ಟಿವಿಎಸ್ ಅಪಾಚೆ ಆರ್‌ಆರ್310 ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..

ಈ ಹಿಂದೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.2.05 ಲಕ್ಷ ಬೆಲೆ ಹೊಂದಿದ್ದ ಆರ್‌ಆರ್310 ಬೈಕ್‌ಗಳ ಬೆಲೆಯನ್ನು ಇದೀಗ ಹೆಚ್ಚುವರಿಯಾಗಿ ರೂ.18 ಸಾವಿರ ಏರಿಕೆ ಮಾಡಲಾಗಿದೆ.

By Praveen Sannamani

ಕಳೆದ ಡಿಸೆಂಬರ್‌ನಲ್ಲಿ ಅಪಾಚೆ ಆರ್‌ಆರ್310 ಬೈಕ್‌ಗಳನ್ನು ಬಿಡುಗಡೆ ಮಾಡಿದ್ದ ಟಿವಿಎಸ್ ಸಂಸ್ಥೆಯು ಇದೀಗ ಹೊಸ ಬೈಕ್‌ಗಳ ಬೆಲೆಯಲ್ಲಿ ಭಾರೀ ಬದಲಾವಣೆ ತಂದಿದೆ. ಈ ಹಿಂದೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.2.05 ಲಕ್ಷ ಬೆಲೆ ಹೊಂದಿದ್ದ ಆರ್‌ಆರ್310 ಬೈಕ್‌ಗಳ ಬೆಲೆಯನ್ನು ಇದೀಗ ಹೆಚ್ಚುವರಿಯಾಗಿ ರೂ.18 ಸಾವಿರ ಏರಿಕೆ ಮಾಡಲಾಗಿದೆ.

ಟಿವಿಎಸ್ ಅಪಾಚೆ ಆರ್‌ಆರ್10 ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..

ಹೊಸ ದರಗಳು ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಹೊಸ ದರ ಪಟ್ಟಿ ಪ್ರಕಟಿಸಿರುವ ಟಿವಿಎಸ್ ಸಂಸ್ಥೆಯ ಈ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದು, ಅಪಾಚೆ ಆರ್‌ಆರ್310 ಬೈಕ್ ಖರೀದಿದಾಗಿ ಗ್ರಾಹಕರು ಮುಂಗಡ ಪಾವತಿಸಿದ ನಂತರ ಬರೋಬ್ಬರಿ 3 ತಿಂಗಳಿನಿಂದ 6 ತಿಂಗಳು ಕಾಲ ಕಾಯಬೇಕಾದ ಅನಿವಾರ್ಯತೆ ಇದೆ.

ಟಿವಿಎಸ್ ಅಪಾಚೆ ಆರ್‌ಆರ್10 ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..

ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಕೇಂಪು ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುವ ಅಪಾಚೆ ಆರ್‌ಆರ್310 ಬೈಕ್‌ಗಳು ಬಣ್ಣದ ಆಧಾರದ ಮೇಲೆ ಕಾಯುವಿಕೆ ಅವಧಿಯು ನಿರ್ಧಾರವಾಗಲಿದ್ದು, ಕನಿಷ್ಠ 3 ತಿಂಗಳಾದ್ರೂ ಕಾಯಲೇಬೇಕಂತೆ.

ಟಿವಿಎಸ್ ಅಪಾಚೆ ಆರ್‌ಆರ್10 ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..

ಇನ್ನು ಬಿಎಂಡಬ್ಲ್ಯು ಇಂಜಿನಿಯರಿಂಗ್‌ನ 313 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಎಂಜಿನ್ ಆಯ್ಕೆಯನ್ನು ಈ ಹೊಸ ಅಪಾಚೆ ಆರ್‌ಆರ್310 ಬೈಕ್ ಹೊಂದಿದ್ದು, ಇದೇ ಎಂಜಿನ್ ಆಯ್ಕೆಯನ್ನು ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕುಗಳಲ್ಲೂ ಸಹ ನೀಡಲಾಗಿದೆ.

ಟಿವಿಎಸ್ ಅಪಾಚೆ ಆರ್‌ಆರ್10 ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..

