ಸ್ಪ್ಲೆಂಡರ್ ಪ್ಲಸ್ ಹಿಂದಿಕ್ಕಲು ಬಂದ ಟಿವಿಎಸ್ ರೆಡಿಯಾನ್ ಬೈಕ್ ವಿಶೇಷತೆಗಳು ಇಲ್ಲಿವೆ ನೋಡಿ..

By Praveen Sannamani

ಟಿವಿಎಸ್ ಮೋಟಾರ್ಸ್ ತನ್ನ ವಿಶೇಷ ಬೈಕ್ ಉತ್ಪನ್ನಗಳೊಂದಿಗೆ ಎಲ್ಲಾ ವರ್ಗಗಳನ್ನು ಸೆಳೆಯಬಲ್ಲ ಜನಪ್ರಿಯ ಆಟೋ ಉತ್ಪಾದನಾ ಸಂಸ್ಥೆಯಾಗಿದ್ದು, ಇದೀಗ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ವಿನ್ಯಾಸದ ರೆಡಿಯಾನ್ ಎನ್ನುವ ಬೈಕ್ ಮಾದರಿಯನ್ನು ಹೊರತಂದಿದೆ.

ಸ್ಪ್ಲೆಂಡರ್ ಪ್ಲಸ್ ಹಿಂದಿಕ್ಕಿಲು ಬಂದ ಟಿವಿಎಸ್ ರೆಡಿಯಾನ್ ವಿಶೇಷತೆಗಳು ಇಲ್ಲಿವೆ ನೋಡಿ..

ದೇಶಿಯ ಮಾರುಕಟ್ಟೆಯಲ್ಲಿ ಕಮ್ಯೂಟರ್ ಬೈಕ್ ವಿಭಾಗವು ಯಶಸ್ವಿಯತ್ತ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಬೈಕ್ ಉತ್ಪನ್ನವನ್ನ ಹೊರತಂದಿರುವ ಟಿವಿಎಸ್ ಸಂಸ್ಥೆಯು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯಬಲ್ಲ ವಿನೂತನ ಮಾದರಿಯ ರೆಡಿಯನ್ ಬೈಕ್ ಬಿಡುಗಡೆ ಮಾಡಿದ್ದು, ಇದು ನೇರವಾಗಿ ಹೀರೋ ನಿರ್ಮಾಣ ಸ್ಪ್ಲೆಂಡರ್ ಪ್ಲಸ್, ಡಿಲಕ್ಸ್ ಸೇರಿ ಹಲವು ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣ ಹೊಂದಿದೆ.

ಸ್ಪ್ಲೆಂಡರ್ ಪ್ಲಸ್ ಹಿಂದಿಕ್ಕಿಲು ಬಂದ ಟಿವಿಎಸ್ ರೆಡಿಯಾನ್ ವಿಶೇಷತೆಗಳು ಇಲ್ಲಿವೆ ನೋಡಿ..

ಕಮ್ಯೂಟರ್ ಬೈಕ್‌ಗಳ ಮಾರಾಟ ವಿಭಾಗದಲ್ಲಿ ಸದ್ಯ ಹೀರೋ ಸಂಸ್ಥೆಯು ನಂ.1 ಸ್ಥಾನದಲ್ಲಿದ್ದು, ಸ್ಪ್ಲೆಂಡರ್ ಮತ್ತು ಹೆಚ್‌ಎಫ್ ಡಿಲಕ್ಸ್ ಮಾರಾಟದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಹೀಗಾಗಿ 110ಸಿಸಿ ವಿಭಾಗದ ಬೈಕ್ ಮಾರಾಟದಲ್ಲಿ ಹೊಸ ಬದಲಾವಣೆ ತರಲು ಹೊರಟಿರುವ ಟಿವಿಎಸ್ ಸಂಸ್ಥೆಯು ರೆಡಿಯನ್ ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕಿನ ಬೆಲೆಯನ್ನ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 48,400 ಕ್ಕೆ ನಿಗದಿಗೊಳಿಸಿದೆ.

ಸ್ಪ್ಲೆಂಡರ್ ಪ್ಲಸ್ ಹಿಂದಿಕ್ಕಿಲು ಬಂದ ಟಿವಿಎಸ್ ರೆಡಿಯಾನ್ ವಿಶೇಷತೆಗಳು ಇಲ್ಲಿವೆ ನೋಡಿ..

