2018ರ ಅಪಾಚೆ ಆರ್‍ಟಿಆರ್ 160 v/s ಪಲ್ಸರ್ ಎನ್ಎನ್160... ಇವುಗಳಲ್ಲಿ ಯಾವುದು ಬೆಸ್ಟ್.?
ಭಾರತದಲ್ಲಿ ಮೂರನೇ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ತನ್ನ ಹೊಸ ಅಪಾಚೆ ಆರ್‍ಟಿಆರ್ 160 4ವಿ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹೊಸ ಎಂಜಿನ್ ಮತ್ತು ಹಲವಾರು ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡಿರುವ ಹೊಸ ಬೈಕಿನ ಬೆಲೆಯನ್ನು ಆರಂಭಿಕವಾಗಿ ದೆಹಲಿಯ ಎಕ್ಸ್ ಶೋರೊಂ ಪ್ರಕಾರ ರೂ 81,490ಕ್ಕೆ ನಿಗದಿ ಮಾಡಲಾಗಿದೆ.

ಅಪಾಚೆ ಆರ್‍ಟಿಆರ್ 160 4ವಿ ಬೈಕ್ ಹೊಸದಾದ ಎಂಜಿನ್ ಅನ್ನು ಪಡೆದು 160ಸಿಸಿ ಸರಣಿಯಲ್ಲಿ ಜನಪ್ರಿಯತೆಯನ್ನು ಗಳಿಸಲು ಬಿಡುಗಡೆಗೊಂಡಿದ್ದು, ಈಗಾಗಲೇ ಹೊಸದಾಗಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 160ಎನ್ಎಸ್ ಬೈಕ್ ಕೂಡ 160ಸಿಸಿ ಬೈಕ್‍ಗಳ ಸರಣಿಯಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ ಇವೆರಡರಲ್ಲಿ ಯಾವುದು ಉತ್ತಮ ಎಂಬುದರ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಬೈಕ್ ವಿನ್ಯಾಸಗಳು
ಅಪಾಚೆ ಆರ್‍ಟಿಆರ್ 160 4ವಿ ಪೂರ್ಣ ವಿನ್ಯಾಸವನ್ನು ತನ್ನ ಅಪಾಚೆ ಆರ್‍ಟಿಆರ್ 200 4ವಿ ಬೈಕ್‍ನಿಂದ ಪಡೆದಿದ್ದು, ಶಾರ್ಪ್ ಹೆಡ್‍ಲ್ಯಾಂಪ್‍ನೊಂದಿಗೆ ಇಂಟಿಗ್ರೇಟೆಡ್ ಎಲ್ಇಡಿ ಡಿಎಲ್ಆರ್ ಗಳನ್ನು ಪಡೆದಿದೆ. ಇದರೊಂದಿಗೆ ಆಕರ್ಷಕವಾದ ಫ್ಯುಯಲ್ ಟ್ಯಾಂಕ್ ಅನ್ನು ಪಡೆದಿದೆ.

ಬೈಕಿನ ಸೈಡ್ ಫ್ರೊಫೈಲ್ ಸಿಲ್ವರ್ ಬಣ್ಣದಿಂದ ಅಪಾಚೆ ಬ್ರಾಂಡ್‍ನೊಂದಿಗೆ ಸಜ್ಜುಗೊಂಡಿದ್ದು, ಶಾರ್ಪ್ ಎಂಜಿನ್ ಬೆಲ್ಲಿ ಪ್ಯಾನ್ ಅನ್ನು ಹೊಂದಿದೆ. ಫ್ಯುಯಲ್ ಟ್ಯಾಂಕ್ ಮೇಲಿನ ಚೆಕ್ವಾರ್ಡ್ ಫ್ಲಾಗ್ ಬೈಕ್‍ಗೆ ರೇಸಿಂಗ್ ಡಿಎನ್ಎ ರೂಪವನ್ನು ನೀಡಿದ್ದು, ಇನ್ಸೈಗ್ನಾ ವನ್ನು ಫ್ಯುಯಲ್ ಟ್ಯಾಂಕ್ ಮೇಲೆ ಬಳಸಿದ್ದರಿಂದ ಬೈಕಿಗೆ ಪ್ರೀಮಿಯಂ ಟಚ್ ಸಿಕ್ಕಿದೆ.

ಟೈಲ್ ಸೆಕ್ಷನ್ ಸ್ಪೋರ್ಟಿ ಸ್ಪ್ಲಿಟ್ ಗ್ರ್ಯಾಬ್ ರೈಲ್. ಎಲ್ಇಡಿ ಟೈಲ್‍ಲೈಟ್ ಮತ್ತು ಚಿಕ್ಕದಾದ ರಿಯರ್ ಫೆಂಡರ್‍ಗಳನ್ನು ಪಡೆದಿದ್ದು, ಅಪಾಚೆ ಆರ್‍ಟಿಆರ್ 200 4ವಿ ಬೈಕ್‍ನಂತೆಯೇ ಡ್ಯುಯಲ್ ಬ್ಯಾರೆಲ್ ಎಕ್ಸಾಸ್ಟ್ ಅನ್ನು ಕಾಣಬಹುದಾಗಿದೆ.