ಹೀಗಾಗಿಯೇ ಅಪಾಚೆ ಆರ್‌ಆರ್310 ಬೈಕ್ ಕೇವಲ 7.17 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ. ಇನ್ನು ಈ ಬೈಕ್ ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಾಯಿಸಲಿದೆ. ಈ ಬೈಕ್ 169.5 ಕಿ.ಗ್ರಾಂ ತೂಗುತ್ತದೆ. ಇನ್ನು ಮಿಚೆಲಿನ್ ಪೈಲಟ್ ಸ್ಟ್ರೀಟ್ ರೇಡಿಯಲ್ ಟೈರುಗಳನ್ನು ಅಳವಡಿಸಲಾಗಿದೆ.

ಟಿವಿಎಸ್ ಅಪಾಚೆ ಆರ್‌ಆರ್10 ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..

ಅಪಾಚೆ ಆರ್‌ಆರ್310 ಬೈಕ್ 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಂಡಿದ್ದು, ಈ ಎಂಜಿನ್ 28 ಎನ್ಎಂ ತಿರುಗುಬಲದಲ್ಲಿ 34 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಹಾಗು 6-ಸ್ಪೀಡ್ ಗೇರ್ ಬಾಕ್ಸ್ ಸೌಲಭ್ಯ ಪಡೆದುಕೊಂಡಿದೆ.

ಟಿವಿಎಸ್ ಅಪಾಚೆ ಆರ್‌ಆರ್10 ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..

ಟಿವಿಎಸ್ ಅಪಾಚೆ ಆರ್‌ಆರ್310 ಮೋಟಾರ್ ಸೈಕಲ್ 'ಲೈಟ್ ವೆಯಿಟ್ ಟ್ರೆಲ್ಲಿಸ್ ಫ್ರೇಮ್' ಆಧಾರದ ಮೇಲೆ ನಿರ್ಮಾಣವಾಗಿದೆ ಮತ್ತು ಕಯಾಬಾನಿಂದ ಟ್ಯೂನ್ ಮಾಡಲಾಗಿರುವ ಸಸ್ಪೆಷನ್ ನೋಡಬಹುದಾಗಿದೆ.

ಟಿವಿಎಸ್ ಅಪಾಚೆ ಆರ್‌ಆರ್10 ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..

ಆರ್‌ಟಿಆರ್ ಹೆಸರು ಸ್ಪೋರ್ಟ್ಸ್ ಬೈಕ್ ಪ್ರತಿನಿಧಿಸಲಿದೆ ಮತ್ತು ಆರ್‌ಆರ್ ಹೆಸರು ಸೂಪರ್ ಸ್ಪೋರ್ಟ್ ಪ್ರತಿನಿಧಿಸಲಿದೆ. ಸದ್ಯ ಈ ಟಿವಿಎಸ್‌ನ ಪ್ರೀಮಿಯಂ ಪೋರ್ಟ್‌ಫೋಲಿಯೋ ವಿಭಾಗವು ಸ್ಪೋರ್ಟ್ಸ್, ಟೂರಿಂಗ್ ಮತ್ತು ಹೆರಿಟೇಜ್ ಮಾದರಿಗಳನ್ನು ಒಳಗೊಂಡಿದೆ.

ಟಿವಿಎಸ್ ಅಪಾಚೆ ಆರ್‌ಆರ್10 ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..

ಈ ಬೈಕ್ ಭಾರತದಲ್ಲಿ ಪ್ರವೇಶ ಮಟ್ಟದ ಕ್ರೀಡಾ ಬೈಕ್‌ಗಳ ವಿಭಾಗದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಕೆಟಿಎಂ ಆರ್‌ಸಿ390, ನಿಂಜಾ 300, ಬೆನೆಲ್ಲಿ 302 ಆರ್ ಮತ್ತು ಬಜಾಜ್ ಡೊಮಿನಾರ್ 400 ಬೈಕುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

More from DriveSpark

Article Published On: Wednesday, April 4, 2018, 13:50 [IST]
English summary
TVS Apache RR310 Prices Increased — Waiting Period Still Six Months.
Read more on apache
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+