ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಕಮ್ಯೂಟರ್ ಬೈಕ್ ವಿಭಾಗವು ಯಶಸ್ವಿಯತ್ತ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಬೈಕ್ ಉತ್ಪನ್ನವನ್ನ ಹೊರತಂದಿರುವ ಟಿವಿಎಸ್ ಸಂಸ್ಥೆಯು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯಬಲ್ಲ ವಿನೂತನ ಮಾದರಿಯ ರೆಡಿಯನ್ ಬೈಕ್ ಬಿಡುಗಡೆ ಮಾಡಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಕಮ್ಯೂಟರ್ ಬೈಕ್‌ಗಳ ಮಾರಾಟ ವಿಭಾಗದಲ್ಲಿ ಸದ್ಯ ಹೀರೋ ಸಂಸ್ಥೆಯು ನಂ.1 ಸ್ಥಾನದಲ್ಲಿದ್ದು, ಸ್ಪ್ಲೆಂಡರ್ ಮತ್ತು ಹೆಚ್‌ಎಫ್ ಡಿಲಕ್ಸ್ ಮಾರಾಟದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಹೀಗಾಗಿ 110ಸಿಸಿ ವಿಭಾಗದ ಬೈಕ್ ಮಾರಾಟದಲ್ಲಿ ಹೊಸ ಬದಲಾವಣೆ ತರಲು ಹೊರಟಿರುವ ಟಿವಿಎಸ್ ಸಂಸ್ಥೆಯು ರೆಡಿಯನ್ ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕಿನ ಬೆಲೆಯನ್ನ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 48,400 ಕ್ಕೆ ನಿಗದಿಗೊಳಿಸಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಈ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿರುವ ಟಿವಿಎಸ್ ಸಂಸ್ಥೆಯು ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ವಿನ್ಯಾಸದ ರೆಡಿಯನ್ ಬೈಕ್ ಅನ್ನು ಅಭಿವೃದ್ಧಿಗೊಳಿಸಿದ್ದು, ಬೈಕಿನಲ್ಲಿ ಒದಗಿಸಲಾಗಿರುವ ಆಕರ್ಷಕ ಸೌಲಭ್ಯಗಳು ಗ್ರಾಹಕರನ್ನು ಮೊದಲ ನೋಟದಲ್ಲೇ ಸೆಳೆಯದೇ ಇರಲಾರವು.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಬೈಕಿನ ವಿನ್ಯಾಸದಲ್ಲಿ ಸ್ಟೈಲಿಷ್ ಕ್ರೋಮ್ ಅಸೆಂಟ್ಸ್, ಪವರ್ ಫುಲ್ ಹೆಡ್‌ಲ್ಯಾಂಪ್, ಕ್ರೋಮ್ ಬೆಜೆಲ್, ಡೇ ಟೈಮ್ ರನ್ನಿಂಗ್ ಲೈಟ್, ಫ್ಯೂಲ್ ಟ್ಯಾಂಕ್ ಮೇಲ್ಭಾಗದಲ್ಲಿ ಪಾಡ್ ಸೌಲಭ್ಯ, ಕ್ರೋಮ್ ಪ್ರೇರಿತ ಇನ್‌ಸ್ಟುಮೆಂಟಲ್ ಕ್ಲಸ್ಟರ್ ಸೌಲಭ್ಯಗಳು ಬೈಕಿಗೆ ಕ್ಲಾಸಿಕ್ ಟಚ್ ನೀಡಿವೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

109.7 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಟಿವಿಎಸ್ ರೆಡಿಯನ್ ಬೈಕ್‌ಗಳು 8.2-ಬಿಎಚ್‌ಪಿ ಮತ್ತು 8.7-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 10-ಲೀಟರ್ ಫ್ಯೂಲ್ ಟ್ಯಾಂಕ್ ಸೌಲಭ್ಯವನ್ನು ಪಡೆದುಕೊಂಡಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಮೈಲೇಜ್

ಕಮ್ಯೂಟರ್ ಬೈಕ್ ವಿಭಾಗದಲ್ಲೇ ಅತ್ಯುತ್ತಮ ಎನ್ನಿಸುವಷ್ಟು ಮೈಲೇಜ್ ಸಾಮರ್ಥ್ಯ ಹೊಂದಿರುವ ರೆಡಿಯಾನ್ ಬೈಕ್‌ಗಳು ಪ್ರತಿ ಲೀಟರ್‌ಗೆ 69.3 ಕಿ.ಮೀ ಮೈಲೇಜ್ ನೀಡಲಿವೆ ಎಂದು ಟಿವಿಎಸ್ ಸಂಸ್ಥೆಯು ಹೇಳಿಕೊಂಡಿದೆ.