ಈ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯುವ ಹೊಸ ಪ್ರಯತ್ನ ಮಾಡಿರುವ ಟಿವಿಎಸ್ ಸಂಸ್ಥೆಯು ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ವಿನ್ಯಾಸದ ರೆಡಿಯನ್ ಬೈಕ್ ಅನ್ನು ಅಭಿವೃದ್ಧಿಗೊಳಿಸಿದ್ದು, ಬೈಕಿನಲ್ಲಿ ಒದಗಿಸಲಾಗಿರುವ ಆಕರ್ಷಕ ಸೌಲಭ್ಯಗಳು ಗ್ರಾಹಕರನ್ನು ಮೊದಲ ನೋಟದಲ್ಲೇ ಸೆಳೆಯದೇ ಇರಲಾರವು.

ಸ್ಪ್ಲೆಂಡರ್ ಪ್ಲಸ್ ಹಿಂದಿಕ್ಕಿಲು ಬಂದ ಟಿವಿಎಸ್ ರೆಡಿಯಾನ್ ವಿಶೇಷತೆಗಳು ಇಲ್ಲಿವೆ ನೋಡಿ..

ಬೈಕಿನ ವಿನ್ಯಾಸದಲ್ಲಿ ಸ್ಟೈಲಿಷ್ ಕ್ರೋಮ್ ಅಸೆಂಟ್ಸ್, ಪವರ್ ಫುಲ್ ಹೆಡ್‌ಲ್ಯಾಂಪ್, ಕ್ರೋಮ್ ಬೆಜೆಲ್, ಡೇ ಟೈಮ್ ರನ್ನಿಂಗ್ ಲೈಟ್, ಫ್ಯೂಲ್ ಟ್ಯಾಂಕ್ ಮೇಲ್ಭಾಗದಲ್ಲಿ ಪಾಡ್ ಸೌಲಭ್ಯ, ಕ್ರೋಮ್ ಪ್ರೇರಿತ ಇನ್‌ಸ್ಟುಮೆಂಟಲ್ ಕ್ಲಸ್ಟರ್ ಸೌಲಭ್ಯಗಳು ಬೈಕಿಗೆ ಕ್ಲಾಸಿಕ್ ಟಚ್ ನೀಡಿವೆ.

ಸ್ಪ್ಲೆಂಡರ್ ಪ್ಲಸ್ ಹಿಂದಿಕ್ಕಿಲು ಬಂದ ಟಿವಿಎಸ್ ರೆಡಿಯಾನ್ ವಿಶೇಷತೆಗಳು ಇಲ್ಲಿವೆ ನೋಡಿ..

ಎಂಜಿನ್ ಸಾಮರ್ಥ್ಯ

109.7 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಟಿವಿಎಸ್ ರೆಡಿಯನ್ ಬೈಕ್‌ಗಳು 8.2-ಬಿಎಚ್‌ಪಿ ಮತ್ತು 8.7-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 10-ಲೀಟರ್ ಫ್ಯೂಲ್ ಟ್ಯಾಂಕ್ ಸೌಲಭ್ಯವನ್ನು ಪಡೆದುಕೊಂಡಿದೆ.

ಸ್ಪ್ಲೆಂಡರ್ ಪ್ಲಸ್ ಹಿಂದಿಕ್ಕಿಲು ಬಂದ ಟಿವಿಎಸ್ ರೆಡಿಯಾನ್ ವಿಶೇಷತೆಗಳು ಇಲ್ಲಿವೆ ನೋಡಿ..

ಬ್ರೇಕಿಂಗ್ ಸಿಸ್ಟಂ

ಹೆಚ್ಚುತ್ತಿರುವ ಸ್ಕಿಡಿಂಗ್ ತೊಂದರೆಯನ್ನ ತಪ್ಪಿಸಲು ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿಯೊಂದಿಗೆ ಬೈಕಿನ ಎರಡು ಬದಿ ಚಕ್ರಗಳಲ್ಲೂ ಡ್ರಮ್ ಬ್ರೇಕ್ ಬಳಕೆ ಮಾಡಲಾಗಿದ್ದು, ಬೈಕಿನ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫ್ರೋಕ್ಸ್ ಮತ್ತು ಹಿಂಭಾಗದಲ್ಲಿ ಐದು ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೈಡ್ರಾಲಿಕ್ ಸಸ್ಷೆನ್ ನೀಡಲಾಗಿದೆ.

ಸ್ಪ್ಲೆಂಡರ್ ಪ್ಲಸ್ ಹಿಂದಿಕ್ಕಿಲು ಬಂದ ಟಿವಿಎಸ್ ರೆಡಿಯಾನ್ ವಿಶೇಷತೆಗಳು ಇಲ್ಲಿವೆ ನೋಡಿ..

