ರೂ.8 ಲಕ್ಷದೊಳಗೆ ದೊರೆಯುವ ಅತ್ಯುತ್ತಮ ಟಾಪ್ 5 ಬೈಕ್‍‍ಗಳಿವು..

ರೂ.3 ಲಕ್ಷದಿಂದ 7.5 ಲಕ್ಷದ ಬೆಲೆಯಲ್ಲಿ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ತಮ್ಮ ವಾಹನಗಳನ್ನು ಬಿಡುಗಡೆಗೊಳಿಸಿದ್ದಾರೆ. ಆದರೆ ಬಿಡುಗಡೆಗೊಳಿಸಿದ ಈ ಬೈಕ್‍‍ಗಳಲ್ಲಿ ಯಾವುದು ನೀಡಿದ ಬೆಲೆಗೆ ಸೂಕ್ತ ಎಂಬ ಗೊಂದಲದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಮಾ

By Rahul Ts

ರೂ.3 ಲಕ್ಷದಿಂದ 7.5 ಲಕ್ಷದ ಬೆಲೆಯಲ್ಲಿ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ತಮ್ಮ ವಾಹನಗಳನ್ನು ಬಿಡುಗಡೆಗೊಳಿಸಿದ್ದಾರೆ. ಆದರೆ ಬಿಡುಗಡೆಗೊಳಿಸಿದ ಈ ಬೈಕ್‍‍ಗಳಲ್ಲಿ ಯಾವುದು ನೀಡಿದ ಬೆಲೆಗೆ ಸೂಕ್ತ ಎಂಬ ಗೊಂದಲದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ನೀವು ನೀಡಿದ ಹಣಕ್ಕೆ ಸೂಕ್ತವಾಗುವ ಬೈಕ್‍‍ಗಳ ಬಗ್ಗೆ ಇಂದಿನ ಲೇಖನದಲ್ಲಿ ಚರ್ಚಿಸಲಾಗಿದೆ.

ರೂ.8 ಲಕ್ಷದೊಳಗೆ ದೊರೆಯುವ ಅತ್ಯುತ್ತಮ ಟಾಪ್ 5 ಬೈಕ್‍‍ಗಳಿವು..

ಕವಾಸಕಿ ನಿಂಜಾ 650

ನೀವು ಖರೀದಿಸುವ ಬೈಕ್‍‍ನಲ್ಲಿ ಸ್ಪೀಡ್ ಮತ್ತು ಪರ್ಫಾರ್ಮೆನ್ಸ್ ಅಧಿಕವಾಗಿ ಇರಬೇಕು ಎಂದರೆ ಅಂತಹವರಿಗೆ ಕವಾಸಕಿ ನಿಂಜಾ 650 ಬೈಕ್ ಸೂಕ್ತ. ಏಕೆಂದರೆ ಈ ಬೈಕ್ ಸ್ಪೋರ್ತಿ ಲಿಉಕ್ ಅನ್ನು ಹೊಂದಿದ್ದು, ಹಿಂದಿನ ತಲೆಮಾರಿನ ಬೈಕ್‍‍ಗೊಂತಲೂ ಹೊಸ ವಿನ್ಯಾಸ ಮತ್ತು ಪರ್ಫಾರ್ಮೆನ್ಸ್ ಅನ್ನು ಹೆಚ್ಚುಗೊಳಿಸಲಾಗಿದೆ.

ರೂ.8 ಲಕ್ಷದೊಳಗೆ ದೊರೆಯುವ ಅತ್ಯುತ್ತಮ ಟಾಪ್ 5 ಬೈಕ್‍‍ಗಳಿವು..

ಕವಾಸಕಿ ನಿಂಜಾ 650 ಬೈಕ್‍‍ಗಳು 649sಸಿಸಿ 4 ಸ್ಟ್ರೋಕ್ ಪ್ಯಾರಲಲ್ ಟ್ವಿನ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 68ಬಿಹೆಚ್‍‍ಪಿ ಮತ್ತು 65.7ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಈ ಬೈಕ್‍‍ನಲ್ಲಿ ಹಾಲೊಗನ್ ಹೆಡ್‍‍ಲ್ಯಾಂಪ್ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸಹ ಅಳವಡಿಸಲಾಗಿದೆ.

ಬೆಲೆ (ಎಕ್ಸ್ ಶೋರಂ ದೆಹಲಿ) - 5.49 ಲಕ್ಷ ಪ್ರಾರಂಭಿಕ ಬೆಲೆ

ರೂ.8 ಲಕ್ಷದೊಳಗೆ ದೊರೆಯುವ ಅತ್ಯುತ್ತಮ ಟಾಪ್ 5 ಬೈಕ್‍‍ಗಳಿವು..

