ರಿವರ್ಸ್ ಗೇರ್ ಇರೋ ಬುಲೆಟ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ....

Written By:

ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗಳ ಖರೀದಿ ಪ್ರಕ್ರಿಯೆ ಜೋರಾಗುತ್ತಿದೆ. ಅದರ ಹೊರತಾಗಿಯೂ ಅನೇಕರು ರಾಯಲ್ ಎನ್‌ಫೀಲ್ಡ್ ಬೈಕ್ ಚಾಲನೆಗೆ ಇಷ್ಟಪಡುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಪ್ರಮುಖವಾಗಿ ಅತಿಯಾದ ಭಾರ. ಇದರಿಂದಾಗಿಯೇ ಅನೇಕರು ಬುಲೆಟ್ ಇಷ್ಟಪಡುತ್ತಾರೆ ಹೊರತು ಬೈಕ್ ರೈಡ್ ಮಾಡಲು ಹಿಂಜರಿಯುತ್ತಾರೆ. ಇದೇ ಉದ್ದೇಶದಿಂದ ಇಲ್ಲೊಬ್ಬ ಬುಲೆಟ್ ಮಾಲೀಕನು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾನೆ.

ರಿವರ್ಸ್ ಗೇರ್ ಇರೋ ಕ್ಲಾಸಿಕ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ....

ನಗರಪ್ರದೇಶಗಳಲ್ಲಿ ಪಾರ್ಕಿಂಗ್, ಟ್ರಾಫಿಕ್ ವಿಚಾರ ಬಂದ್ರೆ ಕೆಲ ಬಾರಿ ಹರಸಹಾಸ ಪಡಬೇಕಾದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಬುಲೆಟ್‌ ನಂತಹ ಅತಿಭಾರದ ಬೈಕ್‌ಗಳನ್ನು ಸರಳವಾಗಿ ಪಾರ್ಕಿಂಗ್ ಮಾಡುವುದಾಗಲಿ, ಕಿರಿದಾದ ರಸ್ತೆಗಳಲ್ಲಿ ಸಂಚರಿಸುವುದಾಗಲಿ ಕಷ್ಟಸಾಧ್ಯ.

ರಿವರ್ಸ್ ಗೇರ್ ಇರೋ ಕ್ಲಾಸಿಕ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ....

ಇದರಿಂದ ಬುಲೆಟ್ ಮಾಲೀಕನೊಬ್ಬ ರಾಯಲ್ ಎನ್‌ಫೀಲ್ಡ್ ಪ್ರಿಯರಿಗೆ ಸಂತಸ ವಿಚಾರ ತಂದಿದ್ದು, ಪಾರ್ಕಿಂಗ್ ಮತ್ತು ಟ್ರಾಫಿಕ್‌ಗಳಲ್ಲಿ ವಾಹನ ಸವಾರರಿಗೆ ಸುಲಭವಾಗುವ ಉದ್ದೇಶದಿಂದ ರಿವರ್ಸ್ ಗೇರ್ ಸೌಲಭ್ಯವನ್ನು ಪರಿಚಯಿಸಿದ್ದಾನೆ.

ರಿವರ್ಸ್ ಗೇರ್ ಇರೋ ಕ್ಲಾಸಿಕ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ....

ಮುಂಬೈ ಮೂಲದ ಜಗದೀಶ್ ರಾವಳ್ಎಂಬುವರರೇ ತಮ್ಮ 350 ಸಿಸಿ ಎಂಜಿನ್ ಬುಲೆಟ್ ಬೈಕಿಗೆ ರಿವರ್ಸ್ ಗೇರ್‌ ಸೌಲಭ್ಯವನ್ನು ಜೋಡಿಸಿಕೊಂಡಿದ್ದು, ದಿನನಿತ್ಯ ಪಾರ್ಕಿಂಗ್ ವಿಚಾರಕ್ಕಾಗಿ ಅನುಭವಿಸುತ್ತಿದ್ದ ಕಿರಿಕಿರಿಯನ್ನು ತಪ್ಪಿಸಲು ಈ ಉಪಾಯ ಮಾಡಿದ್ದಾರೆ.

ರಿವರ್ಸ್ ಗೇರ್ ಇರೋ ಕ್ಲಾಸಿಕ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ....

ಈ ಮೂಲಕ ಪಾರ್ಕಿಂಗ್ ಸ್ಥಳಗಳಲ್ಲಿ ಬೈಕ್ ಅನ್ನು ಹಿಂದಕ್ಕೆ ಮುಂದಕ್ಕೆ ಮಾಡುವ ಕಿರಿಕಿರಿಗೆ ಗುಡ್‌ಬೈ ಹೇಳಿದ್ದು, ಯಾವುದೇ ಅಡೆತಡೆ ಇಲ್ಲದೇ ಬೈಕ್ ಸಂಚಾರಕ್ಕೆ ಅನುವು ಮಾಡಿಕೊಂಡಿದ್ದಾರೆ.

ರಿವರ್ಸ್ ಗೇರ್ ಇರೋ ಕ್ಲಾಸಿಕ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ....

ಜಗದೀಶ್ ರಾವಳ್ ಅವರು ಬುಲೆಟ್ ಬೈಕಿಗೆ ಅಳವಡಿಸಿರುವ ರಿವರ್ಸ್ ಗೇರ್ ಸೌಲಭ್ಯ ಭಾರತದಲ್ಲೇ ಮೊದಲ ರಿವರ್ಸ್ ಗೇರ್ ಬೈಕ್ ಮಾದರಿಯಾಗಿದ್ದು, ಈ ಹಿಂದೆಯೇ ಹೋಂಡಾ ನಿರ್ಮಾಣ ಅತಿ ದುಬಾರಿ ಬೈಕ್ ಗೋಲ್ಡ್ ವಿಂಗ್ ಮತ್ತು ಬಿಎಂಡಬ್ಲ್ಯು ಕೆ1200ಎಲ್ ನಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದೆ.

