ಟಾಪ್ 10 ಬೈಕ್ ಮಾರಾಟ ಪಟ್ಟಿಯಲ್ಲಿ ಮತ್ತೆ ದಾಖಲೆ ಸೃಷ್ಠಿಸಿದ ಹೀರೋ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ವಾಹನಗಳ ಬೆಲೆ ಏರಿಕೆಯ ನಡುವೆಯು ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಬೈಕ್ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದ್ದು, ಅಕ್ಟೋಬರ್ ಅವಧಿಯಲ್ಲಿ ಹೀರೋ ಸಂಸ್ಥೆಯು ಮತ್ತೆ ಮುನ್ನಡೆ ಕಾಯ್ದುಕೊಂಡಿದೆ.

ಟಾಪ್ 10 ಬೈಕ್ ಮಾರಾಟ ಪಟ್ಟಿಯಲ್ಲಿ ಮತ್ತೆ ದಾಖಲೆ ಸೃಷ್ಠಿಸಿದ ಹೀರೋ

ಬೈಕ್ ಮಾರಾಟ ವಿಭಾಗದಲ್ಲಿ ಸದ್ಯ ಹೋಂಡಾ ಮತ್ತು ಹೀರೋ ನಡುವೆ ಭಾರೀ ಪೈಪೋಟಿ ಇದ್ದು, ಟಾಪ್ 5ರ ಪಟ್ಟಿಯಲ್ಲಿ 2 ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹೀರೋ ಸಂಸ್ಥೆಯು ಈ ವರ್ಷದಲ್ಲಿ ಗರಿಷ್ಠ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಹಾಗಾದ್ರೆ ಟಾಪ್ 10ರ ಪಟ್ಟಿಯಲ್ಲಿರುವ ಪ್ರಮುಖ ಬೈಕ್ ಮಾರಾಟ ಪ್ರಮಾಣ ಎಷ್ಟು ಎಂದು ತಿಳಿಯಲು ಮುಂದೆ ಓದಿ.

ಟಾಪ್ 10 ಬೈಕ್ ಮಾರಾಟ ಪಟ್ಟಿಯಲ್ಲಿ ಮತ್ತೆ ದಾಖಲೆ ಸೃಷ್ಠಿಸಿದ ಹೀರೋ

01. ಹೀರೋ ಸ್ಪೈಂಡರ್

ಕಳೆದ 1 ವರ್ಷದಿಂದ ಒಂದೇ ಪ್ರಮಾಣದ ಬೇಡಿಕೆಯನ್ನು ಕಾಯ್ದುಕೊಂಡಿರುವ ಸ್ಪೈಂಡರ್ ಬೈಕ್ ಮಾರಾಟದಲ್ಲಿ ಯಾವುದೇ ಬದಲಾವಣೆ ಇಲ್ಲವಾದ್ರೂ ಅಕ್ಟೋಬರ್ ಅವಧಿಯಲ್ಲಿ 2,68,377 ಬೈಕ್‌ಗಳನ್ನು ಮಾರಾಟ ಮಾಡಿ ಮೊದಲ ಸ್ಥಾನ ತನ್ನದಾಗಿಸಿಕೊಂಡಿದೆ.

ಟಾಪ್ 10 ಬೈಕ್ ಮಾರಾಟ ಪಟ್ಟಿಯಲ್ಲಿ ಮತ್ತೆ ದಾಖಲೆ ಸೃಷ್ಠಿಸಿದ ಹೀರೋ

02. ಹೀರೋ ಹೆಚ್ಎಫ್ ಡಿಲಕ್ಸ್

ಹೀರೋ ಮೋಟೊಕಾರ್ಪ್ ಸಂಸ್ಥೆಯ ಜನಪ್ರಿಯ ಬೈಕ್ ಎಂದೇ ಕರೆಯಲ್ಪಡುವ ಎಚ್ಎಫ್ ಡಿಲಕ್ಸ್ ಮಾದರಿಯು ಅಕ್ಟೋಬರ್ ಅವಧಿಯಲ್ಲಿ ಬರೋಬ್ಬರಿ 2,00,312 ಬೈಕ್‌ಗಳನ್ನು ಮಾರಾಟವಾಗುವ ಮೂಲಕ ಟಾಪ್ 2ನೇ ಸ್ಥಾನಕ್ಕೆರಿದೆ.

