ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ಟಿವಿಎಸ್ ಹೊಚ್ಚ ಹೊಸ ಎನ್‌ಟಾರ್ಕ್ 125 ಸ್ಕೂಟರ್‌ಗಳು ಯುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದಾಖಲೆ ಪ್ರಮಾಣದ ಸ್ಕೂಟರ್‌ಗಳು ಮಾರಾಟವಾಗುವ ಮೂಲಕ ಟಿವಿಎಸ್ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿದೆ.

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

2018ರ ಫೆಬ್ರುವರಿ 5 ರಂದು ಬಿಡುಗಡೆಯಾಗಿದ್ದ ಎನ್‌ಟಾರ್ಕ್ 125 ಸ್ಕೂಟರ್‌ಗಳು ಪ್ರೀಮಿಯಂ ವೈಶಿಷ್ಟ್ಯತೆಯೊಂದಿಗೆ ಗ್ರಾಹಕರ ಕುತೂಹಲಕ್ಕೆ ಕಾರಣವಾಗಿದ್ದು, ಏಳು ತಿಂಗಳ ಅವಧಿಯಲ್ಲಿ ಬರೋಬ್ಬರಿ 1 ಲಕ್ಷ ಸ್ಕೂಟರ್‌ಗಳು ಮಾರಾಟಗೊಳಿಸಿರುವುದಾಗಿ ಟಿವಿಎಸ್ ಮೋಟಾರ್ಸ್ ಹೇಳಿಕೊಂಡಿದೆ. ಹಾಗಾದ್ರೆ ಗ್ರಾಹಕರ ಆಕರ್ಷಣೆ ಕಾರಣವಾಗಿರುವ ಈ ಸ್ಕೂಟರ್‌ನಲ್ಲಿ ಅಂತಹ ವಿಶೇಷತೆ ಆದ್ರು ಏನಿದು ಅಂತೀರಾ ಇಲ್ಲಿದೆ ನೋಡಿ.

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಸದ್ಯ ದೆಹಲಿ ಎಕ್ಸ್‌ಶೋರಂ ಪ್ರಕಾರ ಎನ್‌ಟಾರ್ಕ್ 125 ಸ್ಕೂಟರ್‌ಗಳು ರೂ. 63,385 ಬೆಲೆಯೊಂದಿಗೆ ಮಾರಾಟವಾಗುತ್ತಿದ್ದು, ಬಿಡುಗಡೆಯ ನಂತರ ಹೊಸ ಸ್ಕೂಟರ್‌ನಲ್ಲಿ ಕೆಲವು ವಿನೂತನ ಬಣ್ಣದ ಆಯ್ಕೆಗಳನ್ನು ಹೆಚ್ಚಿಸುತ್ತಿರುವುದು ಮತ್ತಷ್ಟು ಬೇಡಿಕೆಗೆ ಕಾರಣವಾಗಿದೆ.

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಇನ್ನು ಹೆಸರಲ್ಲೇ ಸೂಚಿಸಿರುವಂತೆ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳು ಆಕ್ರಮಣಕಾರಿ ಕ್ರೀಡಾ ವಿನ್ಯಾಸ ಪಡೆದುಕೊಂಡಿದ್ದು, ಇದರ ವಿನ್ಯಾಸವನ್ನು ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದು ಹಾಗೂ ಟಿವಿಎಸ್ ರೇಸಿಂಗ್ ತಂಡದ ನೆರವಿನೊಂದಿಗೆ ರಚಿಸಲಾಗಿದೆ.

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಈ ಮೂಲಕ ಹೆಚ್ಚು ಸಾಮರ್ಥ್ಯದ 125ಸಿಸಿ ಸ್ಕೂಟರ್ ವಿಭಾಗದಲ್ಲಿ ತೀವ್ರ ಪೈಪೋಟಿಗೆ ವೇದಿಕೆ ಸೃಷ್ಟಿಸಿದ್ದು, ರೇಸ್ ಟ್ರ್ಯಾಕ್‌ ಕೌಶಲ್ಯಗಳನ್ನು ಹೊಸ ಎನ್‌ಟಾರ್ಕ್ 125 ಸ್ಕೂಟರ್ ಅಭಿವೃದ್ಧಿಯಲ್ಲಿ ಬಳಕೆ ಮಾಡಲಾಗಿದೆ.

