ಹೊಸ ಟ್ರೆಂಡ್ ಸೃಷ್ಠಿಸಲು ಬಂತು ಟಿವಿಎಸ್ ವಿನೂತನ ಸ್ಕೂಟರ್ ಎನ್‌ಟಾರ್ಕ್ 125

ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ನೀರಿಕ್ಷೆ ಹುಟ್ಟುಹಾಕಿದ್ದ ಟಿವಿಎಸ್ 125 ಸಿಸಿ ಹೊಸ ಸ್ಕೂಟರ್ ಎನ್‌ಟಾರ್ಕ್ 125 ಬಿಡುಗಡೆಯಾಗಿದೆ.

By Praveen

Recommended Video

Auto Rickshaw Explodes In Broad Daylight

ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ನೀರಿಕ್ಷೆ ಹುಟ್ಟುಹಾಕಿದ್ದ ಟಿವಿಎಸ್ 125 ಸಿಸಿ ಹೊಸ ಸ್ಕೂಟರ್ ಎನ್‌ಟಾರ್ಕ್ 125 ಬಿಡುಗಡೆಯಾಗಿದ್ದು, ಸುಧಾರಿತ ತಂತ್ರಜ್ಞಾನ, ಪವರ್ ಫುಲ್ ಎಂಜಿನ್ ಹೊಂದಿರುವ ಹೊಸ ಸ್ಕೂಟರಿನ ಬೆಲೆಗಳು ರೂ. 57,750 ರಿಂದ ಆರಂಭಗೊಳ್ಳಲಿವೆ.

ಹೊಸ ಟ್ರೆಂಡ್ ಸೃಷ್ಠಿಸಲು ಬಂತು ಟಿವಿಎಸ್ ವಿನೂತನ ಸ್ಕೂಟರ್ ಎನ್‌ಟಾರ್ಕ್ 125

ಈ ಹಿಂದೆ 2014ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಗ್ರಾಫೈಟ್ ಸ್ಪೋರ್ಟಿ ಸ್ಕೂಟರ್ ಕಾನ್ಸೆಪ್ಟ್ ಪ್ರದರ್ಶನ ಮಾಡಿದ್ದ ಟಿವಿಎಸ್ ಸಂಸ್ಥೆಯು ಇದೀಗ ಅದೇ ಮಾದರಿಯನ್ನು ಎನ್‌ಟಾರ್ಕ್ 125 ಹೆಸರಿನಲ್ಲಿ ಬಿಡುಗಡೆಗೊಳಿಸಿದ್ದು, ಅವಧಿಗೂ ಮುನ್ನವೇ ಹೊಸ ಸ್ಕೂಟರ್ ಅನಾವರಣಗೊಳಿಸಿರುವುದು ಹಲವು ವಿಶೇಷಗಳಿಗೆ ಕಾರಣವಾಗಿದೆ.

ಹೊಸ ಟ್ರೆಂಡ್ ಸೃಷ್ಠಿಸಲು ಬಂತು ಟಿವಿಎಸ್ ವಿನೂತನ ಸ್ಕೂಟರ್ ಎನ್‌ಟಾರ್ಕ್ 125

ಹೆಸರಲ್ಲೇ ಸೂಚಿಸಿರುವಂತೆ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳು ಆಕ್ರಮಣಕಾರಿ ಕ್ರೀಡಾ ವಿನ್ಯಾಸ ಪಡೆದುಕೊಂಡಿದ್ದು, ಇದರ ವಿನ್ಯಾಸವನ್ನು ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದು ಹಾಗೂ ಟಿವಿಎಸ್ ರೇಸಿಂಗ್ ತಂಡದ ನೆರವಿನೊಂದಿಗೆ ರಚಿಸಲಾಗಿದೆ.

ಹೊಸ ಟ್ರೆಂಡ್ ಸೃಷ್ಠಿಸಲು ಬಂತು ಟಿವಿಎಸ್ ವಿನೂತನ ಸ್ಕೂಟರ್ ಎನ್‌ಟಾರ್ಕ್ 125

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರಿನ ಪ್ರಮುಖ ಆಕರ್ಷಣೆಯೆಂದರೆ ಇದರ ಆಟೋಮ್ಯಾಟೆಡ್ ಮ್ಯಾನುವಲ್ ಗೇರ್ ಬಾಕ್ಸ್ (ಕ್ಲಚ್ ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್) ಇದು ಪ್ಯಾಡಲ್ ಶಿಫ್ಟರ್‌ನಿಂದ ನಿರ್ವಹಿಸಲಿದೆ.

ಹೊಸ ಟ್ರೆಂಡ್ ಸೃಷ್ಠಿಸಲು ಬಂತು ಟಿವಿಎಸ್ ವಿನೂತನ ಸ್ಕೂಟರ್ ಎನ್‌ಟಾರ್ಕ್ 125

ಇನ್ನು ಮುಂಭಾಗದಲ್ಲಿ 30 ಎಂಎಂ ಟೆಲಿಸ್ಕಾಪಿಕ್ ಸಸ್ಷೆಷನ್ ಹಾಗೆಯೇ ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಡ್ಯಾಂಪರ್ ಇರಲಿದ್ದು, 22 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೊರೇಜ್ ಪಡೆದುಕೊಂಡಿದೆ.

