5 ವರ್ಷದಲ್ಲಿ ಮಾರಾಟಗೊಂಡ ಟಿವಿಎಸ್ ಜೂಪಿಟರ್ ಸ್ಕೂಟರ್ ಎಷ್ಟು ಗೊತ್ತಾ..?
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್5 ವರ್ಷದ ಕೆಳಗೆ ತಮ್ಮ ಜೂಪಿಟರ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, 5 ವರ್ಷಗಳಲ್ಲಿ 2.5 ಮಿಲಿಯನ್ ಜೂಪಿಟರ್ ಸ್ಕೂಟರ್‍ಗಳು ಮಾರಾಟಗೊಂಡಿವೆ.
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್5 ವರ್ಷದ ಕೆಳಗೆ ತಮ್ಮ ಜೂಪಿಟರ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, 5 ವರ್ಷಗಳಲ್ಲಿ 2.5 ಮಿಲಿಯನ್ ಜೂಪಿಟರ್ ಸ್ಕೂಟರ್‍ಗಳು ಮಾರಾಟಗೊಂಡಿವೆ. 2013ರಲ್ಲಿ ಬಿಡುಗಡೆಗೊಂಡ ಈ ಸ್ಕೂಟರ್ ಜನಪ್ರಿಯತೆಯನ್ನು ಪಡೆದಿದ್ದು, ಕಳೆದ 10 ತಿಂಗಳಿನಲ್ಲಿ ಸುಮಾರು 5 ಲಕ್ಷ ಯೂನಿಟ್ ಸ್ಕೂಟರ್‍ಗಳು ಮಾರಾಟಗೊಂಡಿದೆ.

ಈ ಯಶಸ್ವಿಯ ಬಗ್ಗೆ ಮಾತನಾಡುತ್ತ '5 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಟಿವಿಎಸ್ ಜುಪಿಟರ್ ಝ್ಯಾದಾ ಕಾ ಫಾಯ್ದಾ ಅವರ ಉನ್ನತ ಭರವಸೆಯೊಂದಿಗೆ ಪ್ರೀತಿಯ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ ಮತ್ತು ಆರಾಮ, ಅನುಕೂಲತೆ, ಮೈಲೇಜ್ ಮತ್ತು ಸ್ಥಳಾವಕಾಶದ ಆಧಾರದಲ್ಲಿ ಹೆಚ್ಚಿನದನ್ನು ನೀಡುತ್ತದೆ.

ದೇಶಾದ್ಯಂತ ಸ್ಕೂಟರೀಕರಣದ ಒಂದು ನಿರ್ಣಾಯಕ ಚಾಲಕರಾಗಿದ್ದಾರೆ ಮತ್ತು ಇದನ್ನು ಜೆ.ಡಿ. ಪವರ್ 2018 ಅಧ್ಯಯನದಿಂದ ಒಪ್ಪಿಕೊಳ್ಳಲಾಗಿದ್ದು, ಟಿವಿಎಸ್ ಜೂಪಿಟರ್ ಅನ್ನು ಹೆಚ್ಚು ಇಷ್ಟವಾಗುವ ಕಾರ್ಯನಿರ್ವಾಹಕ ಸ್ಕೂಟರ್ ಎಂಬ ಪ್ರಶಸ್ತಿಯನ್ನು ನೀಡಲಾಯಿತು.

ಈ ಪುರಸ್ಕಾರ, ನಮ್ಮ 2.5 ಮಿಲಿಯನ್ ಗ್ರಾಹಕರ ನಂಬಿಕೆಯ ಮತ್ತೊಂದು ಅಭಿವ್ಯಕ್ತಿ ನಿಜಕ್ಕೂ ವಿನೀತ ಅನುಭವ." ಎಂದು ಟಿವಿಎಸ್, ಸ್ಕೂಟರ್ ಮತ್ತು ಕಾರ್ಪೊರೇಟ್ ಬ್ರ್ಯಾಂಡ್‍ನ ಉಪಾಧ್ಯಕ್ಷ (ಮಾರ್ಕೆಟಿಂಗ್) ಪ್ರಯಾಣಿಕ ಮೋಟಾರ್ಸೈಕಲ್ಸ್ ಅನಿರುದ್ಧ ಹಲ್ಡಾರ್ ಹೇಳಿಕೊಂಡಿದ್ದಾರೆ.

110ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿರುವ ಜೂಪಿಟರ್ ಸ್ಕೂಟರ್‌ಗಳು 7.8-ಬಿಎಚ್‌ಪಿ ಹಾಗೂ 8-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದ್ದು, ಉತ್ತಮ ಇಂಧನ ಕಾರ್ಯಕ್ಷಮತೆ ನೀಡುವ ಮೂಲಕ ನಗರ ಪ್ರದೇಶದ ಜನತೆಯನ್ನು ಸೆಳೆಯಲ್ಲಿ ಯಶಸ್ವಿಯಾಗಿವೆ.

ಇದರ ಜೊತೆಗೆ ಟಿವಿಎಸ್ ವಿಶೇಷ ಎಂಜಿನ್ ಸಾಧನವಾದ ಇಕ್ನೋ ಮೀಟರ್ ಅನ್ನು ಜೂಪಿಟರ್ ಸ್ಕೂಟರ್‌ಗಳಲ್ಲೂ ಅಳವಡಿಕೆ ಇದ್ದು, ಇದರಿಂದ ಇಕೋ ಮೂಡ್ ಮತ್ತು ಪವರ್ ಮೂಡ್ ಆಯ್ಕೆಯೊಂದಿಗೆ ಸ್ಕೂಟರ್ ಸವಾರಿ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನ ವ್ಯವಸ್ಥೆಯು ಜೂಪಿಟರ್ ಸ್ಕೂಟರ್ ಆಯ್ಕೆಗೆ ಅತ್ಯತ್ತಮವಾಗಿದ್ದು, ಇಕೋ ಮೂಡ್ ಸೌಲಭ್ಯದಿಂದ ಅನಗತ್ಯ ಇಂಧನ ನಷ್ಟಕ್ಕೆ ಕಡಿವಾಣ ಹಾಕಬಹುದಾಗಿದೆ.

ಜೊತೆಗೆ ಗ್ರಾಹಕರ ಬೇಡಿಕೆ ಅನುಗುಣವಾಗಿ ವಿವಿಧ ಬಣ್ಣಗಳಲ್ಲಿ ಜೂಪಿಟರ್ ಸ್ಕೂಟರ್‌ಗಳು ಲಭ್ಯವಿದ್ದು, ರಾಯಲ್ ವೈನ್, ಮ್ಯಾಟೆ ಬ್ಲೂ, ಸ್ಟಾಲಿನ್ ಬ್ರೌನ್, ಟೈಟಾನಿಯಂ ಗ್ರೇ, ಮಿಡ್ ನೈಟ್ ಬ್ಲ್ಯಾಕ್, ವಲ್ಕನೋ ರೆಡ್, ಪ್ರಿಸ್ಟೈನ್ ವೈಟ್, ಜಡೆ ಗ್ರೀನ್ ಮತ್ತು ಮೈಸ್ಟಿಕ್ ಗೋಲ್ಡ್ ಆಯ್ಕೆ ಮಾಡಬಹುದಾಗಿದೆ.


Click it and Unblock the Notifications








