ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಹೊಸ ಬಜಾಜ್ ಡೋಮಿನಾರ್ 400

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ 2016ರಲ್ಲಿ ತನ್ನ ಪರ್ಫಾಮೆನ್ಸ್ ಮಾದರಿಯಾದ ಡೋಮಿನಾರ್ 400 ಸ್ಪೋರ್ಟ್ಸ್ ಕ್ರೂಸರ್ ಬೈಕ್ ಅನ್ನು ಬಿಡುಗಡೆಗೊಳಿತ್ತು. ಇದೀಗ ಮತ್ತೊಮ್ಮೆ ಹೊಸ ಸೌಲಭ್ಯಗಳೊಂದಿಗೆ ಮರುಬಿಡುಗಡೆಗಾಗಿ ಸಿದ್ದವಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಸೌಲಭ್ಯಗಳನ್ನು ಹೊತ್ತು ಬರುತ್ತಿದೆ.

ಹೊಸ ವೈಶಿಷ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಹೊಸ ಬಜಾಜ್ ಡೋಮಿನಾರ್ 400

ಡೋಮಿನಾರ್ 400 ಬೈಕ್ ಮಾದರಿಯು ಬಜಾಜ್ ಸಂಸ್ಥೆಯ ಫ್ಯಾಗ್‍ಶಿಪ್ ಮಾದರಿಯಾಗಿದ್ದರೂ, ಬೈಕ್ ಮಾರಾಟದಲ್ಲಿ ನಿರೀಕ್ಷಿತ ಫಲಿತಾಂಶ ಕಂಡುಬರುತ್ತಿಲ್ಲ. ಆದ್ದರಿಂದ ಬಜಾಜ್ ಆಟೋ ಸಂಸ್ಥೆಯು ಡೋಮಿನಾರ್ 400 ಬೈಕಿನ ಮಾರಾಟದಲ್ಲಿ ಹೊಸ ತಂತ್ರ ರೂಪಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹೊಸ ವೈಶಿಷ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಹೊಸ ಬಜಾಜ್ ಡೋಮಿನಾರ್ 400

ಹೌದು, ಬಜಾಜ್ ಆಟೋ ಸಂಸ್ಥೆಯು ಡೋಮಿನಾರ್ 400 ಬೈಕಿನ ಸ್ಕ್ರಾಂಬ್ಲರ್ ವೆರಿಯೆಂಟ್ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಇರಾದೆಯಲ್ಲಿದ್ದು, ಇದೇ ವರ್ಷ ನವೆಂಬರ್ ಅಂತ್ಯಕ್ಕೆ ಬಿಡುಗಡೆ ಖಚಿತ ಎನ್ನಲಾಗಿದೆ.

ಹೊಸ ವೈಶಿಷ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಹೊಸ ಬಜಾಜ್ ಡೋಮಿನಾರ್ 400

ಬಜಾಜ್ ಡಾಮಿನಾರ್ 400 ಸ್ಕ್ರ್ಯಾಂಬ್ಲರ್ ಬೈಕ್ ಉತ್ತಮ ಆಫ್-ರೋಡಿಂಗ್ ಮತ್ತು ಟೂರಿಂಗ್ ಕೌಶಲ್ಯಗಳನ್ನು ಪಡೆದುಕೊಳ್ಳಬಹುದಾದ ನಿರೀಕ್ಷೆ ಇದ್ದು, ಹೊಸ ವೆರಿಯೆಂಟ್ ಬೈಕಿನಲ್ಲಿ ಉದ್ದನೆಯ ವಿಂಡ್‍ಸ್ಕ್ರೀನ್, ರೈಸ್ಡ್ ಸಸ್ಪೆಷನ್, ಕ್ರ್ಯಾಷ್ ಗಾರ್ಡ್, ಔಕ್ಸಿಲರಿ ಲೈಟ್ಸ್, ಲಗೇಜ್ ರಾಕ್ಸ್ ಮತ್ತು ಸ್ಯಾಡಲ್ ಬ್ಯಾಗ್‍ ಎಂಬ ಉಪಕರಣಗಳನ್ನು ಪಡೆದುಕೊಳ್ಳಲಿದೆ.