ಹೊಸ ಟ್ರೆಂಡ್ ಸೃಷ್ಠಿಸಲು ಬಂತು ಟಿವಿಎಸ್ ವಿನೂತನ ಸ್ಕೂಟರ್ ಎನ್‌ಟಾರ್ಕ್ 125

ಎಂಜಿನ್ ವೈಶಿಷ್ಟ್ಯತೆ

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ 125 ಸಿಸಿ ಸಿವಿಐಟಿ ರೆವ್ ಎಂಜಿನ್ ಹೊಂದಿದ್ದು, 9.27-ಬಿಎಚ್‌ಪಿ ಮತ್ತು 10.4-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಹೊಸ ಟ್ರೆಂಡ್ ಸೃಷ್ಠಿಸಲು ಬಂತು ಟಿವಿಎಸ್ ವಿನೂತನ ಸ್ಕೂಟರ್ ಎನ್‌ಟಾರ್ಕ್ 125

ಟಾಪ್ ಸ್ಪೀಡ್

125 ಸಿಸಿ ಎಂಜಿನ್ ಹೊಂದಿದ್ದರು ಪ್ರತಿ ಗಂಟೆಗೆ 95 ಕಿಮಿ ಟಾಪ್ ಸ್ಪೀಡ್ ಹೊಂದಿರುವ ಎನ್‌ಟಾರ್ಕ್ 125 ಸ್ಕೂಟರ್‌ಗಳು ಪ್ರಸ್ತುತ ಸ್ಕೂಟರ್ ಮಾದರಿಗಳಿಂತ ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಕಾಯ್ದುಕೊಂಡಿವೆ.

ಹೊಸ ಟ್ರೆಂಡ್ ಸೃಷ್ಠಿಸಲು ಬಂತು ಟಿವಿಎಸ್ ವಿನೂತನ ಸ್ಕೂಟರ್ ಎನ್‌ಟಾರ್ಕ್ 125

ಇದಲ್ಲದೆ ಮುಂದುವರಿದ ಎಲ್‌ಇಡಿ ಪರದೆ ಕೂಡಾ ಹೊಂದಿದ್ದು, ಎಂಜಿನ್ ಹಾಗೂ ಚಾಲನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದೆ. ಪ್ರಸ್ತುತ ಎಲ್‌ಇಡಿ ವ್ಯವಸ್ಥೆಯು ಇತರೆ ಡಿವೈಸ್‌ಗಳಿಗೆ ಸಂಪರ್ಕ ಸೇವೆಯನ್ನು ಒದಗಿಸಲಿದ್ದು, ಮೊಬೈಲ್ ಚಾರ್ಜಿಂಗ್ ಸ್ಲಾಟ್ ಕೂಡಾ ಇರಲಿದೆ.

ಹೊಸ ಟ್ರೆಂಡ್ ಸೃಷ್ಠಿಸಲು ಬಂತು ಟಿವಿಎಸ್ ವಿನೂತನ ಸ್ಕೂಟರ್ ಎನ್‌ಟಾರ್ಕ್ 125

ಬ್ರೇಕಿಂಗ್ ಸಿಸ್ಟಂ

ನೋಡಲು ಬಲಿಷ್ಠವಾಗಿರುವ ಎನ್‌ಟಾರ್ಕ್ 125 ಸ್ಕೂಟರ್‌ಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಪೆಟಲ್ ಡಿಸ್ಕ್ ಬ್ರೇಕ್, ಡ್ಯುಯಲ್ ಸೈಡ್ ಹ್ಯಾಂಡಲ್ ಲಾಕ್, ಪಾರ್ಕಿಂಗ್ ಬ್ರೇಕ್, ನೆವಿಗೆಷನ್ ಅಸಿಸ್ಟಂಟ್, ಮಲ್ಟಿಪಲ್ ರೈಡಿಂಗ್ ಮೂಡ್‌ಗಳನ್ನು ಅಳವಡಿಸಲಾಗಿದೆ.

ಹೊಸ ಟ್ರೆಂಡ್ ಸೃಷ್ಠಿಸಲು ಬಂತು ಟಿವಿಎಸ್ ವಿನೂತನ ಸ್ಕೂಟರ್ ಎನ್‌ಟಾರ್ಕ್ 125

ಲಭ್ಯವಿರುವ ಬಣ್ಣಗಳು

ಮ್ಯಾಟೆ ಯೆಲ್ಲೋ, ಮ್ಯಾಟೆ ಗ್ರೀನ್, ಮ್ಯಾಟೆ ರೆಡ್ ಮತ್ತು ಮ್ಯಾಟೆ ವೈಟ್ ಬಣ್ಣಗಳಲ್ಲಿ ಎನ್‌ಟಾರ್ಕ್ 125 ಆಯ್ಕೆ ಮಾಡಬಹುದಾಗಿದೆ.

ಹೊಸ ಟ್ರೆಂಡ್ ಸೃಷ್ಠಿಸಲು ಬಂತು ಟಿವಿಎಸ್ ವಿನೂತನ ಸ್ಕೂಟರ್ ಎನ್‌ಟಾರ್ಕ್ 125

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಕೂಟರ್ ಆವೃತ್ತಿಗಳು ಪ್ರದರ್ಶನಗೊಳ್ಳುತ್ತಿದ್ದು, ಈ ಹಿನ್ನೆಲೆ ಜನಪ್ರಿಯ ಸ್ಕೂಟರ್ ಮಾದರಿಗಳಾದ ಹೋಂಡಾ ಗ್ರಾಜಿಯಾ, ಬಿಡುಗಡೆಯಾಗಲಿರುವ ಎಪ್ರಿಲಿಯಾ 125 ಸ್ಕೂಟರ್‌ಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಎನ್‌ಟಾರ್ಕ್ 125 ಹೊಸ ಆವೃತ್ತಿಯನ್ನು ಪರಿಚಯಿಸಲಾಗಿದೆ.

More from DriveSpark

Article Published On: Monday, February 5, 2018, 17:51 [IST]
English summary
TVS NTorq 125 Launched At Rs 58,750.
Read more on scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+