ತಪ್ಪದೇ ಓದಿ-ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ರಿವರ್ಸ್ ಗೇರ್ ಇರೋ ಕ್ಲಾಸಿಕ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ....

ಬೈಕ್‌ಗಳಿಗೆ ರಿವರ್ಸ್ ಗೇರ್‌ನಿಂದ ಏನು ಲಾಭ?

ಅತಿಯಾದ ಭಾರ ಹೊಂದಿರುವ ಬೈಕ್‌ಗಳಿಗೆ ರಿವರ್ಸ್ ಗೇರ್ ಉಪಯೋಗವಾಗುವುದರಲ್ಲಿ ಎರಡು ಮಾತಿಲ್ಲ. ಆದ್ರೆ ಹೆವಿ ಬೈಕ್‌ಗಳಿಗೆ ರಿವರ್ಸ್ ಗೇರ್ ಒದಗಿಸುವ ಬಗ್ಗೆ ಆಟೋ ಉದ್ಯಮದಲ್ಲಿ ಇದುವರೆಗೆ ಅಂತಹ ಚರ್ಚೆಗಳು ನಡೆದಿಲ್ಲ.

ರಿವರ್ಸ್ ಗೇರ್ ಇರೋ ಕ್ಲಾಸಿಕ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ....

ಒಂದು ವೇಳೆ ಮಧ್ಯಮ ಗಾತ್ರದ ಅಂಡ್ವೆಚರ್ ಬೈಕ್‌ಗಳು ಮತ್ತು ಹೆವಿ ಬೈಕ್‌ಗಳಿಗೆ ರಿವರ್ಸ್ ಗೇರ್ ಒದಗಿಸಿದ್ದಲ್ಲಿ ಅದೊಂದು ಅತ್ಯುತ್ತಮ ಕ್ರಮ ಎನ್ನಬಹುದಾಗಿದ್ದು, ಹೊಸ ಸೌಲಭ್ಯದ ಸಾಧಕ-ಭಾದಕಗಳ ಬಗ್ಗೆ ಇನ್ನಷ್ಟು ಕೂಲಂಕುಶ ಚರ್ಚೆಗಳಾಗಬೇಕಿದೆ.

ತಪ್ಪದೇ ಓದಿ-ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್...

ರಿವರ್ಸ್ ಗೇರ್ ಇರೋ ಕ್ಲಾಸಿಕ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ....

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಜಗದೀಶ್ ರಾವಳ್ ಅಳವಡಿಸಿರುವ ರಿವರ್ಸ್ ಗೇರ್ ಸೌಲಭ್ಯವು ಬುಲೆಟ್ ಬೈಕ್‌ಗೆ ಸರಿ ಹೊಂದಿದ ರೀತಿ ಇತರೆ ಬೈಕ್‌ಗಳಿಗೆ ಸರಿ ಹೊಂದುವುದಿಲ್ಲ.

ರಿವರ್ಸ್ ಗೇರ್ ಇರೋ ಕ್ಲಾಸಿಕ್ ಬೈಕ್ ನೋಡಿದ್ದಿರಾ? ಹಾಗಾದ್ರೆ ಇಲ್ಲಿದೆ ನೋಡಿ....

ಇದಕ್ಕೆ ಕಾರಣ ಬುಲೆಟ್ ಬೈಕ್‌ಗಳು ಎಂಜಿನ್, ಕ್ಲಚ್ ಮತ್ತು ಗೇರ್‌ಬಾಕ್ಸ್ ಸೌಲಭ್ಯವನ್ನು ಪ್ರತ್ಯೇಕವಾಗಿ ಹೊಂದಿದ್ದು, ಇದು ಇತರೆ ಹೆವಿ ಬೈಕ್‌ಗಳಲ್ಲಿ ಈ ಸೌಲಭ್ಯವಿಲ್ಲ. ಅದಲ್ಲದೇ ರಿವರ್ಸ್ ಗೇರ್ ಅಳವಡಿಸಲು ಕಡ್ಡಾಯವಾಗಿ ನ್ಯೂಟ್ರಲ್ ಪೆಡಲ್ ಅವಶ್ಯಕತೆ ಇದೆ.

ತಪ್ಪದೇ ಓದಿ-ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಒಟ್ಟಿನಲ್ಲಿ ಬುಲೆಟ್ ಚಾಲನೆಯನ್ನು ಸರಳವಾಗಿಸಲು ಜಗದೀಶ್ ರಾವಳ್ ಕೈಗೊಂಡ ಕ್ರಮ ಸಾಕಷ್ಟು ಉಪಯುಕ್ತವಾಗಿದ್ದು, ಹೈ ಎಂಡ್ ಬೈಕ್ ಮಾತ್ರವಲ್ಲದೇ ಮಧ್ಯಮ ಗಾತ್ರ ಬುಲೆಟ್ ಬೈಕ್‌ನಲ್ಲೂ ರಿವರ್ಸ್ ಗೇರ್ ಅಳವಡಿಸಬಹುದು ಎಂಬುವುದನ್ನು ತೊರಿಸಿಕೊಟ್ಟಿದ್ದಾರೆ.

Picture credit: MotoMahal

Trending DriveSpark YouTube Videos

Subscribe To DriveSpark Kannada YouTube Channel - Click Here

Read more on royal enfield bullet
English summary
Read in Kannada about This Royal Enfield Bullet Gets A Reverse Gear.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark