ಬೈಕ್ ಮಾರಾಟದಲ್ಲಿ ಹೊಸ ದಾಖಲೆ- ಟಾಪ್ 1ರಲ್ಲಿ ಅಚ್ಚರಿಯ ಹೆಸರು..!
ಹೆಚ್ಚುತ್ತಿರುವ ಇಂಧನಗಳ ಬೆಲೆ ನಡುವೆಯು ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಬೈಕ್ ಮತ್ತು ಸ್ಕೂಟರ್ ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಅದರಲ್ಲೂ ಕಳೆದ ಸೆಪ್ಟೆಂಬರ್ ಅವಧಿಯಲ್ಲಿ ಮಾರಾಟಗೊಂಡಿರುವ ಟಾಪ್ 10 ಬೈಕ್‌ಗಳ ಪಟ್ಟಿಯು ಅಚ್ಚರಿಗೆ ಕಾರಣವಾಗಿದೆ. 2018ರ ಅವಧಿಯಲ್ಲಿನ ಇತರೆ ತಿಂಗಳಿನಲ್ಲಿ ಮಾರಾಟಗೊಂಡ ಬೈಕ್ ಸಂಖ್ಯೆಗಳಿಗಿಂತ ಸೆಪ್ಟೆಂಬರ್ ಅವಧಿಯಲ್ಲಿ ಅತಿ ಬೈಕ್‌ಗಳು ಮಾರಾಟವಾಗಿದ್ದು, ಟಾಪ್ 1ರಲ್ಲಿ ಅಚ್ಚರಿಯ ಹೆಸರು ಕೇಳಿಬಂದಿದೆ.

ಬೈಕ್ ಮಾರಾಟ ವಿಭಾಗದಲ್ಲಿ ಸದ್ಯ ಹೋಂಡಾ ಮತ್ತು ಹೀರೋ ನಡುವೆ ಭಾರೀ ಪೈಪೋಟಿ ಇದ್ದು, ಕಳೆದ ಕೆಲ ತಿಂಗಳಿನಿಂದ ಅಗ್ರಸ್ಥಾನದಲ್ಲಿದ್ದ ಆಕ್ಟಿವಾ ಸ್ಕೂಟರ್ ಈ ಬಾರಿ ಹೀರೋ ಸ್ಲೈಂಡರ್ ಅಬ್ಬರದ ಮುಂದೆ ನೆಲಕಚ್ಚಿದೆ. ಜೊತೆಗೆ ಟಾಪ್ 5ರ ಪಟ್ಟಿಯಲ್ಲಿ 3 ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹೀರೋ ಸಂಸ್ಥೆಯು ಈ ವರ್ಷದಲ್ಲಿ ಗರಿಷ್ಠ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಹಾಗಾದ್ರೆ ಟಾಪ್ 10ರ ಪಟ್ಟಿಯಲ್ಲಿರುವ ಪ್ರಮುಖ ಬೈಕ್ ಮಾರಾಟ ಪ್ರಮಾಣ ಎಷ್ಟು ಎಂದು ತಿಳಿಯಲು ಮುಂದೆ ಓದಿ.

01. ಹೀರೋ ಸ್ಪೈಂಡರ್
ಕಳೆದ 1 ವರ್ಷದಿಂದ ಒಂದೇ ಪ್ರಮಾಣದ ಬೇಡಿಕೆಯನ್ನು ಕಾಯ್ದುಕೊಂಡಿರುವ ಸ್ಪೈಂಡರ್ ಬೈಕ್ ಮಾರಾಟದಲ್ಲಿ ಯಾವುದೇ ಬದಲಾವಣೆ ಇಲ್ಲವಾದ್ರೂ ಸೆಪ್ಟೆಂಬರ್ ಅವಧಿಯಲ್ಲಿ ಮಾತ್ರ ಆಕ್ಟಿವಾ ಸ್ಕೂಟರ್ ಮಾರಾಟಕ್ಕಿಂತ ಹೆಚ್ಚಿನ ಬೇಡಿಕೆ ಪಡೆದಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ಸತತ ಎರಡನೇ ಸ್ಥಾನದಲ್ಲಿ ಸ್ಪೈಂಡರ್ ಈ ಬಾರಿ 2,85,508 ಬೈಕ್‌ಗಳನ್ನು ಮಾರಾಟ ಮಾಡಿ ಮೊದಲ ಸ್ಥಾನ ತನ್ನದಾಗಿಸಿಕೊಂಡಿದೆ.