ಬೈಕಿನಲ್ಲಿರುವ ಇತರೆ ಸೌಲಭ್ಯಗಳು

1,265ಎಂಎಂ ಎತ್ತರ ಹೊಂದಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು 180ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಎಲೆಕ್ಟ್ರಿಕ್ ಸ್ಟಾರ್ಟ್, 18-ಇಂಚಿನ ಅಲಾಯ್ ಚಕ್ರಗಳು, ಡ್ಯುರಾ ಗ್ರಿಪ್ ಟೈರ್‌ಗಳು, ಯುಎಸ್‌ಬಿ ಚಾರ್ಚಿಂಗ್ ಸ್ಲಾಟ್ ಸೇರಿದಂತೆ ಆಕರ್ಷಕ ಸೀಟಿನ ವ್ಯವಸ್ಥೆ ಹೊಂದಿದೆ.

ಸ್ಪ್ಲೆಂಡರ್ ಪ್ಲಸ್ ಹಿಂದಿಕ್ಕಿಲು ಬಂದ ಟಿವಿಎಸ್ ರೆಡಿಯಾನ್ ವಿಶೇಷತೆಗಳು ಇಲ್ಲಿವೆ ನೋಡಿ..

ಯುಎಸ್‌ಬಿ ಚಾರ್ಚಿಂಗ್

ಇತರೆ ಬೈಕ್‌ಗಳಿಂತ ಭಿನ್ನವಾಗಿದೆ ಎನ್ನಲು ರೆಡಿಯಾನ್ ಬೈಕ್‌ಗಳಲ್ಲಿ ಮೊದಲ ಬಾರಿಗೆ ಅಗ್ಗದ ಬೈಕ್‌ಗಳಲ್ಲಿ ಮೊಬೈಲ್ ಚಾರ್ಚಿಂಗ್ ಮಾಡಿಕೊಳ್ಳಲು ಯುಎಸ್‌ಬಿ ಚಾರ್ಜಿಂಗ್ ನೀಡಿರುವುದು ಈ ಬೈಕ್ ಆಯ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಎನ್ನಬಹುದು.

ಸ್ಪ್ಲೆಂಡರ್ ಪ್ಲಸ್ ಹಿಂದಿಕ್ಕಿಲು ಬಂದ ಟಿವಿಎಸ್ ರೆಡಿಯಾನ್ ವಿಶೇಷತೆಗಳು ಇಲ್ಲಿವೆ ನೋಡಿ..

ಲಭ್ಯವಿರುವ ಬಣ್ಣ ಮತ್ತು ವಾರಂಟಿ

ಒಟ್ಟು ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು ವೈಟ್, ಬೀಜ್, ಪರ್ಪಲ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಬೈಕ್ ಮೇಲೆ ಗರಿಷ್ಠ 5 ವರ್ಷಗಳ ವಾರಂಟಿ ದೊರೆಯಲಿದೆ.

ಸ್ಪ್ಲೆಂಡರ್ ಪ್ಲಸ್ ಹಿಂದಿಕ್ಕಿಲು ಬಂದ ಟಿವಿಎಸ್ ರೆಡಿಯಾನ್ ವಿಶೇಷತೆಗಳು ಇಲ್ಲಿವೆ ನೋಡಿ..

ಒಟ್ಟಿನಲ್ಲಿ ಕ್ಲಾಸಿಕ್ ಸ್ಟೈಲ್‌ನಲ್ಲಿ ಸಿದ್ದವಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಆಯ್ಕೆಯಾಗುವ ಎಲ್ಲಾ ಗುಣಗಳನ್ನು ಹೊಂದಿದ್ದು, ಮೈಲೇಜ್ ವಿಚಾರವಾಗಿ ಉತ್ತಮ ಎನ್ನಿಸಲಿರುವ ಈ ಹೊಸ ಬೈಕ್ ಹೀರೋ ಸ್ಪ್ಲೈಂಡರ್, ಹೆಚ್ಎಫ್ ಡಿಲಕ್ಸ್, ಬಜಾಜ್ ಸಿಟಿ 100, ಹೋಂಡಾ ಡ್ರೀಮ್ ಯುಗಾ ಸೇರಿದಂತೆ ಹಲವು ಕಮ್ಯೂಟರ್ ಬೈಕ್‌ಗಳಿಗೆ ತ್ರೀವ ಪೈಪೋಟಿ ನೀಡಲಿದೆ ಎನ್ನಬಹುದು.

More from DriveSpark

Article Published On: Friday, August 31, 2018, 10:47 [IST]
English summary
TVS Radeon Top Features You Should Know: Synchro Braking, USB Charging, Self-Start, Alloys & More.
Read more on ಟಿವಿಎಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+