ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಕಮ್ಯೂಟರ್ ಬೈಕ್ ಮಾದರಿಗಳಿಗೆ ಭಾರೀ ಬೇಡಿಕೆ ಕಂಡುಬರುತ್ತಿದೆ. ಯುವ ಸಮುದಾಯವನ್ನೇ ಮುಖ್ಯ ಗುರಿಯಾಗಿಸಿಕೊಂಡು ಹಲವು ಬೈಕ್ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಮಧ್ಯಮ ಕ್ರಮಾಂಕದ ರೇಸ್ ಎಡಿಷನ್‌ಗಳನ್ನು ಪರಿಚಯಿಸುತ್ತಿದ್ದು, ಅದರಲ್ಲಿ ಜನಪ್ರಿಯವಾಗಿರುವ ಮತ್ತು ಖರೀದಿಗೆ ಉತ್ತಮವಾಗಿರುವ ಕೆಲವು ಬೈಕ್ ಆವೃತ್ತಿಗಳ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ಆಟೋ ಮಾರುಕಟ್ಟೆಯಲ್ಲಿ ಇದೀಗ ದಿನಕ್ಕೊಂದು ಹೊಸ ಹೊಸ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಲೇ ಇವೆ. ಆದ್ರೆ ಬೈಕ್ ಬೆಲೆ ಮತ್ತು ಪರ್ಫಾಮೆನ್ಸ್ ವಿಚಾರವಾಗಿ ಬಹುತೇಕ ಬೈಕ್ ಮಾದರಿಗಳು ಹಿನ್ನಡೆ ಅನುಭವಿಸುತ್ತಲೇ ಇವೆ. ಹೀಗಾಗಿ ಕೈಗೆಟುವ ಬೆಲೆಯಲ್ಲಿ ಲಭ್ಯವಿರುವ ಉತ್ತಮ ಪರ್ಫಾಮೆನ್ಸ್ ಬೈಕ್ ಪಟ್ಟಿಯನ್ನ ಇಲ್ಲಿ ನೀಡಿದ್ದೇವೆ. ಇವುಗಳು ಎಲ್ಲಾ ವರ್ಗ ಗ್ರಾಹಕರಿಗೂ ಉತ್ತಮ ಮಾದರಿಗಳಾಗಬಹುದು ಎಂಬುವುದು ನಮ್ಮ ನಂಬಿಕೆ.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ಕೆಟಿಎಂ ಆರ್‌ಸಿ 390

ಭಾರತೀಯ ಮಾರುಕಟ್ಟೆಯಲ್ಲಿ ಯುವ ಸಮುದಾಯದ ಹಾಟ್ ಫೆವರಿಟ್ ಮಾದರಿಯಾಗಿರುವ ಕೆಟಿಎಂ ಸಂಸ್ಥೆಯು ಪರ್ಫಾಮೆನ್ಸ್ ಉದ್ದೇಶಕ್ಕಾಗಿಯೇ ಆರ್‌ಸಿ 390 ಬೈಕ್‌ಗಳನ್ನು ಬಿಡುಗಡೆಗೊಳಿಸಿದೆ. 373 ಸಿಸಿ ಎಂಜಿನ್ ಸಾಮರ್ಥ್ಯವನ್ನ ಹೊಂದಿರುವ ಆರ್‌ಸಿ 390 ಬೈಕ್‌ಗಳು 43-ಬಿಎಚ್‌ಪಿ ಮತ್ತು 37-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 2.37 ಲಕ್ಷ ಬೆಲೆ ಹೊಂದಿರುವ ಆರ್‌ಸಿ 390 ಬೈಕ್‌ಗಳು ತುಸು ದುಬಾರಿ ಎನ್ನಿಸಿದರೂ ಪರ್ಫಾಮೆನ್ಸ್ ಪ್ರಿಯರಿಗೆ ಇದೊಂದು ಅತ್ಯುತ್ತಮ ಆಯ್ಕೆ ಅಂದ್ರೆ ತಪ್ಪಾಗುವುದಿಲ್ಲ. ಗುಣಮಟ್ಟದಲ್ಲಿ ಇತರೆ ಬೈಕ್‌ಗಳಿಂತಲೂ ಉತ್ತಮವಾಗಿರುವ ಕೆಟಿಎಂ ಬೈಕ್‌ಗಳು ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ಯಮಹಾ ವೈಝೆಡ್ಎಫ್ ಆರ್15 ವಿ3.0

ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ವೈಝೆಡ್ಎಫ್-ಆರ್15 ವಿ3.0 ಬೈಕ್‌ಗಳು ಶಕ್ತಿಶಾಲಿ ಟ್ಯಾಂಕರ್ ವಿನ್ಯಾಸ, ರೇಸಿಂಗ್ ಮಶಿನ್, ಏರೋ ಡೈನಾಮಿಕ್ ಫೇರಿಂಗ್ ಜತೆಗೆ YZF-R1 ಸೂಪರ್ ಬೈಕ್‌ನಿಂದಲೂ ಕೆಲವು ವಿನ್ಯಾಸಗಳನ್ನು ಪಡೆದಿದ್ದು, ದೆಹಲಿ ಎಕ್ಸ್ ಶೋರಂ ಪ್ರಕಾರ ರೂ.1.25 ಲಕ್ಷ ಬೆಲೆ ಪಡೆದುಕೊಂಡಿದೆ.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

2018ರ ವೈಝೆಡ್ಎಫ್-ಆರ್15 ವಿ3.0 ಬೈಕ್‌ಗಳು 155 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಮತ್ತು ಆಯ್ಕೆ ರೂಪದಲ್ಲಿ ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿರಲಿದೆ. ಇದರಲ್ಲಿ 6-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದ್ದು, 19.03-ಬಿಹೆಚ್ ಪಿ, 15-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ಕೆಟಿಎಂ ಡ್ಯೂಕ್ 390

ಸೇಕೆಂಡ್ ಜನರೇಷನ್ ಡ್ಯೂಕ್ 390 ಮಾದರಿಗಿಂತಲೂ ವಿಶೇಷ ವಿನ್ಯಾಸಗಳನ್ನು ಹೊಂದಿರುವ ಹೊಸ ಡ್ಯೂಕ್ 390 ಬೈಕ್‌ಗಳು ಸುಧಾರಿತ ತಂತ್ರಜ್ಞಾನಗಳ ಜೊತೆ ಜೊತೆಗೆ ಆರೇಂಜ್ ಮತ್ತು ವೈಟ್ ಡ್ಯುಯಲ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 2.25 ಲಕ್ಷ ಬೆಲೆ ಹೊಂದಿವೆ.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

373.2 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ 2018ರ ಡ್ಯೂಕ್ 390 ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 44-ಬಿಎಚ್‌ಪಿ ಮತ್ತು 37-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ಬಜಾಜ್ ಪಲ್ಸರ್ ಎನ್ಎಸ್200

ಕಮ್ಯೂಟರ್ ಬೈಕ್ ವಿಭಾಗದಲ್ಲಿ ಮತ್ತೊಂದು ಜನಪ್ರಿಯ ಬೈಕ್ ಆವೃತ್ತಿ ಅಂದ್ರೆ ಅದು ಪಲ್ಸರ್ ಎನ್ಎಸ್200. ಕಳೆದ ವರ್ಷದ ಕೊನೆಯಲ್ಲಿ ಪಲ್ಸರ್ ಎನ್‌ಎಸ್200 ಸ್ಟ್ರೀಟ್ ಫೈಟರ್ ಎಬಿಎಸ್ ರೂಪಾಂತರವನ್ನು ಸಹ ಪರಿಚಯಿಸಲಾಗಿದ್ದು, ಸಾಮಾನ್ಯ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 1.06 ಲಕ್ಷಕ್ಕೆ ಹಾಗೂ ಎಬಿಎಸ್ ಪ್ರೇರಿತ ಮಾದರಿಯು ರೂ. 1.18 ಲಕ್ಷ ಬೆಲೆ ಹೊಂದಿವೆ.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ಬಜಾಜ್ ಪಲ್ಸರ್ ಎನ್ಎಸ್200 ಎಬಿಎಸ್ ಮಾದರಿಯು 199.5 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆ ಹೊಂದಿದ್ದು, 23.17-ಬಿಎಚ್‌ಪಿ ಮತ್ತು 18.3-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6-ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ಬಜಾಜ್ ಡೋಮಿನಾರ್ 400

ಡೋಮಿನಾರ್‍ 400 ಬೈಕ್‌ಗಳು ಎರಡು ವೇರಿಯೆಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಎಬಿಎಸ್ ರಹಿತ ಬೈಕ್ ಮಾದರಿಯು ರೂ.1.48 ಲಕ್ಷಕ್ಕೆ ಮತ್ತು ಎಬಿಎಸ್ ಬೈಕ್ ಮಾದರಿಗಳು ರೂ. 1.62 ಲಕ್ಷಕ್ಕೆ ಹೊಸ ದರಗಳಲ್ಲಿ ಖರೀದಿಗೆ ಲಭ್ಯವಿವೆ.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ಡೋಮಿನಾರ್ 400 ಬೈಕ್ 373ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದೊಂದಿಗೆ 34.5-ಬಿಹೆಚ್‍‍ಪಿ ಮತ್ತು 35-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ಬಜಾಜ್ ಅವೆಂಜರ್ 220