02. ಹೋಂಡಾ ಆಕ್ಟಿವಾ
ಕಳೆದ ಫೆಬ್ರುವರಿಯಲ್ಲಿ ಬಿಡುಗಡೆಯಾದ ಆಕ್ಟಿವಾ 5ಜಿ ಸ್ಕೂಟರ್‌ಗಳು ಸದ್ಯ ಯುವ ಸಮುದಾಯದ ಪ್ರಮುಖ ಆಕರ್ಷಣೆಯಾಗುತ್ತಿದ್ದು, ಈ ಮೊದಲ ಬಾರಿಗೆ ಸ್ಪೈಂಡರ್ ಬೈಕ್‌ಗಿಂತಲೂ ಕಡಿಮೆ ಮಾರಾಟವಾಗಿವೆ. ಕಳೆದ ಅಗಸ್ಟ್ ಅವಧಿಯಲ್ಲಿ 3,10,851 ಆಕ್ಟಿವಾ ಸ್ಕೂಟರ್‌ಗಳು ಮಾರಾಟವಾಗಿದ್ದರೆ, ಸೆಪ್ಟೆಂಬರ್ ಅವಧಿಯಲ್ಲಿ 2,84,809 ಸ್ಕೂಟರ್‌ಗಳು ಮಾರಾಟವಾಗಿವೆ.

03. ಹೀರೋ ಹೆಚ್ಎಫ್ ಡಿಲಕ್ಸ್
ಹೀರೋ ಮೋಟೊಕಾರ್ಪ್ ಸಂಸ್ಥೆಯ ಜನಪ್ರಿಯ ಬೈಕ್ ಎಂದೇ ಕರೆಯಲ್ಪಡುವ ಎಚ್ಎಫ್ ಡಿಲಕ್ಸ್ ಮಾದರಿಯು ಸೆಪ್ಟೆಂಬರ್ ತಿಂಗಳಿನಲ್ಲಿ ಬರೋಬ್ಬರಿ 2,01,240 ಬೈಕ್‌ಗಳನ್ನು ಮಾರಾಟವಾಗುವ ಮೂಲಕ ಟಾಪ್ 3 ಸ್ಥಾನಕ್ಕೆರಿದ್ದು, ಕೆಲವು ತಿಂಗಳಿನಿಂದಲೂ ಟಾಪ್ 10ರ ಪಟ್ಟಿಯಲ್ಲಿ 3 ಅಥವಾ 4 ಸ್ಥಾನದಲ್ಲೇ ತನ್ನ ಜನಪ್ರಿಯತೆ ಕಾಯ್ದುಕೊಂಡಿದೆ.

04. ಟಿವಿಎಸ್ ಎಕ್ಸ್ಎಲ್ ಸೂಪರ್
ಗ್ರಾಮೀಣ ವಿಭಾಗದಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಟಿವಿಎಸ್ ಎಕ್ಸ್ಎಲ್ ಸೂಪರ್ ಬೈಕ್‌ಗಳು ಮಾರಾಟದಲ್ಲಿ ಇತರೆ ಜನಪ್ರಿಯ ಬೈಕ್‌ಗಳನ್ನೇ ಹಿಂದಿಕ್ಕಿದ್ದು, ಸೆಪ್ಟೆಂಬರ್ ಅವಧಿಯಲ್ಲಿ ಬರೋಬ್ಬರಿ 99,593 ಬೈಕ್‌ಗಳು ಮಾರಾಟಗೊಳ್ಳುವ ಮೂಲಕ 9 ಸ್ಥಾನದಿಂದ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

05. ಹೀರೋ ಪ್ಯಾಶನ್
ಸೆಪ್ಟೆಂಬರ್ ಅವಧಿಯಲ್ಲಿ ಹೀರೊ ಮೊಟೊಕಾರ್ಪ್ ಸಂಸ್ಥೆಯು 95,057 ಪ್ಯಾಶನ್ ಬೈಕ್‌ಗಳನ್ನ ಮಾರಾಟ ಮಾಡಿದ್ದು, ಹೀರೋ ಪ್ಯಾಶನ್ ಬೈಕ್‌ಗಳು 97ಸಿಸಿ ಎಂಜಿನ್‌ನೊಂದಿಗೆ ಪ್ರೊ, ಪ್ರೋ110 ಮತ್ತು 109ಸಿಸಿ ಎಂಜಿನ್ ಸಾಮರ್ಥ್ಯದ ಎಕ್ಸ್ ಪ್ರೊ ಎಂಬ ಮೂರು ಬಗೆಗಳಲ್ಲಿ ಖರೀದಿಗೆ ಲಭ್ಯವಿವೆ.

