ಬರಲಿರುವ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕಿನ ವಿಶೇಷತೆಗಳೇನು.?

ಇತ್ತೀಚೆಗಷ್ಟೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಟಿವಿಎಸ್ ಮೋಟಾರ್ಸ್ ಸಂಸ್ಥೆಯು ತನ್ನ ಹೊಸ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕ್‌ನ್ನು ಪ್ರದರ್ಶನಗೊಳಿಸಿದೆ.

By Rahul Ts

ಇತ್ತೀಚೆಗಷ್ಟೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಟಿವಿಎಸ್ ಮೋಟಾರ್ಸ್ ಸಂಸ್ಥೆಯು ತನ್ನ ಹೊಸ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕ್‌ನ್ನು ಪ್ರದರ್ಶನಗೊಳಿಸಿದ್ದು, ಹೊಸ ಬೈಕಿನ ವಿಶೇಷತೆಗಳ ಕುರಿತಾ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.

ಬರಲಿರುವ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕಿನ ವಿಶೇಷತೆಗಳೇನು.?

ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕ್‌ಗಳು ಮಾಲಿನ್ಯ ತಡೆಯುವ ವಿಶೇಷ ಗುಣಗಳನ್ನು ಹೊಂದಿರುವ ಬಗ್ಗೆ ಟಿವಿಎಸ್ ಹೇಳಿಕೊಂಡಿದ್ದು, ಎಥೆನಾಲ್ ಬೈಕ್ ಮಾದರಿಯು ವಿಷಕಾರಿಯಲ್ಲದ, ಬಯೊಡಿಗ್ರೇಡಬಲ್ ಮತ್ತು ಪೆಟ್ರೋಲ್‌ಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿಯಂತೆ.

ಬರಲಿರುವ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕಿನ ವಿಶೇಷತೆಗಳೇನು.?

ಮೊದಲೇ ಹೇಳಿದಂತೆ ಅಪಾಚೆ ಆರ್‌ಟಿಆರ್ ಎಥೆನಾಲ್ ಹಸಿರು ಗ್ರಾಫಿಕ್ಸ್ ಹೊರತುಪಡಿಸಿ ಸಾಮಾನ್ಯ ಬೈಕ್ ಮಾದರಿಗಳನ್ನೇ ಹೋಲುತ್ತಿದ್ದು, ಅಪಾಚೆ ಆರ್‌ಟಿಆರ್ 200 ಎಲ್ಇಡಿ DRLs, ಸ್ಪ್ಲಿಟ್-ಸೀಟುಗಳು, ಎಡ್ಜ್ ಬಾಡಿ ಪ್ಯಾನಲ್‌ಗಳು, ಅನೋಡೈಸ್ಡ್-ಗೋಲ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಹೊಂದಿರಲಿವೆ.

ಬರಲಿರುವ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕಿನ ವಿಶೇಷತೆಗಳೇನು.?

ಎಂಜಿನ್ ಸಾಮರ್ಥ್ಯ

197.75 ಸಿಸಿ ಏರ್-ಕೂಲ್ಡ್ ಫ್ಯುಯಲ್-ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, 20.7 ಬಿಹೆಚ್ ಪಿ ಮತ್ತು 18.1 ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬರಲಿರುವ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕಿನ ವಿಶೇಷತೆಗಳೇನು.?

ಹಾಗೆಯೇ ಎಂಜಿನ್‌ನ್ನು 5-ಸ್ಪೀಡ್ ಗೇರ್ ಬಾಕ್ಸಿಗೆ ಜೋಡಿಸಲಾಗಿದ್ದು, ಇದರ ಜೊತೆಗೆ ಅಪಾಚೆ ಎಥನಾಲ್ ಆವೃತ್ತಿಯು 'ಟ್ವಿನ್-ಸ್ಪ್ರೇ-ಟ್ವಿನ್-ಪೋರ್ಟ್' ವಿದ್ಯುತ್ ಫ್ಯುಯಲ್-ಇಂಜೆಕ್ಷನ್ ತಂತ್ರಜ್ಞಾನವನ್ನು ಸಹ ಹೊಂದಿದೆ.

ಬರಲಿರುವ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕಿನ ವಿಶೇಷತೆಗಳೇನು.?