ಟಾಪ್ 10 ಬೈಕ್ ಮಾರಾಟ ಪಟ್ಟಿಯಲ್ಲಿ ಮತ್ತೆ ದಾಖಲೆ ಸೃಷ್ಠಿಸಿದ ಹೀರೋ

03. ಬಜಾಜ್ ಸಿಟಿ 100

ಹೊಸ ವಿನ್ಯಾಸಗಳೊಂದಿಗೆ ಸಿದ್ಧಗೊಂಡಿರುವ ಸಿಟಿ 100 ಬೈಕ್ ಒಟ್ಟು 3 ವಿವಿಧ ನಮೂನೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ಸಿಟಿ ಬೈಕ್‌ಗಳು ಸೆಪ್ಟೆಂಬರ್ ಅವಧಿಯಲ್ಲಿ 93,676 ಬೈಕ್‌ಗಳು ಮಾರಾಟಗೊಂಡಿವೆ.

ಟಾಪ್ 10 ಬೈಕ್ ಮಾರಾಟ ಪಟ್ಟಿಯಲ್ಲಿ ಮತ್ತೆ ದಾಖಲೆ ಸೃಷ್ಠಿಸಿದ ಹೀರೋ

04. ಹೋಂಡಾ ಸಿಬಿ ಶೈನ್

ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನ ಮಾರಾಟದಲ್ಲಿ ದಾಖಲೆ ಬರೆದಿರುವ 125 ಸಿಸಿ ಸಿಬಿ ಶೈನ್ ಬೈಕ್‌ಗಳು ಅಕ್ಟೋಬರ್ ಅವಧಿಯಲ್ಲಿ 91,319 ಬೈಕ್‌ಗಳನ್ನು ಮಾರಾಟ ಮಾಡಿದ್ದು, ಇದು 125ಸಿಸಿ ವಿಭಾಗದಲ್ಲಿ ಮಾರಾಟವಾದ ಗರಿಷ್ಠ ಬೈಕ್ ಮಾದರಿಯಾಗಿದೆ.

ಟಾಪ್ 10 ಬೈಕ್ ಮಾರಾಟ ಪಟ್ಟಿಯಲ್ಲಿ ಮತ್ತೆ ದಾಖಲೆ ಸೃಷ್ಠಿಸಿದ ಹೀರೋ

05. ಬಜಾಜ್ ಪಲ್ಸರ್

ಯುವ ಸಮುದಾಯ ಹಾಟ್ ಫೆವರಿಟ್ ಎಂದೇ ಜನಪ್ರಿಯವಾಗಿರುವ ಬಜಾಜ್ ಪಲ್ಸರ್ ಸರಣಿ ಬೈಕ್‌ಗಳು ಭಾರತದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ್ದು, ಇದರಲ್ಲಿ ಪಲ್ಸರ್ 150 ಬೈಕ್‌ಗಳಿಗೆ ಭಾರೀ ಬೇಡಿಕೆಯಿದೆ. ಹೀಗಾಗಿಯೇ ಕಳೆದ ಅಕ್ಟೋಬರ್ ಅವಧಿಯಲ್ಲಿ ಬಜಾಜ್ ಸಂಸ್ಥೆಯು 90,3363 ಬೈಕ್‌ಗಳನ್ನು ಮಾರಾಟ ಮಾಡಿದೆ.

ಟಾಪ್ 10 ಬೈಕ್ ಮಾರಾಟ ಪಟ್ಟಿಯಲ್ಲಿ ಮತ್ತೆ ದಾಖಲೆ ಸೃಷ್ಠಿಸಿದ ಹೀರೋ

06. ಹೀರೋ ಪ್ಯಾಷನ್

ಸೆಪ್ಟೆಂಬರ್ ಅವಧಿಯಲ್ಲಿ ಹೀರೊ ಮೊಟೊಕಾರ್ಪ್ ಸಂಸ್ಥೆಯು 84,870 ಪ್ಯಾಷನ್ ಬೈಕ್‌ಗಳನ್ನ ಮಾರಾಟ ಮಾಡಿದ್ದು, ಹೀರೋ ಪ್ಯಾಶನ್ ಬೈಕ್‌ಗಳು 97ಸಿಸಿ ಎಂಜಿನ್‌ನೊಂದಿಗೆ ಪ್ರೊ, ಪ್ರೋ110 ಮತ್ತು 109ಸಿಸಿ ಎಂಜಿನ್ ಸಾಮರ್ಥ್ಯದ ಎಕ್ಸ್ ಪ್ರೊ ಎಂಬ ಮೂರು ಬಗೆಗಳಲ್ಲಿ ಖರೀದಿಗೆ ಲಭ್ಯವಿವೆ.

ಟಾಪ್ 10 ಬೈಕ್ ಮಾರಾಟ ಪಟ್ಟಿಯಲ್ಲಿ ಮತ್ತೆ ದಾಖಲೆ ಸೃಷ್ಠಿಸಿದ ಹೀರೋ

07. ಹೀರೋ ಗ್ಲ್ಯಾಮರ್

ಅಕ್ಟೋಬರ್ ಅವಧಿಯಲ್ಲಿ ಬರೋಬ್ಬರಿ 80,627 ಹೀರೋ ಗ್ಲ್ಯಾಮರ್ ಬೈಕ್‌ಗಳು ಮಾರಾಟಗೊಂಡಿದ್ದು, ಕಳೆದ ಎರಡು ತಿಂಗಳ ಹಿಂದಿನ ಬೈಕ್ ಮಾರಾಟಕ್ಕೆ ಹೋಲಿಕೆ ಮಾಡಿದಾಗ ಸಿಟಿ 100 ಬೈಕಿಗಿಂತ ಕಡಿಮೆ ಮಾರಾಟ ದಾಖಲೆ ಮಾಡಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಟಾಪ್ 10 ಬೈಕ್ ಮಾರಾಟ ಪಟ್ಟಿಯಲ್ಲಿ ಮತ್ತೆ ದಾಖಲೆ ಸೃಷ್ಠಿಸಿದ ಹೀರೋ

08. ಬಜಾಜ್ ಪ್ಲಾಟಿನಾ

ಪ್ರತಿ ಲೀಟರ್‌ಗೆ 80 ಕೀ.ಮೀ. ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಬಜಾಜ್ ಪ್ಲಾಟಿನಾ ಬೈಕ್ ಈ ಬಾರಿ ಗ್ರಾಹಕರ ಆಕರ್ಷಣೆಯಾಗಿದ್ದು, ಬಹುದಿನಗಳ ನಂತರ ನವೆಂಬರ್ ಅವಧಿಯಲ್ಲಿ 74,064 ಬೈಕ್ ಮಾರಾಟದೊಂದಿಗೆ 8ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಟಾಪ್ 10 ಬೈಕ್ ಮಾರಾಟ ಪಟ್ಟಿಯಲ್ಲಿ ಮತ್ತೆ ದಾಖಲೆ ಸೃಷ್ಠಿಸಿದ ಹೀರೋ

09. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಪ್ರೀಮಿಯಂ ಸೌಲಭ್ಯ ಪ್ರೇರಿತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ಅಕ್ಟೋಬರ್ ಅವಧಿಯಲ್ಲಿ 46,148 ಬೈಕ್‌ಗಳನ್ನು ಮಾರಾಟ ಮಾಡಿರುವ ಆರ್‌ಇ ಸಂಸ್ಥೆಯು ಈ ಬಾರಿ ಜಾವಾ ಬೈಕ್‌ಗಳ ಪೈಪೋಟಿಯನ್ನು ಹೇಗೆ ಎದುರಿಸಲಿದೆ ಎನ್ನುವುದೇ ಕುತೂಹಲ ಹುಟ್ಟಿಸಿದೆ.

MOST READ: ಹೊಸ ಜಾವಾ ಬೈಕ್ ಬಿಡುಗಡೆ ಮಾಡಿದ ಮಹೀಂದ್ರಾ ವಿರುದ್ಧ ಫ್ಯಾನ್ಸ್ ಸಿಟ್ಯಾಕೆ?

ಟಾಪ್ 10 ಬೈಕ್ ಮಾರಾಟ ಪಟ್ಟಿಯಲ್ಲಿ ಮತ್ತೆ ದಾಖಲೆ ಸೃಷ್ಠಿಸಿದ ಹೀರೋ

10. ಟಿವಿಎಸ್ ಅಪಾಚೆ

ಯವಕನ ನೆಚ್ಚಿನ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿರುವ ಟಿವಿಎಸ್ ಅಪಾಚೆ ಸರಣಿ ಸಹ ಈ ಬಾರಿ ಉತ್ತಮ ಮಾರಾಟ ದಾಖಲಿಸಿದ್ದು, ಪಲ್ಸರ್ ಸರಣಿ ಬೈಕ್‌ಗಳೊಂದಿಗೆ ಪೈಪೋಟಿ ನಡೆಸುವ ಮೂಲಕ ಅಕ್ಟೋಬರ್ ಅವಧಿಯಲ್ಲಿ 41,396 ಬೈಕ್‌ಗಳನ್ನು ಮಾರಾಟ ಮಾಡಿದೆ.

More from DriveSpark

Article Published On: Thursday, November 29, 2018, 15:07 [IST]
English summary
Top-Selling Bikes In India October 2018: Hero Splendor Is Still The All-Time Favourite.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+