06. ಟಿವಿಎಸ್ ಜೂಪಿಟರ್
ಸ್ಕೂಟರ್ ವಿಭಾಗದಲ್ಲಿ ಆಕ್ಟಿವಾ ನಂತರದ ಸ್ಥಾನದಲ್ಲಿರುವ ಟಿವಿಎಸ್ ಜೂಪಿಟರ್ ಸ್ಕೂಟರ್‌ಗಳು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಈ ಮೂಲಕ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 6ನೇ ಸ್ಥಾನದಲ್ಲಿದ್ದು, ಸೆಪ್ಟೆಂಬರ್ ಅವಧಿಯಲ್ಲಿ 90,738 ಸ್ಕೂಟರ್‌ಗಳು ಮಾರಾಟವಾಗಿವೆ.

07. ಬಜಾಜ್ ಸಿಟಿ 100
ಹೊಸ ವಿನ್ಯಾಸಗಳೊಂದಿಗೆ ಸಿದ್ಧಗೊಂಡಿರುವ ಸಿಟಿ 100 ಬೈಕ್ ಒಟ್ಟು 3 ವಿವಿಧ ನಮೂನೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ಸಿಟಿ ಬೈಕ್‌ಗಳು ಸೆಪ್ಟೆಂಬರ್ ಅವಧಿಯಲ್ಲಿ 89,387 ಬೈಕ್‌ಗಳು ಮಾರಾಟಗೊಂಡಿವೆ.
MOST READ: ವಿಮೆ ಹೆಸರಿನಲ್ಲಿ ಗ್ರಾಹಕನಿಗೆ ಸೇಲ್ಸ್ ಮ್ಯಾನೇಜರ್‍ನಿಂದ ಮಹಾಮೋಸ..! ಕೊನೆಗೆ ಏನಾಯ್ತು ಗೊತ್ತಾ?

08. ಬಜಾಜ್ ಪಲ್ಸರ್
ಯುವ ಸಮುದಾಯ ಹಾಟ್ ಫೆವರಿಟ್ ಎಂದೇ ಜನಪ್ರಿಯವಾಗಿರುವ ಬಜಾಜ್ ಪಲ್ಸರ್ ಸರಣಿ ಬೈಕ್‌ಗಳು ಭಾರತದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ್ದು, ಇದರಲ್ಲಿ ಪಲ್ಸರ್ 150 ಬೈಕ್‌ಗಳಿಗೆ ಭಾರೀ ಬೇಡಿಕೆಯಿದೆ. ಹೀಗಾಗಿಯೇ ಕಳೆದ ಸೆಪ್ಟೆಂಬರ್ ಅವಧಿಯಲ್ಲಿ ಬಜಾಜ್ ಸಂಸ್ಥೆಯು 89,374 ಬೈಕ್‌ಗಳನ್ನು ಮಾರಾಟ ಮಾಡಿದೆ.

09. ಹೀರೋ ಗ್ಲ್ಯಾಮರ್
ಸೆಪ್ಟೆಂಬರ್ ಅವಧಿಯಲ್ಲಿ ಬರೋಬ್ಬರಿ 82,864 ಹೀರೋ ಗ್ಲ್ಯಾಮರ್ ಬೈಕ್‌ಗಳು ಮಾರಾಟಗೊಂಡಿದ್ದು, ಕಳೆದ ಎರಡು ತಿಂಗಳ ಹಿಂದಿನ ಬೈಕ್ ಮಾರಾಟಕ್ಕೆ ಹೋಲಿಕೆ ಮಾಡಿದಾಗ ಸಿಟಿ 100 ಬೈಕಿಗಿಂತ ಕಡಿಮೆ ಮಾರಾಟ ದಾಖಲೆ ಮಾಡಿದೆ.
MOST READ: OMG! 90 ಲಕ್ಷ ಬೆಲೆಯ ಈ ಕಾರಿನ ಹೆಸರನ್ನು ಒಮ್ಮೆ ಸರಿಯಾಗಿ ನೋಡಿ..!

10. ಹೋಂಡಾ ಸಿಬಿ ಶೈನ್
ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನ ಮಾರಾಟದಲ್ಲಿ ದಾಖಲೆ ಬರೆದಿರುವ 125 ಸಿಸಿ ಸಿಬಿ ಶೈನ್ ಬೈಕ್‌ಗಳು ಅಗಸ್ಟ್ ತಿಂಗಳಿನಲ್ಲಿ 1,10,300 ಬೈಕ್‌ಗಳು ಮಾರಾಟವಾಗಿತ್ತು. ಆದ್ರೆ ಈ ಬಾರಿ ಹೀರೋ ಸಂಸ್ಥೆಯ ಅಬ್ಬರದ ಮುಂದೆ ತುಸು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದು, ಸೆಪ್ಟೆಂಬರ್ ಅವಧಿಯಲ್ಲಿ 80,612 ಬೈಕ್‌ಗಳನ್ನು ಮಾತ್ರವೇ ಮಾರಾಟ ಮಾಡಲು ಶಕ್ತವಾಗಿದೆ.


Click it and Unblock the Notifications