ಹೆಚ್ಚಿನ ಪೆಟ್ರೋಲ್ ಎಂಜಿನ್‌ಗಳು ಎಥೆನಾಲ್‌ನಲ್ಲಿ ಚಲಾಯಿಸಬಹುದಾದರೂ ಅದರ ವಿಶ್ವಾಸಾರ್ಹತೆಗಾಗಿ ಎಂಜಿನ್‌ನಲ್ಲಿ ಕೆಲವು ಮಟ್ಟದ ಮಾರ್ಪಾಡುಗಳನ್ನು ಮಾಡಬೇಕಾಗಿದೆ. ಹೀಗಾಗಿ ಅಪಾಚೆ ಆರ್ ಟಿ ಆರ್ ಎಥೆನಾಲ್ ರೂಪಾಂತರವು ಇ 85-ಎಥೆನಾಲ್ ಪ್ರೇರಣೆಯೊಂದಿಗೆ ಎಂಜಿನ್ ಚಾಲನೆ ಪಡೆದಲಿದೆ.

ಬರಲಿರುವ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕಿನ ವಿಶೇಷತೆಗಳೇನು.?

ಇನ್ನು ರೆಗ್ಯುಲರ್ ಆವೃತ್ತಿಯ ಹಾಗೆಯೇ ಈ ಬೈಕ್ ಕೂಡ 90/90 ಮತ್ತು 130/70 ಆರ್17ರ ಟ್ಯೂಬ್ ಲೆಸ್ ಟೈರ್ ಗಳನ್ನು ಹೊಂದಿದ್ದು, 270ಎಂಎಂ ಮತ್ತು 240ಎಂಎಂ ಎರಡು ಕಡೆಯ ಪೆಟಲ್ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ.

ಬರಲಿರುವ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕಿನ ವಿಶೇಷತೆಗಳೇನು.?

ಎಥೆನಾಲ್ ಇಂಧನ, ವಿಷಕಾರಿಯಲ್ಲದ ಮತ್ತು ಜೈವಿಕ ವಿಘಟನೀಯವಾಗಿದ್ದು, ಪರಿಸರಕ್ಕೆ ಬಹಳ ಕಡಿಮೆ ಹಾನಿ ಉಂಟುಮಾಡುತ್ತದೆ. ಆದಾಗ್ಯೂ, ಎಥೆನಾಲ್-ಆಧಾರಿತ ಇಂಜಿನ್‌ಗಳು ನಿಯಮಿತವಾದ ಪೆಟ್ರೋಲ್‌ಗಿಂತ ಹೆಚ್ಚು ಇಂಧನವನ್ನು ಪಡೆದುಕೊಳ್ಳುತ್ತವೆ.

ಬರಲಿರುವ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕಿನ ವಿಶೇಷತೆಗಳೇನು.?

ಅಂತಿಮವಾಗಿ ಮೈಲೇಜ್ ಅಂಕಿಗಳ ಮೇಲೆ ಪರಿಣಾಮ ಬೀರುತ್ತಲ್ಲದೇ ಎಥೆನಾಲ್ ಅನ್ನು ಭಾರತದಲ್ಲಿ ವ್ಯಾಪಕವಾಗಿ ಬಳಸಿದಲ್ಲಿ ಸಾಮಾನ್ಯ ಇಂಧನಗಳ ಆಮದು ವೆಚ್ಚವನ್ನು ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಬಹುದು.

ಬರಲಿರುವ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಬೈಕಿನ ವಿಶೇಷತೆಗಳೇನು.?

ಇದೇ ಉದ್ದೇಶದಿಂದ ಟಿವಿಎಸ್ ಅಪಾಚೆ ಆರ್‌ಟಿಆರ್ 200 ಎಫ್ಐ ಎಥೆನಾಲ್ ಅಭಿವೃದ್ಧಿ ಮಾಡಲಾಗಿದ್ದು, ಹೊಸ ಬೈಕ್‌ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ..

Article Published On: Monday, February 19, 2018, 13:47 [IST]
English summary
TVS Apache RTR 200 Ethanol Top Features To Know: Reduced Emissions, New Graphics & More.
Read more on tvs motor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+