ಬಿಡುಗಡೆಯಾಗಲಿರುವ ಸುಜುಕಿ ಜಿಕ್ಸರ್ 250 ಬೈಕ್ ಹೀಗಿರಲಿದೆ

ಸುಜುಕಿ ಕಂಪನಿಯು ಇತ್ತೀಚಿಗಷ್ಟೇ ತನ್ನ ಎರಡು ಹೊಸ ಬೈಕುಗಳಾದ ಜಿಕ್ಸರ್ ಎಸ್‍ಎಫ್ ಹಾಗೂ ಜಿಕ್ಸರ್ ಎಸ್‍ಎಫ್ 250ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಎಸ್‍ಎಫ್ 250 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಿರುವ ಮೊದಲ ಪ್ರಿಮೀಯಂ ಬೈಕ್ ಆಗಿದೆ.

ಬಿಡುಗಡೆಯಾಗಲಿರುವ ಸುಜುಕಿ ಜಿಕ್ಸರ್ 250 ಬೈಕ್ ಹೀಗಿರಲಿದೆ

ಸುಜುಕಿ ಕಂಪನಿಯು ಈಗ ಎಸ್‍ಎಫ್ 250 ಬೈಕಿನ ನೇಕೆಡ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ಈ ಬೈಕಿಗೆ ಜಿಕ್ಸರ್ 250 ಎಂಬ ಹೆಸರಿಡಲಿದೆ. ಈ ಬೈಕ್ ಸಹ ಎಸ್‍ಎಫ್ 250 ಬೈಕಿನಲ್ಲಿರುವಂತಹ ಎಂಜಿನ್ ಹಾಗೂ ಟೆಕ್ನಿಕಲ್ ಅಂಶಗಳನ್ನು ಹೊಂದಿರಲಿದ್ದು, ಹಗುರ ತೂಕದೊಂದಿಗೆ ಸ್ಟ್ರೀಟ್ ಫೈಟರ್ ಲುಕ್ ಹೊಂದಲಿದೆ. ಸುಜುಕಿ ಕಂಪನಿಯು ಈ ಬೈಕಿನ ಬಿಡುಗಡೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ.

ಬಿಡುಗಡೆಯಾಗಲಿರುವ ಸುಜುಕಿ ಜಿಕ್ಸರ್ 250 ಬೈಕ್ ಹೀಗಿರಲಿದೆ

ಆದರೆ ಸೋರಿಕೆಯಾದ ಚಿತ್ರಗಳು ಈ ಬೈಕ್ ಅನ್ನು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿರುವ ಬಗ್ಗೆ ತಿಳಿಸುತ್ತವೆ. ನೇಕೆಡ್ 250 ಸಿಸಿ ಜಿಕ್ಸರ್ ಬೈಕ್ ಅನ್ನು ಈ ವರ್ಷದ ಕೊನೆಯ ವೇಳೆಗೆ ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಎಸ್‍ಎಫ್ ಬೈಕಿನಲ್ಲಿರುವಂತಹ ಎಂಜಿನ್, ಚಾಸೀಸ್ ಹಾಗೂ ಗೇರ್‍‍ಬಾಕ್ಸ್ ಗಳನ್ನು ಹೊಂದಿರಲಿದೆ.

ಬಿಡುಗಡೆಯಾಗಲಿರುವ ಸುಜುಕಿ ಜಿಕ್ಸರ್ 250 ಬೈಕ್ ಹೀಗಿರಲಿದೆ

ಈ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರೆಯದೇ ಹೋದರೂ, ಈ ಬೈಕಿನಲ್ಲಿ ಎಸ್‍ಎಫ್ 250 ಬೈಕಿನಲ್ಲಿರುವಂತಹ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಇರಲಿದ್ದು, 26.5 ಬಿ‍‍ಹೆಚ್‍‍ಪಿಯನ್ನು 9,000 ಆರ್‍‍ಪಿ‍ಎಂ ನಲ್ಲಿ ಹಾಗೂ 22.6 ಎನ್‍ಎಂ ಟಾರ್ಕ್ ಅನ್ನು 7,500 ಆರ್‍‍ಪಿ‍ಎಂನಲ್ಲಿ ಉತ್ಪಾದಿಸಲಿದೆ.

