ಬಿ‍ಎಸ್ 6 ಎಂಜಿನ್‍ ಎಂಟಿ-15 ಬೈಕ್ ಅನಾವರಣಗೊಳಿಸಿದ ಯಮಹಾ

ಯಮಹಾ ಇಂಡಿಯಾ ಬಿ‍ಎಸ್ 6 ಎಂಜಿನ್ ಹೊಂದಿರುವ ತನ್ನ ಎಂಟಿ-15 ನೇಕೆಡ್ ಸ್ಟ್ರೀಟ್ ಫೈಟರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಹೊಸ ಎಂಟಿ-15 ಬೈಕ್ ಅನ್ನು ಫಾಸಿನೊ 125 ಎಫ್‍ಐ ಹಾಗೂ ರೇ ಝಡ್‍ಆರ್ 125 ಎಫ್‍ಐ ಸ್ಕೂಟರ್‍‍ಗಳ ಬಿಡುಗಡೆ ವೇಳೆಯಲ್ಲಿ ಅನಾವರಣಗೊಳಿಸಲಾಯಿತು.

ಬಿ‍ಎಸ್ 6 ಎಂಜಿನ್‍ ಎಂಟಿ-15 ಬೈಕ್ ಅನಾವರಣಗೊಳಿಸಿದ ಯಮಹಾ

ಹೊಸ ಎಂಟಿ-15 ಬೈಕ್‍‍ಗಳನ್ನು 2020ರ ಫೆಬ್ರವರಿಯಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದೆಂದು ಯಮಹಾ ಕಂಪನಿಯು ತಿಳಿಸಿದೆ. ಹೊಸ ಬೈಕ್ ಬಿಎಸ್ 6 ಎಂಜಿನ್‍‍ನೊಂದಿಗೆ ಹೊಸ ಬಣ್ಣವನ್ನು ಸಹ ಹೊಂದಿರಲಿದೆ.

ಬಿ‍ಎಸ್ 6 ಎಂಜಿನ್‍ ಎಂಟಿ-15 ಬೈಕ್ ಅನಾವರಣಗೊಳಿಸಿದ ಯಮಹಾ

ಇದರ ಹೊರತಾಗಿ ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಬಿ‍ಎಸ್ 6 ಎಂಜಿನ್ ಹೊಂದುತ್ತಿರುವ ಕಾರಣ ಈ ಬೈಕಿನ ಬೆಲೆಯು ಸಹ ಏರಿಕೆಯಾಗಲಿದೆ. ಯಮಹಾ ಎಂಟಿ-15 ಬೈಕಿನಲ್ಲಿ, ಜನಪ್ರಿಯ ವೈ‍‍ಝಡ್‍ಎಫ್ - ಆರ್‍15 ವಿ 3.0 ಬೈಕಿನಲ್ಲಿ ಅಳವಡಿಸಿರುವ 155 ಸಿಸಿಯ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗುವುದು.

ಬಿ‍ಎಸ್ 6 ಎಂಜಿನ್‍ ಎಂಟಿ-15 ಬೈಕ್ ಅನಾವರಣಗೊಳಿಸಿದ ಯಮಹಾ

ಈ ಎಂಜಿನ್ 18.3 ಬಿ‍‍ಹೆಚ್‍‍ಪಿ ಪವರ್ ಹಾಗೂ 14.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮಾರುಕಟ್ಟೆಯಲ್ಲಿರುವ ಬಿ‍ಎಸ್ 4 ಬೈಕಿಗಿಂತ ಕಡಿಮೆ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿಯೂ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗುವುದು.

ಬಿ‍ಎಸ್ 6 ಎಂಜಿನ್‍ ಎಂಟಿ-15 ಬೈಕ್ ಅನಾವರಣಗೊಳಿಸಿದ ಯಮಹಾ

ಎಂಜಿನ್ ಅನ್ನು ಅಪ್‍‍ಡೇಟ್ ಮಾಡಿರುವುದನ್ನು ಹೊರತುಪಡಿಸಿದರೆ ಮೆಕಾನಿಕಲ್ ಅಂಶಗಳಲ್ಲಿ ಬೇರೆ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍‍ಗಳಿರಲಿವೆ.