ಟ್ರಯಂಫ್ ಬೋನೆವಿಲ್ಲೆ ಸ್ಟ್ರೀಟ್ ಟ್ವಿನ್

ನೀವು ಕೊಳ್ಳುವ ಬೈಕ್ ಇನ್ನಿತರೆ ಬೈಕ್‍‍ಗಳಿಗಿಂತಾ ವಿಭಿನ್ನವಾಗಿ ಕಾಣಲು ಇಚ್ಛಿಸುವವರು ಟ್ರಯಂಫ್ ಬೋನೆವಿಲ್ಲೆ ಸ್ಟ್ರೀಟ್ ಟ್ವಿನ್ ಬೈಕ್ ಅನ್ನು ಆಯ್ಕೆ ಮಾದಿಕೊಳ್ಳಬಹುದಾಗಿದೆ. ಏಕೆಂದರೆ ಟ್ರಯಂಫ್ ಸಂಸ್ಥೆಯು ನೀವು ಖರೀದಿಸಿದ ಬೋನೆವಿಲ್ಲೆ ಸ್ಟ್ರೀಟ್ ಟ್ವಿನ್ ಬೈಕ್ ಅನ್ನು ಸಸ್ಟಮೈಜ್ ಮಾಡಿಕೊಳ್ಳಲು 150 ಆಕ್ಸೆಸರಿಗಳನ್ನು ಕೂಡ ಒದಗಿಸುತ್ತಿದೆ.

ರೂ.8 ಲಕ್ಷದೊಳಗೆ ದೊರೆಯುವ ಅತ್ಯುತ್ತಮ ಟಾಪ್ 5 ಬೈಕ್‍‍ಗಳಿವು..

ಟ್ರಯಂಫ್ ಬೋನೆವಿಲ್ಲೆ ಸ್ಟ್ರೀಟ್ ಟ್ವಿನ್ ಬೈಕ್‍‍ಗಳು 900ಸಿಸಿ 2 ಸಿಲೆಂಡರ್ ಎಂಜಿನ್ ಸಹಾಯದಿಂದ 55ಬಿಹೆಚ್‍‍ಪಿ ಮತ್ತು 80ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.

ಬೆಲೆ (ಎಕ್ಸ್ ಶೋರಂ ದೆಹಲಿ) - 7.70 ಲಕ್ಷ

ರೂ.8 ಲಕ್ಷದೊಳಗೆ ದೊರೆಯುವ ಅತ್ಯುತ್ತಮ ಟಾಪ್ 5 ಬೈಕ್‍‍ಗಳಿವು..

ಕವಾಸಕಿ ವರ್ಸಿಸ್ ಎಕ್ಸ್-300

ರೂ.4.6 ಲಕ್ಷದ ಬೆಲೆಯಲ್ಲಿ ಕವಾಸಕಿ ಸಂಸ್ಥೆಯ ವರ್ಸಿಸ್ ಎಕ್ಸ್-300 ಬೈಕ್ ನಿಮಗೆ ನೀಡಿದ ಬೆಲೆಗೆ ಉತ್ತಮ ಆಫ್‍-ರೋಡಿಂಗ್ ಮತ್ತು ಹೈ-ವೇಯಲ್ಲಿ ನಿರಂತರವಾಗಿ ಚಲಿಸುವ ಬೆಸ್ಟ್ ಬೈಕ್ ಎನ್ನಬಹುದು. ಇದಲ್ಲದೆ ಈ ಬೈಕಿನಲ್ಲಿ 41ಎಮ್ಎಮ್ ಸಸ್ಪೆಂಷನ್ ಅನ್ನು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಸೆಟಪ್ ಅನ್ನು ನೀಡಲಾಗಿದೆ.

ರೂ.8 ಲಕ್ಷದೊಳಗೆ ದೊರೆಯುವ ಅತ್ಯುತ್ತಮ ಟಾಪ್ 5 ಬೈಕ್‍‍ಗಳಿವು..

ಕವಾಸಕಿ ವರ್ಸಿಸ್ ಎಕ್ಸ್-300 ಬೈಕ್ 296ಸಿಸಿ ಪ್ಯಾರಲಲ್ ಟ್ವಿನ್, 4 ಸ್ಟ್ರೋಕ್, 8 ವೇಲ್ವ್ಸ್ ಎಂಜಿನ್ ಸಹಾಯದಿಂದ 39ಬಿಹೆಚ್‍‍ಪಿ ಮತ್ತು 27ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಈ ಬೈಕಿನ ಎರಡು ಬದಿಗಳಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ.

ಬೆಲೆ (ಎಕ್ಸ್ ಶೋರಂ ದೆಹಲಿ)- 4.69 ಲಕ್ಷ

ರೂ.8 ಲಕ್ಷದೊಳಗೆ ದೊರೆಯುವ ಅತ್ಯುತ್ತಮ ಟಾಪ್ 5 ಬೈಕ್‍‍ಗಳಿವು..