ಬಿಡುಗಡೆಯಾಗಲಿರುವ ಸುಜುಕಿ ಜಿಕ್ಸರ್ 250 ಬೈಕ್ ಹೀಗಿರಲಿದೆ

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಇದರಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ, ಹ್ಯಾಂಡಲ್‍‍ಬಾರ್‍‍ನ ಮೇಲೆ ಕ್ಲಿಪ್ ಇರಲಿದ್ದು, ಜಿಕ್ಸರ್ 250 ಬೈಕ್, ಕೆ‍‍ಟಿ‍ಎಂ ಡ್ಯೂಕ್ 250 ಹಾಗೂ ಎಫ್‍‍ಝಡ್ 25 ಬೈಕುಗಳಿಗೆ ಪೈಪೋಟಿ ನೀಡಲಿದೆ. ಸುರಕ್ಷತೆಗೆ ಆದ್ಯತೆ ನೀಡಲಾಗಿರುವ ಜಿಕ್ಸರ್ 250 ಬೈಕಿನಲ್ಲಿ ಡ್ಯೂಯಲ್ ಚಾನೆಲ್ ಎ‍‍ಬಿ‍ಎಸ್ ಇರಲಿದ್ದು, ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‍‍ಗಳಿವೆ. ಈ ಬೈಕಿನಲ್ಲಿ ಡಿಜಿಟಲ್ ಟ್ಯಾಕೊಮೀಟರ್, ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ ಹಾಗೂ ಟೇಲ್‍‍ಲ್ಯಾಂಪ್‍‍ಗಳಿವೆ.

MOST READ: ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಬಿಡುಗಡೆಯಾಗಲಿರುವ ಸುಜುಕಿ ಜಿಕ್ಸರ್ 250 ಬೈಕ್ ಹೀಗಿರಲಿದೆ

ಒರಟಾಗಿರುವ ಹಿಂಭಾಗದ ಟಯರ್ ಹಾಗೂ ಗ್ರಾಬ್ ರೇಲ್‍‍‍ಗಳಿರುವ ಸ್ಪ್ಲಿಟ್ ಸೀಟುಗಳನ್ನು ಹೊಂದಿದೆ. ಜಿಕ್ಸರ್ 250 ಬೈಕಿನಲ್ಲಿ 12 ಲೀಟರಿನ ಫ್ಯೂಯಲ್ ಟ್ಯಾಂಕ್‍‍ಯಿದ್ದು, ಎಸ್‍ಎಫ್ 250 ಬೈಕಿಗಿಂತ ಕಡಿಮೆ ತೂಕವನ್ನು ಹೊಂದಿರಲಿದೆ.

MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರು‍ಗಳ ಕಲರವ..!

ಬಿಡುಗಡೆಯಾಗಲಿರುವ ಸುಜುಕಿ ಜಿಕ್ಸರ್ 250 ಬೈಕ್ ಹೀಗಿರಲಿದೆ

ಮುಂಭಾಗದಲ್ಲಿ 110/70ಆರ್-17 ಇಂಚಿನ ರೇಡಿಯಲ್ ಟ್ಯೂಬ್‍‍ಲೆಸ್ ಟಯರ್‍‍ಗಳಿದ್ದರೆ, ಹಿಂಭಾಗದಲ್ಲಿ 150/60 ಆರ್-17 ಇಂಚಿನ ರೇಡಿಯಲ್ ಟ್ಯೂಬ್‍‍ಲೆಸ್ ಟಯರ್‍‍‍ಗಳಿರಲಿವೆ.

Source: Motoroids

Most Read Articles

Kannada
English summary
2019 Suzuki Gixxer 250 Images Leaked - Read in kannada
Story first published: Thursday, June 13, 2019, 14:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X