ಕ್ರೂಸ್ ಬೈಕ್ ಮಾದರಿಗಳಲ್ಲಿ ಸದ್ಯ ಉತ್ತಮ ಬೇಡಿಕೆಯಲ್ಲಿರುವ ಬಜಾಜ್ ಅವೆಂಜರ್ ಕ್ರೂಸ್ 220 ಮತ್ತು ಸ್ಟ್ರೀಟ್ 220 ಬೈಕ್‌ಗಳು ಕಡಿಮೆ ಬೆಲೆಗಳಲ್ಲಿ ಲಭ್ಯವಿರುವ ಉತ್ತಮ ಪರ್ಫಾಮೆನ್ಸ್ ಬೈಕ್‌ ಮಾದರಿಗಳಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.93,000 ರಿಂದ ರೂ. 1,00,083ಕ್ಕೆ ಖರೀದಿಸಬಹುದಾಗಿದೆ.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ಅವೆಂಜರ್ ಕ್ರೂಸ್ ಮತ್ತು ಸ್ಟ್ರೀಟ್ 220 ಆವೃತ್ತಿಗಳು 220 ಸಿಸಿ ಟ್ವಿನ್ ಸ್ಪಾರ್ಕ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 18.7-ಬಿಎಚ್‌ಪಿ, 17.5-ಎನ್ಎಂ ಟಾರ್ಕ್ ಉತ್ಪಾದಿಬಲ್ಲವು. ಜೊತೆಗೆ ಆಯ್ಕೆ ರೂಪದಲ್ಲಿ ಎಬಿಎಸ್, ಉತ್ತಮ ಮಾದರಿಯ ಡಿಸ್ಕ್ ಬ್ರೇಕ್ ಸಿಸ್ಟಂ ಮತ್ತು ಕ್ಲಾಸಿಕ್ ಲುಕ್ ನೀಡಿರುವುದು ಹೊಸ ಬೈಕ್‌ಗಳ ಮೌಲ್ಯವನ್ನು ಹೆಚ್ಚಿಸಿವೆ ಎನ್ನಬಹುದು.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500

ಭಾರತೀಯ ರಸ್ತೆಗಳಲ್ಲಿ ತನ್ನದೇ ಜನಪ್ರಿಯತೆ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ ಬೈಕ್ ಪ್ರಿಯರ ಹಾಟ್ ಫೆವರಿಟ್. ಹೀಗಾಗಿ ಕ್ಲಾಸಿಕ್ ಆವೃತ್ತಿಗಳಲ್ಲಿ ಸದ್ಯ ಮುನ್ನಡೆ ಸಾಧಿಸುತ್ತಿರುವ ಆರ್‌ಇ ಸಂಸ್ಥೆಯು ಕ್ಲಾಸಿಕ್ 500 ಬೈಕ್‌ಗಳನ್ನ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದೆ. ದೆಹಲಿ ಎಕ್ಸ್‌ಶೋರಂ ಆರಂಭಿಕವಾಗಿ ರೂ. 1.09 ಲಕ್ಷ ಬೆಲೆಯಿದ್ದು ಟಾಪ್ ಎಂಡ್ ಮಾದರಿಯು ರೂ. 1.99 ಲಕ್ಷಕ್ಕೆ ಮಾರಾಟವಾಗುತ್ತಿದೆ.

ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‌ಗಳಿವು...

ಪರ್ಫಾಮೆನ್ಸ್ ವಿಚಾರದಲ್ಲಿ ಉತ್ತಮವಾಗಿದ್ದು, 499-ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಕ್ಲಾಸಿಕ್ 500 ಮಾದರಿಗಳು 27.2-ಬಿಎಚ್‌ಪಿ ಮತ್ತು 41-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು. ಮುಂಭಾಗದ ಚಕ್ರದಲ್ಲಿ 2 ಪಿಸ್ಟನ್ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದ ಚಕ್ರದಲ್ಲಿ ಡ್ರಮ್ ಬ್ರೇಕ್ ಸೌಲಭ್ಯ ಪಡೆದಿದೆ.

More from DriveSpark

Article Published On: Thursday, July 19, 2018, 19:02 [IST]
English summary
Value For Money Bikes In Performance Segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+