ಬಜಾಜ್ ಪಲ್ಸರ್ ಎನ್ಎಸ್160 ಕೂಡಾ ಶಾರ್ಪ್ ಹೆಡ್‍ಲ್ಯಾಂಪ್‍ನೊಂದಿಗೆ ಟ್ವಿನ್ ಪಿಲೋಟ್ ಲ್ಯಾಂಪ್ಸ್ ಪಡೆದಿದ್ದು, ಮಸ್ಕ್ಯುಲರ್ ಟ್ಯಾಂಕ್ ಜೊತೆಗೆ ಶ್ರಾಡ್ಸ್ ಮತ್ತು 160 ಬ್ರ್ಯಾಂಡಿಂಗ್ ಅನ್ನು ಪಡೆದಿದೆ. ಸೈಡ್ ಪ್ಯಾನೆಲ್‍ಗಳು ಮತ್ತು ಫ್ರೇಮ್ ಕಾಣೆಯಾಗಿದ್ದು, ಎಂಜಿನ್ ಬೆಲ್ಲಿ ಪ್ಯಾನ್ ಬಳಕೆಯು ಬೈಕಿನ ರೂಪವನ್ನು ಹೆಚ್ಚಿಸಲಿದೆ.

ಬಜಾಜ್ ಪಲ್ಸರ್ ಎನ್ಎಸ್160 ಟೈಲ್ ಸೆಕ್ಷನ್ ಟ್ವಿನ್ ಎಲ್ಇಡಿ ಟೈಲ್‍ಲೈಟ್, ಸ್ಪೋರ್ಟಿ ಗ್ರ್ಯಾಬ್ ರೈಲ್, ರೀರ್ ಟೈರ್ ಹಗ್ಗರ್ ಮತ್ತು ಟೈಲ್ ಟೈಡಿ ಫೆಂಡರ್ ವಿನ್ಯಾಸವನ್ನು ಪಡೆದಿದೆ. ಡ್ಯುಯಲ್ ಟೋನ್ ಸ್ಕೀಮ್ ಮತ್ತು ಸೊಗಸಾದ ಬಣ್ಣದಿಂದ ರಿಮ್ ಸ್ಟ್ರಿಪ್ಸ್ ಬಳಕೆಯು ಬೈಕ್‍ಗೆ ಸ್ಪೊರ್ಟಿ ಲುಕ್ ನೀಡಿದೆ.
ಒಟ್ಟಾರೆ ವಿನ್ಯಾಸದ ರೇಟಿಂಗ್
2018 ಅಪಾಚೆ ಆರ್‍ಟಿಆರ್ 160 ವಿ4- 8/10
ಬಜಾಜ್ ಪಲ್ಸರ್ ಎನ್ಎನ್160 - 8/10

ಬೈಕಿನ ವೈಶಿಷ್ಟ್ಯತೆಗಳು
ಹೊಸದಾಗಿ ಬಿಡುಗಡೆಗೊಂಡ 2018 ಅಪಾಚೆ ಆರ್‍ಟಿಆರ್ 160 ವಿ4 ಬೈಕ್ ಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಎಲ್ಇಡಿ ಡಿಆರ್‍ಎಲ್, ಎಲ್ಇಡಿ ಟೈಲ್‍ಲೈಟ್, ಸಿಂಗಲ್ ಪೀಸ್ ಹ್ಯಾಂಡಲ್‍ಬಾರ್, ರ್ಯಾಮ್ ಏರ್ ಇಂಟೇಕ್ ಮತ್ತು ಅಲಾಯ್ ಚಕ್ರಗಳನ್ನು ಪಡೆದುಕೊಂಡಿದೆ.

ಟೆಲಿಸ್ಕೋಪಿಕ್ ಫೊರ್ಕ್ಸ್ ಅಪ್‍ಫ್ರಂಟ್, ಹಿಂಭಾಗದಲ್ಲಿ ಶೊವಾ ಟ್ಯೂನ್ಡ್ ಮೋನೊಶಾಕ್ ಸಸ್ಪೆಷನ್ ಮತ್ತು ಡ್ಯುಯಲ್ ಬ್ಯಾರೆಲ್ ಎಕ್ಸಾಸ್ಟ್ ಮಫ್ಲರ್‍ಅನ್ನು ಪದೆದಿದೆ. ಇದಲ್ಲದೆ ವಿಶೇಷವಾಗಿ ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ಪಡೆದಿದೆ.