ಬಿ‍ಎಸ್ 6 ಎಂಜಿನ್‍ ಎಂಟಿ-15 ಬೈಕ್ ಅನಾವರಣಗೊಳಿಸಿದ ಯಮಹಾ

ಬ್ರೇಕಿಂಗ್‍‍ಗಳಿಗಾಗಿ ಬೈಕಿನ ಎರಡೂ ಬದಿಯಲ್ಲಿ ಡಿಸ್ಕ್ ಗಳಿರಲಿವೆ. ಸಿಂಗಲ್ ಚಾನೆಲ್ ಎ‍‍ಬಿ‍ಎಸ್ ಸಿಸ್ಟಂ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಹೊಸ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಯಮಹಾ ಎಂಟಿ-15 ಬೈಕ್ ಅನ್ನು ಹೊಸ ಐಸ್ ಫ್ಲೊ ವರ್ಮಾಲಿಯಾನ್ ಬಣ್ಣದಲ್ಲಿ ಪ್ರದರ್ಶಿಸಲಾಗಿದೆ.

ಬಿ‍ಎಸ್ 6 ಎಂಜಿನ್‍ ಎಂಟಿ-15 ಬೈಕ್ ಅನಾವರಣಗೊಳಿಸಿದ ಯಮಹಾ

ಮಾರುಕಟ್ಟೆಯಲ್ಲಿರುವ ಬಣ್ಣಗಳ ಜೊತೆಗೆ ಈ ಹೊಸ ಬಣ್ಣದಲ್ಲಿಯೂ ಸಹ ಹೊಸ ಬೈಕ್ ಅನ್ನು ಮಾರಾಟ ಮಾಡಲಾಗುವುದು. ಅಪ್‍ಡೇಟೆಡ್ ಬೈಕಿನಲ್ಲಿ ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿರುವ ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಹಾಗೆಯೇ ಮುಂದುವರೆಸಲಾಗಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬಿ‍ಎಸ್ 6 ಎಂಜಿನ್‍ ಎಂಟಿ-15 ಬೈಕ್ ಅನಾವರಣಗೊಳಿಸಿದ ಯಮಹಾ

ಇವುಗಳಲ್ಲಿ ಸೈಡ್ ಸ್ಟಾಂಡ್ ಎಂಜಿನ್ ಕಟ್ ಆಫ್, ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್, ಎಲ್‍ಇ‍‍ಡಿ ಟೇಲ್‍‍ಲೈಟ್ ಹಾಗೂ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳಿವೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಬಿ‍ಎಸ್ 6 ಎಂಜಿನ್‍ ಎಂಟಿ-15 ಬೈಕ್ ಅನಾವರಣಗೊಳಿಸಿದ ಯಮಹಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಯಮಹಾ ಎಂಟಿ-15 ಬೈಕ್ ಯಮಹಾ ಕಂಪನಿಯು ಬಿಡುಗಡೆಗೊಳಿಸುತ್ತಿರುವ ಹಲವು ವಾಹನಗಳ ಬಿಡುಗಡೆಯ ಭಾಗವಾಗಿದೆ. ಎಂಟಿ-15 ಬೈಕಿನಲ್ಲಿರುವಂತಹ 155 ಸಿಸಿ ಎಂಜಿನ್ ಹೊಂದಿರುವ ಆರ್ 15 ಬೈಕ್ ಅನ್ನು ಇತ್ತೀಚಿಗಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಬಿ‍ಎಸ್ 6 ಎಂಜಿನ್‍ ಎಂಟಿ-15 ಬೈಕ್ ಅನಾವರಣಗೊಳಿಸಿದ ಯಮಹಾ

ಬಿ‍ಎಸ್ 6 ಎಂಜಿನ್ ಹೊಂದಿರುವ ಎಂಟಿ 15 ಬೈಕ್ ಬಿಡುಗಡೆಯಾದ ನಂತರ ಕೆಟಿ‍ಎಂ ಡ್ಯೂಕ್ 125, ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160 4ವಿ ಹಾಗೂ ಸುಜುಕಿ ಜಿಕ್ಸರ್ 155 ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಯಮಹಾ yamaha
English summary
2020 Yamaha MT-15 BS-VI Unveiled: Here Are All The Details! - Read in Kannada
Story first published: Friday, December 20, 2019, 16:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X