MOST READ: ಮದುವೆ ಮನೆಯಲ್ಲಿ ಗೆಳೆಯರ ಸ್ಪೆಷಲ್ ಗಿಫ್ಟ್ ನೋಡಿ ನವದಂಪತಿ ಫುಲ್ ಶಾಕ್.!?

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಬ್ರೇಕಿಂಗ್ ಸಿಸ್ಟಂ

ಹೆಚ್ಚುತ್ತಿರುವ ಸ್ಕಿಡಿಂಗ್ ತೊಂದರೆಯನ್ನ ತಪ್ಪಿಸಲು ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿಯೊಂದಿಗೆ ಬೈಕಿನ ಎರಡು ಬದಿ ಚಕ್ರಗಳಲ್ಲೂ ಡ್ರಮ್ ಬ್ರೇಕ್ ಬಳಕೆ ಮಾಡಲಾಗಿದ್ದು, ಬೈಕಿನ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫ್ರೋಕ್ಸ್ ಮತ್ತು ಹಿಂಭಾಗದಲ್ಲಿ ಐದು ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೈಡ್ರಾಲಿಕ್ ಸಸ್ಷೆನ್ ನೀಡಲಾಗಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಬೈಕಿನಲ್ಲಿರುವ ಇತರೆ ಸೌಲಭ್ಯಗಳು

1,265ಎಂಎಂ ಎತ್ತರ ಹೊಂದಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು 180ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಎಲೆಕ್ಟ್ರಿಕ್ ಸ್ಟಾರ್ಟ್, 18-ಇಂಚಿನ ಅಲಾಯ್ ಚಕ್ರಗಳು, ಡ್ಯುರಾ ಗ್ರಿಪ್ ಟೈರ್‌ಗಳು, ಯುಎಸ್‌ಬಿ ಚಾರ್ಚಿಂಗ್ ಸ್ಲಾಟ್ ಸೇರಿದಂತೆ ಆಕರ್ಷಕ ಸೀಟಿನ ವ್ಯವಸ್ಥೆ ಹೊಂದಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಲಭ್ಯವಿರುವ ಬಣ್ಣ ಮತ್ತು ವಾರಂಟಿ

ಒಟ್ಟು ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು ವೈಟ್, ಬೀಜ್, ಪರ್ಪಲ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಬೈಕ್ ಮೇಲೆ ಗರಿಷ್ಠ 5 ವರ್ಷಗಳ ವಾರಂಟಿ ದೊರೆಯಲಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಒಟ್ಟಿನಲ್ಲಿ ಕ್ಲಾಸಿಕ್ ಸ್ಟೈಲ್‌ನಲ್ಲಿ ಸಿದ್ದವಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಆಯ್ಕೆಯಾಗುವ ಎಲ್ಲಾ ಗುಣಗಳನ್ನು ಹೊಂದಿದೆ.

MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಹೀಗಾಗಿಯೇ ಮೈಲೇಜ್ ವಿಚಾರವಾಗಿ ಉತ್ತಮ ಎನ್ನಿಸಲಿರುವ ಈ ಹೊಸ ಬೈಕ್ ಹೀರೋ ಸ್ಪ್ಲೈಂಡರ್, ಹೆಚ್ಎಫ್ ಡಿಲಕ್ಸ್, ಬಜಾಜ್ ಸಿಟಿ 100, ಹೋಂಡಾ ಡ್ರೀಮ್ ಯುಗಾ ಸೇರಿದಂತೆ ಹಲವು ಕಮ್ಯೂಟರ್ ಬೈಕ್‌ಗಳಿಗೆ ತ್ರೀವ ಪೈಪೋಟಿ ನೀಡಲಿವೆ ಎನ್ನಬಹುದು. ಇಲ್ಲದೇ ಗ್ರಾಹಕರನ್ನು ಸೆಳೆಯಲು ಕೆಲವು ಬೈಕ್ ಉತ್ಪಾದನಾ ಸಂಸ್ಥೆಗಳು ಭರ್ಜರಿ ಆಫರ್ ನೀಡುತ್ತಿದ್ದು, ನೀವು ಕೂಡಾ ಖರೀದಿ ಯೋಜನೆಯಲ್ಲಿದ್ದರೇ ಹೊಸ ಆಫರ್ ಮಾಹಿತಿಯನ್ನ ಇಲ್ಲಿ ತಿಳಿಯಬಹುದಾಗಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಗಳಾದ ಸುಜುಕಿ, ಟಿವಿಎಸ್, ಬಜಾಜ್ ಮತ್ತು ಹೋಂಡಾ ಸೇರಿದಂತೆ ಐಷಾರಾಮಿ ಬೈಕ್ ಉತ್ಪಾದನಾ ಸಂಸ್ಥೆಗಳಾದ ಕವಾಸಕಿ, ಟ್ರಯಂಫ್ ಸಹ ತಮ್ಮ ಆಯ್ದ ಬೈಕ್‌ಗಳ ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ್ದು, ಡಿಸ್ಕೌಂಟ್ ಆಫರ್‌ಗಳು ಆಯಾ ನಗರಗಳ ಮೇಲೆ ಬೈಕಿನ ಬೆಲೆಗಳು ನಿರ್ಧಾರವಾಗುತ್ತವೆ. ಇಲ್ಲಿ ನೀಡಲಾಗಿರುವ ಬೆಲೆಗಳು ಸಹ ಬೈಕ್ ಉತ್ಪಾದನಾ ಸಂಸ್ಥೆ ಮತ್ತು ಡೀಲರ್ಸ್‌ಗಳು ನೀಡುವ ಬೆಲೆಗಳನ್ನು ಆಧರಿಸಿ ಮಾಹಿತಿ ಸಿದ್ದಪಡಿಸಲಾಗಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಬಜಾಜ್ ಸಿಟಿ 100

ಅಗ್ಗದ ಬೆಲೆಯ ಬೈಕ್ ಖರೀದಿಗೆ ಇದು ಸುವರ್ಣಾವಕಾಶ ಎಂದರೇ ತಪ್ಪಾಗಲಾರದು. ಏಕೆಂದರೆ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ಬಜಾಜ್ ಸಿಟಿ 100 ಕಿಕ್ ಸ್ಟಾರ್ಟ್ ಆವೃತ್ತಿಗಳ ಮೇಲೆ ಬರೋಬ್ಬರಿ ರೂ. 9 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಸದ್ಯ ದೆಹಲಿ ಎಕ್ಸ್‌ಶೋರಂ ಪ್ರಕಾರ 41 ಸಾವಿರ ಇದ್ದ ಬಜಾಜ್ ಸಿಟಿ 100 ಬೈಕ್ ಬೆಲೆಯು ರೂ. 32 ಸಾವಿರಕ್ಕೆ ಇಳಿಕೆಯಾಗಿದ್ದು, ಶೇ. 25 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಪಡೆಯಬಹುದಾಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಈ ಬೈಕ್ ಮತ್ತಷ್ಟು ಜನಪ್ರಿಯತೆ ಹೊಂದುವ ನೀರಿಕ್ಷೆಯಲ್ಲಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಸುಜುಕಿ ಆಕ್ಸೆಸ್ 125 ದೇಶದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್‌ಗಳ ಪೈಕಿ ಸುಜುಕಿ ಆಕ್ಸೆಸ್ 125 ಕೂಡಾ ಒಂದು. ಅತ್ಯುತ್ತಮ ಎಂಜಿನ್ ಮತ್ತು ಮೈಲೇಜ್ ಹೊಂದಿರುವ ಆಕ್ಸೆಸ್ 125 ಸ್ಕೂಟರ್‌ಗಳ ಖರೀದಿ ಮೇಲೆ ಸದ್ಯ ರೂ. 7 ಸಾವಿರ ಡಿಸ್ಕೌಂಟ್ ದೊರಲಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಆಕ್ಸೆಸ್ 125 ಸ್ಕೂಟರ್‌ಗಳ ಮೇಲೆ ರೂ. 4,500 ಕ್ಯಾಶ್‌ಬ್ಯಾಕ್ ಆಫರ್ ಜೊತೆಗೆ ದೇಶದ ಪ್ರಮುಖ ಮೆಟ್ರೋ ಸಿಟಿಗಳಾಗಿರುವ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿರುವ ಕಾರ್ಪೊರೇಟ್ ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ ರೂ. 2,500 ಕ್ಯಾಶ್‌ಬ್ಯಾಕ್ ಸೌಲಭ್ಯ ಒದಗಿಸುತ್ತಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಟಿವಿಎಸ್ ಜೂಪಿಟರ್

ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ನಗರಪ್ರದೇಶದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಟಿವಿಎಸ್ ಜೂಪಿಟರ್ ಸ್ಕೂಟರ್‌ಗಳು ಮಾರಾಟದಲ್ಲಿ ಮುನ್ನುಗ್ಗುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ ಜೂಪಿಟರ್ ಸ್ಕೂಟರ್ ಮಾರಾಟ ಪ್ರಮಾಣ 22 ಲಕ್ಷಕ್ಕೆ ತಲುಪಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಈ ಮೂಲಕ ಜನಪ್ರಿಯ ಸ್ಕೂಟರ್‌ಗಳಲ್ಲಿ ಒಂದಾಗಿರುವ ಜೂಪಿಟರ್ ಖರೀದಿಗೆ ಇಲ್ಲೊಂದು ಉತ್ತಮ ಅವಕಾಶವಿದ್ದು, ಜೂಪಿಟರ್ ಖರೀದಿಸುವ ಮೂಲಕ ರೂ. 4,300 ಕ್ಯಾಶ್‌ಬ್ಯಾಕ್ ಆಫರ್ ನಿಮ್ಮದಾಗಿಸಿಕೊಳ್ಳಬಹುದು. ಡೀಲರ್ಸ್ ಮೂಲಕ ರೂ. 3 ಸಾವಿರ ಡಿಸ್ಕೌಂಟ್ ಸಿಕ್ಕಿದ್ದಲ್ಲಿ ಪೇಟಿಎಂ ನಿಂದ ಹಣ ಪಾವತಿ ಮಾಡಿದ್ದಲ್ಲಿ 1,300 ಕ್ಯಾಶ್ ಬ್ಯಾಕ್ ದೊರಲಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಹೋಂಡಾ ನವಿ

ದೇಶದ ಜನಪ್ರಿಯ ಬೈಕ್ ಸಂಸ್ಥೆಗಳಲ್ಲಿ ಒಂದಾಗಿರುವ ಹೋಂಡಾ ಸಂಸ್ಥೆಯು ತನ್ನ ನವಿ ಸ್ಕೂಟರ್ ಮೇಲೆ ರೂ.5 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದೆ. ಹೋಂಡಾ ಸಂಸ್ಥೆಯು ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಈ ಆಫರ್ ಪರಿಚಯಿಸಿದ್ದು, ಕಾಲೇಜ್ ಸಂಸ್ಥೆಯಿಂದ ಸೂಕ್ತ ದಾಖಲೆಯನ್ನು ಒದಗಿಸಿದ್ದಲ್ಲಿ ಮಾತ್ರವೇ ಈ ಸೌಲಭ್ಯ ಪಡೆಯಬಹುದು.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಕಳೆದ ವಾರಷ್ಟೇ ಹೋಂಡಾ ನವಿ ಫೇಸ್‌ಲಿಫ್ಟ್ ಆವೃತ್ತಿ ಕೂಡಾ ಮಾರುಕಟ್ಟೆಗೆ ಪ್ರವೇಶ ಪಡೆದಿದ್ದು, ಹಳೆಯ ನವಿ ಸ್ಕೂಟರ್ ಮೇಲೆ ಮಾತ್ರವೇ ಡಿಸ್ಕೌಂಟ್ ನೀಡಲಾಗುತ್ತಿದ್ದೆ. ಒಂದು ವೇಳೆ ನೀವು ಕಾಲೇಜ್ ವಿದ್ಯಾರ್ಥಿಯಾಗಿದ್ದಲ್ಲಿ ಇದು ಖರೀದಿಗೆ ಉತ್ತಮ ಅವಕಾಶ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಬಜಾಜ್ ಪಲ್ಸರ್ ಆರ್‌ಎಸ್ 200