MOST READ: ಮದುವೆ ಮನೆಯಲ್ಲಿ ಗೆಳೆಯರ ಸ್ಪೆಷಲ್ ಗಿಫ್ಟ್ ನೋಡಿ ನವದಂಪತಿ ಫುಲ್ ಶಾಕ್.!?

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರಿನ ಪ್ರಮುಖ ಆಕರ್ಷಣೆಯೆಂದರೆ, ಇದರ ಆಟೋಮ್ಯಾಟೆಡ್ ಮ್ಯಾನುವಲ್ ಗೇರ್ ಬಾಕ್ಸ್ (ಕ್ಲಚ್ ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್) ಇದು ಪ್ಯಾಡಲ್ ಶಿಫ್ಟರ್‌ನಿಂದ ನಿರ್ವಹಿಸಲಿದೆ. ಇದಕ್ಕಾಗಿ ಮುಂಭಾಗದಲ್ಲಿ 30 ಎಂಎಂ ಟೆಲಿಸ್ಕಾಪಿಕ್ ಸಸ್ಷೆಷನ್ ಹಾಗೆಯೇ ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಡ್ಯಾಂಪರ್ ಇರಲಿದ್ದು, 22 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೊರೇಜ್ ಪಡೆದುಕೊಂಡಿದೆ.

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಎಂಜಿನ್ ಸಾಮರ್ಥ್ಯ

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ 124.79 ಸಿವಿಐಟಿ ರೆವ್ ಎಂಜಿನ್ ಹೊಂದಿದ್ದು, 9.27-ಬಿಎಚ್‌ಪಿ ಮತ್ತು 10.4-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಟಾಪ್ ಸ್ಪೀಡ್

125 ಸಿಸಿ ಎಂಜಿನ್ ಹೊಂದಿದ್ದರು ಪ್ರತಿ ಗಂಟೆಗೆ 95 ಕಿಮಿ ಟಾಪ್ ಸ್ಪೀಡ್ ಹೊಂದಿರುವ ಎನ್‌ಟಾರ್ಕ್ 125 ಸ್ಕೂಟರ್‌ಗಳು ಪ್ರಸ್ತುತ ಸ್ಕೂಟರ್ ಮಾದರಿಗಳಿಂತ ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಕಾಯ್ದುಕೊಂಡಿವೆ.

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಮುಂಭಾಗದಲ್ಲಿ ಆಕರ್ಷಕವಾದ ಡೇ ಟೈಮ್ ರನ್ನಿಂಗ್ ಲೈಟ್ಸ್ ಜತೆಗೆ ಹ್ಯಾಂಡಲ್ ಬಾರ್‌ನಲ್ಲೇ ಇಂಡಿಕೇಟರ್ ಕೊಡಲಾಗಿದೆ. ಹಾಗಿಯೇ ಹಿಂದುಗಡೆಯೂ ಎಲ್‌ಇಡಿ ಟೈಲ್ ಲ್ಯಾಂಪ್ ಸೇವೆಯಿರಲಿದ್ದು, 12 ಇಂಚುಗಳ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಜೋಡಿಸಲಾಗಿದೆ.

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಎನ್‌ಟಾರ್ಕ್ 125 ಸ್ಕೂಟರ್‌ಗಳು ಮುಂದುವರಿದ SmartXonnect ತಂತ್ರಜ್ಞಾನ ತಹಳದಿಯಲ್ಲಿ ನಿರ್ಮಾಣವಾಗಿದ್ದು, ಬ್ಲೂಟೂತ್ ಸಂಪರ್ಕ ಹೊಂದಿದ ಮೊದಲ ಸ್ಮಾರ್ಟ್ ಸ್ಕೂಟರ್ ಇದಾಗಿದೆ.

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಇವೆಲ್ಲದರ ಜತೆಗೆ ಸಂಪೂರ್ಣ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ನೇವಿಗೇಷನ್ ಅಸಿಸ್ಟ್, ಕಾರ್ ಐಡಿ, ಪಾರ್ಕಿಂಗ್ ಲೋಕೆಷನ್ ಇತ್ಯಾದಿ ಸೇವೆಗಳನ್ನು ಒದಗಿಸಲಿದ್ದು, ಲ್ಯಾಪ್ ಟೈಮರ್, ಟಾಪ್ ಹಾಗೂ ಸರಾಸರಿ ವೇಗದ ಮಾಹಿತಿಯನ್ನು ಕೂಡಾ ನೀಡಲಿದೆ.