ಕವಾಸಕಿ ವಲ್ಕನ್ ಎಸ್

ಕ್ರೂಸರ್ ಬೈಕ್‍‍ಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚುತ್ತಿದ್ದು, ನೀವು ಕೂಡ ಕಡಿಮೆ ಬೆಲೆಯಲ್ಲಿ ಕ್ರೂಸರ್ ಬೈಕ್ ಅನ್ನು ಖರೀದಿಸುವ ಯೋಜನೆಯಲಿದ್ದರೆ ಅಂತವರು ಕವಾಸಕಿ ವಲ್ಕನ್ ಎಸ್ ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ನೀಡಿದ ಬೆಲೆಗೆ ಉತ್ತಮ ಕ್ರೂಸರ್ ಬೈಕಿನ ಅನುಭವವನ್ನು ಕೂಡಾ ಇದು ನಿಮಗೆ ನೀಡಲಿದೆ.

ರೂ.8 ಲಕ್ಷದೊಳಗೆ ದೊರೆಯುವ ಅತ್ಯುತ್ತಮ ಟಾಪ್ 5 ಬೈಕ್‍‍ಗಳಿವು..

2017ರ ಕವಾಸಕಿ ವಲ್ಕನ್ ಎಸ್ ಬೈಕ್ ನಿಂಜಾ 650 ಬೈಕಿನ ತಾಂತ್ರಿಕ ಅಂಶಗಳನ್ನು ಆಧರಿಸುದ್ದು, 649ಸಿಸಿ, 4ಸ್ತ್ರೋಕ್, 2 ಸಿಲೆಂಡರ್, ಡಿಒಹೆಚ್‍‍ಸಿ, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 60ಬಿಹೆಚ್‍‍ಪಿ ಮತ್ತು 62.78ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದಲ್ಲದೇ ಈ ಬೈಕಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎರಡು ಬರದಿಯಲ್ಲಿ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.

ಬೆಲೆ (ಎಕ್ಸ್ ಶೋರಂ ದೆಹಲಿ)- ರೂ. 5.44 ಲಕ್ಷ

ರೂ.8 ಲಕ್ಷದೊಳಗೆ ದೊರೆಯುವ ಅತ್ಯುತ್ತಮ ಟಾಪ್ 5 ಬೈಕ್‍‍ಗಳಿವು..

ಹೋಂಡಾ ಸಿಬಿಆರ್650ಎಫ್

ತಾವು ಕೊಳ್ಳುವ ಬೈಕ್‍‍ನಲ್ಲಿ ಪರ್ಫಾರ್ಮೆನ್ಸ್ ಮತ್ತು ಕಂಫರ್ಟ್ ಅನ್ನು ಆಶಿಸುವ ಗ್ರಾಹಕರಿಗೆ ಹೋಂಡಾ ಸಿಬಿಆರ್650ಎಫ್ ಬೈಕ್ ಉತ್ತಮ ಎನ್ನ ಬಹುದು. ಸ್ಪೋರ್ಟಿ ವಿನ್ಯಾಸವನ್ನು ಹೊಂದಿರುವ ಈ ಬೈಕ್ ಸ್ಟೀಲ್ ಡೈಮಂಡ್ ಫೇಮ್ ಅನ್ನು ಪಡೆದಿದ್ದು, ಎಲ್ಇಡಿ ಹೆಡ್‍‍ಲ್ಯಾಂಪ್‍ನೊಂದೊಗೆ ಶಾರ್ಪ್ ಲುಕ್ ಅನ್ನು ಹೊಂದಿದೆ.

ರೂ.8 ಲಕ್ಷದೊಳಗೆ ದೊರೆಯುವ ಅತ್ಯುತ್ತಮ ಟಾಪ್ 5 ಬೈಕ್‍‍ಗಳಿವು..

ಹೋಂಡಾ ಸಿಬಿಆರ್650ಎಫ್ ಬೈಕ್‍‍ಗಳು 649ಸಿಸಿ ಡಿಒಹೆಚ್‍‍ಸಿ ಇನ್‍ಲೈನ್, 4 ಸಿಲೆಂಡರ್ ಎಂಜಿನ್ ಸಹಾಯದಿಂದ 86.6ಬಿಹೆಚ್‍‍ಪಿ ಮತ್ತು 60.5ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬೆಲೆ (ಎಕ್ಸ್ ಶೋರಂ ದೆಹಲಿ)- 7.38 ಲಕ್ಷ

Most Read Articles

Kannada
English summary
Top 5 Motorcycles in India That Cost Between Rs 3 Lakh to Rs 7.5 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X