ಸ್ಪೋರ್ಟಿ ಲುಕ್ ಮೂಲಕ ಯುವ ಸಮುದಾಯವನ್ನು ಸೆಳೆಯುತ್ತಿರುವ ಪಲ್ಸರ್ ಆರ್‌ಎಸ್ 200 ಬೈಕ್ ಮಾದರಿಗಳ ಮೇಲೆ ಗರಿಷ್ಠವಾಗಿ ರೂ. 5 ಸಾವಿರ ಡಿಸ್ಕೌಂಟ್ ದೊರೆಯಲಿದ್ದು, ಇದು ಹೊಸ ವರ್ಷನ್ ಪಲ್ಸರ್ ಆರ್‌ಎಸ್ 200 ಖರೀದಿ ಮೇಲೆ ಆಫರ್ ಬೆಲೆಗಳು ಅನ್ವಯಿಸುವುದಿಲ್ಲ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಮತ್ತು 180

ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ದ್ವಿಚಕ್ರ ವಾಹನಗಳಿಂದ ಜನಪ್ರಿಯತೆಯನ್ನು ಕಂಡ ಟಿವಿಎಸ್ ಸಂಸ್ಥೆಯು ಇತ್ತೀಚೆಗೆ 2018ರ ಅಪಾಚೆ ಆರ್‍‍ಟಿಆರ್ 160 4ವಿ ಮತ್ತು ಅಪಾಚೆ ಆರ್‍‍ಟಿಆರ್ 180 4ವಿ ಬೈಕ್‌ಗಳನ್ನು ಬಿಡುಗಡೆಗೊಳಿಸಿದ್ದು, ಹಳೆಯ ವರ್ಷನ್‌ಗಳ ಖರೀದಿ ಮೇಲೆ ಗರಿಷ್ಠವಾಗಿ ರೂ. 5 ಸಾವಿರ ಡಿಸ್ಕೌಂಟ್ ದೊರಲಿದೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಸೂಪರ್ ಬೈಕ್‌ಗಳ ಮೇಲೆ ಡಿಸ್ಕೌಂಟ್

ಕೇವಲ ಸಾಮಾನ್ಯ ಮಾದರಿಯ ಬೈಕ್ ಮಾದರಿಗಳಲ್ಲದೇ ಸೂಪರ್ ಬೈಕ್ ಮಾದರಿಗಳಾದ ಟ್ರಯಂಫ್ ಆಯ್ದ ಬೈಕ್‌ಗಳ ಮೇಲೆ ರೂ.25 ಸಾವಿರ, ಕವಾಸಕಿ ಜೆಡ್1000 ಬೈಕ್ ಮೇಲೆ 4.5 ಲಕ್ಷ ಮತ್ತು ಕವಾಸಕಿ ಜೆಡ್900 ಬೈಕ್‌ಗಳ ಮೇಲೆ ರೂ. 97 ಸಾವಿರ ಡಿಸ್ಕೌಂಟ್ ಲಭ್ಯವಿವೆ.

ಟಿವಿಎಸ್ ನಿರ್ಮಾಣದ ಹೊಚ್ಚ ಹೊಸ ರೆಡಿಯನ್ ಬೈಕ್ ಬಿಡುಗಡೆ

ಇತರೆ ಬೈಕ್‌ಗಳ ಮೇಲಿನ ಡಿಸ್ಕೌಂಟ್

ಮೇಲೆ ಹೇಳಲಾದ ಬೈಕ್‌ ಮತ್ತು ಸ್ಕೂಟರ್‌ಗಳ ಮೇಲೆ ಅಷ್ಟೇ ಅಲ್ಲದೇ ಹೀರೋ, ಯಮಹಾ, ಮಹೀಂದ್ರಾ ಮತ್ತು ಎಪ್ರಿಲಿಯಾ ಸಂಸ್ಥೆಗಳ ಆಯ್ದ ಬೈಕ್ ಮತ್ತು ಸ್ಕೂಟರ್‌ಗಳ ಮೇಲೆ ಕ್ಯಾಶ್‌ಬ್ಯಾಕ್ ಆಫರ್‌ಗಳಿದ್ದು, ಪೇಟಿಯಂ ಮೂಲಕ ಹಣ ಪಾವತಿಸಿ ರೂ. 1,000 ದಿಂದ ರೂ. 2,500 ತನಕ ಡಿಸ್ಕೌಂಟ್ ಪಡೆಯಬಹುದು.

ಟಿವಿಎಸ್ ರೆಡಿಯಾನ್ ಬೈಕ್ ವಿಶೇಷತೆ ಕುರಿತಾದ ಮತ್ತಷ್ಟು ಚಿತ್ರಗಳು ನಿಮಗಾಗಿ..

Article Published On: Thursday, August 23, 2018, 15:14 [IST]
English summary
TVS Radeon Launched in India; Priced At Rs 48,400.
Read more on new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+