MOST READ: ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಇಲ್ಲವಾದ್ರೆ ಜೈಲು ಗ್ಯಾರಂಟಿ..!

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಬ್ರೇಕಿಂಗ್ ಸಿಸ್ಟಂ

ನೋಡಲು ಬಲಿಷ್ಠವಾಗಿರುವ ಎನ್‌ಟಾರ್ಕ್ 125 ಸ್ಕೂಟರ್‌ಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಪೆಟಲ್ ಡಿಸ್ಕ್ ಬ್ರೇಕ್, ಡ್ಯುಯಲ್ ಸೈಡ್ ಹ್ಯಾಂಡಲ್ ಲಾಕ್, ಪಾರ್ಕಿಂಗ್ ಬ್ರೇಕ್, ಮಲ್ಟಿಪಲ್ ರೈಡಿಂಗ್ ಮೂಡ್‌ಗಳನ್ನು ಅಳವಡಿಸಲಾಗಿದೆ.

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಇದಲ್ಲದೆ ಮುಂದುವರಿದ ಎಲ್‌ಇಡಿ ಪರದೆ ಕೂಡಾ ಹೊಂದಿದ್ದು, ಎಂಜಿನ್ ಹಾಗೂ ಚಾಲನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದೆ. ಪ್ರಸ್ತುತ ಎಲ್‌ಇಡಿ ವ್ಯವಸ್ಥೆಯು ಇತರೆ ಡಿವೈಸ್‌ಗಳಿಗೆ ಸಂಪರ್ಕ ಸೇವೆಯನ್ನು ಒದಗಿಸಲಿದ್ದು, ಮೊಬೈಲ್ ಚಾರ್ಜಿಂಗ್ ಸ್ಲಾಟ್ ಕೂಡಾ ಇರಲಿದೆ.

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಲಭ್ಯವಿರುವ ಬಣ್ಣಗಳು

ಮ್ಯಾಟೆ ಯೆಲ್ಲೋ, ಮ್ಯಾಟೆ ಗ್ರೀನ್, ಮ್ಯಾಟೆ ರೆಡ್, ಮೆಟಾಲಿಕ್ ಬ್ಲ್ಯೂ, ಮೆಟಾಲಿಕ್ ಗ್ರೇ, ಮೆಟಾಲಿಕ್ ರೆಡ್ ಶೆಡ್ ಮತ್ತು ಮ್ಯಾಟೆ ವೈಟ್ ಬಣ್ಣಗಳಲ್ಲಿ ಎನ್‌ಟಾರ್ಕ್ 125 ಆಯ್ಕೆ ಮಾಡಬಹುದಾಗಿದೆ.

ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ ಟಿವಿಎಸ್‌ನಿಂದ ಹೊಸ ದಾಖಲೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಕೂಟರ್ ಆವೃತ್ತಿಗಳು ಪ್ರದರ್ಶನಗೊಳ್ಳುತ್ತಿದ್ದು, ಈ ಹಿನ್ನೆಲೆ ಜನಪ್ರಿಯ ಸ್ಕೂಟರ್ ಮಾದರಿಗಳಾದ ಹೋಂಡಾ ಗ್ರಾಜಿಯಾ, ಬಿಡುಗಡೆಯಾಗಲಿರುವ ಎಪ್ರಿಲಿಯಾ 125 ಸ್ಕೂಟರ್‌ಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಎನ್‌ಟಾರ್ಕ್ 125 ಹೊಸ ಆವೃತ್ತಿಯನ್ನು ಪರಿಚಯಿಸುವುದು ಹೊಸ ಟ್ರೆಂಡ್‌ಗೆ ಕಾರಣವಾಗಿದೆ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗಳ ಮತ್ತಷ್ಟು ಚಿತ್ರಗಳನ್ನು ಇಲ್ಲಿ ನೋಡಬಹುದಾಗಿದೆ.

Article Published On: Wednesday, September 19, 2018, 11:39 [IST]
English summary
TVS Ntorq 125 Hits One Lakh Sales Milestone — New Metallic Red Shade Introduced.
Read more on scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+