ಹೊಸ ವೈಶಿಷ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಹೊಸ ಬಜಾಜ್ ಡೋಮಿನಾರ್ 400

ಎಂಜಿನ್ ಸಾಮರ್ಥ್ಯ

ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹೊಸ ಬಜಾಜ್ 400 ಸ್ಕ್ರ್ಯಾಂಬ್ಲರ್ ಬೈಕ್ ಮಾದರಿಯು 373ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 34.5 ಬಿಹೆಚ್‍ಪಿ ಮತ್ತು 35ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಏಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ವೈಶಿಷ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಹೊಸ ಬಜಾಜ್ ಡೋಮಿನಾರ್ 400

ಬಜಾಜ್ ಸಂಸ್ಥೆಯು 2019ರ ಡೋಮಿನಾರ್ 400 ಬೈಕ್ ಅನ್ನು ಹಲವಾರು ಉಪಕರಣಗಳು ಮತು ವೈಶಿಷ್ಟ್ಯತೆಗಳನ್ನು ಅಳವಡಿಸಲಿದೆ ಎನ್ನಲಾಗಿದ್ದು, ಈಗಾಗಲೋ ಈ ಬೈಕ್‍ನ ಎಂಜಿನ್ ಕಾರ್ಯಕ್ಷಮೆತೆಯ ಕುರಿತಾಗಿ ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್ ಕೂಡಾ ನಡೆಸಲಾಗಿದೆ.

ಹೊಸ ವೈಶಿಷ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಹೊಸ ಬಜಾಜ್ ಡೋಮಿನಾರ್ 400

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ 2019ರ ಹೊಸ ಡೋಮಿನಾರ್ 400 ಬೈಕ್ ಈ ಬಾರಿ ಡ್ಯುಯಲ್ ಚಾನೆಲ್ ಎಬಿಎಸ್, ಅಪ್‍ಸೈಡ್ ಡೌನ್ ಫೋರ್ಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿರಲಿದ್ದು, ಹೊಸ ಬಣ್ಣವನ್ನು ಸಹ ಪಡೆದುಕೊಳ್ಳಲಿದೆ.

ಹೊಸ ವೈಶಿಷ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಹೊಸ ಬಜಾಜ್ ಡೋಮಿನಾರ್ 400

ಜೊತೆಗೆ 2019ರ ಹೊಸ ಬಜಾಜ್ ಡೋಮಿನಾರ್ 400 ಬೈಕ್‌ಗಳಲ್ಲಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಮಡ್‍‍ಗಾರ್ಡ್, ಅಗಲವಾದ ರೇಡಿಯೇಟರ್ ಮತ್ತು ದೊಡ್ಡ ಗಾತ್ರದ ಎಂಜಿನ್ ಬೆಲ್ಲಿ ಪ್ಯಾನ್ ಅನ್ನು ಒದಗಿಸಲಾಗುತ್ತಿದೆ.

MOST READ: ಭಾರತದಲ್ಲಿ ಬಿಡುಗಡೆಯಾಗುತ್ತಿರುವ 150ಸಿಸಿ ಯಮಹಾ ಎಂಟಿ-15 ಬೈಕ್ ಹೇಗಿರಲಿದೆ ನೋಡಿ..!

ಹೊಸ ವೈಶಿಷ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ದವಾದ ಹೊಸ ಬಜಾಜ್ ಡೋಮಿನಾರ್ 400

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಡೋಮಿನಾರ್ 400 ಒಂದು ಸ್ಪೋರ್ಟ್ಸ್ ಕ್ರೂಸರ್ ಆಗಿದ್ದು, ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡುತ್ತಿದೆ. ಹೀಗಿದ್ದರೂ ಮಾರುಕಟ್ಟೆಯಲ್ಲಿ ನಿಗದತ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಳ್ಳಲು ಆಗದ ಕಾರಣ ಬಜಾಜ್ ಆಟೋ ಸಂಸ್ಥೆಯು ಡೋಮಿನಾರ್ 400 ಬೈಕಿನ ಹೊಸ ವೆರಿಯೆಂಟ್ ಪರಿಚಯಿಸಲು ಮೂಲಕ ಆರ್‌ಇ ಹಿಮಾಲಯನ್ ಬೈಕ್‍ಗಳಿಗೆ ಪೈಪೋಟಿ ನೀಡುವ ತವತದಲ್ಲಿದೆ.

More from DriveSpark

Article Published On: Thursday, October 25, 2018, 10:40 [IST]
English summary
Updated Bajaj Dominar 400 Launch Details Revealed — To Get New Features And Colours.
Read more on ಬಜಾಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+