ಬಜಾಜ್ ಪಲ್ಸರ್ ಎನ್ಎಸ್160 ಬೈಕ್ ಅನಾಲಾಗ್ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಬ್ಯಾಕ್‍ಲಿಟ್ ಸ್ವಿಚ್, ಟ್ವಿನ್ ಟೈಲ್‍ಲೈಟ್, ಅಂಡರ್ ಬೆಲ್ಲಿ ಎಕ್ಸಾಸ್ಟ್ ಮತ್ತು ಕ್ಲಿಪ್-ಆನ್ ಹ್ಯಾಂಡಲ್‍ಬಾರ್ ಗಳನ್ನು ಪಡೆದಿದ್ದು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಮೊನೋಶಾರ್ಕ್ ಸಸ್ಪೆಷೆನ್ ಸೆಟಪ್, ಮುಂಭಾಗದಲ್ಲಿ ಸಿಂಗಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದಿದೆ.
ಒಟ್ಟಾರೆ ವೈಶಿಷ್ಟ್ಯತೆಗಳ ರೇಟಿಂಗ್
2018 ಅಪಾಚೆ ಆರ್‍ಟಿಆರ್ 160 ವಿ4 - 8/10
ಬಜಾಜ್ ಪಲ್ಸರ್ ಎನ್ಎನ್160 - 8/10

ಎಂಜಿನ್, ಗೇರ್‍ಬಾಕ್ಸ್ ಮತ್ತು ಮೈಲೇಜ್
2018 ಅಪಾಚೆ ಆರ್‍ಟಿಆರ್ 160 ವಿ4 159ಸಿಸಿ ಸಿಂಗಲ್ ಸಿಲಿಂಡರ್, 4-ವಾಲ್ವೆ ಆಯಿಲ್ ಕೂಲ್ಡ್ ಎಂಜಿನ್‍ನ ಕಾರ್ಬರೆಟೆಡ್ ವೇರಿಯಂಟ್‌ಗಳು 16.28-ಬಿಹೆಚ್‍ಪಿ ಮತ್ತು ಇಎಫ್ಐ ವರ್ಷನ್ 16.56-ಬಿಹೆಚ್‍ಪಿ ಯನ್ನು ಉತ್ಪಾದಿಸಲಿದ್ದು, 14.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ.

ಇನ್ನು ಇದರಲ್ಲಿ ಬಳಸಲಾಗ ಎಂಜಿನ್ಅನ್ನು 5 ಸ್ಪೀಡ್ ಗೇರ್‍ಬಾಕ್ಸ್ ಗೆ ಜೋಡಿಸಲಾಗಿದ್ದು, ಪ್ರತೀ ಲೀಟರ್‍ಗೆ 40-45 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಬಜಾಜ್ ಪಲ್ಸರ್ ಎನ್ಎಸ್160 ಕೂಡಾ 160.3ಸಿಸಿ ಸಿಂಗಲ್ ಸಿಲಿಂಡರ್, 4 ವಾಲ್ವೆ, ಆಯಿಲ್ ಕೂಲ್ಡ್ ಎಂಜಿನ್‌ನೊಂದಿಗೆ 15.28-ಬಿಹೆಚ್‍ಪಿ ಮತ್ತು 14.6-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು 5 ಸ್ಪೀಡ್ ಗೇರ್‍ಬಾಕ್ಸ್ ಗೆ ಜೋಡಿಸಲಾಗಿದೆ. ಜೊತೆಗೆ ಪ್ರತಿ ಲೀಟರ್‍ಗೆ 40-45 ಕಿಲೋ ಮೀಟರ್ ಮಲೇಜ್ ಅನ್ನು ನೀಡಲಿದೆ.
ಒಟ್ಟಾರೆ ಎಂಜಿನ್, ಗೇರ್‍ಬಾಕ್ಸ್ ಮತ್ತು ಮೈಲೇಜ್ ರೇಟಿಂಗ್
2018 ಅಪಾಚೆ ಆರ್‍ಟಿಆರ್ 160 ವಿ4 - 8/10
ಬಜಾಜ್ ಪಲ್ಸರ್ ಎನ್ಎನ್160 - 7/10

ಬೈಕ್‍ಗಳ ಬೆಲೆ
2018 ಅಪಾಚೆ ಆರ್‍ಟಿಆರ್ 160 ವಿ4 ಮೂರು ಮಾದರಿಗಳಲ್ಲಿ ಲಭ್ಯವಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ಫ್ರಂಟ್ ಡಿಸ್ಕ್ ಬ್ರೇಕ್‍ನೊಂದಿಗೆ ಕಾರ್ಬ್ ಬಳಸಲಾದ ಮಾದರಿಯು ರೂ.81,149, ಕಾರ್ಬ್ ವಿತ್ ಡಿಸ್ಕ್ ಬ್ರೇಕ್ ಮಾದರಿಯು ರೂ.84,490 ಮತ್ತು ಇಎಫ್ಐ ಜೊತೆಗೆ ಡಿಸ್ಕ್ ಬ್ರೇಕ್ ಮಾದರಿಯು ರೂ.89,990ಕ್ಕೆ ಖರೀದಿಸಬಹುದು.

ಇನ್ನು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್160 ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ 81,626 ಸಾವಿರಕ್ಕೆ ಲಭ್ಯವಿದ್ದು, ಇದು ಕೂಡಾ ಕಮ್ಯುಟರ್ ಬೈಕ್ ರೈಡರ್‌ಗಳ ಆಯ್ಕೆಯಲ್ಲಿ ನೆಚ್ಚಿನ ಬೈಕ್ ಮಾದರಿಯಾಗಿದೆ ಎನ್ನಬಹುದು.


Click it and Unblock the Notifications








