕಳೆದ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾಗಿರುವ ನಿಂಜಾ 650 ಆವೃತ್ತಿಯು ಗೂಗಲ್ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದು, ಹೊಸ ಬೈಕಿನಲ್ಲಿ ಒದಗಿಸಲಾಗಿರುವ 649 ಸಿಸಿ ಎಂಜಿನ್ ಮತ್ತು 67 ಬಿಎಚ್‌ಪಿ, 66 ಎನ್ಎಂ ಟಾರ್ಕ್ ಬೈಕ್ ಪ್ರಿಯರ ಗಮನಸೆಳೆದಿದೆ.

03. ಇಂಡಿಯನ್ ಸ್ಕೌಟ್
1133 ಸಿಸಿ ಎಂಜಿನ್ ಮೂಲಕ ಬಲಿಷ್ಠ ಕ್ಲಾಸಿಕ್ ಬೈಕ್ ಎಂಬ ಹೆಗ್ಗಳಿಕೆ ಪಡೆದಿರುವ ಇಂಡಿಯನ್ ಸ್ಕೌಟ್ ಬೈಕ್ ಹಲವು ವಿಶೇಷತೆಗಳನ್ನು ಪಡೆದುಕೊಂಡಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 98 ಬಿಎಚ್‌ಪಿ ಹಾಗೂ 97 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

02. ಹೋಂಡಾ ಗ್ರಾಜಿಯಾ
125 ಸಿಸಿ ಎಂಜಿನ್ ಹೊಂದಿರುವ ಗ್ರಾಜಿಯಾ ಮಾದರಿಯು ಹೋಂಡಾ ನಿರ್ಮಾಣದ ಹೊಚ್ಚ ಹೊಸ ಸ್ಕೂಟರ್ ಆವೃತ್ತಿಯಾಗಿದ್ದು, ಕಳೆದ ವರ್ಷ ಗೂಗಲ್‌ನಲ್ಲಿ ಸರ್ಚ್ ಮಾಡಲಾಗಿರುವ ಬೈಕ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಗಿಟ್ಟಿಸಿಕೊಂಡಿದೆ.

01. ಸುಜುಕಿ ಇನ್‌ಟ್ರುಡರ್ 150
ಕ್ರೂಸರ್ ಬೈಕ್‌ಗಳ ಮಾರಾಟದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿರುವ ಉದ್ದೇಶದಿಂದ ಬಜಾಜ್ ಸಂಸ್ಥೆಯು ಕಳೆದ ನವೆಂಬರ್‌ನಲ್ಲಿ ಇನ್‌ಟ್ರುಡರ್ 150 ಬೈಕ್ ಅನ್ನು ಬಿಡುಗಡೆ ಮಾಡಲಾಗಿದ್ದು, ವಿಶೇಷ ಹೊರ ವಿನ್ಯಾಸ ಮತ್ತು ಕ್ರೂಸರ್ ಬೈಕ್ ಡಿಸೈನ್‌ಗಳು ಗೂಗಲ್ ಸರ್ಚಿಂಗ್‌ನಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಳ್ಳುವಂತೆ ಮಾಡಿದೆ.
ತಪ್ಪದೇ ಓದಿ- ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...
ವೇಗದಲ್ಲಿದ್ದ ಕಾರಿಗೆ ಅಡ್ಡ ಬಂದ ಬಾಲಕಿ- ಬಚಾವ್ ಮಾಡಲು ಹೋಗಿ ಒಂದೇ ಕುಟುಂಬದ ಐವರು ದುರ್ಮರಣ
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications








